- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ರವಿ ಬೆಳೆಗೆರೆ ಅಂದರೆ ಬರೆ ಪತ್ರಕರ್ತರೆ..? ಎಂಬ ಪ್ರಶ್ನೆ ಬಂದರೆ ಖಂಡಿತಾ ಇಲ್ಲ ಎನ್ನಬೇಕು! ಅದಕ್ಕೂ ಮೀರಿ ಅವರೊಬ್ಬ ಅದ್ಭುತ ಕತೆಗಾರ. ಸೂಕ್ಷ್ಮ ಸಂವೇದನೆ ಮತ್ತು ಸೃಜನಶೀಲತೆ ಇವರ ಬರವಣಿಗೆಯ ಶಕ್ತಿ ಎನ್ನಬಹುದು. ರವಿಬೆಳಗೆರೆಯವರು ತಮ್ಮ ವಿಶಿಷ್ಟ ಮಾತಿನ ಧಾಟಿ ಮತ್ತು ಕನ್ನಡ ಪದಜಾಣ್ಮೆಯಿಂದಲೇ ಓದುಗರ, ಕೇಳುಗರ ಮನಸ್ಸಿನಲ್ಲಿ ಉಳಿದಿದ್ದಾರೆ. ಮಿಕ್ಕೆಲ್ಲವನ್ನು ಬಿಟ್ಟು ಒಂದುವೇಳೆ ಬೆಳಗೆರೆಯವರು ಬರೆ ಕತೆಗಾರರಾಗಿದ್ದರೆ ಕನ್ನಡದ ಶ್ರೇಷ್ಟ ಕತೆಗಾರರಾಗಿ ಉಳಿಯುತ್ತಿದ್ದರೇನೊ ಗೊತ್ತಿಲ್ಲ? ಅವರು ಇಲ್ಲವಾಗಿರುವ ಈ ಹೊತ್ತಿನಲ್ಲಿ ನನಗೆ ನೆನಪಾಗುತ್ತಿರುವ ನನ್ನ ಓದಿನ ಅವರ ಪುಸ್ತಕವೆಂದರೆ ‘ಪಾ. ವೆಂ. ಹೇಳಿದ ಕಥೆ’ ಈ ಕೃತಿ 1955ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ.
‘ಪಾ. ವೆಂ. ಹೇಳಿದ ಕಥೆ’ ಎಂಬ ಕೃತಿಯ ಶೀರ್ಷಿಕೆಯ ಹೆಸರಿನ ಕತೆಯೇ ಮೊದಲಿಗೆ ಬಂದು ಅದರ ಜೊತೆಗೆ ‘ವಂಧ್ಯಾ’, ‘ಕೊನೆ’, ‘ವಿತಥ’ ಮೊದಲಾದ ಒಟ್ಟು ಹದಿಮೂರು ಕಥೆಗಳು ಇಲ್ಲಿವೆ. ಬೆಳಗೆರಯವರವು ತೇಲುವ , ಹಾರುವ ಮಾತುಗಳಲ್ಲ! ಬೆಳಗೆರೆ ಗಟ್ಟಿ ಭಾಷೆಯ ಗಟ್ಟಿಗ. ಅಂಥ ಮಾತಿನ ಮೂಲಕವೇ ಬದುಕಿನ ಅಂತಃಸತ್ವಗಳನ್ನು ಬದುಕಿನ ಬಗೆ ಬಗೆ ಆಯಾಮಗಳನ್ನು ಇಲ್ಲಿ ಹೇಳಿದ್ದಾರೆ. ಮೊದಲೆ ಹೇಳಿದಂತೆ ಸೂಕ್ಷ್ಮ ಸಂವೇದನೆಯ ರವಿಬೆಳಗೆರಯವರ ‘ಭ್ರೂಣ ಸಂಭಾಷಣೆ’ ಕಥೆ ಅದ್ಭುತವಾಗಿದೆ. ಸ್ವತಃ ಹೆಣ್ಣೇ ಆಗಿ ನೋವನ್ನು ಅನುಭವಿಸುವ, ಆ ನೋವಿನ ಮೂಲಕ ಹೆಣ್ಣಿನ ಒಳತೋಟಿಯನ್ನು ಬಿಚ್ಚಿಡುವ ನಿರೂಪಣಾ ಶೈಲಿ ಇಲ್ಲಿ ಅನನ್ಯವಾಗಿದೆ. ಈ ಕತೆಯಲ್ಲಿ ಪ್ರಸ್ತಾಪವಾಗಿರುವ ‘ಫಕೀರ’ನ ಪಾತ್ರ ಕತೆಗೊಂದು ಅಲೌಕಿಕ ಛಾಯೆಯನ್ನು ತಂದುಕೊಡುತ್ತದೆ.
‘ಹೆಣದ ಮನೆಯಲ್ಲಿ’, ‘ವಂಧ್ಯಾ’ ‘ಕತೆಗಳಲ್ಲಿ ಕ್ರೂರ ಬಡತನದ ಕುರಿತ ಚಿತ್ರಣವನ್ನು ನೀಡುತ್ತಾರೆ. ಹೆನದ ಮನೆಯಲ್ಲೂ ಲಂಚ ಬಯಸುವ ವೈದ್ಯನ ಮನಸ್ಥಿತಿ ನಮ್ಮ ವ್ಯವಸ್ಥೆಯನ್ನು ಅಣಕಿಸುವಂತಿದೆ. ಓದುಗರು ಕಥೆಗಳನ್ನು ಒಮ್ಮೆ ಪ್ರವೇಶ ಮಾಡಿದರೆ ಮುಗಿಯುವವರಗೆ ಅನ್ಯಮನಸ್ಕರಾಗದೆ ಕತೆಗಳ ಪಾತ್ರಗಳಲ್ಲಿ ತಾವೂ ಕಳೆದು ಹೋಗುವ ಭಾವವಿವೆ. ಭ್ರಮೆಯಲ್ಲದ, ಸುಖೀ ಮನಸ್ಸಿನ ಕಲ್ಪನೆಯಲ್ಲದ , ನೈಜ ಚಿತ್ರಣದ ಕಟ್ಟು ಜಾಣ್ಮೆಯ ಇವರ ಕತೆಗಳು ಓದುಗರನ್ನು ಚಿಂತಕರನ್ನಾಗಿಸುತ್ತವೆ. ಬರೆ ಕಷ್ಟ ಕೋಟಲೆಗಳು ಮಾತ್ರವಲ್ಲ ಕನಸೂಗಳೂ, ಹೊಸ ಭರವಸೆಗಳೂ ಕೂಡ ಬದುಕಿನ ಹೊಂಗಿರಣಗಳು ಎನ್ನುವುದನ್ನು ವೇಷಗಳು’ ಎಂಬ ಕಥೆಯಲ್ಲಿ ನೋಡಬಹುದು.
ಬದುಕೆಂದರೆ ಬರೆ ಬಡತನ, ನೋವಲ್ಲ ಅದರಾಚೆಗೆ ಮಾತಿಗೆ ನಿಲುಕದ ನಿರೀಂದ್ರೀಯತ್ವವೂ ಇದೆ ಎಂಬುದನ್ನು ಹೇಳುವ ಕಥೆಗಳು. ‘ಆಕ್ರಮಣ’ ,‘ಕುಹುಕಹರ’, ‘ಪರಿಚಯ’. ‘ಕುಹಕುಹರ’ ಕಥೆ ಕಲಾವಿದನೊಬ್ಬನ ಬದುಕನ್ನು ಕುರಿತದ್ದಾಗಿದೆ.
ನಿರೀಂದ್ರೀಯ ಸ್ಥಿತಿ ಎಲ್ಲರಲ್ಲೂ ಇರುತ್ತದೆ ಅದನ್ನು ಹೇಳಿಕೊಳ್ಳದೆ ಕನಸಿನಲ್ಲಿ ,ಸ್ವಗತದಲ್ಲಿ ತನ್ನ ಸ್ಥಿತಿಯನ್ನು ಪ್ರಶ್ನೆ ಮಾಡಿಕೊಳ್ಳುವ, ಜೀವನದಲ್ಲಿ ಹೊಂದಿರುವ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಬಯಕೆಯ, ಅದಮ್ಯ ಪ್ರೀತಿಯನ್ನು ಹಂಚಿಕೊಳ್ಳಬೇಕೆನ್ನುವ ತುಡಿತ, ಹೊಯ್ದಾಟ ಮೊದಲಾದವು ‘ವಿತಥ’ ಕತೆಯಲ್ಲಿವೆ. ಕತೆಯ ವಿಭಿನ್ನ ಶೀರ್ಷಿಕೆಯೇ ಕತೆಯನ್ನು ಓದಲು ಪ್ರೇರೇಪಣೆ ನೀಡುತ್ತದೆ.
‘ಮಸೀದಿ ಬಿದ್ದ ಮೂರನೆಯ ದಿನ’ ಒಬ್ಬ ಪತ್ರಕರ್ತನಾಗಿ ವರದಿ ಮಾಡಹೊರಟರೆ ಎಂದುಕೊಂಡರೆ ಅದನ್ನು ಸುಳ್ಲಾಗಿಸುವುದು ಈ ಕಥೆ . ಗುರುಶಾಂತ ಇಲ್ಲಿಯ ಕಥಾನಾಯಕ. ಇಲ್ಲಿ ಚರಿತ್ರೆ ನಿರ್ಮಿಸುವವರ ಕತೆಗಳಿಗಿಂತ ಚರಿತ್ರೆಗೋಸ್ಕರ ಬಲಿಯಾದವರ ಕತೆಯೂ ಅಷ್ಟೆ ಮುಖ್ಯ ಎಂಬ ಜಿ. ರಾಜಶೇಖರ ಅವರ ಮಾತುಗಳನ್ನು ಇಲ್ಲಿ ಗಮನಿಸಬಹುದು. ಇಷ್ಟು ಕತೆಗಳಲ್ಲಿ ರವಿಬೆಳಗೆರೆಯವರಿಗೆ ಸ್ವತಃ ಇಷ್ಟವಾದ ಕತೆಗಳೆಂದರೆ ‘ವಂಧ್ಯಾ’ ಮತ್ತು ‘ಮಿನಾರುಗಳ ಊರಿನಲ್ಲಿ ಅವರು’ ಸ್ವತಃ ಪತ್ರಕರ್ತರಾಗಿದ್ದ ಪಾ.ವೆಂ . ಕಥೆಗಾರರಾಗಬಹುದಿತ್ತು ಆದರೆ ಅವರಿಗೆ ಕತೆಗಾರನಾಗಲು ಬಿಡುವು ಸಿಗಲಿಲ್ಲ ಎಂಬಂತೆ ಸ್ವತಃ ಪತ್ರಕರ್ತನಾಗಿ ಬಿಡುವು ಸಿಗದ ಕತೆಗಾರನಾಗಿಯೇ ಬರೆದ ಮೊದಲ ಕಥಾಸಂಕಲನ‘ದಾರಿ’. ‘ಒಟ್ಟಾರೆ’ ಕಥೆಗಳು ಎಂಬ ಕಥಾ ಸಂಕಲನಗಳನ್ನು ಬರೆದಿದ್ದಾರೆ.
“ಎಂದೂ ಮರೆಯದ ಈ ಹಾಡು” ಚಿತ್ರಗೀತೆಗಳನ್ನಾಧರಿಸಿದ ಇವರ ನಿರೂಪಣೆಯ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಬೆಳಗೆರೆಯವರ ಕಂಚಿನಕಂಠವನ್ನು, ಅವರ ವಿಶಿಷ್ಟ ಮಾತಿನ ಧಾಟಿಯನ್ನು ಕನ್ನಡಿಗರು ಎಂದಿಗೂ ಮರೆಯುವಂತಿಲ್ಲ.
ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ