- ಸಾಧಕರು ಸಾಮ್ರಾಜ್ಯ ಕಟ್ಟಬಾರದು- ವೈಲ್ಡ್ ವೈಲ್ಡ್ ಕಂಟ್ರಿ - ನವೆಂಬರ್ 5, 2022
- ವ್ಹಾ ರಿಷಭ್ ವ್ಹಾ – ಕಾಂತಾರಕೆ ವ್ಹಾ ವ್ಹಾ - ಅಕ್ಟೋಬರ್ 8, 2022
- ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು - ಆಗಸ್ಟ್ 22, 2022
ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತಿದ್ದಾರೆ.
ಒಂದರ್ಥದಲ್ಲಿ ಈ ಸೋಲು ನಿರೀಕ್ಷಿತ.
ಅಮೆರಿಕ ಅತ್ಯಂತ ಬುದ್ದಿವಂತ ವ್ಯಾಪಾರಿ ದೇಶ.
ಎಲ್ಲದರಲ್ಲೂ ಅಳೆದು ತೂಗುವ ಲೆಕ್ಕಾಚಾರ.
ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಈ ಟ್ರಂಪ್ ಗೆಲುವು ವಿಚಿತ್ರ ಅನಿಸಿದ್ದು ಸಹಜ.
ಬಹುದೊಡ್ಡ ವ್ಯಾಪಾರಿ,ಭಾರಿ ಶ್ರೀಮಂತ ಉದ್ಯಮಿ ರಾಜಕೀಯ ಪ್ರವೇಶ ಮಾಡಿ ಅಧ್ಯಕ್ಷರಾಗ ಬಯಸಿದ್ದನ್ನು ಅಮೆರಿಕದ ಜಾಣ ಪ್ರಜೆಗಳು ಒಪ್ಪಿಕೊಂಡದ್ದು ಅಷ್ಟೇ ಸೋಜಿಗ.
ಜಗತ್ತಿನ ದೊಡ್ಡಣ್ಣನಾಗಲು ಕೇವಲ ಸಿರಿವಂತಿಕೆ ಸಾಲದು ರಾಜಕೀಯ ಅನುಭವ ಮತ್ತು ಚಾಣಾಕ್ಷತನವೂ ಬೇಕು.
ಆದರೆ ಅವೆರಡೂ ಅಂಶಗಳು ಟ್ರಂಪ್ ವ್ಯಕ್ತಿತ್ವದಲ್ಲಿ ಇರಲಿಲ್ಲ.
ಒಬ್ಬ ಶ್ರೀಮಂತ ತನ್ನ ವ್ಯಾಪಾರಿ ಬುದ್ಧಿಯಿಂದ ದೇಶವನ್ನು ಶ್ರೀಮಂತ ಗೊಳಿಸಬಲ್ಲ ಎಂದು ನಂಬುವಷ್ಟು ಅಮಾಯಕರಲ್ಲ ಈ ಅಮೆರಿಕಾದವರು.
ಆದರೆ ಒಳಗೊಳಗೆ ಉರಿಯುತ್ತಿದ್ದ ಜನಾಂಗೀಯ ಭಾವ ಮತ್ತು ವರ್ಣಭೇದ ಮನಸ್ಥಿತಿ ಟ್ರಂಪ್ ಗೆಲುವಿಗೆ ಕಾರಣವಾಗಿರಬಹುದು ಎಂಬ ಊಹೆಯೂ ಇದೆ.
ಮೂಲ ಬಿಳಿ ನಿವಾಸಿಗಳಿಗೆ ಅಮೆರಿಕಾ ತುಂಬಾ ಆವರಿಸಿಕೊಂಡಿರುವ ಕರಿಯರು ಮತ್ತು ಇತರ ಗೋದಿ ಬಣ್ಣದವರನ್ನು ಕಂಡರೆ ಅಷ್ಟಕ್ಕಷ್ಟೆ.
ಆದರದನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಡೆಮೊಕ್ರಟಿಕ್ ಮನೋಧರ್ಮ.
ಮೂಲ ನಿವಾಸಿಗಳನ್ನು ರಕ್ಷಿಸಿ ಇಡೀ ದೇಶದ ಜನತೆಗೆ ತುಂಬ ಉಪಕಾರ ಆಗಬಹುದು ಎಂಬ ಭರವಸೆಯಿಂದ ಟ್ರಂಪ್ ಗೆಲುವು ಸಾಧ್ಯವಾಯಿತು.
ಮಧ್ಯಮ ವರ್ಗದ ಆಲೋಚನೆ ಹೊಂದಿದ ನಮ್ಮಂತವರಿಗೆ ಸದಾ ಚೀನಾ ಮತ್ತು ಪಾಕಿಸ್ತಾನದ ಚಿಂತೆ.
ಈ ಟ್ರಂಪ್ ಸಾಹೇಬರು ನಮ್ಮನ್ನು ಇವರಿಂದ ಕಾಪಾಡುತ್ತಾನೆ ಎಂದು ನಂಬಿದ್ದು ಕೊಂಚ ಅತಿಯಾಯಿತು.
ಇಲ್ಲಿ ಕರೆದು ಹಾಡಿ ಹೊಗಳಿ ಕುಣಿದು,
ನಮಸ್ಕಾರ ಟ್ರಂಪ್ ಮರ್ಯಾದೆ ಸ್ವೀಕರಿಸಿದ ಕಾರಣಕ್ಕಾದರೂ ನಮ್ಮ ದೇಶದ ಮಾನ ಕಾಪಾಡಬೇಕಿತ್ತು ಈ ಪುಣ್ಯಾತ್ಮ.
ಮೊನ್ನೆ ನಡೆದ ಚುನಾವಣೆಯಲ್ಲಿ ಭಾರತ ಕೊಳಕು ದೇಶ ಎಂಬ ಅರ್ಥ ಬರುವಂತಹ ಮಾತುಗಳನ್ನು ಆಡಿ ಅನಿವಾಸಿ ಭಾರತೀಯರ ಮನಸು ನೋಯಿಸಿದ ಮೇಲೆ ಟ್ರಂಪ್ ಕಥೆ ಅರ್ಧ ಮುಗಿದಿತ್ತು.
ಜನಾಂಗೀಯ ದಳ್ಳುರಿ, ವಿಪರೀತ ಅಪ್ರಬುದ್ಧ ಹೇಳಿಕೆಗಳು ಅಮೆರಿಕದ ಮಾನ ಹರಾಜು ಹಾಕಿದ್ದವು.
ಕರೋನ ಸಂದರ್ಭದಲ್ಲಿ ತೆಗೆದುಕೊಂಡ ವಿಚಿತ್ರ ನಿರ್ಣಯಗಳು ಕೂಡ ಹಾಸ್ಯಾಸ್ಪದ.
ಹೊರಗಿದ್ದು ದೂರದಿಂದ ನೋಡುವ ನಮಗೆ ಈ ಮಹಾಶಯನ ಮಾತು,ವರ್ತನೆ ತಮಾಶೆ ಅನಿಸುತ್ತಿರುವಾಗ ಇನ್ನು ಆ ದೇಶದ ಪ್ರಜೆಗಳಿಗೆ ಹೇಗೆ ಅನಿಸಿರಬೇಡ!
ತಮ್ಮ ಶ್ರಮ ಸಂಸ್ಕೃತಿ ಮತ್ತು ಹೊಸ ಆಲೋಚನೆಗಳ ಮೂಲಕ ಅಮೆರಿಕ ದೊಡ್ಡಣ್ಣ ಎನಿಸಿಕೊಂಡಿದೆ.
ಇಡೀ ಜಗತ್ತನ್ನು ತನ್ನ ಪ್ರಜಾಪ್ರಭುತ್ವ ಮತ್ತು ಮುಕ್ತ ಮನಸ್ಥಿತಿ ಮೂಲಕ ಗೆದ್ದು ಕೊಂಡಿದೆ.
ಜಗತ್ತಿನ ಪ್ರತಿ ರಾಷ್ಟ್ರದ ಪ್ರಜೆಗಳು ಹೆಮ್ಮೆಯಿಂದ ಅಮೆರಿಕ ಪ್ರಭುತ್ವ ಪಡೆದಿದ್ದಾರೆ.
ವರ್ಣ,ವರ್ಗ ಭೇದ ಹಾವಳಿ ಕಡಿಮೆ ಮಾಡಿಕೊಂಡು ಪ್ರಜಾಪ್ರಭುತ್ವ ಗಟ್ಟಿಗೊಂಡ ಹೊತ್ತಿನಲ್ಲಿ ಅಧಿಕಾರ ಹಿಡಿದ ಟ್ರಂಪ್ ವಿಫಲತೆಯ ಕಡೆಗೆ ಸಾಗಿದ್ದು ವಿಪರ್ಯಾಸ.
ಇಷ್ಟೊಂದು ಮುಕ್ತವಾಗಿ ಬೆಳೆದ ದೇಶಕ್ಕೆ ಮೂಲಭೂತವಾದ ಅಪಾಯಕಾರಿ ಎಂಬುದನ್ನು ಅಲ್ಲಿನ ವಲಸಿಗರು ಅರಿತವರಾಗಿದ್ದಾರೆ.
ಭಾರತ ದೇಶವನ್ನು ಟೀಕಿಸುವ ಮೊದಲು ಕೊಂಚ ಆಲೋಚಿಸಬೇಕಿತ್ತು.
ಆದರೆ ಹುಂಬ ಟ್ರಂಪ್ ಮೆದುಳಿಗೆ ಇಂತಹ ಸೂಕ್ಷ್ಮ ಸಂಗತಿಗಳು ಅರ್ಥವಾಗಲಿಲ್ಲ.
ಐಷಾರಾಮಿ, ಶ್ರೀಮಂತ ವ್ಯಕ್ತಿ ರಾಜಕೀಯ ನಡೆಸಲಾರ ಎಂಬ ಹೊಸ ನೀತಿಯನ್ನು ಟ್ರಂಪ್ ಜಗತ್ತಿಗೆ ತೋರಿಸಿ ಕೊಟ್ಟಿದ್ದಾನೆ.
ಅಲ್ಲಿ ನೆಲೆಸಿರುವ ಕಪ್ಪು ಜನಾಂಗದ ಅಮೆರಿಕನ್ನರ ದೇಶ ಪ್ರೇಮವನ್ನು ಸಂಶಯಿಸಲಾಗದು.
ಪರಿಸ್ಥಿತಿ ಹೀಗಿರುವಾಗ ಟ್ರಂಪ್ ಹೇಳಿಕೆಗಳು ಅನೇಕರಲ್ಲಿ ಅಭದ್ರತೆ ಉಂಟು ಮಾಡಿದ್ದು ಸಹಜ.
ಇಷ್ಟೆಲ್ಲಾ ದೌರ್ಬಲ್ಯಗಳಿದ್ದರೂ ಟ್ರಂಪ್ ಇಷ್ಟೊಂದು ಮತ ಪಡೆದದ್ದು ಹೇಗೆ?
ಉತ್ತರ ಸರಳ ಅದು ಟ್ರಂಪ್ ಪಡೆದ ಮತಗಳಲ್ಲ,ಪಕ್ಷ ಪಡೆದ ಮತಗಳು.
ಈ ಮಧ್ಯ ಚುನಾವಣಾ ಸಂದರ್ಭದಲ್ಲಿ ಅಮೆರಿಕಾ ಮಾಜಿ ಅಧ್ಯಕ್ಷ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಮತ ಯಾಚಿಸಿದ ರೀತಿ ಅಪರೂಪ.
ಸಾಮಾನ್ಯ ಮತದಾರರಿಗೆ ಫೋನಾಯಿಸಿ ‘ನಾನು ಬರಾಕ್ ಒಬಾಮ supposed to be the President of America’ ಎಂದು ಹೇಳಿದ ಸದು ವಿನಯ ಮತ್ತು ಜಾಣತನ ಹೊಸ ಅಲೆ ಉಂಟು ಮಾಡಿತು.
ಭಾರತೀಯರು ತುಂಬ ಭಾವುಕರು ಇಂತಹ ಸರಳತೆಗೆ ಮಾರು ಹೋಗಿ ಬಿಡುತ್ತಾರೆ.
ಅಮೆರಿಕಾ ತುಂಬಾ ಜಾಣ ವ್ಯಾಪಾರಿ ರಾಷ್ಟ್ರ. ಅವರಿಗೆ ಮಾರುಕಟ್ಟೆ ಮುಖ್ಯ ಅಂತಹ ದೊಡ್ಡ ಮಾನಸಿಕ ಮಾರುಕಟ್ಟೆಯನ್ನು ಸೃಷ್ಟಿ ಮಾಡಲು ಮಧ್ಯಮ ವರ್ಗದ ಜನ ನಿಸ್ಸೀಮರು.
ನಾವು ಟ್ರಂಪ್ ಬಗ್ಗೆ ಭಕ್ತಿ ಇಟ್ಟುಕೊಳ್ಳದೇ
ಈಗ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬೈಡನ್ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲ ಹ್ಯಾರಿಸ್ ಅವರನ್ನು ಅಭಿನಂದಿಸೋಣ.
ಇವರು ಪಾಕಿಸ್ತಾನ ಮತ್ತು ಚೀನಾ ದೇಶಗಳನ್ನು ಬೆಂಬಲಿಸುತ್ತಾರೆ ಎಂಬ ಭೀತಿ ಬೇಡ.
ಅಮೆರಿಕಾ ಮಾಡುವ ವ್ಯಾಪಾರಗಳಿಗೆ ಮಾರುಕಟ್ಟೆ ಮತ್ತು ಕೆಲಸ ಮಾಡುವ ನಿಷ್ಠಾವಂತ ಜನರನ್ನು ಒದಗಿಸುವ ತಾಕತ್ತು ಕೇವಲ ಭಾರತ ದೇಶಕ್ಕೆ ಮಾತ್ರ ಇದೆ.
ಚೀನಾ ಮತ್ತು ಪಾಕಿಸ್ತಾನ ಕೇವಲ ರಾಜಕೀಯ ಕುಟಿಲತೆ ರೂಪಿಸಲು ಬಳಸುವ ಅಸ್ತ್ರಗಳು ಮಾತ್ರ.
ಯಾರೇ ಅಧ್ಯಕ್ಷರಾದರು ಭಾರತವನ್ನು ಬಹಿರಂಗವಾಗಿ ದ್ವೇಷ ಮಾಡಲಾರರು.
ಇಂತಹ ಆತಂಕ ಬಿಟ್ಟು ಭರವಸೆಯಿಂದ ಚುನಾವಣಾ ಫಲಿತಾಂಶವನ್ನು ಗೌರವಿಸೋಣ.
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות