ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿ ಸಮಯ – ಶಾಂತಾ ಶಾಸ್ತ್ರಿ

ಶಾಂತಾ ಶಾಸ್ತ್ರಿ
ಇತ್ತೀಚಿನ ಬರಹಗಳು: ಶಾಂತಾ ಶಾಸ್ತ್ರಿ (ಎಲ್ಲವನ್ನು ಓದಿ)

ವಿವಶ

ಹೇ ಸೃಷ್ಟಿ ಕರ್ತನೇ
ಜಗತ್ ನಿಯಾಮಕನೇ
ಇನ್ನೆಷ್ಟು ಜನ್ಮಗಳ
ನೀ ನೀಡಲಿರುವೆ
ಯಾರಿಗೊಬ್ಬರಿಗೆ ಮೋಕ್ಷ
ಕರುಣಿಸು ಪ್ರಭುವೆ.
ಅಂದು ಸೀತೆಯ ಹರಣ
ದ್ರೌಪದಿಯ ವಸ್ತ್ರಾಪಹರಣ
ಇಂದು ಮಾನಿನಿಯರ
ಶೀಲವೇ ಹರಣ
ಕಣ್ಣೆದುರೇ ಮರಣ
ಸಜೀವ ದಹನ.
ಶಾಪದಲಿ ಭಕ್ತರನಂದು
ರಕ್ಕಸರ ಮಾಡಿದೆ
ಕಾಲಮಿತಿಯಲ್ಲಿ ಬಂದು
ಮುಕ್ತಿಯನು ನೀಡಿದೆ
ಸೋದರಿಯರ ಕೂಗು
ಇಂದು ಕೇಳಿಸದೆ
ಕುರುಡನಂತೆ ಏಕಿರುವೆ
ರಕ್ಷಣೆಗೆ ಬಾರದೆ.
ಗುಡಿ, ಚರ್ಚು,ಮಸೀದಿಗಳಲಿ
ನೀ ಕಾಣದಿರುವೆ
ಮನೆಯ ಮನಮಂದಿರಕೆ
ಬರಲು ಮರೆಮಾಚಿರುವೆ
ಹೆಣ್ಣುಗಳ ಧರೆಯ
ನಡೆಗೆ ಅರ್ಪಿಸುತಿರುವೆ
ದುಷ್ಟ ಜನರನು ಏಕೆ
ಜಗಕೆ ಕಳುಹಿಸುತಿರುವೆ

ವಸುಂಧರೆ

Hand drawn daisy patterned background vector

ಹಸಿರೇ ನೀನೆ ಜಗಕೆ ಉಸಿರೆ
ಮಾಯಾ ಲೋಕದ ಶೃಂಗಾರೆ
ನೀ ಹೀಗೆ ಮೌನವಾದರೆ
ನಿನ್ನ ರಕ್ಷಣೆಗಾರು ಬಂದಾರೆ!

ಅಲುಗಿಸಿ ನಲುಗಿಸಿ ನೋಡುವರೆ
ಪುಕ್ಕಲಾದರೆ ಅಗಿಯುವರೆ
‘ಬೆತ್ತವಾಗಿ’ ನೀನು ಬಡಿದರೆ
ಕಾಲಿಗೆ ಬುದ್ಧಿ ಹೇಳುವರೆ!

ಸಂಘರ್ಷಿಸಿ ಕರ್ಷಿಸಿ ನೋಡುವರೆ
ಶ್ರೀಗಂಧವಾದರೆ ತೇಯುವರೆ
‘ಅನಲಾಗಿ’ ನೀನು ಹೊತ್ತಿದರೆ
ಸುಟ್ಟು ಬೂದಿಯಾಗುವರೆ!

ಮಮತೆಯ ಮಡಿಲಿಗೆ ನೀ ಮಧುರೆ
ಬಾಳಯಾನಕೆ ನೀ ಚತುರೆ
ಮಾನಾಭಿಮಾನಕೆ ನೀ ಶೂರವೀರೆ
ನೀನಲ್ಲವೇ ನಮ್ಮ ವಸುಂಧರೆ!