ಪ್ರಹ್ಲಾದ್ ಜೋಷಿ
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ನಿವೃತ್ತಿ ಯಾಗಿರುವ ಪ್ರಹ್ಲಾದ್ ಅವರು ಸಾಹಿತ್ಯಾಸಕ್ತರು.ಕವನಗಳು, ಲೇಖನಗಳು, ಹಾಸ್ಯ ಪ್ರಬಂಧಗಳು, ರೇಡಿಯೋ ನಾಟಕಗಳನ್ನು ಬರೆದಿದ್ದಾರೆ.
ಹವ್ಯಾಸಿ ರಂಗಭೂಮಿಯಲ್ಲಿ ಅಪಾರ ಆಸಕ್ತಿ. ಹೈದರಾಬಾದ್ ನಲ್ಲಿ " ಅನ್ವೇಷಕರು" ಎಂಬ ಹವ್ಯಾಸಿ ರಂಗ ತಂಡದ ಸ್ಥಾಪಕ ಸದಸ್ಯರಲ್ಲಿ ಒಬ್ಬರು.
ಬಿ.ಟಿ. ದೇಸಾಯಿ ಅವರ " ಈ ಕೆಳಗಿನವರು",ಕುಂಬಾರರ " ಸಾಂಬಶಿವ ಪ್ರಹಸನ",ಲಂಕೇಶ್ ಅವರ " ತೆರೆಗಳು" ಹಾಗೂ " ಪೋಲೀಸರಿದ್ದಾರೆ ಎಚ್ಚರಿಕೆ" ಇದರ ಪ್ರಮುಖ ಪ್ರಯೋಗಗಳು.ಪ್ರಕಾಶ್ ಬೆಳವಾಡಿ ಅವರು ನಿರ್ದೇಶಿಸಿದ ' ಗರ್ವ' ಮತ್ತು ಲಂಕೇಶರ " ಮುಸ್ಸಂಜೆಯ ಕಥಾ ಪ್ರಸಂಗ" ಸೇರಿದಂತೆ ಹಾಗೂ ಹಿಂದಿಯ ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.