- ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ - ನವೆಂಬರ್ 12, 2023
- ಕುವೆಂಪು ಕನಸಿನ ಸಚಿವ ಮಂಡಲ - ಡಿಸಂಬರ್ 29, 2021
- ನಕ್ಷತ್ರಗಳ ನೆಲದ ನಂಟು - ಅಕ್ಟೋಬರ್ 29, 2021
ಗಾನ ಸರಸ್ವತಿ ಲತಾ ಮಂಗೇಶ್ಕರ್ ರವರ 92ನೇ ಜನ್ಮ ದಿನದ ಪ್ರಯುಕ್ತ ಈ ಲೇಖನ.. (೨೮ ಸೆಪ್ಟಂಬರ್)
ಡಾ ಪಿ ಬಿ ಶ್ರೀನಿವಾಸ ರವರು ಉಪಾಸನೆ ಕನ್ನಡ ಸಿನಿಮಾ ದಲ್ಲಿ ಸರಸ್ವತಿ ಯ ಪ್ರಾರ್ಥನೆ ಯ ಶ್ಲೋಕ ವನ್ನು ಬಹಳ ಮಧುರವಾಗಿ ಹಾಡಿದ್ದಾರೆ.. ಯಾ ಕುಂದೇದು ತುಷಾರ ಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತ..ಈ ಶ್ಲೋಕವನ್ನು ಕೇಳಿದಾಗ ಶುಭ್ರ ಶ್ವೇತ ವಸ್ತ್ರ ಧರಿಸಿದ ರವಿವರ್ಮ ರ ಚಿತ್ರ ದಲ್ಲಿ ಯ ಸರಸ್ವತಿಯು ಕಣ್ಣಮುಂದೆ ಬಂದರೆ.. ಅದರಂತೆ ಎಂಟು ದಶಕಗಳಿಂದ ಭಾರತೀಯ ಗಾನ ಪ್ರಪಂಚದ ಶುಭ್ರ ಶ್ವೇತ ವಸ್ತ್ರಾನ್ವಿತೆ ಭಾರತ ರತ್ನ ಲತಾ ಮಂಗೇಶ್ಕರ ರವರು ಕೂಡಾ ನೆನಪಿಗೆ ಬಂದರೆ ಅವರು ಪರಿಶ್ರಮದಿಂದ ಸಾಧನೆಯ ಶಿಖರದಂತಿದೆ.
ಅವರ ತಂದೆ ದೀನ ನಾಥ ಮಂಗೇಶ್ಕರ ರವರಿಂದ ಸಂಗೀತ ಸಂಸ್ಕಾರ ಪಡೆದ ಮಧ್ಯಪ್ರದೇಶದ ಇಂದೂರಿ ನವರು.. ಅವರ ತಾಯಿ ಶೇವಂತಿಯವರು ಕೂಡಾ ಸಂಗೀತದ ಒಲವುಳ್ಳಾಗಿದ್ದರು. ಚಿಕ್ಕ ವಯಸ್ಸಿನಲ್ಲಿ 13 ವರ್ಷದವರಿರುವಾಗ ಅವರ ತಂದೆ ಅಕಾಲಿಕ ನಿಧನವು ಅವರ ಮನೆಯ ಜವಾಬ್ದಾರಿಯನ್ನು ಲತಾ ಜಿಯವರ ಎಳೆಯ ಕೈಗಳು ಹೊರುವಂತೆ ಮಾಡಿದವು.. ಅವರ ಸಹೋದರ ಹೃದಯನಾಥ ಮಂಗೇಶ್ಕರ.. ಸಹೋದರಿ ಆಶಾ ಭೋಸಲೆ.. ಉಷಾ ಮಂಗೇಶ್ಕರ್.. ಮೀನಾ ಖಾಡಿಲ್ಕರ್ ಇವರ ಹೊಣೆಗಾರಿಕೆಯನ್ನು ವಹಿಸಿಕೊಂಡು.. ಮನೆಯಲ್ಲಿ ಪಡೆದ ಸಂಗೀತ ದ ವಿದ್ಯೆಯನ್ನು ಈ ಎಲ್ಲರೂ ಅನುಸರಿಸುವಂತೆ ಮಾಡಿ ಅವರನ್ನೂ ಕೂಡಾ ಮಹಾನ್ ಸಂಗೀತ ಗಾರರನ್ನಾಗಿಸಿದರು..
1942ರಲ್ಲಿ ಮರಾಠಿ ಚಲನಚಿತ್ರ ಕ್ಕೆ ಹಾಡುವ ಮೂಲಕ ತಮ್ಮ ಗಾಯನ ಜೈತ್ರಯಾತ್ರೆ ಪ್ರಾರಂಭಿಸಿದ ನಂತರ ತಿರುಗಿ ನೋಡಲೇ ಇಲ್ಲಾ.. ಮುಂದಿನದು ಇತಿಹಾಸ ತಮ್ಮ ಎದುರೇ ಇದೆ.. ಇನ್ನೊಬ್ಬ ಸಹೋದರಿ ಆಶಾ ಭೋಸಲೆಯವರು ಹಿಂದಿ ಚಿತ್ರರಂಗದ ದಂತ ಕಥೆಯಾಗಿರುವರು. ಅದಕ್ಕೆ ಲತಾ ಮಂಗೇಶ್ಕರ್ ರವರು ಸಂಗೀತದ ಪರಷು ಮಣಿ.. ಅವರ ಸುಧೀರ್ಘ ಹಾಡುಗಾರಿಕೆ ವೃತ್ತಿ ಜೀವನದಲ್ಲಿ ಹಿಂದಿ ಚಿತ್ರರಂಗದ ಎಲ್ಲಾ ಮೇರು..ಸಂಗೀತ ಗಾರರಾದ ನೌಶದ್.. ಶಂಕರ್ ಜೈಕಿಶನ್.. ಲಕ್ಷೀಕಾಂತ ಪ್ಯಾರೇಲಾಲ್.. ಕಲ್ಯಾಣ ಜಿ ಆನಂದಜಿ ಯವರಿಂದ ಹಿಡಿದು ಎ ಅರ್ ರಹಮಾನರವರೆಗೂ ಅವರ ಸಂಗೀತ ಸಂಯೋಜನೆ ಯಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಅವರು ಹಾಡಿದ ಎಲ್ಲಾ ಹಾಡುಗಳೂ ಗಾಯನ ಲೋಕದ ಮಹತ್ವದ ಹೆಗ್ಗುರುತುಗಳೇ ಆಗಿವೆ. ಅವರು ಭಾರತದ 36 ಭಾಷೆಗಳಲ್ಲಿ ಹಾಡಿ ನಿಜವಾದ ಭಾರತೀಯ ರ ಐಕ್ಯತೆಯನ್ನು ತಮ್ಮ ಧ್ವನಿ ಯಲ್ಲಿ ಪ್ರತಿಬಿಂಬಿಸಿದ್ದಾರೆ.. ಲತಾ ಜಿ ಭಾರತದ ಆತ್ಮ ದ ನಿಜ ಧ್ವನಿ ಯಾರಿದ್ದಾರೆ.
ನಾನು ಕೂಡಾ ನನಗೆ ತಿಳುವಳಿಕೆ ಬಂದಾಗಿನಿಂದ ರೇಡಿಯೋ ದಲ್ಲಿ ಹಾಡುಗಳೆಂದರೆ ಲತಾ ಮಂಗೇಶ್ಕರವರ ಬಂಗಾರದ ಧ್ವನಿಯೇ ಆಗಿತ್ತು.
ಏ ಮೇರೇ ವತನ್ ಕೆ ಲೋಗೋ
ನಾನು ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ
ಓದುವಾಗ ನಮ್ಮ ದೇಶ ಚೀನಾ ಯುದ್ದದಿಂದ ಚೇತರಿಸಿಕೊಳ್ಳುತ್ತಿರುವಾಗಲೆ ಪಾಕಿಸ್ತಾನದದೊಂದಿಗೆ ಯುದ್ಧ ಪ್ರಾರಂಭವಾಗಿ.. ದೇಶದಲ್ಲಿ ಸೈನಿಕರ ಬಗ್ಗೆ ವಿಶೇಷವಾಗಿ ಅಭಿಮಾನಗಳು ..ದೇಶದ ಅಭಿಮಾನ ಗಳು ತುಂಬಿ ತುಳುಕುತ್ತಿದ್ದ ದಿನಗಳವು. ಕಲಘಟಗಿಯಲ್ಲಿ ಬಹಳಷ್ಟು ಮನೆಗಳಲ್ಲಿ ಈ ಯುದ್ಧಗಳಲ್ಲಿ ಪಾಲ್ಗೊಂಡಿದ್ಧ ಯೋಧರಿದ್ದರು.ಅವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಬರುತ್ತಿದ್ದರು.. ಆಗ ಅವರನ್ನು ನಾವೆಲ್ಲಾ ಪೂಜ್ಯ ಭಾವನೆಯಿಂದ ಕಾಣುತ್ತಿದ್ದವು. ಅಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಲತಾ ಮಂಗೇಶ್ಕರ ರವರು ಹಾಡಿದ್ದ ..ಏ ಮೇರೆ ವತನ್ ಕಿ ಲೋಗೊ ಹಾಡನ್ನು ವಿ ಎಸ್ ಖಂಡೇಕರ್ ಎನ್ನುವ ಎಂಟನೆ ತರಗತಿ ಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಬಹಳ ಸುಂದರವಾಗಿ ಮನಮುಟ್ಟುವಂತೆ ಹಾಡುತ್ತಿದ್ದರು.. ಅದಕ್ಕೆ ನಮ್ಮ ಜನತಾ ಪ್ರೌಢಶಾಲೆ ಯ ಪ್ರಧಾನ ಗುರುಗಳು ಶ್ರೀ ಎಂ ಬಿ. ದೇಸಾಯಿ..ಯವರು.. ಕಣೇಕಲ್ ಸರ್ ಮತ್ತು ಸಾವಾಕಾರ ಸರ್ ವಿಶೇಷ ಆಸಕ್ತಿ ವಹಿಸಿ ಕೇಳುವಂತೆ ಮಾಡಿದ್ದರು. ಇದೆಲ್ಲಾ ದೇಶ ಭಕ್ತಿ ವಿದ್ಯಾರ್ಥಿಗಳು ದೇಶ ಭಕ್ತಿ ಮೆರೆಯಲಿ ಎನ್ನುವುದು ಈ ಆದರ್ಶ ಶಿಕ್ಷಕ ರದಾಗಿತ್ತು.
ಕವಿ ಪ್ರದೀಪ ಈ ಏ ಮೇರೇ ವತನ ಕಿ ಲೋಗೋ.. ಹಾಡನ್ನು ಅಮರ ಗೊಳಿಸಿದ ಇಂಪಾದ ಧ್ವನಿ.. ಲತಾ ಮಂಗೇಶ್ಕರವರದು. ಈ ಹಾಡಿನಲ್ಲಿ ದೇಶಾದ್ಯಂತ ಜನರೂ ಭಾರತೀಯ ಯೋಧರು.. ಶಿಕ್ಷಕರೂ ..ವಿದ್ಯಾರ್ಥಿಗಳು ಎಲ್ಲರೂ ಭಾರತೀಯತೆ ಅಸ್ಮಿತೆಯನ್ನು ಸ್ಪರ್ಶಿಸಿ ದರು.. ಗಡಿಯಲ್ಲಿ ನ ಯೋಧರು ತಮ್ಮ ಧೈರ್ಯ ಸ್ಥೈರ್ಯವನ್ನು ಈ ಹಾಡು ಇಂಬುಗೊಳಿಸಿಕೊಂಡರು.. ಮತ್ತೆ ಪ್ರಾದೇಶಿಕ ಭಾಷೆಗಳಲ್ಲಿ ಯೂ ಈ ಹಾಡನ್ನು ಅನುವಾದ ಗಳಿಸಿಕೊಂಡು ಹಾಡಿದರು.. ನಮ್ಮ ಕನ್ನಡ ದಲ್ಲಿ.. ಓ ಎನ್ನ ದೇಶ ಬಾಂಧವರೇ.. ಎಂದೂ ಹಾಡಿ ನಮ್ಮ ದೇಶದ ಅಭಿಮಾನ ವನ್ನು ಎದೆತುಂಬಿ ಕೊಂಡು ಸಂತೋಷ ಪಡುತ್ತಿದ್ದರು. ಅದೇ ಕಲಘಟಗಿ ವೀರ ಯೋಧರು ತಮ್ಮ ಕಡು ಹಸಿರು ಉಡುಗೆಯಲ್ಲಿ ಮಿಲಿಟರಿ ಶಿಸ್ತಿನಿಂದ ನಡೆದು ಹೊರಡುತ್ತಿದ್ದರು.. ಬಸ್ ನಿಲ್ದಾಣಕ್ಕೆ ಅವರನ್ನು ಕಳಿಸಲು ಹೋದಾಗಲೆಲ್ಲಾ ಲತಾ ಜಿ ಯವರ ಈ ಹಾಡು ಅವರ ನಡೆಗೆಗೆ ಹಿನ್ನಲೆ ಯಾಗಿ ಬರುತಿತ್ತು ಇದು ಲತಾ ಮಂಗೇಶ್ಕ ರವರ ಮಾಂತ್ರಿಕ ಧ್ವನಿ ಯ ಪ್ರಭಾವ ವಲಯ.ವೀರ ಯೋಧರ ಗೌರವ ಬಲಿದಾನಗಳಿಗೆ ಅವರು ಧ್ವನಿ ಯಾವುದು..
ಈ ದೇಶದ ಸಾಮಾನ್ಯ ಮನುಷ್ಯ ರಿಂದ ಹಿಡಿದು ಪ್ರಧಾನಿ ಗಳ ಕಣ್ಣುಗಳಲ್ಲಿ ಕಂಬನಿದುಂಬಿಸಿ ಮನುಷ್ಯತ್ವದ ಹೃದಯದ ಆರ್ದೃತೆಯನ್ನು ಉಳಿಸಿದವರು ..ಸಂಗೀತ ದ ಶಕ್ತಿ ಯನ್ನು ಎಲ್ಲರಿಗೂ ತಮ್ಮ ಧ್ವನಿ ಯಿಂದ ತಿಳಿಸಿದವರು. ಗೋಧೂಳಿಯಂತೆ ಸುಂದರವಾದ ಮಾಂತ್ರಿಕ ಜಗತ್ತನ್ನು ವಾಸ್ತವಿಕ ಮಾಡಿದವರು. ನಾವು ನಡೆಯುವಾಗ ಎದುರಾಗುವ ದಾರಿಗಳಲ್ಲಿ ಅವರು ಹಾಡು ಕೇಳಿತೆಂದರೆ ಸಾಕು ಆ ದಾರಿಗಳನ್ನು ಮಧುರ ರಾಗಗಳು ಅಲಂಕರಿಸಿ ನಮ್ಮ ನಡೆಯುವ ಆಯಾಸಗಳಿಗೆ ಮರಗಳ ತಂಪು ಆವರಿಸುವಂತೆ.. ನೋವುಂಡ ಮನಗಳಿಗೆ ತಾಯ ಸ್ಪರ್ಶ ದ ಅನುಭವ ನೀಡಿದವರು ಲತಾ ಮಂಗೇಶ್ಕರ ರವರು.
ಅದೇ ವೇಳೆಗೆ ಕಲಘಟಗಿ ಭಾರತ ಚಿತ್ರ ಮಂದಿರದಲ್ಲಿ ..ವತನ್ ಸೇ ದೂರ..ಹಕೀಕತ್.. ಬಂದಿದ್ದವು ಅಲ್ಲಿಯೂ ಲತಾ ಜಿ ಯವರ ಹಾಡುಗಳು..
ಸಂಗೊಳ್ಳಿ ರಾಯಣ್ಣ
ಕನ್ನಡ ಸಿನಿಮಾ ವೂ ಬಂದಿತು.. ಅದರಲ್ಲಿ ಭುಂಜೇಂದ್ರ ಮಹಿಷವಾಡಿಯವರು ಬರೆದ ಎರಡು ಗೀತೆಗಳಿಗೆ ಲತಾ ಮಂಗೇಶ್ಕರ ಧ್ವನಿ ನೀಡಿದ್ದರು.. ಬೆಳ್ಳನೇ ಬೆಳಗಾಯಿತು ..ಬಹಳ ಮಾಧುರ್ಯ ಮಯ ಹಾಡಿದ್ದರು.. ಲತಾ ಮಂಗೇಶ್ಕರ ರವರು ಕೇವಲ ಗಾಯನ ದಿಂದ ನಮ್ಮ ಅಭಿಮಾನ ಗಳಿಗೆ ಪಾತ್ರರಾಗಿಲ್ಲ… ಬದಲಾಗಿ ಅವರಲ್ಲಿ ಇರುವ ದೇಶ ಭಕ್ತಿ ಅನನ್ಯವಾಗಿದೆ.. ನಮ್ಮನಾಡಿನ ವೀರ ಸಂಗೊಳ್ಳಿ ರಾಯಣ್ಣನ ದೇಶ ಪ್ರೇಮ ಬಲಿದಾನಗಳನ್ನು ಸ್ಮರಿಸಿ ಕೊಂಡು ಈ ಸಿನಿಮಾ ದ ಹಾಡುಗಳನ್ನು ಹಾಡಲು ಸಂಭಾವನೆಯನ್ನು ನಿರಾಕರಿಸಿ.. ಈ ವೀರ ದೇಶಭಕ್ತನ ಸಿನಿಮಾದಲ್ಲಿ ಹಾಡುವದು ನನ್ನ ಭಾಗ್ಯ ವೆಂದರಂತೆ. ಹಾಗೆ ನೋಡಿದರೆ ಆ ದಿನಗಳಲ್ಲಿ ಲತಾ ಜಿ ಯವರು ಆರ್ಥಿಕ ವಾಗಿ ಅಷ್ಟೇನೂ ಸುಭದ್ರವಾಗಿ ದ್ದಿಲ್ಲವೆಂದು ತಿಳಿದು ಬರುತ್ತದೆ .ಅದಕ್ಕಾಗಿ ಲತಾಮಂಗೇಶ್ಕರ ಭಾರತ ರತ್ನ ವೆನ್ನುವದು..ಈ ಬಂಗಾರದ ಬದುಕಿನ ಭಾರತದ ಕೋಗಿಲೆ ಇನ್ನೂ ಧೀರ್ಘ ಕಾಲದ ವರೆಗೆ.. ಹಾಡುತ್ತಲೇ ಇರಲಿ..
ಹೆಚ್ಚಿನ ಬರಹಗಳಿಗಾಗಿ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್
ಕನ್ನಡ ನಾಟ್ಯ ರಂಗ