ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಮತಾ ಆರ್. ಅವರ 2 ಆಂಗ್ಲಾನುವಾದಿತ ಕವಿತೆಗಳು

ಸಮತಾ ಆರ್.
ಇತ್ತೀಚಿನ ಬರಹಗಳು: ಸಮತಾ ಆರ್. (ಎಲ್ಲವನ್ನು ಓದಿ)

ಕವಿತೆ –

Prisoner…

Now,

Though bounded by a four sided
Glass cage,
This confinement has its own appeal.

Here,

Ruby studded earrings,
Two lined gold mangalsutra chain,
Silk  brocade saree,
A vermilion bindi
mounted on the forehead,
All the wishes are fulfilled
By the tricks of a computer.

Once,

All the wishes,desires and queries
Used to fall on clever deaf ears,
Packed up even the basic needs,
The depression choked.
Unspoken desires haunted,and
The prisoner suppressed the thirst.


Translated by Samatha.R

By Sunitha Kushala Nagar.

ಬಂಧಿ..

ಈಗ,

ನಾಲ್ಕು ಬಾಹುಗಳ ಗಾಜ
ಪಂಜರದೊಳಗಿನ ಕಾಲವಾದರೂ
ಈ ಬಂಧನದಲ್ಲೊಂದು ಚಂದವಿದೆ.

ಇಲ್ಲಿ,

ಕೆಂಪು ಹರಳಿನೋಲೆ
ಎರಡೆಳೆಯ ದೊಡ್ಡ ಮಾಂಗಲ್ಯ
ಜರಿ ಬಾರ್ಡರಿನ ರೇಷ್ಮೆ ಸೀರೆ
ಕುಂಕುಮ ಹಣೆ ಗೇರಿ
ಗಣಕಯಂತ್ರದ ಕೈಚಳಕದಿ
ಬಯಕೆಗಳೆಲ್ಲವೂ ಈಡೇರಿದೆ.

ಆಗ,

ಆಸೆ ಆಕಾಂಕ್ಷೆ ಅಹವಾಲುಗಳಿಗೆಲ್ಲ
ಜಾಣ ಕಿವುಡಿನ ಝಲಕು,
ತುರ್ತು ಬೇಡಿಕೆಗಳ ಮೂಟೆ ಕಟ್ಟಿ
ಖಿನ್ನತೆಯಲಿ ಉಬ್ಬಸ
ಉವಾಚವಾಗದ ಓತ ಪ್ರೇತಗಳಾಗಿ
ಬಾಯಾರಿಕೆಯದುಮಿದ ಬಂಧಿ.

ಸುನೀತಾ ಕುಶಾಲನಗರ.

ಸುನೀತಾ ಕುಶಾಲನಗರ.

ಕವಿತೆ -೨

Single piece…

In the market street,
If a beautiful dress is seen
On a mannequin,
She stops to buy it,
Only for herself.

“Is there any other piece,”
A pretending search.
“Look at this latest one,”
Latest fashion,new design,
pattern,colour.
Fidget to draw her attention
Towards other different types.

She knows,
“That is the only single piece,”
“I want that only,”
She rightfully demands.

In front of the customer,
Both are shying away,
The sales boy
To remove then and there only,
The owner
To  tell “Undress it and hand over,”

She,who doesn’t value
the skin for character,
Is enquiring,”Getting late,
remove it quickly and give,
what’s the price?”
“Will you accept card,
Google pay or paytm?”

Those who undress a woman
in their eyes,brain and mind,
Will they get scared and
shy away from auctioning
the dignity of a mannequin.!?

Undressing it in a trial room
with mirrors on all the four sides,
They smack their lips,
Seeing the customer,
standing outside
in the mannequin.

By Vasundhara Kadaluru.

Translated by Samatha.R

ಸಿಂಗಲ್ ಪೀಸ್’

ಮಾರುಕಟ್ಟೆ ಬೀದಿಯಲಿ; ಆಳೆತ್ತರದ
ಮಾಡೆಲ್ಲಿನ ಗೊಂಬೆಯುಡುಗೆ
ಚೆಂದ ಕಂಡರೆ ಆಕೆ ನಿಲ್ಲುತ್ತಾಳೆ
ತನಗಾಗಿಯೇ ಕೊಳ್ಳಲು.

‘ಬೇರೆ ಪೀಸ್ ಇರುವುದೇ…?’
ಹುಸಿ ಹುಡುಕಾಟ; ‘ಇದು ನೋಡಿ
ಲೇಟೆಸ್ಟು’ ನವೀನ ಫ್ಯಾಶನ್ನು
ಹೊಸ ಡಿಸೈನು ಬಣ್ಣ – ಫ್ಯಾಬ್ರಿಕ್ಕು
ಬಗೆಬಗೆ ಬಟ್ಟೆಗಳತ್ತ ಚಿತ್ತ ಸೆಳೆಯಲು
ಚಡಪಡಿಸುತ್ತಾರೆ..

ಗೊತ್ತಾಕೆಗೆ ಇರುವುದು ಅದೊಂದೇ
‘ಸಿಂಗಲ್ ಪೀಸ್!’ ಹಕ್ಕಿನಿಂದ
ಕೇಳುತಾಳೆ ‘ನನಗೆ ಅದೇ ಬೇಕು’

ಅಲ್ಲೇ ಕಳಚಿಕೊಡಲು ಸಂಬಳದ
ಹುಡುಗನಿಗೆ, ‘ಬಿಚ್ಚಿ ಕೊಡು’ ಎನಲು 
ಗ್ರಾಹಕ’ಳ’ ಮುಂದೆ ಮಾಲೀಕನಿಗೆ
ಲಜ್ಜೆ ಅಡ್ಡಿ.

ತೊಗಲಿಗೆ ಶೀಲದ ಮೌಲ್ಯ
ತಾಗಿಸದಾಕೆ ‘ತಡವಾಗುತಿದೆ
ಬೇಗ ತೆಗೆದುಕೊಡಿ, ಬೆಲೆಯೆಷ್ಟು?’
‘ಕಾರ್ಡ್, ಪೇಟಿಎಂ, ಗೂಗಲ್
ಪೇ ನಡೆದೀತೇ’ ವಿಚಾರಿಸುತಾಳೆ.

ಕಣ್ಣು- ಮಿದುಳು- ಮನಗಳೊಳಗೆ
ಹೆಣ್ಣುಗಳ ಬತ್ತಲು ಮಾಡುವವರು
ದಿಢೀರು ಗೊಂಬೆಯೊಂದರ ಮಾನ
ಹರಾಜಿಗೆ ಹೆದರಿ ನಾಚುತ್ತಾರೆಯೇ?!

ನಾಕು ಬದಿ ಕನ್ನಡಿಯ ಟ್ರಯಲ್
ರೂಮಿನೊಳಗೆ ಗೊಂಬೆ ವಸ್ತ್ರಾಪಹರಣ ಮಾಡುತಾ ಹೊರಗೆ ನಿಂತ ಗಿರಾಕಿಯನ್ನು
ಗೊಂಬೆಯೊಳಗೆ ಕಾಣುತಾ… ನಾಲಗೆಯಿಂದ ತುಟಿ ಸವರುತ್ತಾರೆ..

– ವಸುಂಧರಾ ಕದಲೂರು.

ವಸುಂಧರಾ ಕದಲೂರು.