- ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು - ಅಕ್ಟೋಬರ್ 22, 2022
- ನೈನವೆ - ಮೇ 26, 2022
- ಜೂಲಿಯಸ್ ಸೀಸರ್ ಅಂಕ -೫ - ಜನವರಿ 30, 2022
ಶೆಲ್ಫಿನಲ್ಲಿ ಮುದುಕರಂತೆ ಕೂತುಕೊಂಡಿರುವ
ಹಳೆ ಪುಸ್ತಕಗಳು
ಒಂದು ಕಾಲಕ್ಕೆ ಹೊಚ್ಚ ಹೊಸತಾಗಿದ್ದವು
ಇಂದು
ಕೆಲವರ ಬೆನ್ನು ಮುರಿದಿವೆ ಇನ್ನು ಕೆಲವರ
ಮುಖ ಹರಿದಿವೆ ಕೆಲವರ ಕಿವಿಗಳು
ಬಿದ್ದಿವೆ ಅಥವಾ ಕಿತ್ತು ಜೋಲುತ್ತಿವೆ
ಕೆಲವರ ಪುಟಗಳು ಹೋಗಿ
ಬೇರೆ ಪುಸ್ತಕದೊಳಗೆ
ಸೇರಿಬಿಟ್ಟಿವೆ
ಅರ್ಥಾರ್ಥ ಸಂಬಂಧ ಇದೆಯೆ..? ಇದೆಯೆಂದರೆ
ಇದೆ…
ಇಲ್ಲವೆಂದರೆ ಇಲ್ಲ..
*
ನನ್ನೆದೆ ಕಂಪಿಸುತ್ತಿದೆ
ನಾನೂ ವೃದ್ಧ ಈ ಪುಸ್ತಕಗಳಂತೆಯೇ
ಸ್ತಬ್ದ…
ಧೂಳು ಹೊದ್ದು
ಒಂದೆಡೆ ಕೂತಿರುತ್ತೇನೆ..
ಯಾರೂ ಮಾತಾಡಿಸುವುದಿಲ್ಲ..
ನನ್ನ ಪ್ರಕ್ಷುಬ್ದತೆ ನನ್ನೊಳಗೇ ಇದೆ..
ವಿವಿಧ ಸ್ಥಿತ್ಯಂತರಗಳಲ್ಲಿ ಮೌನ ಮಹಾಮೌನ
ಜನ ನಿಬಿಡ ನಿಶ್ಸಬ್ದ…
ಸುಷುಪ್ತಿ ಅರೆ ನಿದ್ರೆ ಹಲವು ಸಾವಿರ ಕನಸು..
ಒಂದು ಯುಗಕ್ಕೆ ಸಾಕಾಗುವಷ್ಟು ಮನಸು..
*
ಭುಜ ನೋವು ಆದ್ದರಿಂದ ಎತ್ತಲಾರೆ
ಕೈಗೆ ಎಸೆನ್ಶಿಯಲ್ ಟ್ರೆಮರ್ ಆದ್ದರಿಂದ
ಒರೆಸಲಾರೆ
ಕಣ್ಣಿಗೆ ದೃಷ್ಟಿ ಮಾಂದ್ಯ ಆದ್ದರಿಂದ
ಓದಲಾರೆ
ಆದರೂ ಇದೇನು ಋಣಾನುಬಂಧ ಈ
ಪುಸ್ತಕಗಳಿಗೂ ನನಗೂ… ಅವಿಲ್ಲದೆ ನಾನು
ಇರಲಾರೆನೆಂಬ..
ಇರಲಿ ನನ್ನುಸಿರಿರುವವರೆಗೆ
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..