ಇತ್ತೀಚಿನ ಬರಹಗಳು: ಕವಿತಾ ಹೆಗಡೆ (ಎಲ್ಲವನ್ನು ಓದಿ)
- ಈ ಇವನ ಧಿಮಾಕು - ಅಕ್ಟೋಬರ್ 23, 2022
- ಗ್ರೀಷ್ಮದಲ್ಲೊಂದು ಗಮ್ಮತ್ತಿನ ಪ್ರವಾಸ - ಮೇ 28, 2022
- ಬಿಳಿಯ ಹಾಳೆ - ಮೇ 12, 2021
ಅಡ್ಡ ಬಂದ ವಾಹನಕಿತ್ತ ಚುಂಬನ
ದಂತಮಾತ್ರವಲ್ಲ ಇಲ್ಲಿ ಕನಸೂ ಭಗ್ನ
ಅಲ್ಲಿ ಹಾರಿ ಹಿತ್ತಲಲಿ ಬಿದ್ದ ಬಟ್ಟೆ ನೆನೆವಂತೆ ಮಳೆಯಲಿ
ನೆಂದಿದೆ ಹರಿದ ಕಾಲು ನೆತ್ತರ ಧಾರೆಯಲಿ
ಕುಳಿತು ಮುರಿದ ಕನ್ನಡಿಯ ಮುಂದೆ
ಇವನ ಸಿಂಗಾರ
ಹರಿದ ಪ್ರೇಮಕೆ ದೊರೆತ ಕೊನೆಯ ಉಡುಗೊರೆ ಹಗ್ಗ
ಬರಿ ಕನಸು ಮಾತ್ರವಲ್ಲ ಇಲ್ಲಿ ಕಾಲವೂ ಸ್ತಬ್ಧ ಅಲ್ಲಿ ಹೆಕ್ಕುವವರಿಲ್ಲದೆ ಹರಡಿ ಬಿದ್ದ ನೇರಳೆಯ ಬಣ್ಣದಿ
ಇಲ್ಲಿ ನೇತಾಡಿದ ಕತ್ತ ಹಗ್ಗದ ಮೇಲೆ
ಇವನ ಇಹ ಪರದ ಜೋಕಾಲಿ
ಸೋತ ಪರೀಕ್ಷೆಗೆ ಉತ್ತರಿಸಿದ ಬಾವಿ
ಬರಿ ಕಾಲ ಮಾತ್ರವಲ್ಲ ಇಲ್ಲಿ ಬದುಕೂ ಬಲಿ
ಅಲ್ಲಿ ಕಟ್ಟಿಟ್ಟ ಮೂಟೆಯ ನೀರಿಗೆ ಎಸೆದಂತೆ
ಇಲ್ಲಿ ನಿಶ್ಚಲತೆಯ ಮೇಲೆ
ಇವನ ಅನವರತ ತೇಲಾಟ
ಈ ‘ಇವನ’ ಧಿಮಾಕಿಗೇನು ಹೇಳಲಿ
ವಿಶಿಷ್ಟ, ದ್ವೈತ, ಅದ್ವೈತಗಳಲಿ
ಸಾಕ್ಷಾತ್ಕಾರ, ತೃಪ್ತ, ಅತೃಪ್ತಗಳಲಿ ಅನುಸಂಧಾನಗಳ ಚರ್ಚೆಗಳಲಿ
ನನ್ನ ಮುಳುಗಿಸಿ ತಾ ನಿಸೂರಾದವನಿಗೇನ ಹೇಳಲಿ?
ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..