ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಜನಿ ಗರುಡ

ಶ್ರೀಮತಿ ರಜನಿ ಗರುಡ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪುಟ್ಟಹಳ್ಳಿ ಕೆರೇಕೈಯವರು. ನಿನಾಸಮ್ ನಲ್ಲಿ ರಂಗಶಿಕ್ಷಣ ಮುಗಿಸಿ ತಿರುಗಾಟದಲ್ಲಿ ರೆಪರ್ಟರಿ ಕಂಪನಿಯಲ್ಲಿ ಮುಖ್ಯನಟಿಯಾಗಿದ್ದರು. ಶಿವಮೊಗ್ಗಾ ಜಿಲ್ಲೆಯಲ್ಲಿ UNICEF ನಡೆಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಂಸ್ಕೃತಿಕ ಶಿಕ್ಷಣದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಧಾರವಾಡದಲ್ಲಿ ನೆಲೆಸಿ “ ಬಾಲಬಳಗ ಸೃಜನಶೀಲಶಿಕ್ಷಣ “ ಎನ್ನವ ಪರ್ಯಾಯ ಶಿಕ್ಷಣಶಾಲೆಯನ್ನು ಪ್ರಾರಂಭಿಸಿ “ ಥೇಟರ್ ಫಾರ್ ಎಜ್ಯುಕೇಶನ್ “ ಕಾರ್ಯಕ್ರಮವನ್ನು ರೂಪಿಸಿದರು. ಸಮಕಾಲೀನ ಪ್ರೇಕ್ಷಕರಿಗಾಗಿ ಪಾರಂಪರಿಕ ತೊಗಲುಗೊಂಬೆಯಾಟವನ್ನು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ನ ಸಹಯೋಗದಲ್ಲಿ ಅದರ ಕಲಾತ್ಮಕ ಅಭಿವೃದ್ಧಿಯ ಕುರಿತು ಕೆಲಸ ಮಾಡಿದ್ದಾರೆ. ಅಭಿನಯಿಸಿದ ನಾಟಕಗಳು – ಚೆರಿಹಣ್ಣಿನ ತೋಟ, ದಿ ಬಂಡಲ್, ತುಘಲಕ್, ಗುಡ ವುಮನ್ ಆಫ್ ಸೇಜುವಾನ್, ಸಾಹೇಬರು ಬರುತ್ತಾರೆ, ಧಾಂ ಧೂಂ ಸುಂಟರಗಾಳಿ, ಹ್ಯಾಮ್ಲೇಟ್, ಒಥೆಲೋ, ಈಡಿಪಸ್, ಬೆತ್ತಲೆವೇಷ, ಜಡಭರತನ ಕನಸುಗಳು, ಅಂಜುಮಲ್ಲಿಗೆ, ವಿಷಮ ವಿವಾಹ, ಸ್ವಪ್ನದರ್ಶನ ಇತ್ಯಾದಿ ನಿರ್ದೇಶಿಸಿದ ನಾಟಕಗಳು – ಪುಷ್ಪರಾಣಿ, ಗುಲ್ಪುಟ್ಟಿ- ಮುನ್ಪುಟ್ಟಿ, ಬೆಟ್ಟಪ್ಪನ ಕನಸು, ಬೆಪ್ಪುತಕ್ಕಡಿ ಬೋಳೆಶಂಕರ, ಹಕ್ಕಿಹಾಡು, ಬುದ್ಧಹೇಳಿದ ಕಥೆ, ಕಪ್ಪುಕಾಗೆಯ ಹಾಡು, ಅಗ್ನಿವರ್ಣ, ಮೈಸೂರು ಮಲ್ಲಿ ಇತ್ಯಾದಿ ಕೆಂಪು ಹೂ, ಅಂಗುಲಹುಳುವಿನ ಪರಕಾಯ ಪ್ರವೇಶ, ಅಂಚೆಮನೆ ಮುಂತಾದ ಗೊಂಬೆಯಾಟಗಳನ್ನು ನಿರ್ದೇಶಿಸಿದ್ದಾರೆ. ಹಲವಾರು ಡಾಕ್ಯುಮೆಂಟ್ರಿ ಫಿಲ್ಮಗಳಲ್ಲಿ ಅಭಿನಯಿಸಿದ್ದಾರೆ.

“ಓಂ ಭೂರ್ಭುವಃ ಸ್ವಃ|| ತತ್ಸವಿತುವರೇಣ್ಯಂ|| ಭರ್ಗೋ…ಎಂದು ಮೂರು ಗಂಟೆ ಬೆಳಗಿನ ಜಾವದಲ್ಲಿ ನನ್ನ ಮಾವ ಶ್ರೀಪಾದ ರಾಯರು ಮಂತ್ರ ಪ್ರಾರಂಭಿಸಿದರೆಂದರೆ…

ಕನ್ನಡದ ಪ್ರಸಿದ್ಧ ಕವಿ ಕೆ.ವಿ. ತಿರುಮಲೇಶ್ ರೋಮನ್ ಇತಿಹಾಸಕ್ಕೆ ಸಂಬಂಧಪಟ್ಟ ಎರಡು ನಾಟಕ ಇತ್ತೀಚಿನ ವರ್ಷಗಳಲ್ಲಿ(2017) ಬರೆದಿದ್ದಾರೆ. ಅವರು ಕವಿ,…