ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)
- ಮುಂದುವರೆಯುವುದು ಮತ್ತು ಉದ್ದಾರ ಎನ್ನುವ ಎರಡು ಕವಿತೆಗಳು - ಆಗಸ್ಟ್ 2, 2026
- ಒದ್ದೆ ಹಕ್ಕಿಯ ಹಾಡು ಮತ್ತು ಇತರ ಕವಿತೆಗಳು - ಸೆಪ್ಟೆಂಬರ್ 11, 2025
- ಹುಣ್ಣಿಮೆ ರಾತ್ರಿ ದೇವರಾಡುವನು - ಜನವರಿ 1, 2025
ಮನೆಯೊಳಗೆ ಮನೆಯೊಡೆಯರಿಲ್ಲ
ಏನೂ ಹೇಳುವ ಹಾಗೂ ಇಲ್ಲ!
ತೊಟ್ಟಿಯಲಿ ತಟ್ಟೆಗಳು ಬುಟ್ಟಿಯಲಿ ಹಸಿಕಸ
ಬಿಂಜಲು ತಲೆಯ ಸವರುವುದು
ಇಡೀ ವಾರದ ಬಟ್ಟೆ ತೊಳೆಯದೆ ಬಿದ್ದಿದೆ
ವಾಸನೆಯೆ ಎಲ್ಲ ಹೇಳುವುದು
ಗಂಡಹೆಂಡಿರು ಬೇಗ ಎದ್ದು ಹೊರಡುವರು
ಬರುವಾಗ ಸಂಜೆಯಾಗುವುದು
ರಜೆಗಳಲಿ ಸುತ್ತಾಡಿ ಬರುವರಲ್ಲಿಲ್ಲಿ
ವರುಷಗಳು ಕಳೆದುಹೋಗುವವು
ಕಷ್ಟಗಳ ನಡುವೆಯೇ ಇಷ್ಟಾರ್ಥ ಆಗಾಗ
ಫಲಿಸಿತ್ತು ಬಡಬಾಳಿನಲ್ಲಿ
ಮನೆ ಹೊರಗೆ ದುಡಿದದ್ದು ಮನೆ ಕಟ್ಟಲೆಂದು
ಕನಸು ಅರಳಿತು ಕೆಸರಿನಲ್ಲಿ
ಹುಟ್ಟಿ ಬೆಳೆದರು ಮಕ್ಕಳಿಕ್ಕಟ್ಟಿನಲ್ಲೆ
ಇಂದವರು ದೇಶದಲ್ಲಿಲ್ಲ
ಹಿರಿಯ ದಂಪತಿ ನಕ್ಕು ಹೇಳುವರು – ಈಗಲೂ
ಮನೆಯೊಳಗೆ ಮನೆಯೊಡೆಯರಿಲ್ಲ!




ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..