- ಮೈಖೇಲ್ ಜಾಕ್ಸನ್ ಎಂಬ ಲೋಕ ಕಂಡ ಮಾಂತ್ರಿಕ - ಡಿಸಂಬರ್ 21, 2021
- ಪ್ರೀತಿ ಹಂಚುತ ಸಾಗು - ನವೆಂಬರ್ 24, 2021
- ನನ್ನ ಕವಿತೆಗಳಿಗೊಂದಷ್ಟು ಜಾಗ ನೀಡಿ - ನವೆಂಬರ್ 3, 2021
ಲತೆಯ ಮನ ಮಿಡಿದು ಸುಮ ಅರಳಿ ನಕ್ಕಿದಂತೆ
ಹೃದಯಕೆ ಮುಳ್ಳು ತಾಗಿ ನೆತ್ತರ ಗೀತೆ ಒಸರಿದಂತೆ
ಜಾರುತಿದೆ ನೆನಪು ಜೋಗದ ವೇಗ ಪಡೆದು ಹೀಗೆ
ಮಾತಿಲ್ಲದ ದಾರಿಯಲ್ಲಿ ಮೌನದ ಮಳೆ ಸುರಿದಂತೆ
ಕಾಡಿದೆ ಪ್ರೇಮದ ಅಲೆ ದೂರಾದರೂ ಬಿಡದು ಏಕೆ
ಕನಸಕಡಲಲಿ ರಂಗೇರಿ ನಕ್ಷತ್ರಮೀನು ಮೀನುಗಿದಂತೆ
ಗಿರಗಿರ ಮಾರುತ ಗಿರಿಯ ಶಿಖರ ಚುಂಬಿಸಿ ಸ್ಖಲಿಸಿದೆ
ನಗಾರಿ ಸದ್ದಿಗೆ ಶಿಲೆಯೊಂದು ಕರಗಿ ಶಿಲ್ಪವಾದಂತೆ
ನಾದದ ಅಲೆ ಮದಿರೆಯ ನಶೆಯಾಗಿ ಆವರಿಸಿದೆ
ನವಿರಾದ ಸ್ಪರ್ಶದಿ ನಯನಗಳು ನುಡಿ ಚೆಲ್ಲಿದಂತೆ
ಸಾಲದ ಸಂತಸ ನೀರ ಮೇಲಣ ತೇಲುವ ಶವ ಒಂದೇ
ನಿತ್ಯ ನೇಸರನ ಬುತ್ತಿಯಲ್ಲಿ ಚಂದಿರನು ಹೊಳೆದಂತೆ
ದೇಗುಲದ ಏಕಾಂತದಿ ದೀಪ ಬೆಳಗಬೇಕು ಖುಷಿಯಲಿ
ಊರಹೊರಗಿನ ಕೆರೆಯಲಿ ಕಮಲದಾವರೆ ಅರಳಿದಂತೆ
ಬಯಕೆಯ ಬೇರು ಬಯಲ ಆವರಿಸಿ ಬೀಗಿದೆ ಕಾಣು
ತೆರೆದ ಬಾಗಿಲು ಬಾರದ ಅವಳಿಗಾಗಿ ಕಾಯುವಂತೆ
ಎಷ್ಟು ನರಳಿದರೂ ಕಡಿಮೆಯಾಗದು ಕಾಣದ ನೋವು
ತಾರಸಿ ಮೇಲಿನ ಹಸಿ ಅರಿವೆಗಳು ಕಂಬನಿ ಕೆಡವಿದಂತೆ
ಇರುಳ ಪೂರ ನಿನ್ನದೆ ಧ್ಯಾನ ಎಲ್ಲಿಗೆ ಹೊರಟು ಹೋದೆ
ಕಾಲ ದಾಟುತ್ತಿದೆ ದಿನಗಳನ್ನು ಯಾರಿಗೂ ಕಾಣದಂತೆ
ಭವದ ಅನುಭವ ಭಾವಬಂಧನದ ಮೇಳ ಅಸದ್
ತಳ ಕುಸಿದ ಗಡಿಗೆಯ ಹೊತ್ತು ಖಾಲಿಯಾಗಿ ನಡೆದಂತೆ
ಹೆಚ್ಚಿನ ಬರಹಗಳಿಗಾಗಿ
ಗಜಲ್
ಗಜಲ್
ಉತ್ತಮ ಯಲಿಗಾರ ಅವರ ಎರಡು ಗಜಲ್ಗಳು