- ಎಲ್ಲರ ಕಣ್ಣಿಗೆ ಮಾಯಾಗನ್ನಡಿ - ಜುಲೈ 23, 2020
- ಮಾಯಾಗನ್ನಡಿ-ವಿಡಿಯೊ - ಜುಲೈ 24, 2020
- ನಂಬರ್ ಸೇವ್ ಮಾಡದೆ ವಾಟ್ಸಾಪ್ ಮಾಡುವುದು ಹೇಗೆ? - ಮೇ 26, 2020
ಸಂದರ್ಭ 1: ವಾಟ್ಸಾಪ್ ಬಳಸುವ ಪ್ರತಿಯೊಬ್ಬರನ್ನೂ ಕಾಡುವ ಸಮಸ್ಯೆಯಿದು. ಇದ್ದಕ್ಕಿದ್ದಾಗೆ ಎದುರಾಗುವ ಅಪರಿಚಿತರು ನಮ್ಮ ವಿಳಾಸ ಇಲ್ಲವೇ ಮೊಬೈಲ್ ನಂಬರ್ ಕೇಳಬಹುದು. ಬರೆದುಕೊಳ್ಳಿ ಎಂದು ಹೇಳಿದರೆ ನಯವಾಗಿ ದಯವಿಟ್ಟು ವಾಟ್ಸ್ಆಪ್ ಮಾಡಿ ಎಂದು ಮನವಿ ಮಾಡುತ್ತಾರೆ. ಅದನ್ನು ಧಿಕ್ಕರಿಸಿ ಇಲ್ಲ ಬರೆದುಕೊಳ್ಳಿ ಎಂದು ಹೇಳುವ ದಾರ್ಷ್ಯ್ಟ ತೋರಿಸುವುದು ಉಚಿತವಲ್ಲ.
ಸಂದರ್ಭ 2: ಇನ್ನು ಆಲ್ಲೈನ್ ಸೇವೆಗಳನ್ನು ಬಹುತೇಕ ನಾವೆಲ್ಲರೂ ಬಳಸುತ್ತೇವೆ ಆದ್ದರಿಂದ ಡೆಲಿವರಿ ಬಾಯ್ಗಳು ನಮ್ಮ ಮನೆ ಬಾಗಿಲು ಬಡಿಯುವುದೂ ಸಾಮಾನ್ಯ. ಆನ್ಲೈನ್ ಬುಕಿಂಗ್ ವೇಳೆ ನಿಮ್ಮ ವಿಳಾಸವನ್ನು ನೀಡಿದ್ದರು ಡೆಲಿವರಿ ಬಾಯ್ಗಳು ನಿಮಗೆ ಕರೆ ಮಾಡಿ ನಿಮ್ಮ ಲೊಕೇಶನ್ ಶೇರ್ ಮಾಡಿ ಎಂದು ಮನವಿ ಮಾಡುವುದು ಸಹಜ. ಆಗಲೂ ಅವರಿಗೆ ವಿಳಾಸವಿದೆಯಲ್ಲ ನೋಡಿಕೊಂಡು ಬನ್ನಿ ಎಂದು ಅಹಂ ತೋರಿಸುವುದು ಸಭ್ಯತೆಯಲ್ಲ. ಆಗ ಬೇರೆ ದಾರಿಯಿಲ್ಲದೆ ಅವರ ನಂಬರ್ ಪಡೆದು ಸೇವ್ ಮಾಡಿಕೊಂಡು ನಮ್ಮ ಲೊಕೇಶನ್ ಶೇರ್ ಮಾಡುತ್ತೇವೆ.
ಸಂದರ್ಭ 3: ಪರಿಚಿತರು, ಸ್ನೇಹಿತರು, ಸಹೋದ್ಯೋಗಿಗಳು, ಸಂಬಂಧಿಗಳು ಇವರೆಲ್ಲ ಆಗಾಗ್ಗೆ ನಂಬರ್ಗಳನ್ನು ಬದಲಾಯಿಸುವುದು ಸರ್ವೇ ಸಹಜ. ಇಷ್ಟು ಸಾಲದೆಂಬಂತೆ ಹಳೆಯ ನಂಬರ್ಗಳ ಜತೆಗೆ ಹೊಸ ನಂಬರ್ಗಳನ್ನುಸೇರಿಸಿಕೊಳ್ಳುವುದೂ ಹೊಸದಲ್ಲ. ನಮ್ಮಲ್ಲಿ ಅವರ ಹಳೆಯ ನಂಬರ್ ಇರುತ್ತದೆ. ಆದರೆ ಅವರು ಮಾತ್ರ ಅವರ ಹೊಸ ನಂಬರ್ಗೆ ಏನನ್ನೋ ವಾಟ್ಸ್ಆಪ್ ಮಾಡುವಂತೆ ಕೇಳಬಹುದು. ಆಗ ಅನಿವಾರ್ಯವಾಗಿ ಹೊಸ ನಂಬರ್ಗಳನ್ನೆಲ್ಲ ಸೇವ್ ಮಾಡಿಕೊಳ್ಳಬೇಕಾಗುತ್ತದೆ.
ಇಂತಹ ಬಹುತೇಕ ಸಂದರ್ಭಗಳಲ್ಲಿ ತಾತ್ಕಾಲಿಕ ಕಾರಣಕ್ಕಾಗಿ ಹೊಸ ಮೊಬೈಲ್ ನಂಬರ್ಗಳನ್ನು ಸೇವೆ ಮಾಡಿಕೊಳ್ಳುತ್ತೇವೆ. ಆದರೆ, ಅದನ್ನು ತಕ್ಷಣವೇ ಡಿಲೀಟ್ ಮಾಡುವುದನ್ನು ಮರೆತುಬಿಡುತ್ತೇವೆ. ಹೀಗಾಗಿ ಅಪರಿಚಿತರ ಇಲ್ಲವೇ ಅನಗತ್ಯ ನಂಬರ್ಗಳೆಲ್ಲ ನಮ್ಮ ಮೊಬೈಲ್ನಲ್ಲಿ ಉಳಿದುಬಿಡುತ್ತವೆ. ಇದು ತುಂಬಾ ದೊಡ್ಡ ಸಮಸ್ಯೆ ಎಂದೇನೂ ಅಲ್ಲ. ಆದರೆ, ಅನಗತ್ಯ ಅಷ್ಟೆ. ಹೀಗಾಗಿ ನಮ್ಮ ಮೊಬೈಲ್ಗಳಲ್ಲಿ ಪರಿಚಿತರಿಗಿಂತ ಅಪರಿಚಿತರ ನಂಬರ್ಗಳೇ ಹೆಚ್ಚಾಗಿ ಕಂಡುಬರುತ್ತವೆ. ಇದನ್ನು ತಪ್ಪಿಸಲು ಒಂದು ಸುಲಭದ ಹಾದಿ ಇದೆ.
ಯಾವುದೇ ಮೊಬೈಲ್ ನಂಬರ್ ಸೇವ್ ಮಾಡಿಕೊಳ್ಳದೆ ತಕ್ಷಣ ವಾಟ್ಸಪ್ ಮಾಡಲು ಸಾಧ್ಯ. ಅದು ಹೇಗೆ ಎನ್ನುವುದನ್ನು ವಿಡಿಯೊದಲ್ಲಿ ವಿವರಿಸಿದ್ದೇನೆ. ದಯವಿಟ್ಟು ವಿಡಿಯೋ ನೋಡಿ, TechtalkwithRamesh ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಶೇರ್ ಮಾಡಿ ಬೆಂಬಲಿಸಿ.
ಹೆಚ್ಚಿನ ಬರಹಗಳಿಗಾಗಿ
ಸಿಂಪಲ್ಲಾಗಿ ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ
ಮಂಗಳನ ಅಂಗಳದಲ್ಲಿ ಪರ್ಸಿವರೆನ್ಸ್!
ಮಾತೃಭಾಷೆ ಮತ್ತು ಶಿಕ್ಷಣ