ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅರಳುವ ಹೂಗಳು!

ಶರಣಗೌಡ ಬಿ ಪಾಟೀಲ್
ಇತ್ತೀಚಿನ ಬರಹಗಳು: ಶರಣಗೌಡ ಬಿ ಪಾಟೀಲ್ (ಎಲ್ಲವನ್ನು ಓದಿ)

ಕಲ್ಲು ಮಣ್ಣು ಇಟ್ಟಿಗೆ
ಹೊರಲು ಕೂಲಿಗೆ
ಕರೆದರೂ ಹೋಗದಿರಿ
ನೀವು ಅರಳುವ ಹೂಗಳು

ನಿಮ್ಮ ವಯಸ್ಸು, ವ್ಯಕ್ತಿತ್ವ
ಮುಗ್ಧತೆ ಒತ್ತೆ ಇಟ್ಟು
ಯಾರಿಗೂ ತಲೆ ಬಾಗದಿರಿ
ನೀವು ಅರಳುವ ಹೂಗಳು

ಪೂರಿ ಇಡ್ಲಿ ವಡಾ
ಅಂತ ಹೊಟ್ಟೆಗೊಂದಿಷ್ಟು
ಆಸೆ ತೋರಿಸಿ ಚಿಲ್ಲರೆ
ಕೈಗಿಡುವವರಿಗೆ
ಮರುಳಾಗದಿರಿ
ನೀವು ಅರಳುವ ಹೂಗಳು

ಪಬ್ಬು, ಬಾರು, ಗ್ಯಾರೇಜು
ಅಂಗಡಿ ಅಂತ ನೂರೆಂಟು
ಅಪಾಯಕಾರಿ ಕೆಲಸಕ್ಕೆ
ನೂಕುವರು ಎಚ್ಚರದಿಂದಿರಿ
ನೀವು ಅರಳುವ ಹೂಗಳು

ನೋಟಿನಲ್ಲಿ ಕೋಟೆ ಕಟ್ಟದವರಿಗೂ
ಮೀರಿ ಬೆಳೆಯಲು ದಾರಿ ನೂರಿವೆ
ಹಿಂದೆ ನೋಡದೆ ಮುನ್ನುಗ್ಗಿರಿ
ನೀವು ಅರಳುವ ಹೂಗಳು!