ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಾಲ ಸಂಸ್ಕಾರ ಎಂಬ ವಿಕಸನಕ್ಕೆ ಏಣಿ

ಅಂಬಿಕಾ
ಇತ್ತೀಚಿನ ಬರಹಗಳು: ಅಂಬಿಕಾ (ಎಲ್ಲವನ್ನು ಓದಿ)

ಇವತ್ತು ಯಶಸ್ವಿಯಾಗಿ ನಡೆಯುತ್ತಿರುವ ಬಾಲ ಸಂಸ್ಕಾರ ನಡೆದುಬಂದ ಬಗೆಯನ್ನು ಸ್ವತಃ ಅದರ ರೂವಾರಿಯಾದ ಅಂಬಿಕಾ ಅವರೇ ಹೇಳಿದ್ದು ಹೀಗೆ. ಅಂಬಿಕಾ ಅವರು ಸ್ವತಃ ಸುಶ್ರಾವ್ಯ ಕಂಠದ ಗಾಯಕಿ ಕೂಡ ಹೌದು. ಕನ್ನಡದ ಕವಿಗಳ ಅನೇಕ ಭಾವಗೀತೆಗಳನ್ನು ವಿವಿಧ ಕಾರ್ಯಕ್ರಮದಲ್ಲಿ ಹಾಡಿದ್ದಾರೆ.

ನಸುಕು ಸಂಪಾದಕ ವರ್ಗ
‘ಬಾಲ ಸಂಸ್ಕಾರ’ ದ ಅಂಬಿಕಾ

ಪುಟ್ಟ ಪುಟ್ಟ ಮಕ್ಕಳಿಗೆ ದಿನನಿತ್ಯದ ಶ್ಲೋಕಗಳನ್ನು‌ ಹೇಳಿಕೊಡಬೇಕು, ಅದರ ಜೊತೆಗೆ ಸುಭಾಷಿತಗಳು, ಪುಟ್ಟ ಪುಟ್ಟ ಹಾಡುಗಳು, ಕಥೆ ಎಲ್ಲವೂ ಇರಬೇಕು ಅನ್ನೋ ಪುಟ್ಟ ಕಲ್ಪನೆಯೊಂದಿಗೆ ನಾನು ಕ್ಲಾಸ್ಗಳನ್ನು ಶುರು ಮಾಡಿದೆ. ಮೊದಮೊದಲಿಗೆ ಯಾರು ಬರೋದೇ ಇಲ್ವೇನೋ ಅನ್ನೋ ಭಯ ಇತ್ತು.

ಅದ್ಯಾವ ನಂಬಿಕೆನೋ ಸಿಂಚನಾ ಅನ್ನೊ ಮಗು ಮೊದಲಿಗೆ ಸೇರಿಕೊಂಡಳು. ನಂತರ ಧಾತ್ರಿ, ಧಾತ್ರಿ ಜೊತೆಗೆ‌ ಯೋಗಿತಾ, ಪುಟಾಣಿ ಸುಶ್ರಿತ ಸೇರಿದ್ರು. ಹೀಗೆ ನಿಧಾನಕ್ಕೆ‌ ಒಂದು ಮೂರು ತಿಂಗಳು ಕಳೆದ ಮೇಲೆ‌ ಕಲ್ಯಾಣಿ ಅನ್ನೋ ಮಗು ಸೇರಿಕೊಂಡಳು. ಕಲ್ಯಾಣಿ ನಮ್ಮ ಶೇಷಣ್ಣನ ಶೇಷ ಪ್ರಸಾದ್ ಮಗಳು. ವಿಪರೀತ ಚೇಷ್ಟೆ ಮಾಡೋ ಹುಡುಗಿ. ಕೂತಲ್ಲಿ ಕೂತ್ರೆ ಏನಾಗುತ್ತೆ ಈ ಹುಡ್ಗೀಗೆ ಅಂತ‌ ಸುಮಾರು‌ ಸಲ‌ ಯೋಚನೆ ಮಾಡಿದ್ದಿದೆ ನಾನು. ಏನೋ ಆಟ ಆಡ್ಕೊಂಡೇ ಕಲಿತಾ ಇದ್ಲು.. ಮೊದಲೇ ಗುರುತಿದ್ದ ಸಲಿಗೆಗೋ ಏನೋ ಆಗಾಗ ಸೋಮಾರಿತನ ಮಾಡ್ತಿದ್ಲು. ಆಗೆಲ್ಲಾ ಶೇಷಣ್ಣನ ಹತ್ರ ನನ್ ಕಂಪ್ಲೈಂಟ್ ಪಕ್ಕಾ ಇರ್ತಿತ್ತು…

ಆದ್ರೆ ಯಾವಾಗ ಈ ವೀಡಿಯೋದಲ್ಲಿರೋ ಮಗು ಶುಭಾಂಗಿ ಬಂದ್ಲೋ ಆಗಿಂದ ಕಲ್ಯಾಣಿ ವರಸೇನೇ ಬದಲಾಯ್ತು. ಜೊತೆ ಜೊತೆಗೆ ಅದೇ ಬ್ಯಾಚ್ ನ ಬೇರೆ ಮಕ್ಕಳೂ ಚುರುಕಾದ್ರು. ಪ್ರತೀ ಕ್ಲಾಸ್ ನಲ್ಲೂ ಶುಭಾಂಗಿ ಉಳಿದವರಿಗಿಂತ ಎರಡುಪಟ್ಟು ಹೆಚ್ಚಿನ ವೇಗದಲ್ಲಿ ಕಲಿತಾ ಇದ್ಲು… ಕಲ್ಯಾಣಿಗೆ ಆಗ ಬಿಸಿ ಮುಟ್ಟಿತು. ಅಲ್ಲಿಂದ ಮುಂದೆ ನಮ್ ಸುಂದ್ರೀರು ಫುಲ್ ಅಲರ್ಟ್. ಸ್ಪರ್ಧೆಗೆ ಬಿದ್ದವರಂತೆ ಕಲಿತಾ ಬಂದ್ರು. ಈ ಕಲ್ಯಾಣಿ ಮತ್ತೆ ಶುಭಾಂಗಿ ಇಬ್ರೂ ವೀಡಿಯೋ ಕಾಲ್ ಮಾಡ್ಕೊಂಡು ಶ್ಲೋಕ ಅಭ್ಯಾಸ ಮಾಡ್ತಾ ಇದ್ದಿದ್ದೂ ಇದೇ.

ಈ ಮಕ್ಕಳಿಗೆ ಕ್ಲಾಸಲ್ಲಿ ಹೇಳಿಕೊಟ್ಟಿದ್ದು ಕಲಿತಿಲ್ಲ ಅಂತ ಸಾಕಷ್ಟು ಸಲ ಬೈದಿದ್ದೂ ಇದೆ. ಆದ್ರೆ ಮಕ್ಕಳು ಅದ್ಯಾವ್ದನ್ನೂ ಮನಸ್ಸಲ್ಲಿ ಇಟ್ಕೊಳ್ದೇ ಪ್ರತೀ ಸಲ ಅದೇ ಪ್ರೀತಿಯಿಂದ ಅಕ್ಕಾ ಕಥೆ, ಹಾಡು, ಅಂತ‌ ನೆವೆರ್ ಎಂಡಿಂಗ್ ಕಥೆಗಳನ್ನ ಹೇಳ್ತಾರೆ. ಪೈಂಟಿಂಗ್ ಮಾಡಿದ್ದನ್ನ ತೋರಿಸ್ತಾರೆ. ಧಾತ್ರಿ ಮತ್ತು ಯೋಗಿತಾ ಅಂತೂ ನಾಳೆ ಏನು ಕಥೆ ಹೇಳಿ ಅಕ್ಕನ ತಲೆ ತಿನ್ಬೇಕು ಅಂತ‌ ಮೊದಲೇ ಯೋಜನೆನೂ ಹಾಕಿಕೊಂಡಿರ್ತಾರೆ. ಅದಕ್ಕೆ ವೀಡಿಯೋ ಕಾಲ್ ನ ಪೂರ್ವಭಾವಿ ಸಿದ್ಧತೆನೂ ಇರುತ್ತೆ….

ಇಂಥ ಮಕ್ಕಳು ಒಂದು ಕಾಲದಲ್ಲಿ ನಾಲಾಯಕ್ ಆಗಿ ಮನೆಲಿ ಕೂತಿದ್ದ ನಂಗೊಂದಿಷ್ಟು ಉತ್ಸಾಹದ ಎರಕ ಹೊಯ್ದಿದ್ದಾರೆ… ಇವತ್ತು ನನ್ನ ಬಾಲ ಸಂಸ್ಕಾರದ ಕ್ಲಾಸ್ ನಲ್ಲಿ 18 ಜನ ಮಕ್ಕಳಿದ್ದಾರೆ…. ಒಬ್ಬೊಬ್ಬರೂ ಒಂದೊಂದು ರೀತಿ… ಮಧ್ಯದಲ್ಲಿ ಬಿಟ್ಟುಹೋದವರು, ಬಿಡಲಾಗದೇ ಬಿಟ್ಟವರೂ ಇದ್ದಾರೆ… ಎಲ್ಲಾ‌ ಮಕ್ಕಳಿಗೂ ನಾನು ತುಂಬಾ ಆಭಾರಿ.. ನೀವೆಲ್ಲರೂ ನನ್ನ ಗುರುಗಳೇ… ಹಾಗಾಗಿ ಗುರುಪೂರ್ಣಿಮೆಯ ಶುಭಾಶಯಗಳು ಮಕ್ಕಳೇ… I love you allllllllllll…

ಅಂದಹಾಗೆ ಇವತ್ತಿಗೆ ಕಲ್ಯಾಣಿ ಮತ್ತು ಶುಭಾಂಗಿ ನಂಗೋಸ್ಕರ ಒಂದು‌ ವೀಡಿಯೋ ಮಾಡಿ ಕಳ್ಸಿದಾರೆ…ನೋಡಿ ಆ ಮಕ್ಕಳಿಗೆ ಒಂದು ಹಾರೈಕೆ ನೀಡಿ…

+91 8152852218 ಹೆಚ್ಚಿನ ವಿವರಗಳಿಗೆ…

https://www.facebook.com/Balasamskara-182145076643082/