ಸಹೃದಯ ಮಿತ್ರರೆ,
ನಸುಕು ಮುಂಬೈ ಮಹಾಸಂಚಿಕೆಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಚಿಕೆಯನ್ನು ಓದಿನೋಡಿ ನಾಡಿನ ಗಣ್ಯಾತಿಗಣ್ಯರು , ಸಾಹಿತ್ಯಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಮಂದಿ ಬರಹಗಾರರು ಮುಂಬೈಯಲ್ಲಿ ಇದ್ದಾರೆಂದು ಗೊತ್ತೇ ಇರಲಿಲ್ಲ ಎಂದು ಕೆಲವರು ಅಚ್ಚರಿಪಟ್ಟರು. ಈ ಮಾಲಿಕೆಗೆ ಈಗ ನೂರಕ್ಕೂ ಹೆಚ್ಚು ಬರಹಗಳು ಹರಿದು ಬಂದಿವೆ. ಈ ಸಂಚಿಕೆಯನ್ನು ಸರ್ವಾಂಗ ಸುಂದರವಾಗಿ ಹೊರತರುತ್ತಿರುವ ನಸುಕು ಬಳಗಕ್ಕೆ, ವಿಶೇಷವಾಗಿ ವಿಜಯ್ ಅವರಿಗೆ ಮುಂಬಯಿ ಕನ್ನಡಿಗರ ಪರವಾಗಿ ಅನಂತ ವಂದನೆಗಳು. ಈ ಕಾಯಕದಲ್ಲಿ ನನ್ನೊಂದಿಗೆ ಹೆಗಲುಕೊಟ್ಟ ಆತ್ಮೀಯರಾದ, ಡಾ. ಪೂರ್ಣಿಮಾ ಶೆಟ್ಟಿ, ಸವಿತಾ ಶೆಟ್ಟಿ, ಕಲಾ ಭಾಗ್ವತ್, ಜಯ ಸಾಲ್ಯಾನ್ ಅವರಿಗೂ ವಂದನೆಗಳು. ಮತ್ತೆ ಮುಂದಿನ ಸಂಚಿಕೆಯಲ್ಲಿ ನಮ್ಮ ನಿಮ್ಮ ಭೇಟಿ.
ವಂದನೆಗಳೊಂದಿಗೆ
ಡಾ.ಜಿ.ಎನ್.ಉಪಾಧ್ಯ
ಕಸ್ತೂರಿ ಪರಿಮಳದ ಕನ್ನಡ ಪುರವಣಿ
ಹೆಚ್ಚಿನ ಬರಹಗಳಿಗಾಗಿ
ಗೌರವ ಸಂಪಾದಕರ ಮಾತು – ಡಾ. ಜಿ. ಎನ್. ಉಪಾಧ್ಯ
ಬರ್ಮಾ ದೇಶದ ರಾಮಾಯಣ
ಕಣಗಿಲೆಯ ಫಿರ್ಯಾದು