ಇತ್ತೀಚಿನ ಬರಹಗಳು: ಬೆಂಶ್ರೀ ರವೀಂದ್ರ (ಎಲ್ಲವನ್ನು ಓದಿ)
- ಸಮಾಧಿ ಸಡಗರ - ಜನವರಿ 22, 2022
- ನಿಬ್ಬು ಮುರಿದು ಹಾರಿತು - ಸೆಪ್ಟೆಂಬರ್ 25, 2021
- ಮತ್ತೆ ಬಂತು ಆಷಾಢ - ಜುಲೈ 21, 2021
ಬದುಕು ಕಡಲಿಂಗೆ ಉಸಿರ ಬಿಸಿಯೊತ್ತಿ
ಆವಿಯಾಗಿವೆ ನೆನಪು ಪುಂಖಾನುಪುಂಖ
ಸೂರ್ಯನುರಿ ಧಗೆಗೆ ಬಿರ್ರನೆ ಮೇಲೆದ್ದು
ಕೂಡಿ ತಂಪಾಗಿವೆ ತೂಗಿ ಕರಿಮಡುವನು
ಬುವಿಯನಪ್ಪಿ ಬಾನ ಮರೆಮಾಡಿ ನೆನಪು
ದಭದಭಿಸಿ ತೂತು ಮಾಡಿದೆ ಮುರಿದು
ಹಿಂಗಾಲದ ಛತ್ರಿ ಸಾವಿರ ಸೋರು ಚೂರು
ಬಾನ್ಕಡಲ ಸೂರ್ಚಂಡು, ಬಾಸುಂಡೆ ಮೈಯಿ
ನೆನಪು ಮನದ ಬಾವು ಅದಕ್ಕೆಲ್ಲಡೆ ತಾವು
ಸುತ್ತುತ್ತ ಮೇಲೆ ಕೆಳಗೆ ಅಲ್ಲಲ್ಲೆ ಠಳಾಯಿಸಿ
ಹರಿದಿತ್ತು ಬಾಳ ಚಾಪೆ ಹಳೆಹುಲ್ಲ ಎಸಳು
ಹೊಂದುವುದೆ ಹುಡುಗ ಹೆಣಿಗೆ ಚಕಮಕಿಗೆ
ಕಲ್ಪನೆಯ ಟಗರುಗಳು ಹೂಂಕರಿಸಿ ನುಗ್ಗಿ ತಲೆ
ತಲೆಢಕ್ಕಾಢಿಕ್ಕಿ ಒಡೆಯುವುದೆ ಕಟ್ಟಿಟ್ಟ ಬುತ್ತಿ
ಭಾವದೇಣಿಯ ನೂಲು ಎರೆಮಣ್ಣ ಪಾಲು
ಭೂಮ್ಯಾಕಾಶದಲಿ ಜೋತಾಡುತ್ತಾ ತ್ರಿಶಂಕು
ಹೋಗೆಂದರೆ ಹೋಗಲಾರೆನೆನುವ ಒಮ್ಮೆ
ಕಳವಳ ಕಾವಳದ ಕಾಜಾಣವಾಗಿ ಮತ್ತೊಮ್ಮೆ
ಮನದಿಂಪಿಗೆ ಪರಪುಟ್ಟನುಲಿಯಾಗುವ ನೆನಪೆ
ಇದ್ದುಬಿಡು ಕನಲದೆ ಒಲಿದು ಒಡನಾಡಿಯಾಗಿ
ಆಗ ನನಗೂ ನಿನಗೂ ಇಬ್ಬರಿಗೂ ಆರಾಮು
ಹೆಚ್ಚಿನ ಬರಹಗಳಿಗಾಗಿ
ಅವಳು ಬಂದಿದ್ದಳು
ಬಿ.ಆರ್.ಲಕ್ಷ್ಮಣರಾವ್
ನವೋನ್ಮೇಷ ಪುಸ್ತಕ ಲೋಕಾರ್ಪಣೆ