ಇತ್ತೀಚಿನ ಬರಹಗಳು: ರಾಧಿಕಾ ನಡಹಳ್ಳಿ (ಎಲ್ಲವನ್ನು ಓದಿ)
- ವಿಶ್ವ ವಿಸ್ಮಯ - ಅಕ್ಟೋಬರ್ 25, 2022
ಎಲ್ಲದರ ನಡುವೆಯೂ
ಹೇಗಿಷ್ಟು ತಿಳಿಯಾಗಿರುವಿ
ಎಂಬ ಸೋಜಿಗದಲ್ಲಿ
ಶುರುವಾದದ್ದು
ಈಗ ದೈನಿಕ ಎಂದರೆ
ಅದು ಬರಿಮಾತಲ್ಲ
ಕನವರಿಕೆಯ ಕತ್ತಲು ಕಳೆದು
ಆವರಣದಾಚೆ ಅರಿವ
ಹೊತ್ತು
ಈಗ ಬೆಳಗಿರುಳೂ ಹೊಳಪು
ಕಂಡಷ್ಟೂ
ತೀರದ ಬೆರಗು
ಕಾದಿದ್ದು
ಹೀಗೆ
ಜತೆಯಾಗಲೆಂದೇ
ಹೊತ್ತು ಹೊತ್ತಿಗೂ ಹಿಗ್ಗುವ
ನಿನ್ನ ಹೊತ್ತು ಸಾಗುವುದು
ಯಾವ ಹುರುಪಿನ
ಹಂಬಲದ ಫಲವೋ
ಕೌತುಕ ಕ್ಷಣ
ಜೀವ ತಳೆದು
ಕಣ್ತೆರೆದಾಗ
ಕನಸು-
ವಿಶ್ವ ವಿಸ್ಮಯ
ನಗುಮೊಗ್ಗೆ ಅರಳುವಾಗ
ಅಳುದನಿಯು ಕರೆಯುವಾಗ
ಪದವಿರದ ಹಾಡಿನಲಿ
ಲೆಕ್ಕವಿರದ ಭಾವ ಉಕ್ಕುವಾಗ
ಸುತ್ತ ನೆರೆದ ಮೇಳ ಸಶಬ್ದ
ಬೆಳಗಿರುಳೂ ಬೆರಗು ಬುಗ್ಗೆ ಚಿಮ್ಮುವಾಗ
ಬಾಕಿ ಮಾತು ಬರೀ ಗದ್ದಲ
ಈಗ ರೂಪುಗೊಳ್ಳುತಿರುವ
ಈ ದೈನಿಕ ದೈವಿಕ
ಹೆಚ್ಚಿನ ಬರಹಗಳಿಗಾಗಿ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..
ಕೂಡಿ ಹಾಕಿದ ಬೆಕ್ಕು ಮತ್ತು ಇನ್ನೊಂದು ಕವಿತೆ