ಇತ್ತೀಚಿನ ಬರಹಗಳು: ಸುಬ್ರಾಯ ಚೊಕ್ಕಾಡಿ (ಎಲ್ಲವನ್ನು ಓದಿ)
- ಗಟ್ಟಿಯವರಿಗೆ ನುಡಿ ನಮನ - ಫೆಬ್ರುವರಿ 26, 2024
- ಎರಡು ದಡ - ಅಕ್ಟೋಬರ್ 22, 2022
- ಅಶ್ರುತಗಾನ - ನವೆಂಬರ್ 3, 2021
ಎರಡು ದಡಗಳ ನಡುವೆ
ಮುಟ್ಟಿಯೂ ಮುಟ್ಟದ ಹಾಗೆ
ನಿರಾತಂಕ ಹರಿವ
ಜೀವನದಿ.
ಎಡ ಬಲಗಳ ಈ ದಡಗಳ
ಹುಸಿ ಪ್ರತಿಬಿಂಬ
ನದಿಯಂತರಂಗದಲಿ
ತುಸುವೆ ಅಲ್ಲಾಡುತ್ತ.
ನದಿಯಿಂದಲೇ ಬದುಕು
ಕಟ್ಟಿಕೊಂಡೀ ದಡಗಳು
ಬೆಳೆದಂತೆ,ಕೆಲವೊಮ್ಮೆ
ಅಹಮ್ಮಿನಲಿ ಒತ್ತುವರಿ ಮಾಡುತ್ತಾ
ಮರೆಯಾಗಿಸುತ್ತವೆ ನದಿಯ.
ಸೇಡು ತೀರಿಸಲೆಂದೇ ಕೆಲವೊಮ್ಮೆ
ನದಿಯೂ ಉಕ್ಕಿ ಹರಿಯುತ್ತ
ಆವರಿಸಿಕೊಳ್ಳುತ್ತದೆ ದಡವೆರಡ
ಹರಿದು ಸಾಗರವಾಗಿ….
ಈಗ ದಡಗಳೇ ಕಾಣೆ
ಉಳಿಯುವುದು ಕೇವಲ
ನೀರು
ಪ್ರತಿಫಲಿಸುವ ಆಕಾಶ.
ಚಲಿಸುತ್ತಲೇ ಇರುವ ನದಿಗೋ ಈಗ
ಹೊಸ ಹೊಸ ಪ್ರದೇಶಗಳ ದರ್ಶಿಸುತ್ತ
ಕಡಲ ಸಂಗಮದಲ್ಲಿ ಮುಕ್ತಿ.
ದಡಗಳಿಗೋ
ಸ್ಥಗಿತ ಚಿತ್ತ
ಇದ್ದಲ್ಲೇ ಸದಾ ನಿಯುಕ್ತಿ!
ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..