- ಕರ್ಪೂರಿ ಠಾಕೂರ್ - ಮಾರ್ಚ್ 3, 2024
- ಗಝಲ್ ಲೋಕದಲ್ಲೊಂದು ಸುತ್ತು - ಮಾರ್ಚ್ 25, 2023
- ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ - ನವೆಂಬರ್ 5, 2022
‘ಮಹಾತ್ಮಾ ಗಾಂಧೀಜಿ ಮತ್ತು ಕಸ್ತೂರ್ಬಾ ರವರನ್ನು ಯುಗಪ್ರವರ್ತಕರು’, ಹಾಗೂ ‘ಸಾಮಾನ್ಯ ಅಸಾಮಾನ್ಯರು’ ಎಂದು ಹೇಳಬಯಸಲು ಹೋದರೆ, ಹೇಳುವುದಕ್ಕಿಂದ ಅವರು ನಡೆಸಿದ ಅಮೂಲ್ಯ ಜೀವನ ಶೈಲಿ ಎಲ್ಲಾ ಭಾರತೀಯರಿಗೂ ಅನುಕರಣೀಯವಾಗಿದೆ. ಅನೀತಿ, ಅತ್ಯಾಚಾರಗಳನ್ನು ಜೀವನಪೂರ್ತಿ ಶಾಂತಿಯುತವಾಗಿ ವಿರೋಧಿಸಿ ಜಯ ಸಾಧಿಸಿದ ಶ್ರೇಯಸ್ಸು ಇವರಿಬ್ಬರದು. ಬಾಪೂರವರ ನೆರಳಿನಂತೆ ಅವರ ಜೀವನದಲ್ಲಿ ಒಬ್ಬ ಸುಸಂಸ್ಕೃತ ಭಾರತೀಯ ಪತ್ನಿಯಾಗಿ ಕಸ್ತೂರ್ ಬಾ ನಡೆದುಕೊಂಡ ರೀತಿ, ಯಾವ ಸೀತೆ ಸಾವಿತ್ರಿಯರಿಗೂ ಕಡಿಮೆಯಿಲ್ಲ. ಆಗಾಖಾನ್ ಪ್ಯಾಲೇಸ್ ಜೈಲಿನಲ್ಲಿ ಬಂಧನದಲ್ಲಿರುವಾಗ ಬಾರವರ ಜತೆ ಡಾ ಸುಶೀಲ ನಯ್ಯರ್ (ಕೆಲವು ಕಡೆ ನಾಯರ್ ಅಂತಾನೂ ಇದೆ) ರವರು ಕಳೆದ ೨ ವರ್ಷಗಳ ಜೀವನದ ಒಳನೋಟಗಳಲ್ಲಿ ಅವರ ಪ್ರೀತಿಯ ಬಾರವರು, ನ್ಯುಮೋನಿಯಾ ಕಾಯಿಲೆಯಿಂದ ಮರಣ ಹೊಂದುತ್ತಾರೆ. ಇವೆಲ್ಲವನ್ನೂ ಇದ್ದಂತೆಯೇ ದಾಖಲಿಸಿರುವ ಡಾ. ಸುಶೀಲ ನಾಯರ್ ( ನಿಜಕ್ಕೂ ವಂದನಾರ್ಹರು. (* ಗಾಂಧೀಜಿ, ಹಾಗೂ ಕಸ್ತೂರ್ಬಾ ಮತ್ತು ಅವರ ಪರಿವಾರದ ಜತೆ ಕಳೆದ ದಶಕಗಳ ಅನುಭವ ಡಾ. ಸುಶೀಲ ಮತ್ತು ಅವರ ಅಣ್ಣ ಪ್ಯಾರೇಲಾ ರವರಿಗಿದೆ) ಮಹಾತ್ಮಾ ಗಾಂಧೀಜಿಯವರ ಚಿಂತನೆಗಳು, ಮತ್ತು ರಾಷ್ಟ್ರ ಹಿತಕಾರ್ಯಗಳು, ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯ ಸಮರದ ಚುಕ್ಕಾಣಿಯನ್ನು ಹಿಡಿದು ರಾಷ್ಟ್ರಕ್ಕೆ ಕೊಟ್ಟ ಸಾರಥ್ಯ ಅನುಪಮ, ಅಸಾದೃಶ, ಹಾಗೂ ಅವರ್ಣನೀಯ- ಹಿಮಾಲಯದಷ್ಟು ಮಹತ್ವದ್ದು. ಅವರು ಸಾಧಿಸಿದ ಆ ಶ್ರೇಯಸ್ಸಿನಲ್ಲಿ ಕಸ್ತೂರ್ ಬಾ ರವರಿಗೂ ಸಮಪಾಲು ಸಲ್ಲಬೇಕೆಂಬುದು ನನ್ನ ಅನಿಸಿಕೆ ..
-ಎಚ್. ಆರ್. ಎಲ್
ಸುಶೀಲ ನಾಯರ್ ಕಂಡಂತೆ ಕಸ್ತೂರ್ ಬಾ – ೧-( ಪ್ರಸ್ತಾವನೆ )
ಎಂ. ಕೆ. ಗಾಂಧಿ ಮುನ್ನುಡಿ
ಸುಶೀಲ ನಯ್ಯರ್ : (೧೯೧೪-೨೦೦೧)
ನವಜೀವನ ಪ್ರಕಾಶನಾಲಯ, ಅಹ್ಮದಾಬಾದ್, (ಮಾರ್ಚ್, ೧೯೬೦ ರಲ್ಲಿ ಪ್ರಥಮ ಪ್ರಕಟಣೆ.)
‘My reminiscences of Kasturba’ ಎಂಬ ಡಾ.ಸುಶೀಲ ನಾಯರ್ ರ ಪುಸ್ತಕಕ್ಕೆ ಮುನ್ನುಡಿಯನ್ನು ಮಹಾತ್ಮಾ ಗಾಂಧಿಯವರು ಬರೆದು ಕೊಟ್ಟರು :
ಜನರೆಲ್ಲಾ ಕಸ್ತೂರ್ ಬಾ ಬಗ್ಗೆ ಗೌರವಾದರಗಳನ್ನು ತೋರಿಸುವುದು, ಅವರೆಲ್ಲರಿರೂ ಬಾರವರು ಮಾಡುವ ಸಹಾಯ ಮತ್ತು ತೋರಿಸುವ ಪ್ರೀತ್ಯಾದರಗಳಿಂದಾಗಿ ಬಾ ತಮ್ಮದೇ ಆದ ಕೆಲವು ಆದ್ಯತೆಗಳು ಮತ್ತು ಧ್ಯೇಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನಾನೂ ಸೇರಿದಂತೆ, ನಮ್ಮ ಮಕ್ಕಳು ಹಾಗೂ ಪರಿವಾರವೆಲ್ಲಾ ಅವರನ್ನು ಕರೆಯುವುದು ‘ಬಾ’ ಎಂದೇ ! ನನ್ನ ಜೀವನದಲ್ಲಿ ನೆರಳಿನಂತೆ ದುಡಿಯುತ್ತಿದ್ದರೂ, ಬಾ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡಿದ್ದಾರೆ. ಕಸ್ತೂರ್ ಬಾರಲ್ಲಿದ್ದ ಈ ಮಹೋನ್ನತ ಗುಣಗಳನ್ನು ಬಹಳ ವರ್ಷಗಳ ಕಾಲ ನಾನು ಅರ್ಥವೇ ಮಾಡಿಕೊಂಡಿರಲಿಲ್ಲ. ಅದು ನನ್ನ ಅಪರಿಪೂರ್ಣತೆಯ ಕುರುಹಾಗಿದೆ. ನಾನು ಮೊದಲು ಅಂದುಕೊಂಡಿದ್ದಂತೆ ಆಕೆ ಒಬ್ಬ ತುಂಬಾ ಹಠಮಾರಿ ಹೆಂಗಸು ; ನಾನು ಎಷ್ಟೇ ಹೇಳಿದರೂ ಆಕೆಯ ಮನಸ್ಸಿಗೆ ತೋರಿದಂತೆ ವರ್ತಿಸುತ್ತಾಳೆ, ಇತ್ಯಾದಿ. ಹಾಗಾಗಿ ಕೆಲವೊಮ್ಮೆ ನಮ್ಮಿಬ್ಬರಲ್ಲಿ ವೈಮಸ್ಯತೆ ಉಂಟಾಗುತ್ತಿತ್ತು.
ಕಾಲಕ್ರಮದಲ್ಲಿ ನಾನು ಹೇಗೆ ಸಾರ್ವಜನಿಕ ಜೀವನದಲ್ಲಿ ಎತ್ತರಕ್ಕೆ ಬೆಳೆದೆನೋ, ಆಕೆಯೂ ತನ್ನ ಜೀವನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದಳು. ಕಾಲಕ್ರಮದಲ್ಲಿ ಆಕೆ ನನ್ನ ಆದ್ಯತೆಗಳಿಗೆ ತನ್ನ ಜೀವನವನ್ನೇ ಸಮರ್ಪಿಸಿಕೊಂಡಳು. ವರ್ಷಗಳು ಉರುಳಿದಂತೆ, ಜನರ ಸೇವೆಯೇ ನನ್ನ ಪ್ರಮುಖ ಆದ್ಯತೆಗಳಲ್ಲೊಂದಾಗಿತ್ತು. ಅದೇ ತರಹ ಬಾ ಸಹಿತ, ನನ್ನ ಹೆಜ್ಜೆಗೆ ಹೆಜ್ಜೆ ಹಾಕಿ, ಮುಂದುವರೆದರು. ಅದಕ್ಕಾಗಿಯೇ ನನಗೆ ಆಕೆ ಭಾರತ ವರ್ಷದ ಆದರ್ಶ ಪತ್ನಿಯ ಪ್ರತಿರೂಪವಾಗಿದ್ದಾರೆ. ಎಲ್ಲರೂ ಆಕೆಯನ್ನು ಪ್ರೀತಿಯಿಂದ ಪೂಜಿಸುತ್ತಾರೆ. ಈ ಗುಣಗಳು ಮತ್ತು ಬಾ ರವರ ಈ ಮಹಾನ್ ಜೀವನಾದರ್ಶಗಳೇ, ಅವರ ಅಪಾರ ಜನಪ್ರಿಯತೆಗೆ ಕಾರಣವೆಂದು ನನ್ನ ನಂಬಿಕೆ.
ಕಸ್ತೂರ್ಬಾ ಹಾಗೂ ನಾನು ಚೆನ್ನಾಗಿ ಯೋಚಿಸಿ, ‘ಬ್ರಹ್ಮಚರ್ಯವ್ರತ”ವನ್ನು ಪರಿಪಾಲಿಸುತ್ತಿದ್ದೇವೆ. ನಮ್ಮಿಬ್ಬರ ವಿಚಾರಗಳಲ್ಲಿ ಯಾವ ಸಂಘರ್ಷವೂ ಇಲ್ಲದೆ ನಾವಿಬ್ಬರು ಸ್ನೇಹಿತರಂತೆ ಇದ್ದೇವೆ. ೧೯೦೧ ರಿಂದ ನನ್ನಲ್ಲಿ ಬಾಗೆ ಏನಾದರು ಆಸಕ್ತಿ ಇದ್ದರೆ, ಅದು ನನ್ನ ದೇಶಪ್ರೇಮ, ಹಾಗೂ ರಾಷ್ಟ್ರಕ್ಕಾಗೆ ಹೊರಡುವ ಕಾರ್ಯಗಳಲ್ಲಿ ಕೈಜೋಡಿಸುವುದೊಂದೇ ! ನನ್ನ ನೆರಳಾಗಿ ನನ್ನ ಜೀವನದಲ್ಲಿ ಬೆರೆತುಹೋಗಿರುವ ಬಾರನ್ನು ನಾನು ಬಹಳ ಪ್ರೀತಿ-ಗೌರವಗಳಿಂದ ಕಾಣುತ್ತೇನೆ ! ತಮ್ಮ ಜೀವನದ ಕೊನೆಯ ಗಳಿಗೆಯವರೆಗೂ ನನ್ನನ್ನು ಸಂಪೂರ್ಣವಾಗಿ ನಂಬಿ, ನನ್ನ ಆದ್ಯತೆಗಳಿಗೆ ಸ್ಪಂಧಿಸಿದ ಮಹಾನ್ ತ್ಯಾಗಿ ಅವಳು- ನನ್ನ ಪ್ರೀತಿಯ ಬಾ ; ಕಸ್ತೂರ್ ಬಾ !
-ಎಂ. ಕೆ. ಗಾಂಧಿ.
ಅನುವಾದಕಾರ ಎಚ್. ಆರ್. ಎಲ್ ಹೀಗೆ ಹೇಳುತ್ತಾರೆ
ಡಾ. ಸುಶೀಲಾ ನಯ್ಯರ್ ಬರೆದಿರುವುದು ಒಂದು ದಿನಚರಿ (ಡೈರಿ) :
ಸುಶೀಲ ನಯ್ಯರ್ : (೧೯೧೪-೨೦೦೧)
ನವಜೀವನ ಪ್ರಕಾಶನಾಲಯ, ಅಹ್ಮದಾಬಾದ್, (ಮಾರ್ಚ್, ೧೯೬೦ ರಲ್ಲಿ ಪ್ರಥಮ ಪ್ರಕಟಣೆ.)
Copyright : akg-images / Archiv Peter Ruehe
ಅದು ಲೇಖನವಲ್ಲ. ಡೈರಿಯಲ್ಲಿ ಅದರದೇ ಆದ ಕೆಲವು ಇತಿ-ಮಿತಿಗಳಿರುವುದು ಸ್ವಾಭಾವಿಕ. ತಾವು ಅಹ್ಮದಾಬಾದಿನ ಸಾಬರ್ಮತಿ ಆಶ್ರಮ ಹಾಗೂ ಮಹಾರಾಷ್ಟ್ರದ ವಾರ್ಧಾದ ಆಶ್ರಮಗಳಲ್ಲಿ ಗಾಂಧಿ ಪರಿವಾರದ ಜತೆ ಸಲ್ಲಿಸಿದ ಸೇವೆಯನ್ನು ದಾಖಲಿಸುತ್ತಾ ಹೋಗುತ್ತಾರೆ. ಪುಣೆಯ ಆಗಾಖಾನ್ ಪ್ಯಾಲೇಸ್ ಜೈಲಿನಲ್ಲಿ ಕಳೆದ ಸುಮಾರು ೨ ವರ್ಷಗಳ ಅವಧಿಯಲ್ಲಿ ಆದ ಅವಘಢಗಳು ಪ್ರಮುಖವಾಗಿ ಮೂರೆಂದು ನಾನು ಗುರುತಿಸುತ್ತೇನೆ. ೧. ಬಾಪೂರವರ ಆತ್ಮೀಯ ಗೆಳೆಯ, ಕಾರ್ಯದರ್ಶಿ, ಶ್ರೀ ಮಹದೇವ್ ದೇಸಾಯ್ ರವರ ನಿಧನ. ೨. ಮಹಾತ್ಮಾ ಗಾಂಧೀಜಿಯವರು ಕೈಗೊಂಡ ೨೧ ದಿನಗಳ ಉಪವಾಸ ಸತ್ಯಾಗ್ರಹ ; ಆತ್ಮೀಯ ಮಹದೇವ್ ದೇಸಾಯ್ ರನ್ನು ಕಳೆದುಕೊಂಡು ಅನಾಥರಾಗಿದ್ದ, ಬಾಪು, ವೃದ್ಧಾಪ್ಯದ ಭಾರವನ್ನು ಹೊರಲಾರದೆ ಬಹಳ ದಣಿದಿದ್ದರು. ೩. ಬಾಪೂರವರಿಗೆ ಎಲ್ಲಾ ವಿಧದಲ್ಲೂ ಸಹಕಾರನೀಡಿ, ಮಾರ್ಗದರ್ಶನ ಮಾಡುತ್ತಿದ್ದ, ಅವರ ಜೀವನದ ಸ್ಫೂರ್ತಿ ದೇವತೆಯಾಗಿದ್ದ ಪ್ರೀತಿಯ ಪತ್ನಿ, ಶ್ರೀಮತಿ ಕಸ್ತೂರ್ ಬಾ ರವರ ನಿಧನ.ಆದರೆ ಈ ವೇದನೆಯಿಂದಲೂ ಅವರು ಮರಣಿಸದೆ ಉಳಿದದ್ದು ಒಂದು ಪವಾಡವೇ ಸರಿ. ಇವೇ ಮೊದಲಾದ ಹೃದಯಸ್ಪರ್ಶಿ, ಕರುಳು ಕತ್ತರಿಸಿ ಬರುವ ದಾರುಣ ಘಟನೆಗಳನ್ನು ಯಥಾವತ್ತಾಗಿ ಓದುಗರಿಗೆ ತಿಳಿಸುವುದು ಬಹಳ ಮುಖ್ಯವಾಗಿದೆ.
೧೮೫೭ ರಂದು ಭಾರತೀಯ ಸೈನಿಕರ ವಿದ್ರೋಹದ ತರುವಾಯ, ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅಖಂಡ ಭಾರತದ ನಾಗರಿಕರು, ವಿದ್ಯಾರ್ಥಿಗಳಿಂದ, ಹಿಡಿದು, ಸರ್ಕಾರೀ ನೌಕರರು, ಭಾರತೀಯ ಸೈನ್ಯವೂ ಸೇರಿದಂತೆ, ವರ್ತಕರು, ಮಹಿಳೆಯರು, ಹಾಗೂ ಎಲ್ಲ ಜಾತಿ ವರ್ಗಗಳ ಜನರೂ ರಾಷ್ಟ್ರದ ನಾಯಕರ ಅನುಪಸ್ಥಿತಿಯಲ್ಲೂ ಹೋರಾಡಲು ಮುಂದಾಗಿರುವುದು, ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಯಾರೂ ಊಹಿಸಲಸಾಧ್ಯವಾದ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿರುವುದಾಗಿ, ವೈಸ್ರಾಯ್, ಲಾರ್ಡ್ ಲಿನ್ ಲಿತ್ ಗೋ (೧೯೩೬-೧೯೪೪)ಗುರುತಿಸಿ, ವಿನ್ಸ್ಟನ್ ಚರ್ಚಿಲ್ (೧೯೪೦-೧೯೪೫) ಸರ್ಕಾರಕ್ಕೆ, ವರದಿಮಾಡಿದರು. ಇಂಥ ಅಪಾಯಕಾರಿ ಹೋರಾಟಗಾರನನ್ನು ಭಾರತದಿಂದ ಹೊರಗಡೆ ಜೈಲಿನಲ್ಲಿ ಬಂಧಿಸಿಡಲು ಹುನ್ನಾರಗಳು ನಡೆಯುತ್ತಿದ್ದವು. ಇದರಿಂದ ಬ್ರಿಟನ್ ವಿರುದ್ಧ ಆಗಬಹುದಾದ ರಾಷ್ಟ್ರವ್ಯಾಪಿ ಚಳುವಳಿ, ಹಿಂಸಾಚಾರಗಳ ಅವಘಢಗಳನ್ನು ಗ್ರಹಿಸಿ ಸುಮ್ಮನಾದರು.
೮, ನೆಯ ತಾರೀಖಿನ ಬೆಳಿಗ್ಯೆ, ಆಗಸ್ಟ್, ೧೯೪೨ ನೆಯ ಇಸವಿಯಲ್ಲಿ ಬಾಪೂರವರು ಬೊಂಬಾಯಿಯ ‘ಬಿರ್ಲಾ ಹೌಸ್’ ನಲ್ಲಿ ಅರೆಸ್ಟ್ ಆದರು. ಗಾಂಧೀಜಿಯವರು ಶಿವಾಜಿಪಾರ್ಕ್ ಮೈದಾನದಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಉದ್ದೇಶಿಸಿ ಮಾಡಬೇಕಾಗಿದ್ದ ಭಾಷಣವನ್ನು ಕಸ್ತೂರ್ ಬಾ ಮಾಡಲು ಸಿದ್ಧರಾಗಿದ್ದರು. ಅಷ್ಟರಲ್ಲೇ ಅವರನ್ನು ಸರಕಾರ ಬಂಧಿಸಿ, ‘ಆರ್ಥರ್ ರೋಡ್ ಜೈಲಿ’ನಲ್ಲಿ ಇಟ್ಟರು. ೨ ದಿನಗಳ ನಂತರ, ಪುಣೆಯ ಆಗಾಖಾನ್ ಪ್ಯಾಲೇಸ್ ಜೈಲಿಗೆ ಕೊಂಡೊಯ್ಯಲಾಯಿತು. ಗಾಂಧೀಜಿಯವರ ಜತೆಗೆ ಮಹದೇವ್ ದೇಸಾಯ್, ಪ್ಯಾರೇಲಾಲ್, ಸರೋಜಿನಿ ನಾಯಿಡು, ಮೀರಾಬೆನ್, ಸುಶೀಲಾ ನಾಯರ್, ಮನುಬೆನ್, ಮೊದಲಾದವರನ್ನು ಅಲ್ಲಿಗೆ ಕರೆತರಲಾಯಿತು. ಗಾಂಧೀಜಿಯವರ ದೇಹ ಝರ್ಜರಿತವಾಗಿತ್ತು ಅನೇಕ ಉಪವಾಸಗಳು, ಮಾನಸಿಕ ಆಘಾತಗಳು ಅವರ ಆರೋಗ್ಯವನ್ನು ಮೂರಾಬಟ್ಟೆಯನ್ನಾಗಿಸಿದ್ದವು. ವಯಸ್ಸಾದ ಪತಿಯ ಉಪವಾಸ ಸತ್ಯಾಗ್ರಹ ತಿಳಿ ಕಸ್ತೂರ್ ಬಾ, ಬಾಪುರವರು ಬದುಕುಳಿಯುವುದು ಅಸಾಧ್ಯವೆಂದು ಅವರ ಆಸೆಯನ್ನೇ ಕಳೆದುಕೊಂಡಿದ್ದರು. ಬಾರವರ ಆರೋಗ್ಯವೂ ಬಹಳ ಕಳವಳಕ್ಕೆ ಕಾರಣವಾಗಿತ್ತು. ಆದರೂ ಅವರು ತೋರಿಸುತ್ತಿದ್ದ ಲವಲವಿಕೆ ಬಹಳ ಮೆಚ್ಚುವಂತಹದು. ಫೆಬ್ರವರಿ, ೧೯೪೩ ರಲ್ಲಿ ಗಾಂಧೀಜಿಯವರು ೨೧ ದಿನ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಆಗಾಖಾನ್ ಪ್ಯಾಲೇಸ್ ಜೈಲಿನಲ್ಲಿರುವಾಗ ೨೧ ದಿನಗಳ ಉಪವಾಸವನ್ನು ದುರ್ಬಲ ದೇಹದ ವಯಸ್ಸಾದ ಪತಿಯವರಿಗೆ ಹೇಗೆ ಸಹಿಸಲು ಸಾಧ್ಯ. ನೀರಿನ ಜತೆ ನಿಂಬೆಹಣ್ಣಿನ ರಸ, ಮತ್ತು ಜೇನುತುಪ್ಪವನ್ನು ಮಾತ್ರ ಅವರು ಆಹಾರವಾಗಿ ತೆಗೆದುಕೊಳ್ಳುತ್ತಿದ್ದರು. ಅವರು ಬದುಕುಳಿಯುವರೇ ಎನ್ನುವ ಆತಂಕದಿಂದಾಗಿ ಬಾರವರ ದೇಹಾರೋಗ್ಯ ಬಹಳ ಹಾಳಾಯಿತು. ಗಾಂಧೀಜಿಯವರನ್ನು ನೋಡಿಕೊಳ್ಳುತ್ತಿದ್ದ ೬ ಜನ ಡಾಕ್ಟರ್ ತಂಡವೂ, ಅವರು ಉಳಿಯುವ ಸಾಧ್ಯತೆಯ ಬಗ್ಗೆ ಅನುಮಾನಿಸುತ್ತಿದ್ದರು. (ಇವನ್ನೆಲ್ಲಾ ಗಮನಿಸುತ್ತಿದ್ದ ಬ್ರಿಟಿಷ್ ಸರ್ಕಾರದ ಅಧಿಕಾರಿಗಳು, ಹಾಗೂ ಜೈಲಿನ ಅಧಿಕಾರಿಗಳು ಗಾಂಧೀಜಿಯವರು ಮರಣಿಸಿದರೆ, ದಹನಕಾರ್ಯಮಾಡಲು ಬೇಕಾಗುತ್ತದೆಂದು ಮುಂಜಾಗ್ರತೆ ವಹಿಸಿ, ಗಂಧದ ಕಟ್ಟಿಗೆಗಳನ್ನು ದಾಸ್ತಾನು ಮಾಡುವಷ್ಟು ವ್ಯವಸ್ಥೆ ಮುಂದುವರೆದಿತ್ತು. ತಮ್ಮ ಆರೋಗ್ಯವೇ ಚಿಂತಾಜನಕವಾಗಿದ್ದರೂ ತಾವು ಮಲಗಿದ ಹಾಸಿಗೆಯಿಂದ ಕಷ್ಟಪಟ್ಟು ತೆವಳಿಕೊಂಡು ಬಂದು ಪತಿಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಪ್ರತಿದಿನವೂ ಬೆಳಿಗ್ಯೆ ಹಾಗೂ ಸಾಯಂಕಾಲದ ಪ್ರಾರ್ಥನೆಮಾಡುವುದನ್ನು ಬಿಡುತ್ತಿರಲಿಲ್ಲ. ಕೊನೆಕೊನೆಗೆ, ಕೇವಲ ‘ಗಂಗಾಜಲ’ ಮಾತ್ರ ಅವರಿಗೆ ದಕ್ಕಿದ್ದು ; ‘ರಾಮನಾಮ’ ಒಂದನ್ನು ಬಿಟ್ಟರೆ,ಯಾವುದೂ ಬೇಡವೆಂದು ಹೇಳುತ್ತಿದ್ದರು.
ಬ್ರಿಟಿಷ್ ಸರ್ಕಾರ, ಕ್ವಿಟ್ ಇಂಡಿಯಾ ಆಂದೋಲನದಲ್ಲಿ ಭಾಗವಹಿಸಿದವರನ್ನು ದಮನಮಾಡಲು ಬಹಳ ಪ್ರಯತ್ನಮಾಡಿದರು. ಸರ್ಕಾರ ಕಾಂಗ್ರೆಸ್ ಪಕ್ಷ ಹಾಗೂ ಗಾಂಧೀಜಿಯವರು ರಾಷ್ಟ್ರದಲ್ಲಿ ಅಶಾಂತಿ, ದಂಗೆ ಹರಡಲು ಕಾರಣರಾದರೆಂದು ಗಾಂಧೀಜಿಯವರ ಮೇಲೆ ತಪ್ಪುಹೊರಸಿದರು. ಅವರ ೧೨ ಜನ ಅನುಯಾಯಿಗಳಾದ : ಜವಾಹರ್ ಲಾಲ್ ನೆಹರು, ಮೌಲಾನಾ ಅಬ್ದುಲ್ ಕಲಾಂ ಆಜಾದ್, ವಲ್ಲಭ್ ಭಾಯಿ ಪಟೇಲ್, ಗೋವಿಂದ್ ವಲ್ಲಭ್ ಪಂಥ್, ಸಯ್ಯದ್ ಮೊಹ್ಮದ್, ಆಚಾರ್ಯ ಜೆ. ಬಿ. ಕೃಪಲಾನಿ, ಶಂಕರ್ ರಾವ್ ದೇವ್, ಹರೇ. ಕೃಷ್ಣ ಮಹ್ತಾಬ್, ಪ್ರಫುಲ್ಲ ಚಂದ್ರ ಘೋಸ್, ಪಟ್ಟಾಭಿ ಸೀತಾರಾಮಯ್ಯ, ಅಸಫ್ ಆಲಿ, ಆಚಾರ್ಯ ನರೇಂದ್ರ ದೇವ್, ಕಾಂಗ್ರೆಸ್ ಪಕ್ಷದ ಎಲ್ಲರೂ ಜೈಲಿನಲ್ಲಿ ಬಂಧಿಸಲ್ಪಟ್ಟರು. ಮೊಹಮ್ಮದಾಲಿ ಜಿನ್ನಾಗೆ ಮುಸ್ಲಿಮರ ಹಾಗೂ ಬ್ರಿಟಿಷ್ ಸರಕಾರದ ಬೆಂಬಲದಿಂದಾಗಿ ಪಾಕಿಸ್ಥಾನವನ್ನು ಸ್ಥಾಪಿಸಲು, ಸುವರ್ಣಾವಕಾಶವಾಯಿತು. ಮಹಾತ್ಮಾ ಗಾಂಧೀಜಿಯವರು ಬ್ರಿಟಿಷ್ ವೈಸ್ರಾಯ್ ರವರಿಗೆ, ‘ಮುಂದೆ ಹೀಗಾಗಲು ಅವಕಾಶ ಕೊಡದಂತೆ ಜಾಗ್ರತೆ ವಹಿಸುವುದಾಗಿಯೂ ನಮ್ಮ ದೇಶದ ನಾಗರೀಕರಿಂದಲೇ ಆಗಿರುವ ರಕ್ತಪಾತ, ಅಶಾಂತಿಗೆ ತಾವು ಬದ್ಧರಾಗಿರುವುದರಿಂದ ತಮ್ಮ ಆತ್ಮ ಶುದ್ಧಿಗಾಗಿ ೧೦ ಫೆಬ್ರವರಿ, ೧೯೪೩ ರಲ್ಲಿ ೨೧ ದಿನ ‘ಉಪವಾಸ ಸತ್ಯಾಗ್ರಹ’ವನ್ನು ಪ್ರಾರಂಭಿಸಿದರು’. ಒಂದು ಸಮಯದಲ್ಲಿ ಅವರ ಸ್ಥಿತಿ ಬಹಳ ಆತಂಕಕ್ಕೊಳಗಾಗಿತ್ತು. ರಾಷ್ಟ್ರದ ಮಿಲಿಯಗಟ್ಟಲೆ ಜನ ಅವರ ಜೀವ ಉಳಿಸಲು ದೇವರನ್ನುಪ್ರಾರ್ಥಿಸಿದರು. ರಾಷ್ಟ್ರದ ಪ್ರಮುಖ ವ್ಯಕ್ತಿಗಳೆಲ್ಲ ಬ್ರಿಟನ್ನಿನ ಆಗಿನ ಪ್ರಧಾನಿಯಾಗಿದ್ದ ಚರ್ಚಿಲ್ ರಿಗೆ ಬೇಡಿಕೆ ಸಲ್ಲಿಸಿ, ಸತ್ಯಾಗ್ರಹವನ್ನು ತಡೆಯಲು ಬೇಡಿದರು. ಇದನ್ನೆಲ್ಲಾ ಅವಲೋಕಿಸುತ್ತಿದ್ದ ಚರ್ಚಿಲ್ ಗಾಭರಿಯಿಂದ ತಲ್ಲಣಿಸಿದ್ದು ನಿಜ. ಆದರೆ ಯಾವ ನಿರ್ಧಾರವನ್ನೂ ಕೈಗೊಳ್ಳದೇ, ಸುಮ್ಮನಿದ್ದರು.
ಉಪವಾಸದ ಅಂತಿಮದಿನದಂದು ಮೂರ್ಚ್ಛಾವಸ್ಥೆಯಲ್ಲಿದ್ದ ಗಾಂಧೀಜಿವರಿಗೆ ಚೈತನ್ಯಮಯಿ, ಸ್ಫೂರ್ತಿದೇವತೆಯಾದ ಅವರ ಮಡದಿ, ಕಸ್ತೂರ್ ಬಾ ಕಾಲು ಲೋಟ ಕಿತ್ತಳೆಹಣ್ಣಿನ ರಸತಂದು ಬಾಪುರವರಿಗೆ ಕುಡಿಯಲು ಕೊಟ್ಟರು. ಅದು ಅಮೃತದಂತೆ ವರ್ತಿಸಿ, ರೋಮರೋಮಗಳಲ್ಲಿ ರಾಷ್ಟ್ರದ ಒಳಿತನ್ನೇ ತುಂಬಿಕೊಂಡಿದ್ದ ಬಡಕಲು ದೇಹದಲ್ಲಿ ಅಡಗಿದ್ದ ಸುಷುಪ್ತ ಚೇತನ ಬಾಪುರವರನ್ನು ಕರ್ತವ್ಯ ಮುಖರನ್ನಾಗಿ ಹೊಡೆದೆಬ್ಬಿಸಿತು. ದೇವರದಯದಿಂದ ಬಾಪೂರವರು ಹೇಗೋ ಚೇತರಿಸಿಕೊಂಡು ರಾಷ್ಟ್ರಕ್ಕೆ ‘ಅದಮ್ಯ ಚೇತನ’ವಾದರು. ಆಂದೋಲನವನ್ನು ಹಿಂದಕ್ಕೆ ತೆಗೆದುಕೊಳ್ಳುವವರೆಗೂ ಬ್ರಿಟಿಷ್ ಸರಕಾರ ಯಾವ ಮಾತುಕತೆಗಳಿಗೂ ಅವಕಾಶಕೊಡುವುದಿಲ್ಲವೆಂದು ಘೋಷಿಸಿತು. ಈ ಅಮಾನವೀಯ ನಿರ್ಣಯದಿಂದ ವೈಸ್ ರಾಯ್ ರವರ ಕಾರ್ಯಕಾರಿ ಸಮಿತಿಯ ಮೂರು ಜನ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ೧. ಹೋಮಿ ಮೋದಿ, ೨. ಏನ್. ಆರ್. ಸರ್ಕಾರ್, ೩. ಎಲ್. ಎಸ್. ಅಮೆರಿ. (L.S. Amery-1940-1945, Secretary of State for India & Myanmar)
ಮೊಹಮ್ಮದಾಲಿ ಜಿನ್ನಾ ಇವೆಲ್ಲಾ ಗಾಂಧೀಜಿಯವರ ‘ಹಿಂದುತ್ವದ ಪರದ ಧೋರಣೆ’ ಎಂದು ಹೇಳಿಸುಮ್ಮನಾದರು. ರಾಷ್ಟ್ರದಲ್ಲೆಲ್ಲ ಸ್ಥಿತಿ ಹದಗೆಟ್ಟು ಹೋಯಿತು. ವಿಶ್ವಯುದ್ಧದ ಪರಿಣಾಮದಿಂದ ಗೃಹ ವಸ್ತುಗಳ ಬೆಲೆ, ಪೆಟ್ರೋಲ್ ಮೊದಲಾದ ಇಂಥನಗಳ ಬೆಲೆ ಗಗನಕ್ಕೇರಿತು. ಯುದ್ಧದಲ್ಲಿ ಸತ್ತವರು ಲಕ್ಷಾಂತರ ಮಂದಿ. ಲಾರ್ಡ್ ವೇವಿಲ್ (೨೦, ಅಕ್ಟೊಬರ್ ೧೯೪೩-೧೯೪೭) ಹೊಸ ವೈಸ್ರಾಯ್, ಆಗಿ ಬಂದರು.
ಗಾಂಧೀಜಿಯವರು ಆಗಾ ಖಾನ್ ಪ್ಯಾಲೇಸ್ ನಲ್ಲಿದ್ದಾಗ, ೨೨, ಫೆಬ್ರವರಿ, ೧೯೪೩ ರಂದು, ಕಸ್ತೂರ್ ಬಾ ನಿಧನಹೊಂದಿದರು. ಗಾಂಧೀಜಿಯವರಿಗೆ ಮಾನಸಿಕವಾಗಿ ದೊಡ್ಡ ಆಘಾತವಾಯಿತು. ಬಹಳವಾಗಿ ನೊಂದ ಅವರು, ಕಾಯಿಲೆ ಬಿದ್ದರು. ಡಾಕ್ಟರ್ ಗಳು ಇನ್ನೇನು ಸಾಯುವುದು ಖಚಿತವೆಂದು ವರದಿಮಾಡಿದರು. ಬ್ರಿಟಿಷ್ ಸರಕಾರ ತಮ್ಮ ವಶದಲ್ಲಿ ಕೈದಿಯಾಗಿ ಜೈಲಿನಲ್ಲಿರುವಾಗ ಮಹಾತ್ಮಾ ಗಾಂಧೀಜಿಯವರು ಸತ್ತರೆ ದೇಶದಲ್ಲಿ ದೊಡ್ಡ ಗಲಭೆ ಯಾಗುವುದನ್ನು ಇಷ್ಟಪಡಲಿಲ್ಲ. ೬, ಏಪ್ರಿಲ್ ೧೯೪೪ ರಂದು ಭಾರತಕ್ಕೆ ಹೊಸದಾಗಿ ಅಧಿಕಾರಕ್ಕೆ ಬಂದ ಲಾರ್ಡ್ ವೇವಿಲ್ ರವರು ಗಾಂಧೀಜಿ ಹಾಗೂ ಅವರ ಅನುಯಾಯಿಗಳನ್ನು ಯಾವ ಶರತ್ತಿಲ್ಲದೆ ಬಿಡುಗಡೆಮಾಡಿದರು. ತೆಗೆದುಕೊಂಡ ಔಷಧಗಳು ಬಾಪುರವರಮೇಲೆ ಒಳ್ಳೆಯ ಕೆಲಸಮಾಡಿದವು. ಅರೋಗ್ಯ ಸುಧಾರಿಸಿತು. ಜನರಿಗೆ ಭರವಸೆ ಬಂತು ; ಬಾಪೂಜಿ ತಮ್ಮ ಆಗಸ್ಟ್ ಕ್ರಾಂತಿ ಇನ್ನೂ ಜೀವಂತವಾಗಿದೆಯೆಂದು ಘೋಷಣೆಮಾಡಿ, “ನಾನು ಕರೆಕೊಟ್ಟ ವಿಧೇಯಕದ ಬರವಣಿಗೆಯಲ್ಲಿ ಒಂದು ಕಾಮವನ್ನೂ ಬದಲಾಯಿಸಲು ನನಗೆ ಅಧಿಕಾರವಿಲ್ಲ”ವೆಂದು ಘೋಷಿಸಿದರು. ಈ ಸ್ಪಷ್ಟಿಕರಣದಿಂದ ಹೋರಾಟಗಾರರಿಗೆಲ್ಲಾ ಹೊಸ ಹುರುಪು ಬಂತು.
ರಾಷ್ಟ್ರದ ಹೊರಗಡೆ ಇದ್ದ ನೇತಾಜಿ ಸುಭಾಷ್ ಚಂದ್ರಬೋಸ್, ಜುಲೈ ೧೯೪೪ ರಂದು ರೇಡಿಯೋದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತಾಡಿ, “ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರೇ, ಹೊರಗಡೆ ಇರುವ ಭಾರತೀಯರಿಗೆ, ಭಾರತೀಯತೆ ಮತ್ತು ಸ್ವಾತಂತ್ರ್ಯದ ಪರಮ ಧರ್ಮವನ್ನು ಉಪದೇಶಿಸಿದ್ದೀರಿ. ೧೮೫೭ ರ ನಂತರ ಮತ್ತೊಂದು ಕೊನೆಯ ಸ್ವಾತಂತ್ರ್ಯ ಸಮರ ಶುರುಮಾಡುತ್ತಿದ್ದೇವೆ. ಅಜಾದ್ ಹಿಂದ್ ಸೈನ್ಯ, ದೇಶದಲ್ಲಿ ಧರ್ಯದಿಂದ ಹೋರಾಡುತ್ತಿದೆ. ಹಲವಾರು ಅಸಹಾಯಕ, ಅನಾನುಕೂಲ ಪರಿಸ್ಥಿತಿಯಲ್ಲೂ ಬ್ರಿಟಿಷರ ಮೇಲೆ ಮಹಾ ಯುದ್ಧದಲ್ಲಿ ಹೋರಾಡುತ್ತಿರುವ ನಮ್ಮ ಸೈನ್ಯಕ್ಕೆ ಜಯಗಳಿಸಲು ನಿಮ್ಮ ಆಶೀರ್ವಾದ, ಮತ್ತು ಶುಭ ಹಾರೈಕೆಗಳು ಅಗತ್ಯವಾಗಿ ನಮಗೆ ಬೇಕಾಗಿದೆ”. ಎಂದು ಮನವಿ ಮಾಡಿದರು. ಜಪಾನ್ ಬ್ರಿಟಿಷ್ ಭಾರತದ ಉತ್ತರ ಪೂರ್ವ ಭಾಗವನ್ನು ಆಕ್ರಮಿಸಲು ಪ್ರಯತ್ನಿಸುತ್ತಿತ್ತು. ೧೯೪೪ ರಲ್ಲಿ ರಾಷ್ಟ್ರದಾದ್ಯಂತ ಮತೀಯ ದಂಗೆಗಳು ಹೆಚ್ಚುತ್ತಿದ್ದು ರಾಷ್ಟ್ರದ ಪರಿಸ್ಥಿತಿ ಭೀಕರವಾಗಿ ಹದಗೆಟ್ಟಿತ್ತು. ಭಾರತೀಯ ಸೈನ್ಯ ಜಪಾನ್ ಜೊತೆಗೂಡಿ ತಮ್ಮ ಸರ್ಕಾರವನ್ನು ಮುಗಿಸುವರೆಂಬ ಭೀತಿಯಿಂದ ಬ್ರಿಟಿಷ್ ಸರ್ಕಾರ, ಭಾರತವನ್ನು ಭಾರತೀಯರಿಗೆ ಒಪ್ಪಿಸಿ ಕೊಟ್ಟು ತಮ್ಮ ದೇಶಕ್ಕೆ ವಾಪಸ್ಸಾದರು.
ಗಾಂಧೀವಾದಿ, ಡಾ. ಸುಶೀಲ ನಾಯರ್, ಮಹಾತ್ಮಾ ಗಾಂಧೀಜಿ, ಕಸ್ತೂರ್ ಬಾ ಮತ್ತು ಗಾಂಧಿಪಾರಿವಾರದ ಒಬ್ಬ ಅವಿಭಾಜ್ಯ ಅಂಗದ ತರಹ ಹೊಂದಿಕೊಂಡು ಕೈಗೊಂಡ ಕಾರ್ಯಗಳು ಬಹಳ ಮಹತ್ವದ್ದು. ದೆಹಲಿಯಲ್ಲಿ ೬ ವರ್ಷದ ಹುಡುಗಿಯಾಗಿದ್ದಾಗ ತನ್ನ ತಾಯಿಯ ಜತೆ ಮಹಾತ್ಮಾ ಗಾಂಧಿ ಹಾಗೂ ಕಸ್ತೂರ್ ಬಾರವರನ್ನು ನೋಡಿದ ನೆನಪು ಮಾಸದಂತೆ ಇತ್ತು. ಅಷ್ಟುಹೊತ್ತಿಗಾಗಲೇ ಅವಳ ಅಣ್ಣ ಪ್ಯಾರೇಲಾಲ್ ಆ ಸಮಯದ ನೂರಾರು ರಾಷ್ಟ್ರಭಕ್ತ ಯುವಕರ ತರಹ, ಬಾಪೂಜಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅವರ ಜತೆಗೂಡಿದ್ದರು. ವೈದ್ಯಕೀಯ ವಲಯದಲ್ಲಿ ಡಾ. ಸುಶೀಲ ನಾಯರ್ ಪದವಿಗಳನ್ನುಗಳಿಸಿ, ಸಾಬರಮತಿ ಆಶ್ರಮದಲ್ಲಿದ್ದಾಗ ತಲೆದೋರಿದ ಕಾಲರಾ ಪಿಡುಗಿನ ಸಮಯದಲ್ಲಿ ಆಶ್ರಮವಾಸಿಗಳಿಗೆ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರಿಗೆ Innoculations ಹಾಕಿಸಲು ಮುಂದಾಳತ್ವ ತೆಗೆದುಕೊಂಡು ಒಳ್ಳೆಯ ಸೇವಾ ಕಾರ್ಯವನ್ನು ಮಾಡಿದರು. ತಮ್ಮ ವೈದ್ಯಕೀಯ ವಿದ್ಯಾಭ್ಯಾಸ, ಹಾಗೂ ಗಾಂಧಿಯವರ ಆಶ್ರಮದ ಸೇವಾಕಾರ್ಯಗಳನ್ನೂ ವ್ಯವಸ್ಥಿತವಾಗಿ ತೂಗಿಸಿಕೊಂಡು ಹೋಗಿ, ತಮ್ಮ ಜೀವನದ ಧ್ಯೇಯಗಳನ್ನು ಚೆನ್ನಾಗಿ ರೂಪಿಸಿಕೊಂಡ ಜಾಣ್ಮೆ ಅವರಿಗಿತ್ತು.
೧೯೨೦ ರಲ್ಲಿ ಮೊದಲಬಾರಿ ಅಹ್ಮದಾಬಾದಿನ ಸಾಬರ್ಮತಿ ಆಶ್ರಮಕ್ಕೆ ಗಾಂಧೀಜಿಯವರನ್ನು ನೋಡಲು ಬಂದರು. ಕಸ್ತೂರ್ ಬಾ ರವರ ಜತೆ ಒಬ್ಬ ಮಗಳ ತರಹವಿದ್ದು ಆಶ್ರಮದ ಹಲವಾರು ಅಭಿಯಾನಗಳಲ್ಲಿ ಯೋಗದಾನವನ್ನು ನೀಡಿದರು. ಕಸ್ತೂರ್ ಬಾರವರ ನಿಧನದ ನಂತರವೂ ೧೯೪೭ರಲ್ಲಿ ಬಂಗಾಳದ ನೊಖಾಲಿ (Noakhali)ಹಳ್ಳಿಯಲ್ಲಿ ಮುಸಲ್ಮಾನ್ ಜನಸಮುದಾಯ ಹಿಂದುಗಳ ಮೇಲೆ ಬಹಳ ಅತ್ಯಾಚಾರನಡೆಸಿದ್ದರು. ಹಿಂದುಗಳನ್ನು ಕಗ್ಗೊಲೆ ಮಾಡಿದ್ದಲ್ಲದೆ, ಆಸ್ತಿಪಾಸ್ತಿಯ ಹಾನಿಯ ಲೆಖ್ಖವೇ ಇರಲಿಲ್ಲ. ಆಸಮಯದಲ್ಲಿ ಮಹಾತ್ಮಾ ಗಾಂಧೀಜಿಯವರು ಅಲ್ಲಿಗೆ ಹೋಗಿ, ಎರಡು ಸಮುದಾಯಗಳನ್ನೂ ಭೇಟಿಮಾಡಿ ಶಾಂತಿ ಸೌಹಾರ್ದತೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ಆ ಸಮಯದಲ್ಲಿ ಡಾ. ಸುಶೀಲಾ ನಾಯರ್ ಅವರ ಸಹಾಯಕಿಯಾಗಿ ಅವರ ಜತೆಯಲ್ಲಿ ದುಡಿದರು. ಬಂಗಾಳದಲ್ಲಿ ಈ ಅಶಾಂತಿಯ ವಾತಾವರಣ ಮೆರೆಯುತ್ತಿದ್ದಾಗ, ನವದೆಹಲಿಯಲ್ಲಿ ಬ್ರಿಟಿಷರ ವಿರುದ್ಧ ರಾಷ್ಟ್ರಕ್ಕೆ ದೊರೆತ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಮಾರಂಭಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು.
೨೬, ಡಿಸೆಂಬರ್ ೧೯೧೪ ರಲ್ಲಿ ಗುಜರಾತ್ ರಾಜ್ಯದ ‘ಕುಂಜ್’ ಎಂಬ ಪ್ರದೇಶದಲ್ಲಿ ಜನಿಸಿದರು. ಅದು ಈಗ ಪಾಕಿಸ್ತಾನದಲ್ಲಿದೆ. ಸುಶೀಲಾ ನಾಯರ್ (ನಯ್ಯರ್) ಭಯಕಂಡರಿಯದ ನಿಸ್ವಾರ್ಥ ರಾಷ್ಟ್ರಸೇವಾಸಕ್ತ ದಿಟ್ಟ ಮಹಿಳೆ.
ಈಕೆ ಮಹಾತ್ಮಗಾಂಧಿಯವರ ಸೆಕ್ರೆಟರಿಗಳಲ್ಲಿ ಒಬ್ಬರಾಗಿದ್ದ ಪ್ಯಾರೇಲಾಲ್ ನಾಯರ್ ರವರ ತಂಗಿ. ಅಣ್ಣನನ್ನು ನೋಡಲು ಲಾಹೋರ್ ನಿಂದ ಆಗಾಗ ಗುಜರಾತಿನ ಸಾಬರ್ಮತಿ ಆಶ್ರಮಕ್ಕೆ ಬಂದು ಹೋಗುತ್ತಿದ್ದರು. ೧೯೩೬ ರಲ್ಲಿ ಗಾಂಧೀಜಿಯವರು ಸಾಬರ್ಮತಿ ಆಶ್ರಮಬಿಟ್ಟು ಮಹಾರಾಷ್ತ್ರದ ವಾರ್ಥಾ, ಜಿಲ್ಲೆಯ ಸೇವಾಗ್ರಾಮ್ ನ ಆಶ್ರಮಕ್ಕೆ ಬಂದಾಗ, ಅಣ್ಣ ಪ್ಯಾರೇಲಾಲ್ ಸಹ ಬಾಪೂರವರ ಜತೆ ಹೋದರು. ಎರಡು ವರ್ಷಗಳ ಬಳಿಕ ತಂಗಿ, ಸುಶೀಲರವರೂ ಅವರ ಜತೆ ಸೇರಿದರು.
ಸುಶೀಲಾಗೆ ಮೆಡಿಕಲ್ ವಿದ್ಯಾಭ್ಯಾಸ ಮಾಡಿ ಒಬ್ಬ ಅತ್ಯುತ್ತಮ ಡಾಕ್ಟರಾಗುವ ಮಹದಾಸೆಯಿತ್ತು. ಅವರು, Lady Hardinge Medical College ನಲ್ಲಿ ಮೆಡಿಕಲ್ ವಿದ್ಯಾರ್ಥಿನಿಯಾಗಿ ಸೇರಿದರು. ಮಹಾತ್ಮಾ ಗಾಂಧೀಜಿಯವರ ತತ್ವಗಳು, ಆದರ್ಶಗಳನ್ನು ಪತ್ರಿಕೆಗಳಲ್ಲಿ ಓದಿತಿಳಿದಿದ್ದರು. ಅವರ ಅಣ್ಣ ಆಗಾಗಲೇ ಮಹಾತ್ಮಗಾಂಧಿಯವರ ಜತೆ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಲಾಹೋರಿಗೆ ಬಂದಾಗ ಅಲ್ಲಿನ ಅನುಭವಗಳನ್ನು ಸ್ವಾರಸ್ಯಕರವಾಗಿ ಅವರ ತಾಯಿಯವರ ಬಳಿ ಹಂಚಿಕೊಳ್ಳುತ್ತಿದ್ದರು. ಹೀಗಾಗಿ, ಬಾಪು ರವರ ಆದರ್ಶ ಜೀವನ, ಯುವ ಸುಶೀಲರವರ ಮೇಲೆ ಜೀವನದ ಮೇಲೆ ಗಾಢ ಪರಿಣಾಮ ಬೀರಿದವು. ಅವರು ಸಾಬರ್ಮತಿ ಆಶ್ರಮಕ್ಕೆ ಭೇಟಿಕೊಟ್ಟಾಗ, ಆಧ್ಯಾತ್ಮಿಕ ರಾಷ್ಟ್ರಭಕ್ತಿಯ ಸದ್ಗುಣಗಳು ಅವರಲ್ಲಿ ಜಾಗೃತಗೊಂಡವು. ಕಸ್ತೂರ್ ಬಾ ರವರು ಈಗಾಗಲೇ ಗ್ರಾಮಗಳಲ್ಲಿ ಹೋಗಿ ಬಡಜನರ ಸೇವೆಯನ್ನು ಮಾಡುತ್ತಿದ್ದರು. ಅವಕಾಶ ದೊರೆತಾಗ ಅದನ್ನು ಮುಕ್ತ ಹೃದಯದಿಂದ ಸ್ವೀಕರಿಸಿ, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಇದೇ ಸಮಯದಲ್ಲಿ ಸೇವಾಗ್ರಾಮದಲ್ಲಿ ‘ಕಾಲರಾ ಪಿಡುಗು’ ಕಾಣಿಸಿಕೊಂಡಿತು. ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗಳಿಸಿದ ಜ್ಞಾನವನ್ನು ಬಳಸಿಕೊಂಡು ಅಲ್ಲಿನ ಬಡಜನರ ಆವಶ್ಯಕತೆಗಳನ್ನು ಪೂರೈಸಲು ಏಕಾಂಗಿಯಾಗಿ ಹೋರಾಡಿದರು. ಭಾರತದಂತಹ ಬೃಹತ್ ರಾಷ್ಟ್ರದ ರೈತರ ಸಮಸ್ಯೆಗಳನ್ನು ಕಣ್ಣಾರೆ ಕಂಡು ಅದಕ್ಕೆ ಪ್ರತಿಕ್ರಿಯಿಸುತ್ತಾ, ಕೆಲಸಮಾಡಿದಮೇಲೆ ಅವರಿಗೆ ಆತ್ಮ ಸ್ಥೈರ್ಯ ಹಾಗೂ ಸಾರ್ವಜನಿಕ ಸೇವಾಕಾರ್ಯಗಳಲ್ಲಿ ಪರಿಣಿತಿ ದೊರೆಯಿತು. ಇಂತಹ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಜೀವನದ ಸಾಫಲ್ಯ ದೊರೆತಂತಾಗಿ ಕಸ್ತೂರ್ ಬಾ ಗಾಂಧಿಯವರ ಜತೆ ಸೇರಿದರು. ೧೯೪೨ ರಲ್ಲಿ ಮೆಡಿಕಲ್ ನಲ್ಲಿ ಎಂ. ಡಿ. ಪದವಿ ಗಳಿಸಿದಮೇಲೆ ಗಾಂಧಿಪಾರಿವಾರದ ಮನೆಯ ಡಾಕ್ಟರ್ ಆದರು. ಅವರಿಗೆ ಸಹಸ್ರಾರು ಗ್ರಾಮದ ಬಡಜನರ ಸಹಾಯಮಾಡುವುದು ಮುಖ್ಯವೆನಿಸಿತು.
ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡುತ್ತಿದ್ದ ಸುಶೀಲಾ ನಾಯರ್ ತಮ್ಮ ಕಾಲೇಜಿಗೆ ಬೇಸಿಗೆ ರಜಬಂದಾಗ, ಅಹ್ಮದಾಬಾದಿನ ಆಶ್ರಮ, ಇಲ್ಲವೇ ವಾರ್ಧಾಶ್ರಮಕ್ಕೆ, ಗಾಂಧೀಜಿ, ಕಸ್ತೂರ್ ಬಾ ರ ಸೇವೆಗೆ ನೆರೆವಾಗಲು ಹೊರಟುಬರುತ್ತಿದ್ದರು. ಮಹಾತ್ಮಗಾಂಧಿ ದಂಪತಿಗಳು ಮತ್ತು ಅವರ ಜತೆ ಆಂದೋಳನಕಾರರು ಗೃಹಬಂಧನದಲ್ಲಿ, ಪುಣೆಯ ಆಗಾ ಖಾನ್ ಪ್ಯಾಲೇಸ್ ನಲ್ಲಿದ್ದಾಗಲೂ ಸುಮಾರು ೯೩ ವಾರಗಳ ಕಾಲ ಅವರು ಬಾ ಜತೆಯಲ್ಲೇ ಇದ್ದು, ಅವರ ಶುಶ್ರೂಷೆ ಮಾಡಿದರು. ಮುಂದೆ ಗಾಂಧೀಜಿಯವರು ೧೯೪೭ ರ ಕೊನೆಯ ಭಾಗದಲ್ಲಿ ಕಲ್ಕತ್ತಾದ ನೊಖಾಲಿ ಯಲ್ಲಿ ಹಿಂದೂ-ಮುಸ್ಲಿಂ ಗಲಭೆಯಲ್ಲಿ ಶಾಂತಿ ಸ್ಥಾಪಿಸಲು ಹೋದಾಗ ಅವರ ಜೊತೆಯಲ್ಲಿಯೇ ಹೋಗಿ, ಅಲ್ಲಿನ ಶೋಷಿತ ವರ್ಗದ ಜನರಿಗೆ ವೈದ್ಯಕೀಯ ನೆರವನ್ನು ನೀಡಿ ಸಹಾಯಮಾಡಿದರು. ಕಸ್ತೂರ್ ಬಾರವರ ನಿಧನದ ಬಳಿಕ, ವಾರ್ಧಾ ಆಶ್ರಮದ ಒಂದು ಮೂಲೆಯಲ್ಲಿ ೧೫ ಹಾಸಿಗೆಯ ಒಂದು ಚಿಕ್ಕ ಆಸ್ಪತ್ರೆಯನ್ನು ಸ್ಥಾಪಿಸಿ, ಅದಕ್ಕೆ ‘ಕಸ್ತೂರ್ಬಾ ಆಸ್ಪತ್ರೆ’ಯೆಂದು ನಾಮಕರಣಮಾಡಿದರು. ೧೯೪೮-೧೯೫೪ ರ ವರೆಗೆ ಆಶ್ರಮದ ಸ್ವಾಮಿತ್ವದಲ್ಲಿ ಈ ಆಸ್ಪತ್ರೆ ಕೆಲಸಮಾಡುತ್ತಿತ್ತು. ‘ಕಸ್ತೂರ್ ಬಾ ಹೆಲ್ತ್ ಸೊಸೈಟಿ’ ಯಲ್ಲಿ Father of the Leprosy Control in India ಡಾ. ವಾರ್ಡೆಕರ್ ಎಂಬ ಸುಪ್ರಸಿದ್ದರಾಗಿದ್ದ ಡಾಕ್ಟರ್ ಅಡಿಯಲ್ಲಿ ಕಾರ್ಯನಿರ್ವಹಿಸಿದರು. ‘ಡಾಕ್ಟರ್ ಆಫ್ ಪಬ್ಲಿಕ್ ಹೆಲ್ತ್ (PH) ಪದವಿ ‘ಗಳಿಸಿದರು. ಅಮೆರಿಕಾಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗಿ ೧೯೫೦ ರಲ್ಲಿ ತಾಯ್ನಾಡಿಗೆ ಮರಳಿ ಬಂದು, ಉತ್ತರ ಭಾರತದಲ್ಲಿ ‘ಕುಷ್ಟ ರೋಗದ ಸ್ಯಾನಿಟೋರಿಯಂ’ ಸ್ಥಾಪನೆಮಾಡಿದರು.
ಮಹಾತ್ಮಾ ಗಾಂಧಿಯವರ ಅಪಾರ ಪ್ರಮಾಣದ ಪತ್ರವ್ಯವಹಾರಗಳು ಮತ್ತು ಹಲವಾರು ದಸ್ತಾವೇಜ್ ಗಳು ವ್ಯವಸ್ಥಿತವಾಗಿ ಶೇಖರಿಸಲ್ಪಟ್ಟಿರಲಿಲ್ಲ. ಅವೆಲ್ಲವನ್ನೂ ಸರಿಯಾಗಿ ಕಲೆಹಾಕಿ, ತಮ್ಮ ಅಣ್ಣ ಪ್ಯಾರೇಲಾ ಜೊತೆಗೂಡಿ, ಅವುಗಳಲ್ಲಿ ಕೆಲವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರು.
೧೯೪೪ ರಲ್ಲಿ ಕಸ್ತೂರ್ ಬಾ ರವರ ನಿಧನದ ಬಳಿಕ, ವಾರ್ಧಾ ಆಶ್ರಮದ ಒಂದು ಮೂಲೆಯಲ್ಲಿ ಒಂದು ‘ಚಿಕ್ಕ ಕ್ಲಿನಿಕ್’‘ ಸ್ಥಾಪಿಸಿದರು. ಉದ್ಯೋಗಪತಿ, ಜಿ. ಡಿ. ಬಿರ್ಲಾರವರ ಧನ ಸಹಾಯದಿಂದ ೧೯೪೫ ರಲ್ಲಿ ಅವರು ಒಂದು ದೊಡ್ಡ ಆಸ್ಪತ್ರೆಯನ್ನು ತೆರೆದರು. ಅದರ ಹೆಸರು ಮೊದಲು ‘ಕಸ್ತೂರ್ ಬಾ ಹಾಸ್ಪಿಟಲ್’ ಎಂದು ಇದ್ದದ್ದು, ಮುಂದೆ ‘ಮಹಾತ್ಮಾ ಗಾಂಧಿ ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ ಎಂಬ ಹೆಸರಿನಲ್ಲಿ ಕೆಲಸಮಾಡುತ್ತಿದೆ. ೧೫ ಹಾಸಿಗೆಗಳಿಂದ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆಯೆಂದು ಪ್ರಾರಂಭವಾದ ಆಸ್ಪತ್ರೆ, ವಾರ್ಧಾ ಆಶ್ರಮದ ಸ್ವಾಮಿತ್ವದಲ್ಲಿ ೧೯೪೮-೫೪ ರವರೆಗೆ ಕೆಲಸಮಾಡಿತು. ಅಲ್ಲಿ ಕೆಲಸಮಾಡುತ್ತಿರುವಾಗ ಸುಶೀಲ ಅವರಿಗೆ ಡಾ. ಆರ್. ವಿ. ವಾರ್ಡೆಕರ್ ಎಂಬ ಹಿರಿಯ ಕುಷ್ಟರೋಗ ತಜ್ಞರ ತರಪೇತಿ ದೊರೆಯಿತು. ವಾರ್ಡೆಕರ್ ರವರು ಆಗಿನ ಭಾರತದಲ್ಲೇ ‘ಕುಷ್ಟ ರೋಗದ ಪಿತ’ನೆಂದು ಪ್ರಸಿದ್ಧಿಪಡೆದಿದ್ದರು. ಕುಷ್ಟರೋಗದಿಂದ ನರಳುತ್ತಿದ್ದ ರೋಗಿಗಳು ವಾರ್ಧಾ ಜಿಲ್ಲೆಯಲ್ಲಿ ಬಹು ಸಂಖ್ಯೆಯಲ್ಲಿದ್ದರು. ಅಲ್ಲಿ ಬಂದಿದ್ದ ರೋಗಿಗಳ ಶುಷ್ರೂಷೆಯಲ್ಲಿ ಕೆಲವು ಸುಧಾರಣೆಗಳನ್ನು ಮಾಡುವ ನಿಟ್ಟಿನಲ್ಲಿ ಅವರಿಗೆ ಧನ್ಯತೆ ಸಿಕ್ಕಂತಾಯಿತು. ಈ ತರಹದ ಸೇವೆಗಳು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಅವರು ತಮ್ಮನ್ನು ತೊಡಗಿಸುವಲ್ಲಿ ಬಹಳ ನೆರವಾಯಿತು. ಈ ತರಹ ಸಾರ್ವಜನಿಕರ ಆರೋಗ್ಯ ಸೇವೆಮಾಡುವ ಗೀಳು ಸುಶೀಲರವರಲ್ಲಿ ಉತ್ಪನ್ನವಾಯಿತು.
ಡಾಕ್ಟರ್ ಆಗಿ ನಮ್ಮ ದೇಶದಲ್ಲಿ ಸಾರ್ವಜನಿಕರ ಆರೋಗ್ಯವನ್ನು ಸುಧಾರಿಸಲು ಅವರಿಗೆ ನೆರವಾಗಬೇಕೆಂದು ಶ್ರಮಿಸಲು ಪ್ರಾರಂಭಿಸಿದರು. ಕುಷ್ಟರೋಗವನ್ನು ಗುಣಪಡಿಸುವ ಸವಾಲು ಬಲು ದೊಡ್ಡದು. ರೋಗಕ್ಕೆ ತಗಲುವ ಖರ್ಚಿಗೆ ಹಣ ಕೊಟ್ಟು ನೆರವಾಗುವ ದಾನಿಗಳು ಬಹಳ ಕಡಿಮೆಯಿದ್ದರು. ೧೯೪೬ ರಲ್ಲಿ ಸಿಂಧ್ ಸರಕಾರ, ಖಡ್ಡಾಯವಾಗಿ ನಸಬಂದಿ ಮಾಡಿಸಿಕೊಳ್ಳಲು ಕಾನೂನು ಮಾಡಿತು. ಒಂದು ಪತ್ರಿಕೆಯಲ್ಲಿ ಸೇವಾಗ್ರಾಮದ ಆಶ್ರಮಕ್ಕೂ ಈ ಕಾನೂನು ಅನ್ವಯಿಸುತ್ತದೆ, ಮತ್ತು ಕುಷ್ಟರೋಗಿಗಳಿಗೂ ಅನ್ವಯಿಸುತ್ತದೆಯೆಂದು ವರದಿ ಹೇಳುತ್ತಿತ್ತು. ಮಹಾತ್ಮಾ ಗಾಂಧಿಯವರಿಗೆ ಈ ಸುದ್ದಿ ಓದಿ, ಬಹಳ ಕಸಿವಿಸಿಯಾಯಿತು. ಅವರು ಡಾ. ಸುಶೀಲರವರ ಅಭಿಪ್ರಾಯ ಕೇಳಿ ತಿಳಿದು ಅದು ಸರಿಯಿಲ್ಲ ; ನ್ಯಾಯಸಮ್ಮತವಲ್ಲವೆಂದು ಘೋಷಿಸಿದರು. ಖಡ್ಡಾಯವಾಗಿ ಮಾಡಲು ಅದೇನೂ ಹುಟ್ಟಿನಿಂದ ಇಲ್ಲವೇ ವಂಶಪಾರಂಪರ್ಯವಾಗಿ ಹರಡುವ ಕಾಯಿಲೆಯಲ್ಲ ; ಅಥವಾ ಹರಡುತ್ತದೆ ಎನ್ನುವುದಕ್ಕೆ ಯಾವ ಆಧಾರಗಳೂ ಇಲ್ಲ. ಈ ಅಭಿಪ್ರಾಯವನ್ನು ಧೃಡಪಡಿಸಲು ಡಾ. ಸುಶೀಲ ನಾಯರ್ ಅವರು ಕಲ್ಕತ್ತಾದ ವೈದ್ಯ, ಡಾ. ಬಿ. ಸಿ. ರಾಯ್, ಬೊಂಬಾಯಿಯ ವೈದ್ಯ, ಡಾ ಎಂ. ಡಿ. ಡಿ. ಗಿಲ್ಡರ್, ದೆಹಲಿಯ ವೈದ್ಯ, ಡಾ. ಸಿ. ಜಿ. ಪಂಡಿತ್, ರವರ ಸಲಹೆ ಕೇಳಿದರು. ಇವೆಲ್ಲ ಮುಂಜಾಗರೂಕತೆಯ ಹೆಜ್ಜೆಗಳನ್ನು ತೆಗೆದುಕೊಂಡಮೇಲೆ, ಗಾಂಧೀಜಿಯವರಿಗೆ ತಮ್ಮ ವರದಿಯನ್ನು ತಿಳಿಸಿದರು. ಗಾಂಧೀಜಿಯವರು ಸಿಂಧ್ ಅಸೆಂಬ್ಲಿಯ ಕಾಂಗ್ರೆಸ್ ಲೆಜಿಸ್ಲೇಟಿವ್ ಪಾರ್ಟಿಯ ಮುಖ್ಯಸ್ಥ ಪ್ರೊ. ಮಲ್ಕಾನಿಯವರಿಗೆ ಪತ್ರಬರೆದರು. ಕಾಂಗ್ರೆಸ್ ಎಂ.ಎಲ್.ಎ ಗಳು ಪರವಾಗಿ ವೋಟು ಹಾಕದಂತೆ, ಆ ಕಾನೂನನ್ನು ಪಾಸ್ ಮಾಡಲು ವಿರೋಧಿಸುವಂತೆ, ಕೇಳಿಕೊಂಡರು. ಕೊನೆಗೆ ಸಮಸ್ಯೆ ಪರಿಹಾರವಾಯಿತು.
“ಸ್ವಾತಂತ್ರ್ಯ ಸೇನಾನಿ, ಹಾಗೂ ರಾಜಕೀಯದಲ್ಲಿ ಮುನ್ನಡೆ ಮಾಡಿದವರು “
ಸುಶೀಲ ನಾಯರ್ ಒಬ್ಬ ಧೃಡ ನಿರ್ಧಾರದ ಮಹಿಳೆ. ಭಾರತದ ಸ್ವಾತಂತ್ರ್ಯ ಸಮರದಲ್ಲಿ ಬಾಪೂರವರ ಜತೆಯಲ್ಲಿ ಹೋರಾಡಿದ ಮಹಿಳೆಯರಲ್ಲಿ ಒಬ್ಬರು. ಗಾಂಧೀಜಿಯವರು ಮುನ್ನಡೆಸಿದ ‘ಕ್ವಿಟ್ ಇಂಡಿಯಾ ಚಳುವಳಿ’ಯಲ್ಲಿ, ಗಾಂಧೀಜಿ, ಕಸ್ತೂರ್ ಬಾ, ಮಹದೇವ್ ದೇಸಾಯಿ, ಪ್ಯಾರೇಲಾಲ್, ಸರೋಜಿನಿ ನಾಯಿಡು, ಮೀರಾ ಬೆನ್, ರವರುಗಳ ಜತೆಯಲ್ಲಿ ಭಾಗವಹಿಸಿದರು. ಆಗಾಖಾನ್ ಪ್ಯಾಲೇಸ್ ಜೈಲಿನಲ್ಲಿ ಗೃಹಬಂಧನದಲ್ಲಿದ್ದರು. ೧೯೪೮ ರಲ್ಲಿ ಮಹಾತ್ಮಗಾಂಧೀಜಿಯವರ ಹತ್ಯೆಯ ನಂತರ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಲು ಅಮೇರಿಕಾದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾನಿಲಯದಲ್ಲಿ ಭರ್ತಿಯಾದರು. Dr PH (Doctor of Public Health), ಪದವಿಗಳಿಸಿ ೧೯೫೦ ರಲ್ಲಿ ತಾಯ್ನಾಡು ಭಾರತಕ್ಕೆ ವಾಪಸ್ಸಾದರು. ಉತ್ತರಭಾರತದ ಫರೀದಾಬಾದ್ ನಲ್ಲಿ Tuberculosis sanatorium ಸ್ಥಾಪಿಸಿದರು. ಅದು ಕಾಲಾನುಕ್ರಮದಲ್ಲಿ ‘The Gandhi Memorial Leprosy Foundation’. ಎಂದು ಪ್ರಸಿದ್ಧಿಪಡೆಯಿತು. ಸುಶೀಲ ನಾಯರ್ ಆ ಸಂಸ್ಥೆಯ ಡೈರೆಕ್ಟರ್ ಆಗಿ ನೇಮಿಸಲ್ಪಟ್ಟರು.
೧೯೫೨ ರಲ್ಲಿ ಭಾರತದ ಪ್ರಜಾಪ್ರಭುತ್ವದ ಮೊದಲ ಚುನಾವಣೆ ನಡೆದಾಗ, ದೆಹಲಿಯಲ್ಲಿ ನಿಂತು ಗೆದ್ದರು. ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ( Legislative Assembly of Delhi) ರಾಜ್ ಕುಮಾರಿ ಅಮೃತ್ ಕೌರ್, ಮೊಟ್ಟಮೊದಲ ಮಹಿಳಾ ಮಂತ್ರಿಯಾಗಿದ್ದರು. ೧೯೫೫ ರಲ್ಲಿ ನೆಹರೂರವರ ಸರ್ಕಾರದಲ್ಲಿ ಕ್ಯಾಬಿನೆಟ್ ನಲ್ಲಿ ದೆಹಲಿ ಸ್ಟೇಟ್ ನಲ್ಲಿ ಮುಂದೆ ದೆಹಲಿ ವಿಧಾನ ಸಭೆಯ ಸ್ಪೀಕರ್, ೧೯೫೭ ರಲ್ಲಿ ಝಾನ್ಸಿಯಿಂದ ಲೋಕ ಸಭೆಯ ಸದಸ್ಯಾ ಆಗಿ ಗೆದ್ದು ಬಂದರು. ೧೯೬೨-೧೯೬೭ ರ ವರೆಗೆ, ಯೂನಿಯನ್ ಹೆಲ್ತ್ ಮಿನಿಸ್ಟರ್, ಆಗಿ ಕಾರ್ಯ ನಿರ್ವಹಿಸಿದರು.
ಆ ಸಮಯದಲ್ಲಿ ಡಾ ಸುಶೀಲ ನಾಯರ್ ಅವರಿಗೆ ಹಳ್ಳಿಗಾಡುಗಳಲ್ಲಿ ಹೋಗಿ ನೆಲೆನಿಂತು ಕೆಲಸಮಾಡಲು ಪ್ರಶಿಕ್ಷಿತ ಡಾಕ್ಟರ್ ಗಳ ಕೊರತೆ ಕಾಣಿಸಿತು. ‘ಪ್ರಾಥಮಿಕ ಹೆಲ್ತ್ ಕೇಂದ್ರಗಳು’ ದೇಶದ ಅತಿ ಹಿಂದುಳಿದ ಪ್ರದೇಶಗಳಲ್ಲಿ ತೆರೆಯುವ ಆದ್ಯತೆ ಡಾ. ಸುಶೀಲ ರವರ ಗಮನಕ್ಕೆ ಬಂತು. ಆದರೆ ಒಳ್ಳೆಯ ಮೆಡಿಕಲ್ ಉಪಕರಣಗಳು, ಮೊದಲಾದ ಸೌಲಭ್ಯಗಳ ಕೊರತೆ, ಮುಖ್ಯವಾಗಿ ಅಲ್ಲಿ ಬಂದು ಕೆಲಸಮಾಡುವ ನಿಸ್ವಾರ್ಥ ಡಾಕ್ಟರ್ ಗಳ ಅಭಾವದಿಂದಾಗಿ ಈ ಅಭಿಯಾನ ಅಪೇಕ್ಷಿಸಿದಷ್ಟು ಯಶಸ್ಸು ಪಡೆಯಲಿಲ್ಲ.
ಇದನ್ನು ಮನಸ್ಸಿನಲ್ಲೇ ಬಹಳ ವರ್ಷಗಳಿಂದ ಆಲೋಚಿಸುತ್ತಿದ್ದ ಸುಶೀಲ ನಾಯರ್, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸಹಾಯದಿಂದ, ಮೆಡಿಕಲ್ ಕಾಲೇಜುಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಿದರು. ೧೯೬೯-೬೦ ವಿದ್ಯಾರ್ಥಿಗಳ (ಮೊದಲ ಬ್ಯಾಚ್) ಸೇವಾಗ್ರಾಮದಲ್ಲಿ ‘Mahatma Gandhi Institute of Medical Sciences’ ಸ್ಥಾಪಿಸಿದರು. ಹಳ್ಳಿಗಳಲ್ಲಿ ಸ್ಥಾಪಿಸಲ್ಪಟ್ಟ ಭಾರತದ ಮೊದಲ ಮೆಡಿಕಲ್ ಕಾಲೇಜ್ ಎಂದು ಪ್ರಸಿದ್ಧಿಯಾಯಿತು. ಅಗಿನ ಸಮಯದಲ್ಲಿ ಮಹಿಳೆಯರು ಕೇವಲ ಮದುವೆ, ಮತ್ತು ಸಭ್ಯ ಗೃಹಸ್ತಿಯನ್ನು ನಿಭಾಯಿಸುವುದನ್ನು ಬಿಟ್ಟರೆ, ಬೇರೆ ವಲಯಗಳಲ್ಲೆಲ್ಲೂ ಕೆಲಸಮಾಡುತ್ತಿರಲಿಲ್ಲ. ಡಾ. ಸುಶೀಲ ನಾಯರ್ ಪ್ರಾರಂಭಿಸಿದ ಈ ಹೊಸ ಕಾರ್ಯ ವೈಖರಿ, ಹಲವಾರು ಯುವ ಮಹಿಳೆಯರಿಗೆ ಪ್ರೇರಣೆ, ಹುರುಪು ಮತ್ತು ಪ್ರೋತ್ಸಾಹ ದೊರೆಯಿತು. ರಾಜಕೀಯಕ್ಕೆ ಪಾದಾರ್ಪಣೆ : ದೆಹಲಿಯ ಅಸೆಂಬ್ಲಿಗೆ ೧೯೫೨ ರ ಚುನಾವಣೆಯಲ್ಲಿ ಆಯ್ಕೆಯಾಗಿ, ೧೯೫೫ ರವರೆಗೆ ಹೆಲ್ತ್ ಮಂತ್ರಿಯಾಗಿ ಕೆಲಸಮಾಡಿದರು.
6th Lok Sabha Members Bio-profile :
NAYAR, DR. SUSHILA, M.B.B.S., MD., Master of Public Health, Doctor of Public Health, Janata, (Uttar Pradesh—Jhansi—1977): Daughter of Shri Brindaban Nayar and Smt. Taradevi Nayar, Brother, Chi. Pyarelal. Born : December 26, 1914 Education : Punjab University and Johns Hopkins, U.S.A. ; Medical Doctor and Medical Teacher; previously associated with Congress; participated in the national movement and imprisonment with Mahatma Gandhi and Kasturba Gandhi for 93 weeks in Aga Khan Palace, actively associated with Gandhian constructive work and Kasturba Trust; President, Kasturba Health Society; Founder Director, Mahatma Gandhi Institute of Medical Sciences at Sevagram and Chairman of many organisations Member (i) Delhi Vidhan Sabha, 1952— 56 and (ii) Lok Sabha 1957—70; Minister for Health, Rehabilitation and Transport and Charitable Endowments, Delhi State, 1952—55; Speakers, Delhi Vidhan Sabha 1955-56; Union Minister for Health, Local self-Government, Country and Town Planning 1962—64; Union Minister of Health and family Planning 1964-1967. Unmarried;
Favourite pastime and recreation :
Reading, music and painting. Special interests : Rural Health, Welfare of workers and children and Harijans, basic education, prohibition, Medical education and community health.
Accomplishments in letters, art and science :
President’s award in 1950 for “Karavas ki Kahani” of Rs. 5,000.
Publications:
“Kasturba, wife of Gandhi”, “Hamari Ba”. “Karavas ki kahani”.
Sports and clubs : Basketball, Table Tennis, Badminton. Travels abroad : China, U.S.S.R., U.S.A., Europe, Indonesia, Japan, Hong Kung, Malaysia etc.
Permanent address : Kasturba Hospital, Sevagram, Wardha District.
‘ಕಸ್ತೂರ್ ಬಾರವರ ಬಗ್ಗೆ ನನ್ನ ಸ್ಮರಣೆ’ : ಡಾ. ಸುಶೀಲ ನಾಯರ್
ದಿನಚರಿಯ ಮೊದಲ ಪುಟದಿಂದ, ಡಾ. ಸುಶೀಲ ನಾಯರ್ ಅವರು ದಾಖಲಿಸಿದ ಅನೇಕ ವಿಷಯಗಳನ್ನು ಎಚ್ಚಾರೆಲ್ ಅವರು ಅನುವಾದಿಸಿದ್ದು ಅಂಕಣವಾಗಿ ನಸುಕು.ಕಾಂ ನಲ್ಲಿ ಮೂಡಿ ಬರಲಿದೆ.. ..
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ