ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಿರಿಧರ ಕಾರ್ಕಳ

ರಂಗಕರ್ಮಿ,ಕವಿ ,ಲೇಖಕ, ಚಿತ್ರಕಾರ, ವಿಮರ್ಶಕ, ಸಂಘಟಕ. ಹೀಗೆ ಬಹುಮುಖ ಪ್ರತಿಭೆಯ ಬೆಂಗಳೂರಿನಲ್ಲಿರುವ ಗಿರಿಧರ ಕಾರ್ಕಳ ಅವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇದರ ಹಲವು ಶಾಖೆಗಳಲ್ಲಿ ಅಧಿಕಾರಿಯಾಗಿ, ಪ್ರಬಂಧಕರಾಗಿ ಇದೀಗ ಸೇವಾ ನಿವೃತ್ತರು. ಬ್ಯಾಂಕ್ ನ ಕನ್ನಡ ಬಳಗದ ಆಡಳಿತ ಸಮಿತಿಯಲ್ಲಿದ್ದು'ಸೌಹಾರ್ದ' ಪತ್ರಿಕೆಯ ಸಂಪಾದಕರಾಗಿಯೂ ,ತೊಂಭತ್ತರ ದಶಕದಲ್ಲಿ ಆರು ವರ್ಷಗಳ ಕಾಲ ಮುಂಬಯಿಯಲ್ಲಿದ್ದಾಗ ಕರ್ನಾಟಕ ಸಂಘ ಮುಂಬಯಿ ಇದರ ಆಡಳಿತ ಸಮಿತಿಯಲ್ಲಿದ್ದು 'ಸ್ನೇಹ ಸಂಬಂಧ' ಮಾಸಿಕದ ಸಂಪಾದಕರೂ ಆಗಿದ್ದರು. ಮುಂಬಯಿವಾಣಿ ಯುಗಾದಿ ಸಂಚಿಕೆ ,ದೀಪಾವಳಿ ಸಂಚಿಕೆಯ ಸಂಪಾದಕರಾಗಿ ಕೂಡ ಕೆಲಸ ಮಾಡಿದ್ದಾರೆ.'ಅಲೆಮಾರಿ' ಅವರ ಕಾವ್ಯನಾಮ. ಯಶವಂತ ಚಿತ್ತಾಲರ ಸಹಿತ ಅನೇಕರ ಕೃತಿಗಳಿಗೆ ಮುಖಪುಟ ರಚಿಸಿ ಕೊಟ್ಟಿದ್ದಾರೆ.ಖ್ಯಾತ ರಂಗನಿರ್ದೇಶಕ ಬಿವಿ ಕಾರಂತ, ಪ್ರಸನ್ನ, ಸದಾನಂದ ಸುವರ್ಣ, ಸುರೇಶ ಆನಗಳ್ಳಿ...ಮೊದಲಾದವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

1976 ರಲ್ಲಿ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾದ”ಶಬ್ಧಗಳು” ಕಾದಂಬರಿ, ಓದುಗ ವಲಯದಲ್ಲಿ ಸಂಚಲನ ಉಂಟು ಮಾಡಿದ್ದಾಗ ನಾನು ಆಗಷ್ಟೇ ಕಾಲೇಜಿಗೆ ಕಾಲಿಟ್ಟಿದ್ದೆ….