ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

'ನಸುಕು' ಸಂಪಾದಕ ವರ್ಗ

ಪ್ರತಿಯೊಂದು ನಸುಕು ಹೊಸ ಹಗಲಿನ ಬೀಜವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ- ಪ್ರತಿ ಸಲ, ಪ್ರತಿ ದಿನ….

ಮನುಷ್ಯನ ಮುಗ್ಧತೆಯು ನಾಶವಾಗುತ್ತಿರುವುದನ್ನು, ಇತಿಹಾಸ ಗುರುತಿಸುತ್ತ ಸಾಗುತ್ತದೆ. ಅಧ್ಯಾತ್ಮವಾದರೋ ಮುಗ್ಧತೆಯ ನಾಶದ ಅರಿವಿನಿಂದ ಉಂಟಾಗುವ ಕೊರಗಿನಲ್ಲಿ, ಮತ್ತೆ ಮುಗ್ಧತೆಯು ಕುಡಿಯೊಡೆಯಬಹುದು…

“ಹಲವು ವರ್ಷಗಳ ಕಾಲ ನಾನು ಓದುತ್ತಾ ಬಂದಿರುವ ಚೊಕ್ಕಾಡಿಯವರ ಯಾವ ಪದ್ಯವು ನನಗೆ ಕಳಪೆ ಎನ್ನಿಸಿದ್ದಿಲ್ಲ . ಅವರಿಂದ ನಾನು ಹಿಗ್ಗುತ್ತಲೇ ಬೆಳೆದಿದ್ದೇನೆ. ಚೊಕ್ಕಾಡಿಯವರ ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸುಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಒಂದು ಅಗತ್ಯ ನಡವಳಿಕೆ ಎಂದು ನಾನು ತಿಳಿದಿದ್ದೇನೆ. ಚೊಕ್ಕಾಡಿ ಈ ಶಿಷ್ಟಾಚಾರವನ್ನು ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ಅವು ವಿನಯ ಮತ್ತು ಪ್ರಾಮಾಣಿಕತೆ. ಈ ಎರಡು ಗುಣಗಳು ಇವೆ ಎಂದು ಗ್ಯಾರಂಟಿ ಆದಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ. ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಕವಿ ಚೊಕ್ಕಾಡಿಯವರು. ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಈ ಟಿಪ್ಪಣಿಗಳ ಮುಖಾಂತರ ಗುರುತಿಸಲು ನನಗೆ ಸಂತೋಷವಾಗುತ್ತದೆ.
– ಪ್ರೊ. ಯು ಆರ್ ಅನಂತಮೂರ್ತಿ
“ಚೊಕ್ಕಾಡಿಯ ಹಕ್ಕಿಗಳು”
ಸಮಗ್ರ ಕವಿತೆಗಳ ಸಂಕಲನ ದ ಬೆನ್ನು ಪುಟದಿಂದ.

ಪ್ರೊ.ನಟರಾಜ ಅರಳಸುರಳಿ ಅವರಿಂದ ಚೊಕ್ಕಾಡಿ ಅವರಿಗೆ ಎಂಬತ್ತು ತುಂಬಿದ ಸಂಭ್ರಮದಲ್ಲಿ ಚಿತ್ರವಂದನೆ.