ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಸೋಕಬೇಕು ಅವನಂತೆ
ಕಲ್ಲೆದೆ ಹೆಣ್ಣಾಗುವಂತೆ

ಸೋಕಬೇಕು ಅವನಂತೆ
ಕಡಲು ಹಿಮ್ಮೆಟ್ಟುವಂತೆ

ಸೋಕಬೇಕು ಅವನಂತೆ
ಬಿದಿರು ಕೊಳಲಾಗುವಂತೆ

ಸೋಕಬೇಕು ಅವನಂತೆ
ರಜರಜವು ಅರಳುವಂತೆ

ಸೋಕಬೇಕು ಅವನಂತೆ
ವಕ್ರತೆಯು ಅಳಿಯುವಂತೆ

ಸೋಕಬೇಕು ಅವನಂತೆ
ರಕ್ತಿಗೇ ಮೈ ಬಂದಂತೆ

ಸೋಕಬೇಕು ಅವನಂತೆ
ಕತ್ತಲೆಗೂ ಕಣ್ಣು ಬರುವಂತೆ

ಸೋಕಬೇಕು ಅವನಂತೆ
ಮೌನ ಬೆಳಕಾಗುವಂತೆ

ಸೋಕಬೇಕು ಅವನಂತೆ
ರೂಹು ಕಳೆದ ಬಯಲಂತೆ

ಸೋಕಬೇಕು ಅವನಂತೆ
ನಾ ಅಳಿದು ಅವನಾಗುವಂತೆ