ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಫಕೀರ​

ಫಕೀರ' ಎಂಬ ಅಂಕಿತದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶ್ರೀಧರ ಬನವಾಸಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯವರು. `ಅಮ್ಮನ ಆಟೋಗ್ರಾಫ್', `ದೇವರ ಜೋಳಿಗೆ', `ಬ್ರಿಟಿಷ್ ಬಂಗ್ಲೆ' ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕತೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. `ತಿಗರಿಯ ಹೂಗಳು’, `ಬಿತ್ತಿದ ಬೆಂಕಿ’ ಇವು ಇವರ ಕವನ ಸಂಕಲನಗಳು. ೨೦೧೭ರಲ್ಲಿ ಪ್ರಕಟಗೊಂಡ ಇವರ `ಬೇರು' ಕಾದಂಬರಿಯು ಆ ವರ್ಷದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದ್ದು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ `ಯುವ ಪುರಸ್ಕಾರ', ಕರ್ನಾಟಕ ಸಾಹಿತ್ಯ ಅಕಾಡೆಮಿಯ `ಚದುರಂಗ' ದತ್ತಿನಿಧಿ, `ಕುವೆಂಪು’ ಪ್ರಶಸ್ತಿ, ಶಾ ಬಾಲುರಾವ್ ಹಾಗೂ ಬಸವರಾಜ ಕಟ್ಟಿಮನಿ ಯುವ ಬರಹಗಾರ ಪ್ರಶಸ್ತಿ ಸೇರಿದಂತೆ ಸುಮಾರು ೯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಒಂದು ವಿಶೇಷ ಮತ್ತು ದಾಖಲೆಯೆಂದು ಗುರುತಿಸಲ್ಪಟ್ಟಿದೆ. ತಮಿಳಿನ ‘ಇನಿಯ ನಂದನವನಂ’ ಪತ್ರಿಕೆಯು ಇವರಿಗೆ ಕರುನಾಡ ಸಾಹಿತ್ಯ ಚಿಂತಾಮಣಿ ಪ್ರಶಸ್ತಿ ನೀಡಿ ಗೌರವಿಸಿದೆ. ಕಥೆ, ಕಾವ್ಯ, ಕಾದಂಬರಿ, ನಾಟಕ ಮತ್ತು ಸಂಪಾದನೆ ಸೇರಿದಂತೆ ಇದುವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ.

ಉಸಿರಾಡುತ್ತಿವೆ ಹಲವು ಪಾತ್ರಗಳುಭಾವನೆ ಕಲ್ಪನೆಗಳ ರೆಕ್ಕೆಪುಕ್ಕಗಳೊಂದಿಗೆಹಾರುತ್ತಿವೆ ದಿಗಂತದಾಚೆಯ ಕನಸಿನ ಮನೆಗೋಮಿನುಗುತ್ತಿವೆ ಕಣ್ಣುಮುಚ್ಚಿ ತೆರೆಯುವುದರೊಳಗೆನಿಲುಕದ ನಕ್ಷತ್ರಲೋಕದಂತೆಕೃತಿಯ ಜೀವಂತಿಕೆಗೆ ಇಷ್ಟು ಮಾತ್ರ ಸಾಕು!…

ಪ್ರಸ್ತುತ ವರ್ತಮಾನ, ಪರಮಾತ್ಮನ ಅನಂತ ಅಖಂಡ ಇರುವಿಕೆಯ ಮೇಲ್ಮೈಯಾಗಿದೆ. ನಾನಿದ್ದೇನೆ ಎಂಬ ಅರಿವು (ಜ್ಞಾನ) ವರ್ತಮಾನದ ಮೂಲಕ ಪ್ರತಿಯೊಬ್ಬರಲ್ಲಿ ನಿತ್ಯ…