- ಕರ್ಪೂರಿ ಠಾಕೂರ್ - ಮಾರ್ಚ್ 3, 2024
- ಗಝಲ್ ಲೋಕದಲ್ಲೊಂದು ಸುತ್ತು - ಮಾರ್ಚ್ 25, 2023
- ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ - ನವೆಂಬರ್ 5, 2022
ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮನ್ನಾಡೆ, ಮತ್ತು ಮುಕೇಶ್ ಮೊದಲಾದ ಗಾಯಕರನ್ನು ಹಿಂದಿ ಸಿನಿಮಾದ ಅತ್ಯಂತ ಪ್ರಭಾವಿ ಧ್ವನಿಗಳೆಂದು ಪರಿಗಣಿಸಲಾಗುತ್ತದೆ. ಇಂದಿಗೂ ಅದು ಸುಳ್ಳಲ್ಲ. ಅದರಲ್ಲೂ ಬಾಲಿವುಡ್ ನ ಶೋಮ್ಯಾನ್ ಎಂದು ಪ್ರಸಿದ್ಧರಾಗಿದ್ದ ರಾಜ್ಕಪೂರ್ ರವರ ಅಸಲೀ ಧ್ವನಿ ಎಂದೇ ಮುಕೇಶರನ್ನು ಗುರುತಿಸಲಾಗುತ್ತಿತ್ತು.
ಮುಕೇಶ್ ತಮಗೆ ಸಿಕ್ಕ ಹಾಡುಗಾರಿಕೆಯ ಅವಕಾಶದಲ್ಲಿ ಆನಂದ್ ಚಿತ್ರದ ಸುಂದರ ಗೀತೆ, “ಕಹೀ ದೂರ್ ಜಬ್ ದಿನ್ ಢಲ್ ಜಾಯೆ,” (1971) ರಾಜೇಶ್ ಖನ್ನನಿಗೆ ಸರಿಹೋಗುವಂತೆ ಹಾಡಿದ್ದರು. ಅದೇ
ಆನಂದ್, ಚಿತ್ರದ ಮತ್ತೊಂದು ಹೃದಯಂಗಮ ಗೀತೆ, ಮೈ ನೇ ತೇರೇ ಲಿಯೇ, ಹೀ ಸಾತ್ ರಂಗ್ ಕೆ (1972) ಮುಕೇಶ್ ರವರ ಮುಡಿಗೆ ಸೇರಿಸಿದ ಗರಿಗಳಲ್ಲೊಂದು !
ಶೋರ್ ಚಿತ್ರದ “ಏಕ್ ಪ್ಯಾರ್ ಕಾ ನಗ್ಮಾ ಹೈ “(1972), ಮನೋಜ್ ಕುಮಾರ್ ಮತ್ತು ನಂದಾ ಪ್ರೇಮಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸುಂದರ ಸನ್ನಿವೇಶವನ್ನು ದರ್ಶಾಯಿಸುತ್ತದೆ. ಸಿನಿಮಾ ಕಥೆಯಲ್ಲಿ ಏನೂ ಹುರುಳಿಲ್ಲದಿದ್ದರೂ ಈ ಚಿತ್ರ ಕೇವಲ ಮುಕೇಶ್ ರವರ ಹಾಡಿಗಾಗಿ ಪ್ರಸಿದ್ಧಿ ಪಡೆಯಿತು.
ಅನಾಡಿ ಚಿತ್ರ,1959 ನಿರ್ಮಿಸಿದ ರಾಜಕಪೂರ್ ರವರ ಕಥೆಯೊಂದರ ಮೇಲೆ ಆಧಾರಿತ ಚಿತ್ರ “ಸಬ ಕುಛ್ ಸೀಖಾ ಹಮ್ ನೇ, ಎಂಬ ಮುಕೇಶ್ ಹಾಡಿದ ಗೀತೆ ಜನಪ್ರಿಯತೆಯ ಸಂಕೇತವಾಗಿದೆ.
ರಾಜ್ಕಪೂರ್ ನಿರ್ಮಿಸಿದ ಮೇರಾ ನಾಮ್ ಜೋಕರ್ ಚಿತ್ರದಲ್ಲಿ ” ಜಿನಾ ಯಹಾ, ಮರ್ನಾ ಯಹಾ” ಮತ್ತು “ಕೆಹ್ ತಾ ಹೈ ಜೋಕರ್” (1971) ರಾಜಕಪೂರ್ ಕಂಠಕ್ಕೆ ಹಾಗೂ ಕಥೆಗೆ ಸರಿಹೋಗುವಂತೆ ತಮ್ಮ ಧ್ವನಿಯನ್ನು ಹಿಡಿದಿಟ್ಟ ಹಾಡು. ಇವೆಲ್ಲಾ ಹಾಡುಗಳೂ ಮುಕೇಶ್ ರವರ ಸಿರಿ ಕಂಠದಲ್ಲಿ ಸಿನಿ-ವೀಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸುವ ಪರಿ ಅನನ್ಯವಾಗಿತ್ತು. ಈ ಅನುಭವವನ್ನು ಎಲ್ಲಾ ವಯಸ್ಸಿನ ರಸಿಕರು ಮನಗಂಡಿದ್ದರು.
ಮುಕೇಶ್ ತಮ್ಮ ಹಿತೈಷಿ, ಸಂಬಂಧಿ, ಕೆ. ಎಲ್. ಸೈಗಾಲ್ ರ ಜತೆ ಬೊಂಬಾಯಿಗೆ ಬಂದಮೇಲೆ ಶಾಸ್ತ್ರೀಯ ಸಂಗೀತವನ್ನು ಸ್ವಲ್ಪ ಕಾಲ ಪಂಡಿತ್. ಜಗನ್ನಾಥ್ ಪ್ರಸಾದ್ ರವರ ಬಳಿ ಕಲಿತರು. ಮುಕೇಶ್, ತಮ್ಮ ಸಾಧಾರಣ ಕಂಠದಲ್ಲೇ ಕೇಳುಗರ ಮೇಲೆ ಅಸಾಧಾರಣ ಮಾರ್ದವತೆಯನ್ನು ಮೂಡಿಸುತ್ತಿದ್ದರು. ಚಲನ ಚಿತ್ರದಲ್ಲಿನ ನಟನ ಭಾವುಕತೆ, ಸಂಕಟ, ತಲ್ಲಣಗಳನ್ನು ಬಿಂಬಿಸಿ ಸಾಂದರ್ಭಿಕವಾಗಿ ಹಾಡುವ ಅವರ ಸರಳ ಹಾಡುಗಾರಿಕೆ ಸಿನಿಮಾ ನೋಡುಗರ ಹೃದಯವನ್ನು ದಶಕಗಳ ಕಾಲ ಹಿಡಿದಿಟ್ಟು ಅವರ ಮೇಲೆ ಒಂದು ಮೋಡಿಯನ್ನೇ ಮಾಡಿತ್ತು. ದುಃಖದ/ವಿರಹ ಗೀತೆಗಳಲ್ಲದೆ ಮುಕೇಶ್ ಪ್ರಣಯಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಅತ್ಯಂತ ಮನೋಜ್ಞವಾಗಿ ಹಾಡುತ್ತಿದ್ದರು.
ದೆಹಲಿಯ ಕಾಯಸ್ಥ ಮಾಥುರ್ ಪರಿವಾರದಲ್ಲಿ ಮುಕೇಶ್,ಮುಕೇಶ್ ಚಂದ್ರ ಮಾಥುರ್ , (೨೨,ಜುಲೈ, ೧೯೨೩ –೨೭, ಆಗಸ್ಟ್, ೧೯೭೬) ಜೋರಾವಾರ್ ಚಂದ್ ಮಾಥುರ್, (ಇಂಜಿನಿಯರ್), ಚಂದ್ರಾಣಿ ಮಾಥುರ್ ರವರ ಮಗನಾಗಿ ಜನಿಸಿದರು. ಅವರಿಗೆ ಹಾಡಲು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅನೇಕ ಮರೆಯಲಾರದ ಗೀತೆಗಳನ್ನು ಫಿಲಂ ರಸಿಕರಿಗೆ ಕೊಟ್ಟು ಅವರ ಹೃದಯದಲ್ಲಿ ಮನೆಮಾಡಿದ್ದಾರೆ. ಮುಕೇಶ್ ಮರಣದ ಬಳಿಕವೂ ಫಿಲಂ ರಸಿಕರು ಇಂದಿಗೂ ಆ ಹಾಡುಗಳನ್ನು ಮರೆಯದೆ ಕೇಳುತ್ತಾ ಆನಂದಿಸುತ್ತಾ ಬಂದಿದ್ದಾರೆ. ತಮ್ಮ ಫಿಲ್ಮಿ ಜೀವನದ ಕೆರಿಯರ್ ನಲ್ಲಿ ೧೧೦ ಗೀತೆಗಳನ್ನು ರಾಜಕಪೂರ್ ಗೆ ಹಾಡಿದ್ದಾರೆ. ೪೬, ಮನೋಜ್ ಕುಮಾರ್ ರಾವರಿಗೂ ೧೯,ಗೀತೆಗಳನ್ನು ದಿಲೀಪ್ ಕುಮಾರ್ ರವರಿಗೂ ಹಾಡಿದ್ದಾರೆ. ಅವೆಲ್ಲವೂ ಸೂಪರ್ ಹಿಟ್ ಎಂದು ಪರಿಗಣಿಸಿರುವ ಹಾಡುಗಳೇ ಆಗಿವೆ.
ಮದುವೆ :
‘ಸರಳಾ ತ್ರಿವೇದಿ ‘ಎಂಬ ಸಾಹುಕಾರ ರಾಯ್ ಚಂದ್ ತ್ರಿವೇದಿಯವರ ಮಗಳನ್ನು ಮದುವೆಯಾದರು. ಮದುವೆಯ ಸಮಯದಲ್ಲಿ ಮುಕೇಶ್ ರಿಗೆ ಒಳ್ಳೆಯ ನಿರ್ದಿಷ್ಟ ವರಮಾನವಿರದ ನೌಕರಿಯಿಂದಾಗಿ ತಮ್ಮ ಮಗಳನ್ನು ಮದುವೆಮಾಡಿ ಕೊಡುವುದು ರಾಯ್ ಚಂದ್ ತ್ರಿವೇದಿಯವರಿಗೆ ಪ್ರಿಯವಾಗಲಿಲ್ಲ. ಇದೂ ಅಲ್ಲದೆ ಆಗಿನ ಕಾಲದಲ್ಲಿ ಫಿಲಂ ನಲ್ಲಿ ಕೆಲಸಮಾಡುವವರನ್ನು ಜನ, ಕುಲೀನರಲ್ಲವೆಂಬ ಅಭಿಪ್ರಾಯ ಮೂಡಿತ್ತು. ಹಾಗಾಗಿ ಅವರನ್ನು ಮರ್ಯಾದೆಯಿಂದ ಕಾಣುತ್ತಿರಲಿಲ್ಲ. ಆದರೆ ಮುಕೇಶ್- ಸರಳ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರಿಂದ ತಮ್ಮ ಪೋಷಕರ ಒಪ್ಪಿಗೆಗೆ ವಿರುದ್ಧವಾಗಿ, ‘ಕಾಂದಿವಲಿಯ ದೇವಾಲಯ’ ವೊಂದರಲ್ಲಿ ೨೨ ಜುಲೈ, ೧೯೪೬ ರಲ್ಲಿ ಮುಕೇಶ್ ತಮ್ಮ ೨೩ ನೆಯ ಹುಟ್ಟುಹಬ್ಬದ ದಿನದಂದೇ ಮದುವೆಯಾದರು. ಅವರ ದೂರದ ಸಂಬಂಧಿಯಾಗಿದ್ದ ಆಗಿನ ಕಾಲದ ಮೇರು ನಟ, ಗಾಯಕ, ಮೋತಿಲಾಲ್ ನೆರವಿನಿಂದ, ಆರ್. ಡಿ. ಮಾಥುರ್ ಎಂಬುವರ ಗೃಹದಲ್ಲಿ ಮದುವೆಯನ್ನು ಏರ್ಪಾಟು ಮಾಡಲಾಗಿತ್ತು. ಇಂಥಹ ವಿವಾಹ ಹೆಚ್ಚುದಿನ ಮುಂದುವರೆಯುವುದನ್ನು ಶಂಕಿಸುತ್ತಿದ್ದ ಬಳಗದವರಿಗೆ ಆಶ್ಚರ್ಯವಾಗುವಂತೆ, ಮುಕೇಶ್-ಸರಳಾ ದಂಪತಿಗಳು ತಮ್ಮ ‘೩೦ ನೆಯ ವರ್ಷಗಳ ಜೋಡಿಜೀವನವನ್ನು ಸೆಲೆಬ್ರೇಟ್ ‘ಮಾಡಿ ಎಲ್ಲರ ಬಾಯಿಗಳನ್ನು ಮುಚ್ಚಿಸಿದರು. ಮುಕೇಶ್ ದಂಪತಿಗಳಿಗೆ ೫ ಜನ ಮಕ್ಕಳು, ರೀಟಾ, ನಿತಿನ್, ನಳಿನಿ, (೧೯೭೮ ನಿಧನ) ಮೋಹನೀಶ್, ನಮ್ರತಾ, (ಅಮ್ರಿತಾ,) ಮೊಮ್ಮಗ ನೀಲ್ ನಿತಿನ್, ಮುಕೇಶ್,
ಮುಕೇಶ್ ತಮ್ಮ ಅಸಾಧಾರಣ ಕಂಠ ವೈಶಿಷ್ಟ್ಯತೆಗಳಿಂದ ಹಿಂದಿ ಸಿನಿಮಾ ವಲಯದ ಹಾಡುಗಳಿಗೆ ಕೊಟ್ಟ ಕೊಡುಗೆ ಅವಿಸ್ಮರಣೀಯ :
೧೯೫೦ ರಲ್ಲಿ ಭರತ್ ಭೂಷಣ್ ರ ಮೇಲೆ ಚಿತ್ರೀಕರಿಸಿದ, “ಆ ಲೌಟ್ ಕೆ ಆಜಾ ಮೆರೆ ಮೀತ್” ಚಿರ ಸ್ಮರಣೀಯ ಗೀತೆಗಳಲ್ಲೊಂದಾಗಿತ್ತು.
ಇನ್ನೊಂದು ಹಾಡು ದಿಲೀಪ್ ಕುಮಾರ್ ಮೇಲೆ ಚಿತ್ರೀಕರಣ ಮಾಡಿದಾಗ ಹೇಳುವ ಗೀತೆ : “ದಿಲ್ ತಡಪ್ ತಡಪ್ ಕೆ ಕೆಹ್ ರಹಾ ಹೈ .
ಮುಕೇಶ್ ನಿಧನರಾದ ಒಂದು ವರ್ಷದ ಮೇಲೆ ೧೯೭೭ ರಲ್ಲಿ ಇನ್ನು ರಿಲೀಸ್ ಆಗದ ಚಿತ್ರಗಳಿಗೆ ಮುಕೇಶ್ ಕಂಠದಾನ ಮಾಡಿದ್ದ ಧ್ವನಿ-ಸುರಳಿಗಳು ಹೊರಗೆ ಬಂದವು. ಆ ಚಿತ್ರಗಳು :
- ಧರಮ್ ವೀರ್
- ಅಮರ್ ಅಕ್ಬರ್ ಆಂಥೋನಿ ,
- ಖೇಲ್ ಖಿಲಾಡಿ ಕಾ ,
- ದಾರಿಂಡ
- ಚಂಡಿ ಸೋನಾ
- 1978 ರಲ್ಲೂ ಮುಕೇಶರ ಹಾಡಿನ ರೆಕಾರ್ಡ್ಸ್ ಗಳು ಸಾಕಷ್ಟಿದ್ದವು. ಅವುಗಳು :
- ಔರತ್,
- ಪರಮಾತ್ಮ,
- ತುಮ್ಹಾರಿ ಕಸಮ್
- ಸತ್ಯಂ ಶಿವಂ ಸುಂದರಂ,
ಚಂಚಲ್ ಶೀತಲ್, ನಿರ್ಮಲ್ ಕೋಮಲ್ ಎಂಬತಮ್ಮ ಜೀವನದ ಅಂತಿಮ ಚಿತ್ರ ಗೀತೆಯನ್ನು ರಾಜಕಪೂರ್ ರವರ ತಮ್ಮ ಶಶಿ ಕಪೂರ್ ಗಾಗಿ ಹಾಡಿದ್ದರು.
1980 ನಂತರ ಮುಕೇಶ್ ಧ್ವನಿ ಅನೇಕ ಹೊಸ ಚಲನಚಿತ್ರಗಳ ನಟರಿಗೋಸ್ಕರ ಹಾಡಿದವಾಗಿದ್ದವು
- ಶೈತಾನ್ ಮುಜ್ರಿಂ,
- ಪ್ರೇಮಿಕಾ,
- ಪತ್ಥರ್ ಸೆ ಠಕ್ಕರ್ (1980),
- ಆಜ್ ಕಿ ಬೇಲಾ, ಮೈಲಾ ಆಂಚಲ್ (1981),
- ಆರೋಹಿ (1982),
- ಚೋರ್ ಮಂಡಳಿ (1983),
- ನೀರಜ್, (1985),
- ಲವ್ ಅಂಡ್ ಗಾಡ್ (1986),
- ಶುಭ್ ಚಿಂತಕ್ (1989),
- ಚಾಂದ್ ಗ್ರಹಣ್ (ಕಟ್ಟಕಡೆಯ ಅವರ ಮೆಚ್ಚಿನ ಚಿತ್ರ)
ಒಂದು ಕಾಲದಲ್ಲಿ ಲೆಜೆಂಡರಿ ಕೆ. ಎಲ್. ಸೈಗಾಲ್ ರಂತಹ ನಟರೂ ಸಹಿತ ಚಲನ ಚಿತ್ರದಲ್ಲಿ ತಮ್ಮ ಪಾಲಿಗೆ ಬಂದ ಗೀತೆಗಳನ್ನು ತಾವೇ ಹಾಡುತ್ತಿದ್ದರು. ಬಾಲ್ಯದಲ್ಲಿ ಸೈಗಾಲ್ ರವರ ಹಾಡುಗಳೆಂದರೆ ಬಹಳ ಇಷ್ಟಪಡುತ್ತಿದ್ದರು. ತಮಗೆ ಹಾಡಲು ಅವಕಾಶ ಸಿಕ್ಕಾಗ ಅವರಂತೆಯೇ ಮನಸ್ಸಿನಲ್ಲೇ ಗುನುಗುತ್ತಿದ್ದರು. ೨೨ ಜುಲೈ, ೧೯೨೩ ರಲ್ಲಿ ದೆಹಲಿಯಲ್ಲಿ ಜನಿಸಿದರು. ಅವರ ತಂದೆಯವರಿಗೆ ಜನಿಸಿದ ೧೦ ಜನ ಗಂಡುಮಕ್ಕಳು-ಹೆಣ್ಣು ಮಕ್ಕಳಲ್ಲಿ ಮುಕೇಶ್ ೬ ನೆಯವರು. ಶಾಸ್ತ್ರೀಯ ಸಂಗೀತವನ್ನು ಅವರಿಗೆ ಯಾರೂ ಕಲಿಸಿರಲಿಲ್ಲ. ಅವರ ಅಕ್ಕನಿಗೆ ಸಂಗೀತ ಕಲಿಸಲು ಮನೆಗೆ ಒಬ್ಬ ಶಿಕ್ಷಕರು ಬರುತ್ತಿದ್ದರು. ಪಕ್ಕದ ಕೋಣೆಯಲ್ಲಿ ಸಂಗೀತಾಭ್ಯಾಸ ನಡೆಯುತ್ತಿತ್ತು. ಮುಕೇಶ್ ಅದನ್ನು ಆಲಿಸಿ ಕಲಿಯಲು ಪ್ರಯತ್ನ ನಡೆಸಿದ್ದರು. ಇದೇ ಮುಂದೆ ಅವರ ಜೀವನದಲ್ಲಿ ಹಾಡುಗಾರಿಕೆಯಲ್ಲಿ ಮುಂದುವರೆಯುವ ನಿರ್ಧಾರಕ್ಕೆ ಸಹಾಯವಾಯಿತು. ಓದಿನಲ್ಲಿ ಆಸಕ್ತಿಯಿರದೆ, ೧೦ ನೆಯ ತರಗತಿಯನಂತರ ಓದನ್ನು ಮುಂದುವರೆಸಲಿಲ್ಲ. ಅಕ್ಕನ ವಿವಾಹದ ಸಮಯದಲ್ಲಿ ಸಾಮೂಹಿಕವಾಗಿ ಹಾಡುವ ಪರಿಪಾಠವಿತ್ತು. ಮದುವೆಗೆ ದೂರದ ಸಂಬಂಧಿಯಾಗಿದ್ದ ಸುಪ್ರಸಿದ್ಧ ಸಿನಿಮಾ ಗಾಯಕ-ನಟ ಮೋತಿಲಾಲ್ ಬಂದಿದ್ದರು.
ಮೋತಿಲಾಲ್ ರವರು ಮದುವೆ ಹಾಲ್ ನಲ್ಲಿ ಯುವ ಪ್ರತಿಭೆ, ಮುಕೇಶ್ ರನ್ನು ಕಂಡು, ಅವರನ್ನು ೧೯೪೦ ರಲ್ಲಿ ತಮ್ಮ ಜತೆಗೆ ಬೊಂಬಾಯಿಗೆ ಕರೆದುಕೊಂಡು ಹೋದರು. ಮುಕೇಶ್ ನೋಡಲು ಲಕ್ಷಣವಾಗಿದ್ದರು. ಕಂಠಶ್ರೀಯೂ ಚೆನ್ನಾಗಿತ್ತು. ಅಲ್ಲಿ ಅವರಿಗೆ ಸಂಗೀತ ಶಿಕ್ಷಣಕೊಡಲು ಪಂಡಿತ್, ಜಗನ್ನಾಥ್ ಪ್ರಸಾದ್ ಎಂಬ ಸಂಗೀತದ ಗುರುವನ್ನು ನೇಮಿಸಿದರು. ಸೈಗಾಲ್ ರ ಶಿಫಾರಿಶ್ ಮೇಲೆ ಒಂದು ವರ್ಷದೊಳಗೆ ಮುಕೇಶರಿಗೆ ‘ನಿರ್ದೋಷ್’ ಎಂಬ ಚಿತ್ರದಲ್ಲಿ ಅಭಿನಯಿಸಲು, ಮತ್ತು ಹಾಡಲು ಕರೆಬಂತು. ೧೯೪೫ ರಲ್ಲೆ ಮುಕೇಶ್ ಒಬ್ಬ ನಟನಿಗೆ ಕಂಠದಾನವನ್ನೂ ಮಾಡಿದ್ದರು ಬುಲೋ ಸಿ. ಇರಾನಿಯವರು ಬರೆದ ಕಥೆಯನ್ನಾಧರಿಸಿ, ‘ಮೂರ್ತಿ’ ಎಂಬ ಚಿತ್ರದಲ್ಲಿ ನಾಯಕ ಮೋತಿಲಾಲ್ ಜತೆ ಬೇಗಂ ಖುರ್ಷಿದ್ ನಟಿಸಿದ್ದರು. ೧೯೪೫ ನಲ್ಲಿ ತಯಾರಾದ ಮತ್ತೊಂದು ಚಿತ್ರದಲ್ಲೂ ಮೋತಿಲಾಲ್ ನಾಯಕ, ಅನಿಲ್ ಬಿಸ್ವಾಸ್ ನಿರ್ದೇಶನದಲ್ಲಿ ಗೀತೆಯನ್ನು ಹಾಡಿದವರು. ಮುಕೇಶ್, ‘ದಿಲ್ ಜಲ್ತಾ ಹೈ ತೋ ಜಲನೇ ದೋ’ ಎಂಬ ಅಮರ ಗೀತೆಯನ್ನು ಹೇಳಿ ಬಾಲಿವುಡ್ ನಲ್ಲಿ ಭದ್ರವಾಗಿ ತಳವೂರಿದರು. ಮಜ್ಹರ್ ಖಾನ್ ನಿರ್ಮಿಸಿ ನಿರ್ದೇಶಿಸಿದ ಪೆಹ್ಲಿ ನಜರ್ ಚಿತ್ರದಲ್ಲಿ ಮೋತಿಲಾಲ್, ಮತ್ತು ವೀಣಾ ಎನ್ನುವವರು ನಟಿಸಿದ್ದರು. ಮುಕೇಶ್ ಚಿತ್ರದಲ್ಲಿ ಹಾಡಿದರು. ಅದು ಸೈಗಾಲ್ ಶೈಲಿಯಲ್ಲೇ ಇತ್ತು. ಇದನ್ನು ಗಮನಿಸಿದ ನೌಶಾದ್ ಮತ್ತು ಅನಿಲ್ ಬಿಸ್ವಾಸ್, “ಬೇರೊಬ್ಬರನ್ನು ಅನುಕರಿಸುವುದು ಒಳ್ಳೆದಲ್ಲ ; ನಿಮ್ಮದೇ ಶೈಲಿಯನ್ನು ರೂಢಿಸಿಕೊಂಡು ನೈಜವಾಗಿ ಹಾಡಿ” ಎಂದು ಸಮಝಾಯಿಸಿದರು. ‘ಅಂದಾಜ್’ ಚಿತ್ರದಲ್ಲಿ ದಿಲೀಪ್ ನರ್ಗಿಸ್, ರಾಜಕಪೂರ್ ನಟಿಸಿದ್ದರು. ದಿಲೀಪ್ ಕುಮಾರ್ ಪಿಯಾನೋ ಬಾರಿಸುತ್ತಾ ಹಾಡುವ ದೃಶ್ಯದಲ್ಲಿ “ತೂ ಕಹೇ ಅಗರ್” ಹಾಡು ಪ್ರಸಿದ್ಧಿ ಪಡೆಯಿತು. ಮನ್ನಾಡೆಯವರಿಂದಲೂ ಹಾಡಿಸುತ್ತಿದ್ದ ರಾಜ್ಕಪೂರ್, ಒಮ್ಮೆಲೇ ಮುಕೇಶ್ ರನ್ನು ತಮ್ಮ ಎಲ್ಲಾ ಚಿತ್ರಗಳಲ್ಲೂ ಹಾಡಲು ನೇಮಿಸಿಕೊಂಡರು. ರಾಜಕಪೂರ್ ತಮ್ಮ ಚಿತ್ರತಯಾರಿಕೆಯಲ್ಲಿ ಎಲ್ಲಾ ಹಾಡುಗಳನ್ನು ಹಾಡಲು ಮುಕೇಶ್ ರಿಗೆ ಒಪ್ಪಿಸಿದ್ದರು.
ಅಭಿನಯ, ಹಾಡುಗಾರಿಕೆ ಚಿತ್ರ ನಿರ್ಮಾಣಗಳ ಅನುಭವ :
‘ಮಾಶುಕ್’ ಎಂಬ ಚಿತ್ರದಲ್ಲಿ ಮುಕೇಶ್ ನಾಯಕನ ಪಾತ್ರ ವಹಿಸಿದ್ದರು ಮ್ಯೂಸಿಕ್ ರೋಷನ್,ರವರಿಂದ. ಈ ಚಿತ್ರ ೧೯೫೩ ನಲ್ಲಿ ರಿಲೀಸ್ ಆಯಿತು ೧೯೫೬ ರಲ್ಲಿ ಉಶಾ ಕಿರಣ್ ರವರ ಜತೆ ‘ಅನುರಾಗ್’ ಚಿತ್ರದಲ್ಲಿ ಪಾತ್ರವಹಿಸಿದರು. ಮುಕೇಶರಿಗೆ ಈ ಎರಡು ಚಿತ್ರಗಳಲ್ಲಿ ನಾಯಕನ ಪಾತ್ರ ನಿರ್ವಹಿಸಿದಮೇಲೆ ನಟನೆಯಲ್ಲಿ ಹೆಚ್ಚು ಪ್ರಭಾವವನ್ನು ಬೀರಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಗಾಯಕಿಯಾಗಿಯೇ ಮುಂದುವರೆದರು. ಹಾಡುಗಾರಿಕೆಯಲ್ಲಿ ಬಹಳ ಹಣ ಸಂಪಾದನೆಯಾಯಿತು. ‘ಮಲ್ಹರ್’ ಎಂಬ ಚಿತ್ರನಿರ್ಮಾಣಮಾಡಲು ಕೈಹಾಕಿದರು. ೧೯೫೧ ರಲ್ಲಿ ರಿಲೀಸ್ ಆಯಿತು. ಆದರೆ ಹೆಚ್ಚು ಸಮಯ ನಡೆಯಲಿಲ್ಲ. ೧೯೫೦-೬೦ ರ ಸಮಯ ಅವರ ಜೀವನದ ‘ಗೋಲ್ಡನ್ ಪಿರಿಯೆಡ್’ ಎಂದು ಕರೆಯಬಹುದು. ೧೯೫೯ ರಲ್ಲಿ ‘ಅನಾಡಿ’ ಚಿತ್ರ ಬಹಳ ಹೆಸರು ಮಾಡಿತು. ರಾಜ್ ಕಪೂರ್, ನೂತನ್, ಮೋತಿಲಾಲ್, ಅಭಿನಯಿಸಿದ ಚಿತ್ರದಲ್ಲಿ ಮುಕೇಶರಿಗೆ ಅತ್ಯುತ್ತಮ ಹಾಡುಗಾರನೆಂದು ಮೊಟ್ಟಮೊದಲ ಫಿಲಂ ಫೇರ್ ಪ್ರಶಸ್ತಿ ದೊರೆಯಿತು. ‘ಸಬ್ ಕುಛ್ ಸೀಖಾ ಹಮ್ ನೇ ‘ ೧೮೫೦-೬೦ ರಾಜ್ ಕಪೂರ್ ಗೆ ಹೆಚ್ಚಾಗಿ ಹಾಡಿದರು. ೧೯೭೦ ರಂತರ ರಾಜ್ ಕಪೂರ್ ವರ್ಚಸ್ಸು ಹಿಂದಿ ಸಿನಿಮಾ ವಲಯದಲ್ಲಿ ಕಡಿಮೆಯಾಗತೊಡಗಿತು. ಆ ಸಮಯದಲ್ಲಿ ಕಿಶೋರ್ ಕುಮಾರ್ ಹಾಡುಗಳು ಗಲ್ಲ ಪೆಟ್ಟಿಗೆಯಲ್ಲಿ ಹೆಚ್ಚು ಪರಿಣಾಮ ಬೀರಿದವು. ಆದರೂ ಮುಕೇಶ್ ಜನಪ್ರಿಯತೆ ಕಡಿಮೆಯಾಗಲಿಲ್ಲ. ಆಗ ಮುಕೇಶ್, ಫಿರೋಜ್ ಖಾನ್, ಸುನಿಲ್ ದತ್, ದಿಲೀಪ್ ಕುಮಾರ್ ಮೊದಲಾದರಿಗೆ ಕಂಠದಾನ ಮಾಡುತ್ತಿದ್ದರು.
೨೨ ಜೂಲೈ, ೧೯೭೬ ಅಮೆರಿಕಕ್ಕೆ ಹೋಗುವ ೪ ದಿನಗಳ ಮುಂಚೆ ರಾಜ್ ಕಪೂರ್ ರವರಿಗಾಗಿ ಒಂದು ಹಾಡನ್ನು ಧ್ವನಿಮುದ್ರಿಸಿದರು. ಆಗ ಬೆಳಗಿನ ಜಾವವಾಗಿದ್ದರಿಂದ ರೆಕಾರ್ಡಿಂಗ್ ಮುಗಿದಮೇಲೆ ಗೆಳೆಯರೆಲ್ಲಾ ಎದ್ದು ತಮ್ಮ-ತಮ್ಮ ಮನೆಗಳಿಗೆ ಹೊರಟುಹೋದರು. ರಾಜ್ ಕಪೂರ್ ತಮ್ಮ ಹಾಡಿನ ರೆಕಾರ್ಡಿಂಗ್ ನಂತರ ಮುಕೇಶ್ ಮತ್ತು ಬಳಗದವರ ಜತೆ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದರು. ರಾಜ್ ಕಪೂರ್ ರವರ ಜತೆ ಕುಳಿತು ಕುಡಿಯುತ್ತಾ ಆನಂದಿಸಲು ಮುಕೇಶ್ ೪ ಗ್ಲಾಸ್ ಲೋಟಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಆದರೆ ಮುಕೇಶ್ ರಿಗೆ ಆ ಆಸೆ ನೆರವೇರದ್ದಕ್ಕಾಗಿ ಬೇಸರ ಪಟ್ಟುಕೊಂಡಿದ್ದರಂತೆ. ಈ ವಿಷಯ ಮುಕೇಶ್ ನಿಧನರಾದ ಮೇಲೆ ಒಮ್ಮೆ ರಾಜಕಪೂರ್ ಮನೆಯಲ್ಲಿ ಒಬ್ಬರೇ ಕುಳಿತಿದ್ದಾಗ, ಮನೆಯ ಸೇವಕ ಈ ವಿಷಯವನ್ನು ನೆನಪಿಸಿಕೊಂಡು ಅವರಿಗೆ ಹೇಳಿದನಂತೆ. ರಾಜ್ ಕಪೂರ್ ಗೆ ಈ ವಿಷಯ ಕೇಳಿದಾಗ ಮಾನಸಿಕ ಆಘಾತವೇ ಆಗಿತ್ತು.
ರಜನಿ ಗಂಧ ಚಿತ್ರದಲ್ಲಿ (೧೯೭೩) “ಕಯಿ ಬಾರ್ ಯೂಹಿ ದೇಖಾ ಹೈ” ಎಂಬ ಗೀತೆಯನ್ನು ಹಾಡಿದ್ದಕ್ಕೆ ಅತ್ಯುತ್ತಮ ಹಾಡುಗಾರಿಕೆಗಾಗಿ ಮುಕೇಶರಿಗೆ ರಾಷ್ಟೀಯ ಫಿಲಂ ಪ್ರಶಸ್ತಿ ದೊರೆಯಿತು. ಅನಾಡಿ ಚಿತ್ರಕ್ಕೆ ಅವರ ಜೀವನದ ಮೊಟ್ಟಮೊದಲ ಫಿಲಂ ಫೇರ್ ಅವಾರ್ಡ್ , ೧೯೪೫ ರಲ್ಲಿ ಕೆಲವು ನಟರಿಗೆ ಕಂಠದಾನ ಮಾಡಿದ್ದರು.
೧೯೭೫ ರಲ್ಲಿ ನಿರ್ಮಿತ ಧರಮ್ ಕರಮ್ ಎಂಬ ಚಿತ್ರದಲ್ಲಿ ‘ಏಕ್ ದಿನ್ ಬಿಕ್ ಜಾಯೆಗಾ ಮಾಟಿಕ ಮೂಲ್’ ಎಂಬ ಮುಕೇಶ್ ಹಾಡಿದ ಗೀತೆ, ಜೇವನ ನೈಜತೆಯನ್ನು ಹೃದಯಕ್ಕೆ ನಾಟುವಂತೆ ಮಾಡಿ ಕೇಳುಗರ ಹೃದಯವನ್ನು ಸೂರೆಗೊಂಡಿತ್ತು.
ಕಲ್ಯಾಣ್ ಜೀ ಆನಂದ್ ಜೀ ಯವರ ಸಂಗೀತ ನಿರ್ದೇಶನದಲ್ಲಿ :
ಕಲ್ಯಾಣ್ ಜಿ ಆನಂದ್ ಜಿಯವರ ಸಂಗೀತ ನಿರ್ದೇಶನದಲ್ಲೂ ಮುಕೇಶ್ ಬಹಳ ಹಾಡುಗಳನ್ನು ಹಾಡಿದರು. ಶಂಕರ್ ಜೈಕಿಶನ್ ಸಂಗೀತ ನಿರ್ದೇಶನದಲ್ಲಿ ನೈನಾ ಹೈ ಜಾದೂ ಭರೇ, ಬೇ ದರ್ದ್ ಜಮಾನ ಕ್ಯಾ ಜಾನೆ. (೧೯೫೮) ಕಲ್ಯಾಣ್ ಜಿ ಒಬ್ಬರೇ, ‘ಕಲ್ಯಾಣ್ ಜೀ ವೀರ್ಜಿ ಶಾ’ ಎನ್ನುವ ಹೆಸರಿನಲ್ಲಿ ಸಂಗೀತವನ್ನು ಸಂಯೋಜಿಸಿದ್ದರು. ನಂತರ, ಮೈ ಹೂ ಮಸ್ತ್ ಮದಾರಿ, ಮದಾರಿ, ಚಿತ್ರಕ್ಕೆ (೧೯೫೯) ಕಲ್ಯಾಣ್ ಜೀ ಆನಂದ್ ಜೀ ಹೆಸರಿನಲ್ಲಿ, ಚಾ ಹೇ ಆಜ್ ಮುಝೆ, ನಾ ಪಸಂದ್ ಕರೋ. ದಾರಿಂಡ ಚಿತ್ರದಲ್ಲಿ ೧೯೭೭, ಕಲ್ಯಾಣ್ ಜೀ ಆನಂದ್ ಜಿ ಮತ್ತು ಮುಕೇಶ್ ಜೋಡಿ, ಹಲವಾರು ಹಾಡುಗಳನ್ನು ಕೊಟ್ಟವು. ಛಲಿಯ ಮೇರಾ ನಾಮ್, ಮೇರೇ, ಟೂಟೆ ಹುವಾ ದಿಲ್ ಸೆ, ಡಮ್ ಡಮ್ ಡಿಗಾ ಡಿಗಾ, (ಛಲಿಯ-೧೯೫೯), ಮುಜ್ಹ್ ಕೋ ಇಸ್ ರಾತ್ ಕೀ ತನ್ಹಾಯಿ ಮೇ , ದಿಲ್ ಭೀ ತೇರಾ ಹಮ್ ಭೀ ತೆರೆ, (೧೯೬೦), ಹಮ್ ಛೋಡ್ ಚಲೇ ಹೈ ಮೆಹ್ಫಿಲ್ ಕೋ. (ಜೀ ಚಾಹ್ತಾ ಹೈ), ಹಮ್ನೆ ತುಮ್ಕೋ ಪ್ಯಾರ್ ಕಿಯಾ ಹೈ ಜಿತ್ನಾ, (ದುಲ್ಹಾ ದುಲ್ಹನ್), ಚಲ್ ಮೇರೇ ದಿಲ್ ಲೆಹ್ ರಾಕೆ ಚಲ್ ಇಶಾರ ಮತ್ತು ಧೀರೆ ಸೆ ಚಲೋ, ಜೋಹರ್ ಮೆಹ್ ಮುದ್ ಇನ್ ಗೋವಾ , ಮೈ ತೊ ಏಕ್ ಖ್ವಾಬ್ ಹೂ, ಮತ್ತು ಚಾಂದ್ ಸಿ ಮೆಹ್ ಬೂಬ ಹೊ, ಹಿಮಾಲಯ್ ಕಿ ಗೋದ್ ಮೇ, (೧೯೬೫), ವಕ್ತ್ ಕರ್ತಾ ಜೋ ವಫಾ,, ದಿಲ್ ನೇ ಪುಕಾರಾ, ದಿವಾನೋಂಸೆ ಯೆಹ್ ಮತ್ ಪೂಛೋ, ಉಪ್ಕಾರ್, ಖುಷ್ ರಹೋ ಹರ್ ಖುಷಿ ಹೈ, ಸುಹಾಗ್ ರಾತ್, ಮತ್ತು ಹಮ್ ಸಫರ್ ಅಬ್ ಯೆಹ್ ಸಫರ್ ಕಟ್ ಜಾಯೆಗಾ, ಜುವಾರಿ, ಚಾಂದ್ ಕೀ ದಿವಾರ್ ಮತ್ತು, ಲೇ ಚಲ್, ಲೇ ಚಲ್, ಮೇರೇ ಜೀವನ್ ಸಾಥಿ, ವಿಶ್ವಾಸ್, (೧೯೬೯) ಕೊಯಿ, ಜಬ್ ತುಮ್ಹಾರಾ ಹೃದಯ್ ತೋಡ್ ದೇ, ಪೂರಬ್ ಔರ್ ಪಶ್ಚಿಮ್, ದರ್ಪಣ್ ಕೋ ದೇಖಾ ಉಪಾಸನಾ, ಜೋ ತುಮ್ ಕೋ ಹೊ ಪಸಂದ್ ,” ಸಫರ್ ಮತ್ತು ಮುಝೆ ನಹಿ ಪೋಚ್ನಿ ತುಮ್ ಸೆ ಬೀತೇ ಬಾತೆ, ಅಂಜಾನ್ ರಾಹೆ, (೧೯೭೦)
೧೯೭೧ ರಲ್ಲಿ ನಿರ್ಮಿಸಿದ ಆನಂದ್ ಚಿತ್ರದ ಕಹಿ ದೂರ್ ಜಬ್ ದಿನ್ ಧಲ್ ಜಾಯೇ, ೧೯೭೨ ರ ಶೋರ್ ಚಿತ್ರದ ‘ಏಕ್ ಪ್ಯಾರ್ ಕ ನಗ್ಮಾ ಹೈ‘, ಆನಂದ್ ಚಿತ್ರದ ಮೈನೆ ತೇರೇ ಲಿಯೇ ಹೀ ಸಾತ್ ರಂಗ್ ಕೆ, ೧೯೫೯ ರ ನಿರ್ಮಿತಿ, ಅನಾಡಿ ಚಿತ್ರದ ಸಬ್ ಕುಛ್ ಸೀಖಾ ಹಮ್ ನೇ, ೧೯೭೧ ರ ಮೇರಾ ನಾಮ್ ಜೋಕರ್ ಚಿತ್ರದ ಜೀನಾ ಯಹಾ ಮರ್ನಾ ಯಹಾ ಮತ್ತು ಕೆಹ್ತಾ ಹೈ ಜೋಕರ್.
ಮರಣ-ಅಮೇರಿಕಾದಲ್ಲಿ :
ಅಮೇರಿಕಾದ ಡೆಟ್ರಾಯಿಟ್ ನಗರಕ್ಕೆ ೩೭, ಆಗಸ್ಟ್, ೧೯೭೬ ರಲ್ಲಿ ಭಾರತೀಯ ಫಿಲಂ ಸಂಗೀತದ ಜನಪ್ರಿಯತೆಯನ್ನು ಮೂಡಿಸುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋದಾಗ, ಅಲ್ಲಿಯೇ ಮರಣಿಸಿದರು. ತಾವು ಇಳಿದುಕೊಂಡಿದ್ದ. ಹೋಟೆಲ್ ನಲ್ಲಿ ಮುಂಜಾನೆಯೇ ಎದ್ದು, ಶವರ್ ಸ್ನಾನಮಾಡಿದ್ದರು. ಬಾತ್ ರೂಮ್ ನಿಂದ ಹೊರಗೆ ಬರುವಾಗಲೇ ಉಸಿರಾಟದ ತೊಂದರೆಯಾಗಿತ್ತು. ಎದೆಯಲ್ಲಿ ನೋವು ಸಹಿತ ಕಾಣಿಸಿಕೊಂಡಿತ್ತು. ಅವರನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದಾಗ, ಉಪಯೋಗವಾಗದೇ ಕೊನೆಯುಸಿರೆಳೆದರು.
ಅಧುರಿಯಾಗಿ ಉಳಿದಿದ್ದ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್, ಮತ್ತು ನಿತಿನ್ ಮುಕೇಶ್ ಹಾಡಿ, ಕಾರ್ಯಕ್ರಮವನ್ನು ಸಂಪನ್ನ ಗೊಳಿಸಿದರು. ಅಮರಿಕದಲ್ಲಿ ಭಾರತೀಯರು ಮೇರು ಗಾಯಕ, ಮುಕೇಶ್ ರವರ ಅಕಾಲ ಮರಣಕ್ಕಾಗಿ ಬಹಳ ಸಂಕಟಪಟ್ಟರು. ಲತಾ ದೀದಿ ಮುಕೇಶರ ಮೃತದೇಹವನ್ನು ಭಾರತಕ್ಕೆ ತರಲು ಏರ್ಪಾಡು ಮಾಡಿದರು. ಬೊಂಬಾಯಿಂದ ಬಾಲಿವುಡ್ ಸಿನಿಮಾದ ದಿಗ್ಗಜರೆಲ್ಲಾ ಭಾಗವಹಿಸಿದ್ದರು. ಈ ದುಃಖದ ಸುದ್ದಿ ಮುಟ್ಟುತ್ತಿದ್ದಂತೆಯೇ ರಾಜ್ ಕಪೂರ್ ಕಣ್ಣೀರು ಕರೆಯುತ್ತಾ, ಮಕೇಶ್ ರವರ ಮರಣಕ್ಕೆ ಮರುಗುತ್ತಾ, “ಇಂದು ನನ್ನ ಧ್ವನಿಯನ್ನೇ ನಾನು ಕಳೆದುಕೊಂಡೆ” ಎಂದು ಗೋಳಾಡಿದರು. ರಾಜ್ ಕಪೂರ್ ಚಿತ್ರಗಳ ಜನಪ್ರಿಯತೆಗೆ ಮುಕೇಶ್ ಹಾಡಿದ ಹಾಡುಗಳು ಮೋಡಿ ಮಾಡಿದ್ದವು.
ಬಂಗಾಳಿ ಫಿಲಂ ಪತ್ರಕರ್ತರ ಸಂಘದ ಪ್ರಶಸ್ತಿ :
1967 – ತೀಸ್ರಿ ಕಸಮ್ ಚಿತ್ರಕ್ಕೆ ಅತ್ಯುತ್ತಮ ಪುರುಷ ಹಾಡುಗಾರನಿಗಾಗಿ ಇತ್ತ ಪ್ರಶಸ್ತಿ
1968 – ಮಿಲನ್ ಚಿತ್ರಕ್ಕೆಅತ್ಯುತ್ತಮ ಪುರುಷ ಹಾಡುಗಾರನಿಗಾಗಿ ಇತ್ತ ಪ್ರಶಸ್ತಿ
1970 – ಸರಸ್ವತಿ ಚಂದ್ರ ಚಿತ್ರಕ್ಕೆ ಅತ್ಯುತ್ತಮ ಪುರುಷ ಹಾಡುಗಾರನಿಗಾಗಿ ಇತ್ತ ಪ್ರಶಸ್ತಿ
ಸೌಜನ್ಯತೆ : jagriti.priya@hindirush.com, ಮತ್ತು ವಿವಿಧ ಮೂಲಗಳಿಂದ
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ