ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತೇಜಾವತಿ ಹೆಚ್. ಡಿ. (ಖುಷಿ)
ಇತ್ತೀಚಿನ ಬರಹಗಳು: ತೇಜಾವತಿ ಹೆಚ್. ಡಿ. (ಖುಷಿ) (ಎಲ್ಲವನ್ನು ಓದಿ)

ಭಾರತ ಮಾತೆಯ ಮಡಿಲಲ್ಲಿ ತ್ರಿವರ್ಣಗುಡಿ ರಾರಾಜಿಸಿದೆ ವೀರ
ಗಡಿಯಾಚೆಗೂ ಶಾಂತಿ ಪ್ರೇಮದ ಬಣ್ಣಗಳ ಮಳೆಗರೆದಿದೆ ವೀರ

ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ ಗಡಿಯ ಚಾಚಿದೆ
ಅಡಿಯಿಂದ ಮುಡಿಯವರೆಗೂ ವಿವಿಧತೆಯಲಿ ಏಕತೆಯಿದೆ ವೀರ

ದೀಪಾವಳಿ ಕ್ರಿಸ್ಮಸ್ ಮೊಹರಂ ಸಮನ್ವಯದ ಬೆಳಕು ಹರಿಸಿವೆ
ಭ್ರಾತೃತ್ವದ ತೋಟದಲ್ಲಿ ಪರಿಮಳದ ಹೂವು ಅರಳಿದೆ ವೀರ

ಶಾಸನ ವೀರಗಲ್ಲು ಮಾಸ್ತಿಗಲ್ಲುಗಳು ಹೆಜ್ಜೆಹೆಜ್ಜೆಗೂ ತೊಡರುತ್ತಿವೆ ಇಲ್ಲಿ
ಪ್ರತಿಯೊಂದರಲ್ಲೂ ತ್ಯಾಗ ಬಲಿದಾನಗಳ ನೆತ್ತರಿನ ಕತೆಯಿದೆ ವೀರ

ತನುಮನದ ನರನಾಡಿಯಲ್ಲೂ ದೇಶಭಕ್ತಿಯ ಮಿಂಚು ಸಂಚರಿಸಿದೆ
‘ತೇಜ’ಳ ಎದೆಯ ಗೂಡಿನಲ್ಲಿ ಭಾರತೀಯಳೆಂಬ ದೀಪ ಬೆಳಗಿದೆ ವೀರ