ಸಂತೋಷಕುಮಾರ ಮೆಹೆಂದಳೆ
ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ಸಂತೋಷಕುಮಾರ ಮೆಹೆಂದಳೆ ಮೂಲತ: ಉತ್ತರ ಕನ್ನಡ ಜಿಲ್ಲೆಯ ತೇರಗಾಂವ್ ಗ್ರಾಮದವರು. ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಹೀಗೆ ಎಲ್ಲ ಸಾಹಿತ್ಯದ ಪ್ರಕಾರದಲ್ಲೂ ಬರೆಯುತ್ತಿದ್ದಾರೆ. ಕಾಶ್ಮೀರವೆಂಬ ಖಾಲಿ ಕಣಿವೆ,ಅಘೋರಿಗಳ ಲೋಕದಲ್ಲಿ,ಎಂಟೆಬೆ,ಮಹಾ ಪತನ, ಬೆನಾಲಿಮ್, ಅಬೊಟ್ಟಾಬಾದ್ ಸೇರಿದಂತೆ ಅನೇಕ ಜನಪ್ರಿಯ, ಅನನ್ಯ ಪುಸ್ತಕ, ಧಾರವಾಹಿ ಅಂಕಣಗಳನ್ನು ನೀಡಿ ಓದುಗರ ಮನತಣಿಸಿದ್ದಾರೆ..