- ಸಮಯ,ಗಡಿಯಾರ ನಿಲ್ಸಿ ಮತ್ತು ಇತರ ಕವಿತೆಗಳು - ಆಗಸ್ಟ್ 21, 2022
- MCMXIV ಸಹಿತ ಚಂಪೋ ಅನುವಾದಿಸಿದ ೪ ಕವಿತೆಗಳು - ಮಾರ್ಚ್ 6, 2022
- ಖಲೀಲ್ ಝೀಬ್ರಾನ್ ಕವಿತೆ! - ಫೆಬ್ರುವರಿ 5, 2022
ಕಷ್ಟದಲಿ ನೀನಿಕ್ಕೆ ಬೀಗುತಲಿ ನಾ ನಕ್ಕೆ
ಆಗು ಹೋಗುಗಳೆಲ್ಲ ನಿನಗರ್ಪಿಸಿಬಿಟ್ಟೆ
ಇಷ್ಟಗಳ ಬೆಟ್ಟದಾ ಕೈ ಕಾಲು ಮುರಿದೀಗ
ನಿರುಮ್ಮಳ ನಿನ್ನ ಧ್ಯಾನಿಯಾಗಿಬಿಟ್ಟೆ
ಅತ್ತಾಗ ಕಣ್ಣೀರು ಕಾಣದೇ ಇರಲೆಂದು
ತಿರುತಿರುಗಿ ಅಡುಗೆಗೀರುಳ್ಳಿ ಹೆಚ್ಚಿಟ್ಟೆ
ನೋವೆಲ್ಲ ನುಂಗುತ್ತ ನಟನೆ ಜೋರಾಗಿರಲು
ಪರದೆ ಬೀಳುವ ಕ್ಷಣಕೆ ಹಾತೊರೆದುಬಿಟ್ಟೆ
ಪ್ರೀತಿ ಗೆದ್ದೇ ಎಂದು ನಾ ಮೈಮರೆತಾಗ
ನಯ ವಿನಯ ದಯೆ ಮರೆತು ಬಿಟ್ಟೆ
ನೀನಿತ್ತ ಉತ್ತುಂಗ ಒಂಟಿಯಾಗಿಸಿತೆನ್ನ
ನನ್ನವರನೇ ನಾನು ದೂರ ತಳ್ಳಿ ಬಿಟ್ಟೆ
ಸುತ್ತಿದೆ ದೇಗುಲವ ಎತ್ತಿನ ಹಾಗೆಯೇ
ಚಿತ್ತವೆಲ್ಲವ ಕಸಿದೆ ಚಿತೆಯಾಗಿ ಬಿಟ್ಟೆ
ಸುತ್ತೆಲ್ಲ ಪೊಳ್ಳುಗಳ ಗೋಡೆಯೇಳುವಾಗ
ಸತ್ಯದ ಶಿಲುಬೆಯ ನಾನೇರಿ ಬಿಟ್ಟೆ
ಮಾತುಮಾತುಗಳಲ್ಲಿ ಆ ಮುತ್ತು ಎಲ್ಲೀಗ
ಒತ್ತೊಯ್ದೆ ಸುಖ ಶಾಂತಿ ನೆಮ್ಮದಿಯ ದೇವಾ
ಬೇಡದೆಯೇ ಬುತ್ತಿಯನು ಕಟ್ಟಿಟ್ಟೆ ನನಗೆ
ತಾಳ್ಮೆಯ ಜೊತೆಯಲ್ಲೆ ವ್ಯಸನವ ಬಿಟ್ಟೆ
ಕರುಣಿಸು ಕಂಬೆಳಕ ಹೃದಯಕ್ಕೆ ಮೌನವ
ಕಾಯುತಿರಬಹುದೇನೋ ಹತ್ತಿಯುಂಡೆಗಳೆರಡು
ಗಳ ನಾಲ್ಕು ಭುಜ ನಾಲ್ಕು ಕೆನ್ನಾಲಗೆ ಅಗ್ನಿ
ಮೂರು ಗೇಣಿನ ಜಾಗ ಮಿಂಚುವ ಬಿಳಿ ಬಟ್ಟೆ
ಹೆಚ್ಚಿನ ಬರಹಗಳಿಗಾಗಿ
ಶಿಕಾಗೋ ಸಂದೇಶದ ಭ್ರಾತೃತ್ವ ಕಥನ
.
ಲಕ್ಷ್ಮೀಶ ತೋಳ್ಪಾಡಿ ವಾಕ್ಝರಿ