ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಉರ್ದುವಿನ ಸುಪ್ರಸಿದ್ಧ ಕವಿ ರಾಹತ್ ಇಂದೋರಿಯವರ ಬಹಳ ವೈರಲ್ ಒಂದು ಕವಿತೆ ” ಬುಲಾತಿ ಹೈ, ಮಗರ್ ಜಾನೆ ಕಾ ನಹಿ…” ಇದನ್ನು ಉತ್ತರಕನ್ನಡ ಜಿಲ್ಲೆಯ, ಅಂಕೋಲೆ ತಾಲ್ಲೂಕಿನ ಒಂದು ಆಡು ಭಾಷೆಯಲ್ಲಿ ಅನುವಾದ ಮಾಡುವ ಒಂದು ಬಾಲಿಶ ಪ್ರಯತ್ನ. ಹೋಗುಕಾಗಾ ಅಂದರೆ ಹೋಗ ಕೂಡದು ಅಥವಾ ಹೋಗಬಾರದು ಎಂದರ್ಥ. ಹಾಗೆ, ನಿಲ್ಲುಕಾಗಾ ಅಂದರೆ ನಿಲ್ಲ ಕೂಡದು ಎಂದರ್ಥ.

ಒಂದು ಚೂರು ರೊಟ್ಟಿ ನೀಡಲು ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳು ಸಾಕೇ.? ಎಂದು ಪ್ರಶ್ನಿಸುವ ಲೇಖಕ ಅನಿಲ್ ಕುಮಾರ್ ಅವರು ಬರೆದ ಕೂಲಿ ಕಾರ್ಮಿಕನೊಬ್ಬನ ಸಾತ್ವಿಕ ಆಕ್ರೋಶದ ಸಾಲುಗಳು…!

ಸುಶಾಂತನಂತೆ ಎಷ್ಟೋ ನಟ-ನಟಿಯರು ಪ್ರಖ್ಯಾತಿಯ ಉತ್ತುಂಗ ಶಿಖರವನ್ನೇರಿ ಅಲ್ಲಿಯ ಶೂನ್ಯತೆಯನ್ನು ಅನುಭವಿಸಿ ಭ್ರಮನಿರಸನವಾಗುವ ಘಟನೆಗಳು ನೆಡೆದಾಗಲೆಲ್ಲ ಅಟಲ್ ಬಿಹಾರಿ ವಾಜಪೇಯಿಯವರ…

ಕಾಲ ಅನ್ನುವುದೂ ಎಂದೂ ಮುಗಿಯದ,ಆದಿ, ಅಂತ್ಯಗಳಿಲ್ಲದ
ವಿಸ್ಮಯದ ಪ್ರವಾಹ.. ದೀಪಕ್ ಮೇಟಿಯವರು ಬರೆದ ಈ ಚಿಕ್ಕ ಕವಿತೆಯಲ್ಲಿ ಸಾಕಷ್ಟು ಕಾಲ ಬೇಡುವ ಅರ್ಥ ಭರಿತ ಸಾಲುಗಳದೇ ದೊಡ್ಡ ದೊಡ್ಡ ಪಾಲುಗಳು..!

ಹಸಿ ಬಾಯಾರಿಕೆ ಎಲ್ಲ ತನಗಳನ್ನೂ ಬಿಟ್ಟಿರಲಾರದ ತುಡಿತ.. ಕೆಲವು ಬೇಕುಗಳ ತವಕ ಕೂಡ… ಇನ್ನಷ್ಟು ಅರ್ಥಗಳನ್ನು ಹುದುಗಿಸಿಕೊಂಡ ಶಶಿ ತರೀಕೆರೆಯವರ ಸಾಲುಗಳು ಮತ್ತೆ ಬಾಯಾರಿಕೆಯನ್ನು ಮೂಡಿಸುವಲ್ಲಿ ಸಫಲವಾಗುತ್ತದೆ.

ಕವಿತೆಗಳು ತನ್ನ ಪ್ರಾಮಾಣಿಕತೆಗಳನ್ನು ಕಳೆದುಕೊಂಡರೆ ಹೇಗೆ ಎನ್ನುವುದನ್ನು ಮಾರ್ಮಿಕವಾಗಿ ರುದ್ರೇಶ್ವರಸ್ವಾಮಿ ಅವರು ಈ ಕವಿತೆಯಲ್ಲಿ ವಸ್ತು ನಿಷ್ಠವಾಗಿ ಬರೆಯುತ್ತಾರೆ…

‘ಬರೀ ಬೇರು ಸಾಲದೆಂದೇ ಜಂಗಮನಾದೆ’ ಎಂದು ಬರೆಯುವ ಡಾ.ಗೋವಿಂದ್ ಹೆಗಡೆಯವರು ಈ ಘಜ಼ಲ್ ನಲ್ಲಿ ಜಂಗಮ ನಾಗುವ ಹಲವು ವಿಧ್ಯಮಾನಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.

“…ನೆನಪಿಸಿಕೊ ಅದೆಷ್ಟು ಸಂಜೆಗಳ ಏಕಾಂತಗಳನ್ನು ಹಂಚಿಕೊಂಡಿದ್ದೆವು!…” ಎನ್ನುತ್ತಾ ಲೇಖಕ ಮಧುಸೂಧನ್ ಅವರು ಏನೆಲ್ಲಾ ರಿಟರ್ನ್ ಮಾಡುವ ಬಗ್ಗೆ ಬರೆಯುತ್ತಾರೆ..ಯಾಕೆ? ನಿಟ್ಟುಸಿರು ತುಂಬಿದ ಈ ಕವಿತೆ ಓದುಗರ ಅವಗಾಹನೆಗೆ..

“ನಗೆಯ ಒಲುಮೆಯ ನಾಚಿಕೆಯ ಉನ್ಮಾದದ ಸಂಚಲನದ ಉದ್ರೇಕ ಪಿಸುಮಾತು ನೀನು!…” ಎಂದು ಬರೆಯುವ ಜಬಿ ಅವರ ಈ ಘಜ಼ಲ್, ಶಬ್ದಗಳು ಮತ್ತು ಕಲ್ಪನೆಗಳ ಜುಗಲ್ ಬಂದಿ ಯಲ್ಲಿ ಮಿಂದು ಮುದಕೊಡುತ್ತವೆ.

“…ನನ್ನ ಪ್ರೀತಿಯ ಮಳೆ ತೊಟ್ಟಿಕ್ಕತೊಡಗಿದೆ-ಎಷ್ಟು ಅದುಮಿಟ್ಟುಕೊಂಡರೂ ಗಾಳಿಯ ಕಣ್ಣುಗಳಿಂದ…” ಎಂದು ಬರೆಯುವ ಕವಿ ಕಾಜೂರು ಸತೀಶ್ ಅವರು ಹೂವಿನ ಕಣ್ಣುಗಳಿಂದ ನೋಡ ಬಯಸಿದ್ದೇನು..? ಓದಿ…!

ಕರಿ ಕುರುಳಿನ ಕೊರಳೊಳಗೆ
ಕಾರ್ಮೋಡಗಳ ಧ್ವನಿ ಮೊಳಗೆ
ಮೊಲ್ಲೆ ಮೊಗ್ಗುಗಳುದುರಿ ಬಿದ್ದವಾಗೆ !!
– ಎಂದು ಕ್ಲಾಸ್ಸಿಕ್ ಆದ ಒಲುಮೆಯ ಕವಿತೆ ವಾಚಿಸಿದವರು ಲೇಖಕಿ ಶ್ರೀಮತಿ ಶಾಂತಾ ಶಾಸ್ತ್ರಿ ಅವರು..!