ಇತ್ತೀಚಿನ ಬರಹಗಳು: ವಿದ್ಯಾ ಭರತನಹಳ್ಳಿ (ಎಲ್ಲವನ್ನು ಓದಿ)
- ನುಡಿನಮನ ಸಂಚಿಕೆ ಸಂಪಾದಕರ ಮಾತು - ಫೆಬ್ರುವರಿ 26, 2024
- ನಕ್ಷತ್ರ ಮಾರ್ಗ - ಅಕ್ಟೋಬರ್ 23, 2022
- ನೀವಿದನ್ನೆಲ್ಲ ಮಾಡಿದರೆ….. - ಏಪ್ರಿಲ್ 18, 2021
ಆಗಸದಲ್ಲಿ ರಾತ್ರಿ ಕಂಡ
ನಕ್ಷತ್ರಗಳೆಲ್ಲ ಹಗಲು
ಮನೆಯ ಹಜಾರದಲ್ಲಿ
ಕೋಣೆಯಲ್ಲಿ ಓಡಾಡುತ್ತ
ಆಡುತ್ತ ಹಾಡುತ್ತ ಮಲಗಿ
ಎದ್ದು ನಗುವ ಬೆಳಕಿನಂತೆ.
ಬಣ್ಣ ಸುರಿದು ಬಿಡಿಸಿದ
ಚಂದ್ರನ ತಂಪಿನಂತೆ
ಮುಗಿಲೆಡೆಗೆ ನೋಡುವ ನಗೆಯಂತೆ
ಮೌನ ಎಬ್ಬಿಸಲು ಬಂದ
ಮಾತಿನಂತೆ
ಮಾತಿಗೆ ಜೊತೆಯಾಗುವ ಪ್ರೀತಿಯಂತೆ
ಮರಳಿನಲ್ಲಿ ಕೈ ಇಟ್ಟು
ತುಂಬಿ ತುಂಬಿ ಕಟ್ಟಿ
ಬಿದ್ದುಹೋದ ಕನಸಿಗೆ
ಜೀವ ತುಂಬಿದಂತೆ
ಸಣ್ಣ ಬಿರುಕೂ ಬಿಡದಂತೆ
ಕಟ್ಟಿದ ಮನೆಯಂತೆ.
ಮನೆಯಲ್ಲಿರುವ ದೇವತೆಯಂತೆ
ಸದಾ ಜೊತೆಯಾಗುವ
ದೇವರಂತೆ..
ಇಷ್ಟೇ ಇಷ್ಟು ಕತೆಯ
ಬಚ್ಚಿಟ್ಟು
ಸುತ್ತ ಸುತ್ತಿಡುವ ಹಾಸಿಗೆಯಂತೆ
ಮಲಗಿ ಓದುವ
ಕಾದಂಬರಿಯಂತೆ.
ಅದನ್ನೇ ಬದುಕಿದಂತೆ
ಕೊನೆಯರಿಯದ
ಕೊನೆಯೇ ಇಲ್ಲದಂತೆನಿಸುವ
ಸೊಕ್ಕಿನಂತೆ.
ಸೊಕ್ಕನ್ನು ಮುರಿಯಲು
ಬರುವ ಉರಿಯಂತೆ
ಬರೆಯಂತೆ!
ಅರಿವ ಗುರುವಾಗಿಸಿ
ನಡೆದ
ನಕ್ಷತ್ರದಂತೆ!
ಹೆಚ್ಚಿನ ಬರಹಗಳಿಗಾಗಿ
ವಿಶ್ವ ವಿಸ್ಮಯ
ಒಂದು ಹಲಸಿನ ಹಣ್ಣಿನ ಹಂಬಲ ಮತ್ತು ಇತರ ಪದ್ಯಗಳು
ಕವಿಯೊಬ್ಬ..