ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚೊಕ್ಕಾಡಿ-೮೦ ರ ಸಂಭ್ರಮ

“ಹಲವು ವರ್ಷಗಳ ಕಾಲ ನಾನು ಓದುತ್ತಾ ಬಂದಿರುವ ಚೊಕ್ಕಾಡಿಯವರ ಯಾವ ಪದ್ಯವು ನನಗೆ ಕಳಪೆ ಎನ್ನಿಸಿದ್ದಿಲ್ಲ . ಅವರಿಂದ ನಾನು ಹಿಗ್ಗುತ್ತಲೇ ಬೆಳೆದಿದ್ದೇನೆ. ಚೊಕ್ಕಾಡಿಯವರ ಎಲ್ಲ ಪದ್ಯಗಳಲ್ಲೂ ಸ್ಪಷ್ಟತೆಗಾಗಿ ಕೆಲಸ ಮಾಡುವ ಕಸುಬುಗಾರಿಕೆ ಇರುತ್ತದೆ. ತಾನು ಹೇಳಿದ್ದು ಕೊನೆಯ ಪಕ್ಷ ತನಗಾದರೂ ಸ್ಪಷ್ಟವಾಗಿ ಇರಬೇಕೆಂದು ಬಯಸುವುದು ಶಿಷ್ಟಾಚಾರದ ಒಂದು ಅಗತ್ಯ ನಡವಳಿಕೆ ಎಂದು ನಾನು ತಿಳಿದಿದ್ದೇನೆ. ಚೊಕ್ಕಾಡಿ ಈ ಶಿಷ್ಟಾಚಾರವನ್ನು ಎಲ್ಲಿಯೂ ಬಿಡುವುದಿಲ್ಲ. ಇದಕ್ಕೆ ಕಾರಣ ಅವರಲ್ಲಿ ನಾವು ಕಾಣುವ ಎರಡು ದೊಡ್ಡ ಗುಣಗಳು: ಅವು ವಿನಯ ಮತ್ತು ಪ್ರಾಮಾಣಿಕತೆ. ಈ ಎರಡು ಗುಣಗಳು ಇವೆ ಎಂದು ಗ್ಯಾರಂಟಿ ಆದಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ. ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಕವಿ ಚೊಕ್ಕಾಡಿಯವರು. ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಈ ಟಿಪ್ಪಣಿಗಳ ಮುಖಾಂತರ ಗುರುತಿಸಲು ನನಗೆ ಸಂತೋಷವಾಗುತ್ತದೆ.
– ಪ್ರೊ. ಯು ಆರ್ ಅನಂತಮೂರ್ತಿ
“ಚೊಕ್ಕಾಡಿಯ ಹಕ್ಕಿಗಳು”
ಸಮಗ್ರ ಕವಿತೆಗಳ ಸಂಕಲನ ದ ಬೆನ್ನು ಪುಟದಿಂದ.

ಚೊಕ್ಕಾಡಿಯರಿಗೆ-ಎಂಬತ್ತಂತೆ… ಈ ಸಂಭ್ರಮದಲ್ಲಿ ಪತ್ರಿಕಾ ರಂಗದ ಉನ್ನತ ಸಾಧಕ , ನಿರೂಪಕ ,ಮಾಹಿತಿಗಳ ಕಣಜ ಎಂದೇ ಹೆಸರಾದ ಎನ್. ಎಸ್.ಶ್ರೀಧರಮೂರ್ತಿ ಅವರು ಬರೆದ ಲೇಖನ..

ಪ್ರೊ.ನಟರಾಜ ಅರಳಸುರಳಿ ಅವರಿಂದ ಚೊಕ್ಕಾಡಿ ಅವರಿಗೆ ಎಂಬತ್ತು ತುಂಬಿದ ಸಂಭ್ರಮದಲ್ಲಿ ಚಿತ್ರವಂದನೆ.