- ಕರ್ಪೂರಿ ಠಾಕೂರ್ - ಮಾರ್ಚ್ 3, 2024
- ಗಝಲ್ ಲೋಕದಲ್ಲೊಂದು ಸುತ್ತು - ಮಾರ್ಚ್ 25, 2023
- ಬಿ. ಜಿ. ಎಲ್. ಸ್ವಾಮಿ ಮತ್ತು ಹೀಗೊಂದು ಪ್ರಣಯ ಪ್ರಸಂಗ - ನವೆಂಬರ್ 5, 2022
ಹೀಗೊಂದು ಸಮಗ್ರ ವ್ಯಕ್ತಿ ಚಿತ್ರ ವಿಶೇಷ
ಮುಂಬಯಿ ಸಿನಿಮಾ ರಂಗದ ಒಬ್ಬ ಮೇರು ಗಾಯಕಿ, ಆಶಾ ಬೋನ್ಸ್ಲೆ ತಮ್ಮ ಅಕ್ಕ ಲತಾ ಮಂಗೇಶ್ಕರ್ ಗಿಂತ ವಿಭಿನ್ನ ವ್ಯಕ್ತಿತ್ವ ಹೊಂದಿದ ಒಬ್ಬ ನಿಗೂಢ ವ್ಯಕ್ತಿಯಂತೆ ಹಲವರಿಗೆ ತೋರಿದರೆ ಆಶ್ಚರ್ಯವೇನಿಲ್ಲ. ಆಶಾ ತಾಯಿ, ತಮ್ಮ ಮೊದಲನೇ ಮದುವೆಗಾಗಿ ತೆಗೆದುಕೊಂಡ ಅತಿ ತ್ವರಿತ ಹಾಗೂ ಅನಿರ್ದಿಷ್ಟ ನಿರ್ಣಯ, ತಮ್ಮ ಕೆರಿಯರ್ ನಲ್ಲಿ ಮೇಲೆ ಬರಲು ಇಬ್ಬರು ಸಂಗೀತಗಾರರಿಂದ ಪಡೆದ ನೆರವು, (ಒಪಿನಯ್ಯರ್ ಮತ್ತು ಆರ್.ಡಿ ಬರ್ಮನ್) ೧೪ ವರ್ಷ ಓಪಿ ನಯ್ಯರ್ ರ ಪರಿಛಾಯೆಯಂತೆ ಸಮೀಪದಲ್ಲಿದ್ದ ಆಶಾ ತಾಯಿ, ಅವರನ್ನು ಅಷ್ಟು ಬೇಗ ತ್ಯಜಿಸಿ, ಯುವ ಸಂಗೀತ ನಿರ್ದೇಶಕ ಆರ್. ಡಿ. ಬರ್ಮನ್ ರ ಜೊತೆ ಮಾಡಿಕೊಂಡ ಹೊಂದಾಣಿಕೆಗಳು, ಆರ್. ಡಿ.ಯವರು ಹೃದಯಾಘಾತದಿಂದ ನರಳುತ್ತಿರುವಾಗ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಭರ್ತಿಮಾಡಲು ತಾವೇ ಮುಂದಾಳಾಗಿದ್ದು, ಅವರ ಮರಣದ (೧೯೯೪) ಬಳಿಕ ವಿಧವೆಯ ತರಹ ಮೀಡಿಯಾದಲ್ಲಿ ಕಾಣಿಸಿಕೊಂಡ ರೀತಿ, ನಂತರ ಅವರ ನೆನೆಪಿನಲ್ಲಿ ಒಂದು ಕ್ಯಾಸೆಟ್ ಬಿಡುಗಡೆ ಮಾಡಿದ್ದು, ಕ್ಯಾಬರೇ ನೃತ್ಯಗಾತಿಯರಿಗಾಗಿಯೇ ತಮ್ಮ ಕಂಠವನ್ನು ಸರಿಪಡಿಸಿಟ್ಟುಕೊಂಡ ವ್ಯಕ್ತಿಯೆಂದು ಮೀಡಿಯಾಗಳಲ್ಲಿ ಸುದ್ದಿಮಾಡಿದ್ದು, ಸಮಯ ಬಂದಾಗ, ಭಜನ್ ಗಳನ್ನು, ಘಜಲ್ ಗಳನ್ನೂ ಅತ್ಯಂತ ಹೃದಯಂಗಮವಾಗಿ ಭಾವಶುದ್ಧಿಯಿಂದ ತಾದಾತ್ಮಕತೆಯಿಂದ ಹಾಡಿದ್ದು, ಮೊದಲಾದ ಬಹುಮುಖ ವ್ಯಕ್ತಿತ್ವ ಮತ್ತು ಆಶಯಗಳನ್ನು ತೀವ್ರವಾಗಿ ಗಮನಿಸಿದರೆ, ಆಶ್ಚರ್ಯವಾಗುತ್ತದೆ.
ಉದಾಹರಣೆಗೆ, “ತೊರಾ ಮನ್ ದರ್ಪನ್” (ಕಾಜಲ್ ) ಭಜನೆಯನ್ನು ಆಶಾ ಭೋಂಸ್ಲೆಯವರ ಅತ್ಯುತ್ತಮ ಗಾಯನಗಳಲ್ಲೊಂದೆಂದು ಪರಿಗಣಿಸಲಾಗಿದೆ. ಇದಲ್ಲದೆ, ೧೪ ವರ್ಷ ಒಪಿ ನಯ್ಯರ್ ಬಳಿ ಸದಾ ಸುಳಿದಾಡುತ್ತಿದ್ದ ಆಶಾ, ಅವರ ಮರಣದ ಬಳಿಕ ಸಾರ್ವಜನಿಕವಾಗಿ ಒಪಿ ನಯ್ಯರ್ ರವರ ಬಗ್ಗೆ ಎಲ್ಲಿಯೂ ಒಂದು ಚಕಾರವೆತ್ತದಿರುವುದು, ಮುಂತಾದ ಅವರ ವರ್ತನೆಗಳು/ನಡವಳಿಕೆಗಳು ಬಹಳ ವಿವಾದಾಸ್ಪದವಾಗಿವೆ. ಮಹಾನ್ ಸಂಗೀತಗಾರರಲ್ಲೊಬ್ಬರಾಗಿದ್ದ ಒ. ಪಿ. ನಯ್ಯರ್ ರವರ ಸಾಂಸಾರಿಕ ಜೀವನವನ್ನು ಮೂರಾಬಟ್ಟೆ ಮಾಡಲು ಸ್ವತಃ ಒಪಿನಯ್ಯರ್ ರವರೇ ಕಾರಣಕರ್ತರಾಗಿದ್ದರೆ, ಅದರಲ್ಲಿ ಬಹುಪಾಲು ಆಶಾಬೋನ್ಸ್ಲೆಯವರದೂ ಇದೆಯೆಂದು ಮೀಡಿಯಾಗಳಲ್ಲಿ ವರದಿಯಾಗಿದೆ.
ಕೆಲವರು, ಆಶಾತಾಯಿಯನ್ನು ಮಾದಕ ಹಾಡುಗಳಿಗಾಗಿಯೇ ಸಿದ್ಧಪಡಿಸಿದ ಗಾಯಕಿ, ಎಂದು ಶಿರೋಪಟ್ಟಿಯನ್ನು ತೊಡಿಸಿದ್ದಾರೆ. ಇದಕ್ಕೆ ಉತ್ತರ ಹೌದು. ಸ್ವಲ್ಪಕಾಲ ಮಾತ್ರ. ನಂತರ, ಆಕೆ ವೈವಿಧ್ಯಮಯ ಗೀತೆಗಳನ್ನು ತಮ್ಮಸಿರಿ ಕಂಠದಿಂದ ಹಾಡಿ, ಸಿನಿಮಾ ರಂಗದ ಆವಶ್ಯಕತೆಗಳನ್ನು ಸಮರ್ಥವಾಗಿ ಪೂರೈಸಿ, ‘ಸೈ’ಎನ್ನಿಸಿಕೊಂಡರು, ಎಂದು ಸಮರ್ಥಿಸಿಕೊಳ್ಳಬೇಕಾಗುತ್ತದೆ.
ಆದರೆ, ಒಂದು ಮಾತಂತೂ ನಿಜ. ಫಿಲಂ ಸಂಗೀತದಲ್ಲಿಯೂ ಅತಿಯಾದ ವೈವಿಧ್ಯತೆ, ಸಾಧ್ಯತೆಗಳೂ ಇರುವಾಗ ಪ್ರಾವೀಣ್ಯತೆ, ಹಾಗೂ ಸಿದ್ಧಿಯನ್ನು ಹಾಸಿಲ್ ಮಾಡುವಲ್ಲಿ ಅಹರ್ನಿಶಿ ದುಡಿಯುತ್ತಿದ್ದ ಆಶಾ ತಾಯಿ, ಒಂದು ಹಂತದಲ್ಲಿ ಆ ಮಟ್ಟವನ್ನು ಮೀರಿ ಮುಂದೆ ಹೊರಟುಹೋಗಿದ್ದರು. ತಮ್ಮ ಪ್ರತಿಯೊಂದು ಹಾಡುಗಳನ್ನು ಜೀವನದಲ್ಲಿ ಪ್ರಪ್ರಥಮಬಾರಿ ಹಾಡುತ್ತಿರುವಂತೆ ತಮ್ಮ ಮನಸ್ಸ್ಥಿತಿಯನ್ನು ಒಗ್ಗಿಸಿಕೊಂಡು ಹಾಡುತ್ತಿದ್ದುದರಿಂದ, ಹಾಡಿದ ಪ್ರತಿಯೊಂದು ಹಾಡೂ ಅತ್ಯಂತ ವೈಶಿಷ್ಠತೆಯ ಪರಮಾವಧಿಯ ಹಂತವನ್ನು ತಲುಪುತ್ತಿದ್ದಿತೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಭಾರತದಲ್ಲಿ ಮೊದಲಿನಿಂದಲೂ, ಬಾಂಬೆಯಂತಹ ಮೆಟ್ರೋ ನಗರಗಳಲ್ಲಿ ಬಿಜಿನೆಸ್ ಸಂಬಂಧಿ ‘ಸೋಷಿಯಲ್ ಗೆಟ್ ಟುಗೆದರ್’ ಎಂದು ಕರೆಯಲಾಗುವ ಪಾರ್ಟಿಗಳು ನಡೆಯುತ್ತಲೇ ಬಂದಿವೆ. ದೊಡ್ಡ ಉದ್ಯಮಿಗಳಿಗೆ ತಮ್ಮ ಬಿಜಿನೆಸ್ ನ್ನು ಪ್ರಮೋಟ್ ಮಾಡಲು, ಈ ತರಹದ ಪಾರ್ಟಿಗಳ ಅವಶ್ಯಕತೆಯಿತ್ತು. ಹಿಂದಿ ಸಿನಿಮಾಗಳಲ್ಲಿ ಇವುಗಳ ಬಗ್ಗೆ ವಿಸ್ತೃತವಾದ ಉದಾಹರಣೆಗಳಿವೆ. ಆಗ ಇಂಗ್ಲೀಷ್ ಗೀತೆಗಳನ್ನು ಹಾಡಲಾಗುತ್ತಿತ್ತು. ನಂತರ ಗಾಯಕಿಯರು ತಮ್ಮ ವೈವಿಧ್ಯಮಯ ದನಿಯೇರಿಸಿದ ಹಾಡುಗಾರಿಕೆಯ ಬಲದಿಂದ ಹಿಂದಿ ಗೀತೆಗಳನ್ನು ಪ್ರಸ್ತುತಪಡಿಸಿ, ಇಂಗ್ಲೀಷ್ ಗೀತೆಗಳ ಜಾಗದಲ್ಲಿ ಹಿಂದೀ ಗೀತೆಗಳನ್ನು ತಂದೊಡ್ಡಿ, ಪಾರ್ಟಿಗಳ ಕಳೆಯೇರಿಸಿದರು. ಆಶಾಬೋನ್ಸ್ಲೆ ಈ ನಿಟ್ಟಿನಲ್ಲಿ ವಿಶೇಷ ಯೋಗದಾನ ಮಾಡಿ ಪ್ರಸಿದ್ಧರಾಗಿದ್ದಾರೆ. (ಗೀತಾ ದತ್ ಸಹಿತ ಅನೇಕ ಪ್ರಯೋಗಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ)
ಆಶಾ ಬೋನ್ಸ್ಲೆಯವರ ಪರಿವಾರ :
ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಮಗಳು : ೧. ಹೇಮಂತ್ ಬೋನ್ಸ್ಲೆ ೨. ಆನಂದ್ ಬೋನ್ಸ್ಲೆ ೩. ವರ್ಷಾ ಬೋನ್ಸ್ಲೆ
ಮಗಳು ವರ್ಷಾ ಬೋಲ್ಸ್ಗೆ, ೨೦೧೨ ರಲ್ಲಿ ಮರಣಹೊಂದಿದಳು. ೨೦೧೫ ರಲ್ಲಿ ಮಗ ಹೇಮಂತ್ ಬೋನ್ಸ್ಲೆ ಕ್ಯಾನ್ಸರ್ ಕಾಯಿಲೆಯಿಂದ ಮರಣಿಸಿದರು. ಹೇಮಂತನ ಮೊದಲನೆಯ ಪತ್ನಿ ಅಲ್ಕಾ ಸೊಸೆಯ ಬಗ್ಗೆ, ಎಲ್ಲೂ ಸುದ್ದಿಯಿಲ್ಲ. ಚೈತನ್ಯ ಭೋಸ್ಲೆ, ಹೇಮಂತ್ ಭೋಸ್ಲೆ ಯವರ ಮಗ. ಎರಡನೇ ಸೊಸೆ, ‘ಸಾಜಿದಾ ಬೋನ್ಸ್ಲೆ’ (ರಮಾ ಎಂದು ಹೆಸರಿಟ್ಟುಕೊಂಡಿದ್ದಾರೆ) ಪತಿ ಹೇಮಂತ್ ಭೋಸ್ಲೆ, ಅತಿ ಕ್ರೌರ್ಯ ಹಾಗು ಹಿಂಸೆಯಿಂದ ನಡೆದುಕೊಂಡಾಗ, ವಿಧಿಯಿಲ್ಲದೇ ಪತಿಯಿಂದ ಬೇರೆಯಾಗಲು ಪ್ರಯತ್ನಿಸಿದರು.
ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಮಗಳು : ೧. ಹೇಮಂತ್ ಬೋನ್ಸ್ಲೆ ೨. ಆನಂದ್ ಬೋನ್ಸ್ಲೆ ೩. ವರ್ಷಾ ಬೋನ್ಸ್ಲೆ
ಕೊನೆಯ ಮಗ ಆನಂದನೇ, ಅಳಿದುಳಿದವರಲ್ಲಿ ವಾರಸುದಾರ. ಅವನ ಪತ್ನಿ, ಅನುಜಾ ಚಿತ್ರೆ, ಇವರ ಮಗ ರಂಜಾಯ್ ಮತ್ತು ಮಗಳು, ಝನಾ ಭೋಸ್ಲೆ. ಏಪ್ರಿಲ್ ೨೦೨೨ ರಂದು ದುಬೈನಲ್ಲಿ ಆನಂದ್ ನೆಲದಮೇಲೆ ಪ್ರಜ್ಞೆತಪ್ಪಿ ಬಿದ್ದು, ಅಲ್ಲಿನ ಆಸ್ಪತ್ರೆಯೊಂದರಲ್ಲಿ ಐ. ಸಿ. ಯು. ಕಕ್ಷದಲ್ಲಿ ಭರ್ತಿಮಾಡಲ್ಪಟ್ಟಿದ್ದಾರೆ. ೮೮ ವರ್ಷ ವಯಸ್ಸಿನ ಆಶಾ. ಬೋಸ್ಲೆಯವರು ದುಬೈನಲ್ಲೆ ವಾಸವಾಗಿದ್ದು ಮಗನ ಆರೈಕೆಯಲ್ಲಿ ವ್ಯಸ್ತರಾಗಿದ್ದರು. ಅವರ ಆರೋಗ್ಯ ಸುಧಾರಿಸುತ್ತಿರುವುದನ್ನು ಗಮನಿಸಿ, ಮುಂಬಯಿಗೆ ವಾಪಸ್ಸಾಗಿದ್ದಾರೆ. (೧೭, ಏಪ್ರಿಲ್, ೨೦೨೨) ಹೃದಯನಾಥ್ ಮಂಗೇಶ್ಕರ್, ಆಶಾ ತಾಯಿಯವರ ಸೋದರ. (೨೬, ಅಕ್ಟೊಬರ್ ೧೯೩೭), ಹೆಂಡತಿ, ಭಾರತಿ ಮಾಲ್ವಂಕರ್, ಮಕ್ಕಳು : ರಾಧಾ, ಆದಿನಾಥ್, ವೈಜ್ಞಾತ್. ಆದಿನಾಥ್ ಹೆಂಡತಿ, ಕೃಷ್ಣಾ. ಇದು ಆಶಾತಾಯಿಯವರ ಚಿಕ್ಕ ಪರಿವಾರದ ಮಾಹಿತಿ.
ಮಿಲಯಗಟ್ಟಲೆ ಹಣವನ್ನು ಸಂಪಾದಿಸಿ ‘ಆಶಾ’ ಎಂಬ ಹೆಸರಿನ ಸುಮಾರು ೪೦ ಹೋಟೆಲ್ ಗಳ ಒಡತಿಯಾಗಿರುವ (ದುಬೈ, ಅಬುದಾಬಿ, ಕುವೈತ್, ಬರ್ಮಿಂಗ್ಹ್ಯಾಮ್ ನಗರಗಳಲ್ಲಿ) ಆಶಾರಿಗೆ ನೆಮ್ಮದಿಯ ಜೀವನವಿದೆಯೇ ? ಎಂದು ಕೇಳಬೇಕಾಗಿದೆ. ಬಾಲ್ಯದ ದಿನಗಳಿಂದ ತಾವು ಅನುಭವಿಸಿದ ಅನಿಶ್ಚತತೆಯ ಜೀವನದಲ್ಲಿ ಅಪಾರ ಯಾತನೆಯನ್ನು ಅನುಭವಿಸಿಯೂ, ತಮ್ಮ ಒಬ್ಬ ಸೊಸೆಗೆ (ಒಬ್ಬ ಮಗಳ ತಾಯಿ) ನ್ಯಾಯ ಒದಗಿಸಲು ಆಸಮರ್ಥರಾಗಿರುವುದು ಮೀಡಿಯಾಗಳಿಂದ ತಿಳಿಯುತ್ತದೆ. ತನಗೆ ಕಾನೂನಿನ ಪ್ರಕಾರ ಸೇರಬೇಕಾಗಿದ್ದ ಆಸ್ತಿಯನ್ನು ಪಡೆಯಲು ನ್ಯಾಯಾಲಯದ ಮೆಟ್ಟಿಲನ್ನು ಹತ್ತಬೇಕಾಯಿತು. ಅಲ್ಲಿ ಆಕೆಯ ಪರವಾಗಿಯೇ ನ್ಯಾಯ ದೊರೆತಿದ್ದರೂ, ಅದನ್ನು ಆಶಾತಾಯಿ ಪ್ರಾಮಾಣಿಕವಾಗಿ ಒಪ್ಪಿ, ವಿತರಿಸುವ ಮನಸ್ಸಿಲ್ಲದಂತೆ ವರ್ತಿಸುತ್ತಿದ್ದಾರೆ. ಇದು ಅವರ ವೈಯಕ್ತಿಕ ಸಮಸ್ಯೆಯಾಗಿದ್ದು, ಹೊರಗಿನವರಿಗೆ ಇದರ ಸತ್ಯಾ-ಸತ್ಯಗಳು ಗೊತ್ತಾಗುವುದು ಕಷ್ಟವಾಗಿದೆ. ಆಶಾತಾಯಿಯ ಸಮೃದ್ಧ ಜೀವನದಲ್ಲಿ ಇದೊಂದು ಅಪಸ್ವರವನ್ನು ಸರಿಪಡಿಸುವುದು ಆಕೆಯ ಕೈನಲ್ಲೇ ಇದೆ. ತಮ್ಮ ಅಪಾರ ಸಂಪತ್ತನ್ನು ಮಗ ಸೊಸೆಯರ ಜೊತೆಗೆ ಹಂಚಿಕೊಂಡು ಸರಿಪಡಿಸಿಕೊಳ್ಳಬಹುದು. ಮಗ ಹೇಮಂತ್ ಬೋಸ್ಲೆಯ ಪತ್ನಿ, (ಮದುವೆಯಾಗಲು ಹಿಂದೂ ಧರ್ಮಕ್ಕೆ ಧರ್ಮಾಂತರ ಗೊಂಡಿದ್ದ ವ್ಯಕ್ತಿ) ಮೊಮ್ಮಗಳೂ ಆಕೆಯ ಆಪ್ತ ಸಂಬಂಧಿಗಳಲ್ಲವೇ ? ಅವರನ್ನು ಇರುವಂತೆಯೇ ಒಪ್ಪಿಕೊಳ್ಳುವುದರಲ್ಲೇ ಜಾಣತನ, ಹಾಗೂ ಜೀವನದ ಸಾರ್ಥಕತೆಯಿದೆ.
ಆಶಾ ತಾಯಿ, ಎಂದು ಲಕ್ಷಾಂತರ ಆಕೆಯ ಸಂಗೀತ ಪ್ರೇಮಿಗಳು ಪ್ರೀತಿಯಿಂದ ಸಂಬೋಧಿಸಲ್ಪಡುವ ಆಶಾ ಬೋನ್ಸ್ಲೆ ಭಾರತೀಯ ಚಲನಚಿತ್ರರಂಗದ ಒಬ್ಬ ಅತ್ಯಂತ ಯಶಸ್ವಿ ಹಾಗೂ ಮೋಜಿನ ಹಾಡುಗಳ (ಅತಿಹೆಚ್ಚು ಧ್ವನಿಮುದ್ರಿಕೆಗಳನ್ನು ನಿರ್ಮಿಸಿದ ಗಾಯಕಿ) ಪಾರ್ಶ್ವ ಗಾಯಕಿಯಾಗಿದ್ದಾರೆ. ಅವರ ತಂದೆಯವರ ಪರಿವಾರದ ೫ ಜನಮಕ್ಕಳಲ್ಲಿ ಮೂರನೆಯವರು. ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್‌ರ ಪ್ರೀತಿಯ ತಂಗಿ. ಆಶಾತಾಯಿಯವರು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಅತ್ಯುನ್ನತ ಮನ್ನಣೆಯನ್ನು ಪಡೆದ ಹಿಂದಿ ಹಿನ್ನೆಲೆ ಗಾಯಕರಲ್ಲಿ ಒಬ್ಬರಲ್ಲದೆ, ಅತ್ಯಂತ ವ್ಯಾಪಕ ಸಂಗೀತ ಸಂಗ್ರಹವನ್ನು ಹೊಂದಿದ್ದಾರೆ. ಅವರ ವೃತ್ತಿಜೀವನ ೧೯೪೩ ರಲ್ಲಿ ಆರಂಭವಾಗಿ ಆರು ದಶಕಗಳವರೆಗೂ ಮುಂದುವರೆದಿದೆ. ಅವರು ಸುಮಾರು ಒಂದು ಸಾವಿರ ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದಾರೆ, ಮತ್ತು ಅನೇಕ ಖಾಸಗಿ ಆಲ್ಬಂಗಳ ಧ್ವನಿಮುದ್ರಣವನ್ನೂ ಮಾಡಿರುವುದಲ್ಲದೆ, ಭಾರತ ಮತ್ತು ಹೊರದೇಶಗಳಲ್ಲಿ ಬಹುಸಂಖ್ಯೆಯ ಗಾನಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಅವರ ಧ್ವನಿಗಾಗಿ ಪ್ರಸಿದ್ಧಿಯಾಗಿದ್ದು, ಸಂಗೀತ ಪ್ರಿಯರ ಮನ್ನಣೆಗಳಿಗೊಳಗಾಗುತ್ತಿದ್ದರು, ಭೋಂಸ್ಲೆರ ಗಾಯನಗಳಲ್ಲಿ ಚಲನಚಿತ್ರ ಸಂಗೀತ, ಪಾಪ್, ಘಝಲ್‌ಗಳು, ಭಜನೆಗಳು, ಸಾಂಪ್ರದಾಯಕ ಭಾರತೀಯ ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಕವ್ವಾಲಿಗಳು, ರೊಬೀಂದ್ರ ಸಂಗೀತ್ ಗಳು ಮತ್ತು ನಝ್ರುಲ್ ಗೀತೆಗಳು ಸೇರಿವೆ. ಅಸ್ಸಾಮೀ, ಹಿಂದಿ, ಉರ್ದು, ತೆಲುಗು, ಕನ್ನಡ, ಮರಾಠಿ, ಬೆಂಗಾಲಿ, ಗುಜರಾತಿ, ಪಂಜಾಬಿ, ತಮಿಳು, ಇಂಗ್ಲೀಷ್, ರಷ್ಯನ್, ಚೆಕ್, ನೇಪಾಳಿ, ಮಲೈ ಮತ್ತು ಮಲಯಾಳಂ ಸೇರಿ ಸುಮಾರು ೧೮ ಭಾಷೆಗಳಲ್ಲಿ ಹಾಡಿದ್ದಾರೆ. ೨೦೦೬ ರಲ್ಲಿ, ಆಶಾ ಭೋಂಸ್ಲೆ ತಾವು ಸುಮಾರು ೧೨,೦೦೦ ಹಾಡುಗಳನ್ನು ಹಾಡಿದ್ದಾಗಿ ಹೇಳಿಕೆಯನ್ನು ನೀಡಿದ್ದರು. ಪ್ರಪಂಚದ ಉನ್ನತ ದಾಖಲೆಗಳನ್ನು ಪ್ರಮಾಣಿಸುವ, ಅಂತರರಾಷ್ಟ್ರೀಯ ಸಂಸ್ಥೆಯಾದ ‘ವರ್ಲ್ಡ್ ರೆಕಾರ್ಡ್ಸ್ ಅಕಾಡೆಮಿ’ಯು, ಸೆಪ್ಟೆಂಬರ್ ೨೦೦೯ರಲ್ಲಿ ಭೋಂಸ್ಲೆಯವರನ್ನು “ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಹಾಡುಗಳನ್ನು ರೆಕಾರ್ಡಿಂಗ್ ಮಾಡಿದ ಕಲಾವಿದೆ” ಎಂದು ಗುರುತಿಸಿದೆ.
ಮಹಾರಾಷ್ಟ್ರ ಸಂಜಾತೆ :
ಆಶಾ ಭೋಂಸ್ಲೆಯವರು ಬಾಂಬೆ ಪ್ರಾಂತ್ಯದ (ಈಗಿನ ಮಹಾರಾಷ್ಟ್ರದಲ್ಲಿದೆ), ಸಾಂಗ್ಲಿಯಲ್ಲಿನ ‘ಗೋರ್’ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ, ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಎಂಬ ಗಾಯಕರ ಸಂಗೀತ ಕುಟುಂಬದಲ್ಲಿ ಜನಿಸಿದರು. ಕೇವಲ ಲತಾಮಂಗೇಶ್ಕರ್ ಮತ್ತು ಉಷಾ ಮಂಗೇಶ್ಕರ್ ಮಧ್ಯಪ್ರದೇಶದ ಇಂದೂರ್ ನಗರದಲ್ಲಿ ಜನ್ಮಿಸಿದರು. ಅಕ್ಕ ಮೀನಾ ಮಂಗೇಶ್ಕರ್ ಮತ್ತು ತಮ್ಮ ಹೃದಯನಾಥ್ ಮಂಗೇಶ್ಕರ್ ಮುಂಬಯಿನಲ್ಲಿ ಜನಿಸಿದರು. ಅವರ ತಂದೆಯವರು ರಂಗಭೂಮಿಯ ಕಲಾವಿದರು ; ಮತ್ತು ಶಾಸ್ತ್ರೀಯ ಸಂಗೀತದ ಗಾಯಕರಾಗಿದ್ದರು. ಆಶಾ ತಾಯಿಯವರು ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ತಂದೆಯವರು ನಿಧನ ಹೊಂದಿದರು. ಅವರ ಕುಟುಂಬವು ಪೂನಾ ದಿಂದ ಕೊಲ್ಹಾಪೂರ್‌ಗೆ, ಮತ್ತು ಅಲ್ಲಿಂದ ಮುಂಬಯಿಗೆ ತೆರಳಿತು. ಅವರು ಮತ್ತು ಅವರ ಅಕ್ಕ, ಲತಾಮಂಗೇಶ್ಕರ್ ತಮ್ಮ ಕುಟುಂಬದ ನೆರವಿಗಾಗಿ ಹಾಡುವುದನ್ನು ಮತ್ತು ಚಲನಚಿತ್ರಗಳಲ್ಲಿ ನಟಿಸುವುದನ್ನು ಪ್ರಾರಂಭಿಸಿದ್ದರು. ಅವರು ‘ಮಾಝಾ ಬಾಳ್’ ೧೯೪೩) ಎಂಬ ಮರಾಠಿ ಚಿತ್ರಕ್ಕಾಗಿ ತಮ್ಮ ಮೊದಲ ಚಲನಚಿತ್ರ ಗೀತೆ ‘ಲಾ ಚಲಾ ನವ್ ಬಲಾ’ವನ್ನು ಹಾಡಿದರು. ಈ ಚಿತ್ರಕ್ಕಾಗಿ ಸಂಗೀತ ರಚನೆಯನ್ನು ದತ್ತ ದವ್ಜೇಕರ್‌ರವರು ಮಾಡಿದ್ದರು. ಹಂಸ್ರಾಜ್ ಬೆಲ್ಹ್‌ರ ಚುನಾರಿಯಾ (೧೯೪೮) ಚಿತ್ರಕ್ಕಾಗಿ ‘ಸಾವನ್ ಆಯಾ ಗೀತೆ’ಯನ್ನು ಹಾಡುವುದರ ಮೂಲಕ ಅವರು ಹಿಂದಿ ಚಲನಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿದ್ದರು. ಅವರ ಮೊದಲ ಹಿಂದಿ ಸೋಲೋ ಹಾಡನ್ನು ‘ರಾತ್ ಕಿ ರಾಣಿ’ (೧೯೪೯) ಚಿತ್ರಕ್ಕಾಗಿ ಹಾಡಿದರು.
ದೀನಾ ನಾಥ್ ಮಂಗೇಶ್ಕರ್ ಪರಿವಾರ :
೧. ಲತಾ ಮಂಗೇಶ್ಕರ್ (೨೮, ಸೆಪ್ಟೆಂಬರ್ – ೧೯೨೯೬, ಫೆಬ್ರವರಿ, ೨೦೨೨)
೨. ಮೀನಾ ಮಂಗೇಶ್ಕರ್ (೧೯೩೧)
೩. ಆಶಾ ಬೋನ್ಸ್ಲೆ (ಸೆಪ್ಟೆಂಬರ್ ೮, ೧೯೩೩)
೪. ಉಷಾ ಮಂಗೇಶ್ಕರ್ (೧೫, ಡಿಸೆಂಬರ್, ೧೯೩೫)
೫. ಹೃದಯನಾಥ್ ಮಂಗೇಶ್ಕರ್ (೨೬, ಅಕ್ಟೋಬರ್, ೧೯೩೭)
ಮದುವೆಯಾಗಿದ್ದು :
ಆಷಾಬೋನ್ಸ್ಲೆ ೧೬ನೆಯ ವಯಸ್ಸಿನಲ್ಲಿಯೇ, ೩೧-ವರ್ಷ-ವಯಸ್ಸಿನ ಗಣಪತ್‌ರಾವ್ ಭೋಂಸ್ಲೆ ಯವರನ್ನು ಪ್ರೀತಿಸಿ, ಕುಟುಂಬದ ಸಮ್ಮತಿಗೆ ವಿರುದ್ಧವಾಗಿ ಮನೆಯಿಂದ ಓಡಿಹೋಗಿ, ಮದುವೆಯಾದರು. ಗಣಪತ್‌ರಾವ್, ಲತಾಮಂಗೇಶ್ಕರ್ ರ ಖಾಸಗಿ ಕಾರ್ಯದರ್ಶಿಯಾಗಿದ್ದರು. ದಿನಕಳೆದಂತೆ ಆಶೆತಾಯಿಯವರ ಪತಿ ಮತ್ತು ಅತ್ತೆ-ಮಾವಂದಿರು ಅವರನ್ನು ಬಹಳ ಕೀಳಾಗಿ ಕಂಡು, ಅವರ ಸಂಪಾದನೆಯ ಬಗ್ಗೆಯೇ ಹೆಚ್ಚು ಆಸಕ್ತಿ ವಹಿಸಿ, ಮಾನಸಿಕ ನೆಮ್ಮದಿಯನ್ನು ಹಾಳುಮಾಡಿದರು. ಮದುವೆಯಾದ ಕೆಲವು ವರ್ಷಗಳ ನಂತರ, ಭೋಂಸ್ಲೆರವರು (ಸುಮಾರು ೧೯೬೦ರಲ್ಲಿ) ತಮ್ಮ ಎರಡು ಮಕ್ಕಳೊಂದಿಗೆ ಹಾಗು ಮೂರನೆಯ ಮಗು, ಆನಂದ್‌ನನ್ನು ಹೊಟ್ಟೆಯಲ್ಲಿ ಹೊತ್ತು, ತವರುಮನೆಗೆ ಹೋದರು.
ಆಗ ಜೀವನ ನಿರ್ವಹಣೆಗೆ, ಹಣ ಸಂಪಾದನೆ ಮಾಡುವುದು ಬಹು ಮುಖ್ಯ ಆದ್ಯತೆಯಾಗಿದ್ದರಿಂದ ಚಲನಚಿತ್ರಗಳಲ್ಲಿ ಹಾಡುವುದನ್ನು ಮುಂದುವರೆಸಿದರು. ಆ ಸಮಯದಲ್ಲಿ, ಫಿಲಂ ಉದ್ಯಮರಂಗದಲ್ಲಿ ‘ಗೀತಾ ದತ್,’ ‘ಶಂಷಾದ್ ಬೇಗಮ್’ ಮತ್ತು ‘ಲತಾ ಮಂಗೇಶ್ಕರ್’ (ಅವರ ಸಹೋದರಿ) ರಂತಹ ಪ್ರಖ್ಯಾತ ಹಿನ್ನೆಲೆ ಗಾಯಕಿಯರು “ನಾಯಕಿ ನಟಿ” ಪಾತ್ರಗಳಿಗೆ ಮತ್ತು ದೊಡ್ಡ ಮಟ್ಟದ ಚಿತ್ರಗಳಿಗೆ ಹಾಡುತ್ತಿದ್ದರು, ಆ ಬೇಡಿಕೆಯ ಗಾಯಕಿಯರು ಹಾಡಲು ಒಪ್ಪದೇ ಬಿಟ್ಟ ಚಿತ್ರಗಳಿಗೆ ಹಾಡುವ ಅವಕಾಶವನ್ನು ಆಶಾ ಭೋಂಸ್ಲೆ ಪಡೆಯುತ್ತಿದ್ದರು : ಅಷ್ಟೇನೂ ಹೆಚ್ಚಿನ ಗುಣಮಟ್ಟವಿಲ್ಲದ ವ್ಯಾಂಪ್ಸ್ ಗಳಿಗೆ ಸೀಮಿತವಾದ ಪಾತ್ರಗಳಿಗೆ ಎರಡನೇ ದರ್ಜೆಯ ಚಲನಚಿತ್ರಗಳಲ್ಲಿ ಹಾಡುತ್ತಿದ್ದರು.
೧೯೫೦ ರ ದಶಕದಲ್ಲಿ, ಇವುಗಳಲ್ಲಿ ಬಹುತೇಕ ಕಡಿಮೆ ಬಂಡವಾಳದ ಬಿ ಅಥವಾ ಸಿ-ದರ್ಜೆಯ ಚಿತ್ರಗಳೇ ಒಳಗೊಂಡಿವೆ. ಅವರ ಆರಂಭಿಕ ಹಾಡುಗಳಿಗೆ ಸಂಗೀತ ರಚನೆಯನ್ನು ಎ. ಆರ್ ಖುರೇಶಿ, ಸಜ್ಜದ್ ಹುಸೇನ್ ಮತ್ತು ಗುಲಾಮ್ ಮಹಮದ್‌ರವರಿಂದ ಮಾಡಲಾಗಿತ್ತು, ಅವು ಗಲ್ಲಾ ಪೆಟ್ಟಿಗೆಯಲ್ಲಿ ಹಣಮಾಡಲಿಲ್ಲ. ಸಜದ್ ಹುಸ್ಸೇನ್ ಸಂಗೀತ ರಚನೆಯನ್ನು ಮಾಡಿದ, ದಿಲೀಪ್ ಕುಮಾರ್-ಅಭಿನಯಿಸಿದ ಸಂಗದಿಲ್ (೧೯೫೨) ಚಿತ್ರದಲ್ಲಿ ಹಾಡುವದರೊಂದಿಗೆ ಅವರಿಗೆ ಸಮರ್ಥನೀಯ ಮನ್ನಣೆಯು ದೊರೆಯಿತು. ಇದನ್ನು ಗಮನಿಸಿದ ಹೆಸರಾಂತ ಚಿತ್ರ ನಿರ್ದೇಶಕ ಬಿಮಲ್ ರಾಯ್, ಭೋಂಸ್ಲೆರವರಿಗೆ ಪರಿಣೀತ (೧೯೫೩) ಚಿತ್ರದಲ್ಲಿ ಹಾಡುವ ಅವಕಾಶವನ್ನು ನೀಡಿದ್ದರು. ಆಶಾ ಭೋಸ್ಲೆ ಅವರು ಬೂಟ್ ಪಾಲಿಷ್ (೧೯೫೪) ಚಿತ್ರಕ್ಕಾಗಿ ಮೊಹಮದ್ ರಫಿರ ಜೊತೆಯಲ್ಲಿ ‘ನನ್ಹೆ ಮುನ್ನೆ ಬಚ್ಚೆ ಗೀತೆ’ಯನ್ನು ಹಾಡುವ ಒಪ್ಪಂದವನ್ನುಸುಪ್ರಸಿದ್ಧ ಚಿತ್ರ ನಿರ್ಮಾಪಕ, ರಾಜ್ ಕಪೂರ್ ಮಾಡಿಕೊಂಡಿದ್ದರು, ಫಿಲಂ ರಸಿಕರಿಗೆ ಈ ಚಿತ್ರ ಬಹಳ ಮುದ ನೀಡಿತು.
(ಓಂಕಾರ ಪ್ರಸಾದ್ ನಯ್ಯರ್) ಓ.ಪಿ. ನಯ್ಯರ್ ಒಬ್ಬ ಪ್ರಗತಿಪರ ಸಂಗೀತಕಾರ, ಹಾಗೂ ಹೃದಯವಂತ ವ್ಯಕ್ತಿ :
ಮುಂಬಯಿಯ ಫಿಲಂ ಕ್ಷೇತ್ರಕ್ಕೆ ಬಂದ. ಒ. ಪಿ. ನಾಯರ್ ತಮ್ಮ ಸಂಗೀತ ನಿರ್ದೇಶನದ ಬಹುಪಾಲು ಚಿತ್ರಗಳಿಗೆ ಆಶಾ ಬೋನ್ಸ್ಲೆ ರವರಿಗೆ ಅವಕಾಶ ನೀಡುವುದರ ಮೂಲಕ ಆಶಾ ಭೋಂಸ್ಲೆಯ ಜೀವನದಲ್ಲಿ ಮಹತ್ತರವಾದ ‘ಬ್ರೇಕ್’ ನೀಡಿದರು. ಅಂತಹ ಚಿತ್ರಗಳಲ್ಲಿ ಸಿ.ಐ.ಡಿ. ಸಹಿತ ಒಂದು. ತಾವು (೧೯೫೬) ಚಿತ್ರಗಳಲ್ಲಿ ಗಾಯಕಿಯಾಗಿ ಹಾಡುತ್ತಿದ್ದ ಅವರು ತಮ್ಮ ಮೊದಲ ಸಾಧನೆಯನ್ನು ಗಳಿಸಿದ್ದು ಬಿ. ಆರ್. ಚೋಪ್ರರವರ, ನಯಾ ದೌರ್ (೧೯೫೭) ಚಿತ್ರದಲ್ಲಿ. ಮೊಹಮ್ಮದ್ ರಫಿ ರವರ ಜೊತೆಗಿನ, ಸಾಹಿರ್ ಲುಧಿಯಾನ್ವಿರವರಿಂದ ರಚಿಸಲಾದ, ‘ಮಾಂಗ್ ಕೆ ಸಾತ್ ತುಮ್ಹಾರ’ , ‘ಸಾತ್ಹೀ ಹಾಥ್ ಬಢಾನಾ ‘ಮತ್ತು ‘ಉಡೆನ್ ಜಬ್ ಜಬ್ ಝುಲ್ಫೇನ್ ತೆರಿ’ ಗಳಂತಹ ಯುಗಳ ಗೀತೆಗಳು ಅವರಿಗೆ ಪ್ರಚಂಡ ಮನ್ನಣೆಯನ್ನು ಗಳಿಸಿಕೊಟ್ಟವು. ಖ್ಯಾತ ನಟರಿಗೆ ಗೀತೆಗಳನ್ನು ಹಾಡುವ ಅವಕಾಶವನ್ನು ಪಡೆದದ್ದು, ಇದೇ ಮೊದಲ ಬಾರಿ. ನಯಾ ದೌರ್ ಚಿತ್ರದ ನಿರ್ಮಾಪಕ ಬಿ ಆರ್ ಚೋಪ್ರ, ಅವರ ಪ್ರತಿಭೆಯನ್ನು ಗುರುತಿಸಿ ತಮ್ಮ ಮುಂದಿನ ಅನೇಕ ಚಿತ್ರಗಳಿಗೆ ಹಾಡುವ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡಿದ್ದರು, ಇವುಗಳಲ್ಲಿ ವಕ್ತ್, ಗುಮ್ರಾಹ್ , ಹಮ್ರಾಝ್, ಆದ್ಮಿ ಔರ್ ಇನ್ಸಾನ್ , ಡೂಂಡ್ ಮುಂತಾದವುಗಳು ಸೇರಿದ್ದವು.
ಆಶಾ ಭೋಂಸ್ಲೆ ಮತ್ತು ಓ. ಪಿ. ನಯ್ಯರ್ ರ ಭಾಗೀದಾರಿಯಲ್ಲಿ ಹಲವಾರು ಜನಪ್ರಿಯಗೀತೆಗಳನ್ನು ನಿರ್ಮಿಸಲು ಸಾಧ್ಯವಾಯಿತು. ನಿಧಾನವಾಗಿ, ತಮ್ಮ ಕಠಿಣ ಪರಿಶ್ರಮ, ಮತ್ತು ಹೊಸ ಕಲಿಕೆಗಳಿಂದ ಆಶಾ ಬೋನ್ಸ್ಲೆ ತಮ್ಮದೇ ಆದ ವ್ಯಕ್ತಿತ್ವವನ್ನು ಗಳಿಸಿಕೊಂಡರು. ಆಶಾ ಬೋನ್ಸ್ಲೆ ಯವರ ಭಾಷಾ ಉಚ್ಚಾರಣೆ, ಮತ್ತು ಚಳಿಬಿಟ್ಟು ಧರ್ಯದಿಂದ ಹಾಡುವ ವಿಧಾನಗಳು, ಸಚಿನ್ ದೇವ್ ಬರ್ಮನ್ ಮತ್ತು ರವಿಯಂತಹ ಸ್ವರ ಸಂಯೋಜಕರನ್ನು ಬಹಳವಾಗಿ ಆಕರ್ಷಿಸಿದವು. ಸುಮಾರು ೧೪ ವರ್ಷ ಎಡೆಬಿಡದೆ ಜತೆ-ಜತೆಯಾಗಿ ದುಡಿದ ಭೋಂಸ್ಲೆ ಮತ್ತು ನಯ್ಯರ್ ೧೯೭೦ರ ದಶಕದಲ್ಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ದೂರವಾದರು. ವಾಸ್ತವವಾಗಿ ಆಶಾ ಬೋನ್ಸ್ಲೆ ಒಪಿನಯ್ಯರ್ ಮದುವೆಯಾಗಲು ಇಷ್ಟಪಟ್ಟಿದ್ದರು. ಆದರೆ ಒಪಿನಯ್ಯರ್ ಪತ್ನಿ ಮತ್ತು ಮಕ್ಕಳು, ವಿವಾಹ ವಿಚ್ಚೇದನಕ್ಕೆ ಒಪ್ಪಿಗೆ ಕೊಡಲಿಲ್ಲ. ಹಾಗಾಗಿ, ಅಸ್ಥಿರತೆ ಆಶಾರಿಗೆ ಕಾಡಿದ ಒಂದು ಪ್ರಬಲ ಕಾರಣವಿರಬಹುದು.
ಮುಂದಿನ ದಿನಗಳಲ್ಲಿ ಆಶಾರವರ ಆಸಕ್ತಿ ಹಾಗೂ ಗಮನ, ಯುವ ಸಂಗೀತ ನಿರ್ದೇಶಕ ಆರ್. ಡಿ. ಬರ್ಮನ್ ಕಡೆ ತಿರುಗಿತು. ೧೯೬೬ರಲ್ಲಿ, ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್‌ರ ಚೊಚ್ಚಲ ಸಾಧನೆಯನ್ನು ಕಂಡ ಚಿತ್ರ, ತೀಸ್ರಿ ಮಂಝಿಲ್ ನಲ್ಲಿನ ಆಶಾರ ಸಾಧನೆಯು ಜನಪ್ರಿಯತೆಯನ್ನು ಪಡೆಯಿತು. ಆಶಾ ಮೊದಲ ಭಾರಿಗೆ ಆಜಾ ಆಜಾ ಹಾಡಿನ ರಾಗವನ್ನು ಹಾಡಲು ಬೇಡಿಕೆಬಂದಾಗ, ಪಾಶ್ಚಿಮಾತ್ಯ ನೃತ್ಯದ ಧಾಟಿಯಲ್ಲಿ ಹಾಡಲು ಅಸಾಧ್ಯವೆಂದು ಪ್ರಯತ್ನಿಸಲು ಹಿಂಜರಿದರು. ಆರ್ ಡಿ ಬರ್ಮನ್ ಆಶಾ ಬೋನ್ಸ್ಲೆಯವರಿಗೆ ಪ್ರೋತ್ಸಾಹಿಸುತ್ತಾ, ಆ ಸಮಯದ ಹೆಸರಾಂತ ಗಾಯಕಿ, ಲತಾ ಮಂಗೇಶ್ಕರ್ ಒಂದೇ ಬಗೆಯ ಶೈಲಿಯಲ್ಲಿ ಗೀತೆಗಳನ್ನು ಪ್ರಸ್ತುತಮಾಡುತ್ತಾ ಬಂದಿದ್ದಾರೆ. ಆ ಹಳೆಯ ಜಾಡಿನಲ್ಲಿ ಹೊಸತನವನ್ನು ಸೃಷ್ಟಿಸಿ, ಧ್ವನಿಯಲ್ಲಿ ಏರಿಳಿತಗಳನ್ನು ಸ್ಥಾಪಿಸಿ, ಹೆದರಿಕೆ ಬಿಟ್ಟು, ಗೀತೆಯ ನವಿರನ್ನು ಬದಲಿಸುವ ಪ್ರಸ್ತಾಪನೆಯನ್ನು ಮಾಡಿದ್ದರು. ಈ ಹೊಸ ಶೈಲಿ ಸವಾಲಾಗಿ ಕಂಡರೂ, ಅದರಲ್ಲಿ ಯುವಜನರ ಆಕರ್ಷಣೆ ಮತ್ತು ಇಷ್ಟಪಟ್ಟು ಸಂಭ್ರಮಿಸುವುದನ್ನು ಕಣ್ಣಾರೆ ಕಂಡಾಗ, ಅವರಿಗೆ ಆ ಶೈಲಿಗಳ ಗೀತೆಗಳಲ್ಲಿ ಹೊಸತನವನ್ನು ಮೂಡಿಸುವ ಮನವರಿಕೆಯಾಯಿತು.
ಆಶೆ ತಾಯಿ ಸುಮಾರು ೧೦ ದಿನಗಳ ಸಮಯವನ್ನು ಬೇಡಿ, ಸತತ ಅಭ್ಯಾಸ ಮಾಡಿದತರುವಾಯ ಅಂತಿಮವಾಗಿ ಪ್ರಸ್ತುತಿ ಪಡಿಸಿದಾಗ ಪ್ರಭಾವಗೊಂಡ ಆರ್ ಡಿ ಬರ್ಮನ್ ಅವರು ೧೦೦-ರೂಪಾಯಿಗಳ ನೋಟನ್ನು ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಚಲನಚಿತ್ರದ ‘ಆಜಾ ಆಜಾ’ ಮತ್ತು ಇತರ ಹಾಡುಗಳು, ‘ಓ ಹಸೀನಾ ಝುಲ್ಫೋನ್‌ವಾಲಿ’ ಮತ್ತು ‘ಓ ಮೇರ ಸೋನಾ ರೆ’ (ಎಲ್ಲಾ ಮೂರು ಬಾಲಿವುಡ್‌ನ ಮತ್ತೊಂದು ಪ್ರಸಿದ್ಧ ಗಾಯಕ, ರಫಿ ಅವರೊಂದಿಗಿನ ಯುಗಳ ಗೀತೆಗಳು), ಯುವಜನತೆ ಆ ಹಾಡುಗಳನ್ನು ಬಹಳ ಆಸ್ಥೆಯಿಂದ ಸ್ವಾಗತಿಸಿದರು. ಚಲನಚಿತ್ರ ನಟ, ಶಮ್ಮಿ ಕಪೂರ್ ಆಶೆತಾಯಿಯವರ ಹಾಡಿನ ವೈಖರಿಯಿಂದ ಬಹಳ ಪ್ರಭಾವಿತರಾಗಿ ಹೋದೆಡೆಗಳೆಲ್ಲಾ ತುಂಬು ಕಂಠದಿಂದ ಹೊಗಳುತ್ತಿದ್ದರು. ಆರ್ ಡಿ ಬರ್ಮನ್ ಆಶಾರ ಸಹಭಾಗಿತ್ವವು ೧೯೭೦ರ ದಶಕದಲ್ಲಿ ಅನೇಕ ಜನಪ್ರಿಯ ಹಾಡುಗಳ ನಿರ್ಮಾಣಕ್ಕೆ ದಾರಿಯಾಯಿತು. ಇದು ಅವರ ಮದುವೆಗೂ ನಾಂದಿಯಾಯಿತು.
ಆರ್. ಡಿ. ಬರ್ಮನ್ ಆಶಾಬೋನ್ಸ್ಲೆಯನ್ನು ಮದುವೆಯಾಗಿ, ಅವರಿಗೊಂದು ಸುಭದ್ರವಾದ ಬದುಕನ್ನು ನಿರ್ಮಾಣಮಾಡಿಕೊಟ್ಟರು. ಇಬ್ಬರೂ ಕೆಲವು ವರ್ಷಗಳ ಕಾಲವಾದರೂ ಗಂಡ-ಹೆಂಡತಿಯರಾಗಿ ಬಾಳನ್ನು ಅನುಭವಿಸಿದರು.
ಆದರೆ ಓಪಿನಯ್ಯರ್ ಮತ್ತು ಆಶಾ ಬೋನ್ಸ್ಲೆ ಇಷ್ಟಪಟ್ಟಿದ್ದರೂ ಮದುವೆಯಾಗಲು ಸಾಧ್ಯವಾಗಲಿಲ್ಲ. ಸಾರ್ವಜನಿಕವಾಗಿ ಕೇವಲ ‘ಬಾಯ್ ಫ್ರೆಂಡ್’ ಎಂದು ಹೇಳಿಕೊಂಡು ಮುಂದುವರೆಯುವುದು ಸರಿಕಾಣಲಿಲ್ಲ. ಇಷ್ಟುಹೊತ್ತಿಗಾಗಲೇ ಆಶೆತಾಯಿ, ಚಲನ ಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಯಾವುದೇ ಸಂಗೀತ ನಿರ್ದೇಶಕರ ಆವಶ್ಯಕತೆ ಆಕೆಯ ಕರಿಯರ್ ಗೆ ಅನಿವಾರ್ಯವೆಂದು ಹೇಳಲಾಗದಷ್ಟು ಮುಂದುವರೆದು ಬೆಳೆದಿದ್ದರು. ಇದೂ ಅಲ್ಲದೆ ಇನ್ನೂ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಒಪಿನಯ್ಯರ್ ಜತೆ ಸಂಬಂಧವನ್ನು ಮುರಿಯಲು ಕಾರಣವಾಯಿತು.
ಯಾವುದೇ ಹೆಣ್ಣಿಗೆ ಮದುವೆಯಾಗಿದೆ, ಎಂದರೆ ಸಾರ್ವಜನಿಕವಾಗಿ ಏನೋ ಒಂದು ಸುಭದ್ರತೆಯ ಭಾವನೆ ಮನಸ್ಸಿನಲ್ಲಿ ಒಡಮೂಡುತ್ತದೆ. ಇದಲ್ಲದೇ ಅಂದಿನ ದಿನಗಳಲ್ಲಿ ಇದರ ತೀವ್ರ ಪರಿಣಾಮ ವೃತ್ತಿರಂಗದಲ್ಲಿರುವ ಆಶಾ ಬೋನ್ಸ್ಲೆಯಂಥವರಿಗೆ ಬೇರೆಯೇ ಅನುಭವವನ್ನು ದೊರಕಿಸಿಕೊಟ್ಟಿತ್ತು. ಮೊದಲನೇ ಮದುವೆಯ ಆಘಾತಕ್ಕೆ ಒಳಗಾಗಿದ್ದ ಆಶಾ ಬೋನ್ಸ್ಲೆ ತಮ್ಮ ಕೆರಿಯರ್ ನ ಮಂಝಿಲ್ ನ್ನು ಮುಟ್ಟಲು ಒಬ್ಬ ಪತಿಯ ಆಶ್ರಯ ಬಯಸಿದ್ದು ನಿಜ. ಆಗ ಅವರಿಗೆ ಸಾಂತ್ವನ ನೀಡಿ ಮಾರ್ಗದರ್ಶನ ಮಾಡಿದವರು ಒಪಿ ನಯ್ಯರ್. ಅವರು ೧೪ ವರ್ಷಗಳ ಕಾಲ ಒಬ್ಬ ಬಾಯ್ ಫ್ರೆಂಡ್ ಆಗಿ ಉಳಿದರೇ ವಿನಃ ಮದುವೆಯಾಗಲು ಇಷ್ಟಪಟ್ಟಿದ್ದಾಗ್ಯೂ ಅಡಚಣೆಗಳು ಬಹಳವಿದ್ದವು. ಸುನಿಲ್ ದತ್, ರೇಖಾ ಅಭಿನಯಿಸಿದ ‘ಪ್ರಾನ್ ಜಾಯೇ ಪರ್ ವಚನ್ ನ ಜಾಯೇ’ ಚಿತ್ರಕ್ಕೆ,(೧೯೭೪) ಒಪಿ ನಯ್ಯರ್ ಸಂಗೀತ ಸಂಯೋಜಿಸಿದ್ದರು. ಬರೆದವರು ಎಸ್. ಎಚ್. ಬಿಹಾರಿ ಮತ್ತು ಅಹ್ಮದ್ ವಾಸಿ; ಚಿತ್ರದ ಎಲ್ಲ ಗೀತೆಗಳನ್ನೂ ಆಶಾ ಬೋನ್ಲೆಯವರೇ ಹಾಡಿದ್ದರು. ಆ ಚಿತ್ರದ ‘ಚೈನ್ ಸೇ ಹಮ್ಕೋ ಕಭೀ’ ಗೀತೆಗೆ ಫಿಲಂ ಫೇರ್ ನ ಉತ್ಕೃಷ್ಟ ಗಾಯಕಿ ಪ್ರಶಸ್ತಿ, ಆಶಾ ಬೋನ್ಸ್ಲೆಯವರಿಗೆ ದೊರೆತಿತ್ತು.
ಆ ಗೀತೆ ಆಶಾ ಬೋನ್ಸ್ಲೆಯ ಅತ್ಯಂತ ಪ್ರಿಯ ಗೀತೆಯಾಗಿತ್ತು. ಅದು ಅವರ ಮನಸ್ಸಿನ ಅಳಲನ್ನು ವ್ಯಕ್ತಪಡಿಸುವ ಒಂದು ಮಾದ್ಯಮದಂತೆ ಪ್ರಚೋದಕವಾಗಿತ್ತು. ಏಕೋ ಆ ಹಾಡನ್ನು ಚಿತ್ರದಲ್ಲಿ ಅಳವಡಿಸುವ ಮೊದಲೇ ತರಾತುರಿಯಲ್ಲಿ ಚಿತ್ರ ನಿರ್ಮಾಪಕರು ಪರವಾನಗಿಗಾಗಿ ಫಿಲಂ ಸೆನ್ಸಾರ್ ಬೋರ್ಡ್ ಗೆ ಕಳಿಸಿದ್ದರು. ಸೆನ್ಸಾರ್ ಬೋರ್ಡ್ ನಿಂದ ಚಿತ್ರ ವಾಪಸ್ ಬಂದಮೇಲೆ ಆ ಗೀತೆಯನ್ನು ಸೇರ್ಪಡೆ ಮಾಡುವುದು ಅಸಾಧ್ಯವಾಗಿತ್ತು. ಈ ಘಟನೆ ಆಶಾ ಬೋನ್ಸ್ಲೆಯವರ ಮನಸ್ಸಿಗೆ ಬೇಸರವಾದ ಬಹುದೊಡ್ಡ ಸಂಗತಿಗಳಲ್ಲೊಂದು. ಒ. ಪಿ. ನಯ್ಯರ್ ಒಬ್ಬ ಭೋಳೆ ಸ್ವಭಾವದ ಜೀವನದ ಕಟು ಸತ್ಯಗಳನ್ನು ಅರಿಯದ ವ್ಯಕ್ತಿ.
ಒಪಿ ನಯ್ಯರ್ ತಮ್ಮ ಪತ್ನಿ ಮಕ್ಕಳೊಂದಿಗೆ ಒಳ್ಳೆಯ ಪ್ರೀತಿ-ಸಂಬಂಧ ಸಹಾನುಭೂತಿಗಳನ್ನು ಪಾರಿವಾರಿಕ ಸಂಬಂಧಗಳನ್ನು ಬೆಸೆದಿಟ್ಟುಕೊಳ್ಳುವಲ್ಲಿ ವಿಫಲರಾದರು. ಕ್ಷಣಿಕ ಪ್ರಸಿದ್ಧಿ ಅವರ ತಲೆಯನ್ನು ಹೊಕ್ಕಿತ್ತು. ೧೪ ವರ್ಷ ಜೊತೆಯಲ್ಲಿ ನೆರಳಿನಂತೆ ವರ್ತಿಸುತ್ತಾ ಫಿಲಂ ಜೀವನದಲ್ಲಿ ಹೊಂದಾಣಿಕೆಯನ್ನು ಕಂಡುಕೊಳ್ಳುತ್ತಿದ್ದ ಆಶಾ ಬೋನ್ಸ್ಲೆಯವರ ಹತ್ತಿರವೂ ವಿರಸತೆ ಇತ್ತು. ಹಾಗಾಗಿ ಒಂಟಿ ಜೀವನ ನಡೆಸಬೇಕಾದ ಪ್ರಮೇಯ ಬಂತು. ತಮ್ಮ ಭೋಳೇಪನ್, ಹಾಗೂ ದುನಿಯಾದಾರಿಯ ಕಟುಸತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದೆ, ತಮ್ಮ ಇಳಿವಯಸ್ಸಿನಲ್ಲಿ ಹಣದ ಕೊರತೆ, ಆಪ್ತಜನರ ಅಸಹಕಾರ, ಅಪಾರ ವ್ಯಥೆ, ನೋವುಗಳನ್ನು ಅನುಭವಿಸಬೇಕಾಯಿತು. ಅನೇಕ ಹೆಂಗಳೆಯರ ಸಹವಾಸ ಮತ್ತು ಅವರನ್ನು ಹೊತ್ತು ಗೊತ್ತಿಲ್ಲದ ಸಮಯದಲ್ಲಿ ಮನೆಗೆ ಕರೆದು, ಅವರ ಜತೆ ಸರಸ-ಚಕ್ಕಂದವಾಡುವ ಪ್ರವೃತ್ತಿ ಅವರ ವ್ಯಕ್ತಿತ್ವದ ಮೇಲೆ ಎಷ್ಟು ಕೆಟ್ಟ ಪರಿಣಾಮವನ್ನು ಮಾಡಬಹುದೆಂದು ಸ್ಪಷ್ಟವಾಗಿ ತಿಳಿದುಕೊಳ್ಳದೆ ತಮ್ಮ ಪರಿವಾರದಿಂದ ದೂರವಾದ ಒಪಿ ನಯ್ಯರ್, ತಮ್ಮ ಮರಣಾನಂತರ ಅಂತ್ಯ ಕ್ರಿಯೆಯ ಸಮಯದಲ್ಲಿ ತಮ್ಮ ಪರಿವಾರದವರ್ಯಾರೂ ಹತ್ತಿರವೂ ಬರಬಾರದೆಂದು ತಮ್ಮ ‘ವಿಲ್’ ನಲ್ಲಿ ಬರೆದಿಟ್ಟು ತಮ್ಮ ನೆಮ್ಮದಿಯ ಜೀವನದ ಬಾಗಿಲನ್ನು ತಾವೇ ಹಾಕಿಕೊಂಡರು. ಪತ್ನಿ, ಮೂರೂ ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಪಡೆದ ಓಪಿಯವರು ತಮ್ಮ ಚರ್ಚ್ ಗೇಟ್ ನ ‘ಶಾರದಾ ಬಿಲ್ಡಿಂಗ್’ ನಿಂದ ಬೇರೆಹೋದರು. ಮುಂದೆ ಮುಂಬಯಿನ ವಿರಾರ್ ಜಿಲ್ಲೆಯ ಒಬ್ಬ ಗೆಳೆಯರೊಬ್ಬರ ಮನೆಯಲ್ಲಿ, ನಂತರ ಠಾಣಾದಲ್ಲಿ ಮತ್ತೊಬ್ಬರ ಮನೆಯಲ್ಲಿ ‘ಪೇಯಿಂಗ್ ಗೆಸ್ಟ್’ ಆಗಿ ದಿನ ನೂಕುತ್ತಿದ್ದರು. ವೃದ್ಧಾಪ್ಯದ ಕಾಯಿಲೆಗಳಿಂದ ನರಳಿ, ೨೮, ಜನವರಿ, ೨೦೦೭ ರಲ್ಲಿ ನಿಧನರಾದರು.
ಎಸ್ ಡಿ ಬರ್ಮನ್ (ಸಚಿನ್ ದೇವ್ ಬರ್ಮನ್), (೧ , ಅಕ್ಟೋಬರ್ -೩೧,ಅಕ್ಟೋಬರ್, ೧೯೭೫)
ಬಾಲಿವುಡ್‌ನ ಪ್ರಖ್ಯಾತ ಸಂಗೀತಕಾರರಲ್ಲೊಬ್ಬರಾದ, ಸಚಿನ್ ದೇವ್ ಬರ್ಮನ್ ಹಾಗೂ ಅವರಿಗೆ ಇಷ್ಟವಾದ ಗಾಯಕಿ, ಲತಾ ಮಂಗೇಶ್ಕರ್ ಅವರ ಜೊತೆ ೧೯೫೭ ರಿಂದ ೧೯೬೨ರ ಸಮಯದವರೆಗೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಆ ಸಮಯದಲ್ಲಿ ಎಸ್. ಡಿ. ಬರ್ಮನ್ ಅವರು ಉತ್ತಮ ಗಾಯಕಿಯಾಗಿದ್ದ ಆಶಾ ಭೋಂಸ್ಲೆಯವರಿಂದ ಹಾಡುಗಳನ್ನು ಹಾಡಿಸಿದರು. ಆಕೆ ಮತ್ತು ಎಸ್ ಡಿ ಬರ್ಮನ್ ಅವರ ಜೋಡಿಯು ಕೆಲವು ಉತ್ತಮ ಚಿತ್ರಗಳಿಗೆ ಸಂಗೀತ ನೀಡಿತು. ಅವುಗಳು ಹೀಗಿವೆ.
ಕಾಲಾ ಪಾನಿ, ಕಾಲಾ ಬಝಾರ್, ಇನ್ಸಾನ್ ಜಾಗ್ ಉಠಾ , ಲಾಜವಂತಿ , ಸುಜಾತಾ, ಹಾಗೂ ತೀನ್ ದೇವಿಯಾ (೧೯೬೫). ಅವರು ೧೯೬೨ರ ನಂತರವೂ ಹಲವಾರು ಹಾಡುಗಳನ್ನು ಧ್ವನಿಮುದ್ರಣ ಮಾಡಿದರು. ಇದರಲ್ಲಿ ಬಹಳಷ್ಟು ಜನಪ್ರಿಯವಾಗಿರುವ ಯುಗಳ ಗೀತೆಗಳಲ್ಲಿ ಆಶಾ ಭೋಂಸ್ಲೆಯವರು ಮೊಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರ ಜೊತೆಯಲ್ಲಿ ಹಾಡಿದ್ದಾರೆ. ಬಿಮಲ್ ರಾಯ್ ಅವರ ಬಂದಿನಿ (೧೯೬೩) ಚಿತ್ರದ ಹಾಡು ಅಬ್ ಕೆ ಬರಸ್ ಅವರನ್ನು ಪ್ರಮುಖ ಹಾಡುಗಾರ್ತಿಯನ್ನಾಗಿ ಮಾಡಿತು. ತನುಜಾ ಅವರು ಅಭಿನಯಿಸಿದ ಜ್ಯುಯೆಲ್ ತೀಫ್ (೧೯೬೭) ಚಿತ್ರದ ಹಾಡು ರಾತ್ ಅಕೇಲಿ ಹೈ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿತು.
೧೯೬೦ರ ಮತ್ತು ೧೯೭೦ರ ದಶಕಗಳಲ್ಲಿ, ಇವರು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಕ್ಯಾಬರೆ ಡಾನ್ಸರ್, ಹೆಲೆನ್ ನಟನೆಗೆ ಧ್ವನಿಯಾದರು. ಆಶಾ ಭೋಂಸ್ಲೆ-ಹೆಲೆನ್‌ರ ಕೆಲವು ಪ್ರಸಿದ್ಧ ಹಾಡುಗಳು : ಪಿಯಾ ತೂ ಅಬ್ ತೊ ಆಜಾ (ಕಾರವಾನ್ ), ಓ ಹಸೀನಾ ಝುಲ್ಫೋನ್ ವಾಲಿ (ತೀಸ್ರಿ ಮಂಝಿಲ್ ), ಮತ್ತು ಏ ಮೇರಾ ದಿಲ್ (ಡಾನ್ ). ೧೯೮೦ರ ದಶಕದ ವೇಳೆಗೆ, ಆಶಾ ಭೋಂಸ್ಲೆ “ಕ್ಯಾಬರೆ ಗಾಯಕಿ” ಮತ್ತು “ಪಾಪ್ ಕ್ರೂನರ್” ಎಂದು ಸ್ಥಿರವಾದ ಪರಿಚಯವನ್ನು ಪಡೆದರು. ರೇಖಾ-ನಟಿಸಿದ ಉಮ್ರಾವೊ ಜಾನ್ ಚಿತ್ರದಲ್ಲಿ, ದಿಲ್ ಚೀಝ್ ಕ್ಯಾ ಹೈ , ಇನ್ ಇನ್ ಆಂಖೊಕಿ ಕಿ ಮಸ್ತಿ ಕೆ ಎ ಕ್ಯಾ ಜಗಾ ಹೈ ದೋಸ್ತೊ, ಮತ್ತು ‘ಜುಸ್ತ್‌ಜು’, ‘ಜಿಸ್ಕಿ ಥಿ’ ಗಳಂತಹ ಘಝಲ್‌ಗಳನ್ನು ಹಾಡುವುದರ ಮೂಲಕ ಅವರು ತನ್ನ ಬಹುಮುಖ ಸಾಮರ್ಥ್ಯವನ್ನು ದೃಢಪಡಿಸಿದ್ದಾರೆ. ಸಂಗೀತ ನಿರ್ದೇಶಕ ಖಯ್ಯಾಮ್, ಆಶಾರ ಹಾಡುವ ಫಿಚ್‌ನ್ನು ಅರ್ಧ ನೋಟ್ (ಸ್ವರಚಿಹ್ನೆ) ನಷ್ಟು ಕಡಿಮೆಮಾಡಿದ್ದಾರೆ. ಆಶಾ ತಾಯಿ, ತಾನು ಅಷ್ಟು ವಿಭಿನ್ನವಾಗಿ ಹಾಡಬಲ್ಲೆನೇ ಎಂದು ತಾನೇ ಆಶ್ಚರ್ಯಪಡುವಂತಾಗಿತ್ತು.
ಘಝಲ್‌ಗಳು ಆಶಾ ಬೋನ್ಸ್ಲೆಯವರ ವೃತ್ತಿ ಜೀವನದ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿವೆ. ಹೀಗೆ ಮುಂದುವರೆದು, ಇಜಾಝತ್ (೧೯೮೭) ಚಿತ್ರದ ಮೇರಾ ಕುಛ್ ಸಾಮಾನ್ ಹಾಡಿಗಾಗಿ ಅವರು ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡರು. ೧೯೯೫ರಲ್ಲಿ, ೬೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ ರಂಗೀಲಾ ಚಿತ್ರದಲ್ಲಿ ಕಿರಿಯ ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದರು. ಅವಳಿಂದ ಹಾಡಲ್ಪಟ್ಟ ತನ್ಹಾ ತನ್ಹಾ ಮತ್ತು ರಂಗೀಲಾ ರೇ ಗಳಂತಹ ಧ್ವನಿವಾಹಿನಿ ವಿಶೇಷಗುಣಲಕ್ಷಣ ಹಾಡುಗಳಿಗೆ, ಸಂಗೀತ ರಚನೆಯನ್ನು ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್‌ರವರಿಂದ ನೀಡಲಾಗಿದ್ದು, ಇನ್ನೂ ಅನೇಕ ಹಾಡುಗಳ ರಚನೆಯನ್ನು ಮಾಡಿದ್ದಾರೆ. ಮುಂದೆ ಹೋಗಿ, ೨೦೦೫ ರಲ್ಲಿ, ೭೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ ತಮಿಳು ಚಿತ್ರ ಚಂದ್ರಮುಖಿ ಗಾಗಿ ಹಾಡಿದ ಹಾಡುಗಳು ಮತ್ತು ಸಲ್ಮಾನ್ ಖಾನ್-ಅಭಿನಯಿಸಿದ ಲಕ್ಕಿ ಚಿತ್ರಕ್ಕಾಗಿ ಹಾಡಿದ ಪಾಪ್ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟವನ್ನು ಕಂಡ ದ್ವನಿಮುದ್ರಣಗಳಾಗಿದ್ದವು. ಭೋಂಸ್ಲೆರವರಿಂದ ಹಾಡಾಲ್ಪಟ್ಟ ಇತರ ಕೆಲವು ತಮಿಳು ಹಾಡುಗಳೆಂದರೆ ಓಹ್! ಬಟರ್‌ಪ್ಲೈ , ‘ಸೆಪ್ಟೆಂಬರ್ ಮಾಧಮ್’, ಮತ್ತು ‘ವೆನ್ನಿಲಾ ವೆನ್ನಿಲಾ’ . ಅಕ್ಟೋಬರ್ ೨೦೦೪ರಲ್ಲಿ, ೧೯೬೬-೨೦೦೩ರಲ್ಲಿ ಬಿಡುಗಡೆಯಾದ ಆಲ್ಬಂಗಳಿಗೆ ಮತ್ತು ಬಾಲಿವುಡ್ ಚಿತ್ರಗಳಿಗೆ ಭೋಂಸ್ಲೆರವರಿಂದ ಹಾಡಲ್ಪಟ್ಟ ಹಾಡುಗಳ ಸಂಕಲನ ಆಲ್ಬಂ “ದಿ ವೆರಿ ಬೆಸ್ಟ್ ಆಫ್ ಆಶಾ ಭೋಂಸ್ಲೆ, ದಿ ಕ್ವೀನ್ ಆಫ್ ಬಾಲಿವುಡ್” ನ ದ್ವನಿಮುದ್ರಣವನ್ನು ಮಾಡಲಾಯಿತು.
ಗಾಯಕಿ ಆಶಾ ಬೋನ್ಸ್ಲೆ, ಮತ್ತು ಫಿಲಂ ಸಂಗೀತಕಾರರು.
ಒ.ಪಿ. ನಯ್ಯರ್, ಓಂಕಾರ್ ಪ್ರಸಾದ್ ನಯ್ಯರ್ (೧೬, ಜನವರಿ, ೧೯೨೬-೨೮, ಜನವರಿ, ೨೦೦೭)
ಹಿಂದಿ ಚಿತ್ರ ಸಂಗೀತ ನಿರ್ದೇಶಕ ಒ. ಪಿ. ನಯ್ಯರ್ ಜತೆಯ ಒಡನಾಟವು ಬಾಲಿವುಡ್ ಇತಿಹಾಸದ ‘ಸುನಹರೆ’ ಭಾಗವಾಗಿತ್ತೆಂದು ಫಿಲಂ ತಜ್ಞರ ಅಭಿಪ್ರಾಯ. ಒಪಿನಯ್ಯರ್ ಒಬ್ಬ ಸಮರ್ಥ ಸ್ವರ ಸಂಯೋಜಕರಾಗಿದ್ದು ಆಶಾ ಬೋನ್ಸ್ಲೆಯವರ ಹೃದಯದಲ್ಲಿ ಅಡಗಿದ್ದ ವಿಶೇಷ ಪ್ರೌಢಿಮೆಯನ್ನು ನಿಖರಗೊಳಿಸುವಲ್ಲಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಸಜ್ಜನರು. ಒಪಿನಯ್ಯರ್ ಮತ್ತು ಆಶಾ ಭೋಸ್ಲೆ ಮುಂಬಯಿ ನಗರದಲ್ಲೆಲ್ಲ ಕ್ಯಾಡಿಲಾಗ್ ಕಾರಿನಲ್ಲಿ ಸುತ್ತಾಡುತ್ತಿದ್ದರು. ಇದನ್ನು ಎಲ್ಲರೂ ಗಮನಿಸಿದ್ದರು. ಬೊಂಬಾಯಿನ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದ ನಯ್ಯರ್ ಒಬ್ಬ ವಿಶೇಷ ಸಂಗೀತ ಸಾಮರ್ಥ್ಯದ ಗಾಯಕ/ಗಾಯಕಿಯರಿಗಾಗಿ ಹಾತೊರೆಯುತ್ತಿದ್ದರು. ಆಶಾರನ್ನು ಮೊದಲ ಭಾರಿಗೆ ೧೯೫೨ ರಲ್ಲಿ, ‘ಚಮ್ ಚಮಾ ಚಮ್’ ಹಾಡಿನ ಸಂಗೀತ ಮುದ್ರಣದ ಸಮಯದಲ್ಲಿಭೇಟಿಯಾದಾಗ ಆಕೆಯ ಧ್ವನಿಯಲ್ಲಿನ ಏರಿಳಿತ ಮತ್ತು ಲಯದ ಮಾರ್ದವತೆಯನ್ನು ತಕ್ಷಣ ಗುರುತುಹಿಡಿದರು. ಮೊಟ್ಟಮೊದಲು ಅವರು ಆಶಾ ಬೋಸ್ಲೆಯನ್ನು ‘ಮಾಂಗು’ (೧೯೫೪) ಚಿತ್ರಕ್ಕಾಗಿ ಹಾಡಲು ಕರೆದಿದ್ದರು, ಮತ್ತು ನಂತರ ಸಿಐಡಿ (೧೯೫೬) ಚಿತ್ರದ ಮೂಲಕ ಅವರ ವೃತ್ತಿಜೀವನಕ್ಕೆ ಒಂದು ಹೊಸಾ ತಿರುವನ್ನು ನೀಡಿದ್ದರು. ನಯಾ ದೌರ್ (೧೯೫೭) ಚಿತ್ರದ ಸಾಧನೆಯಾಗಿತ್ತು, ಮೇರುಮಟ್ಟದ ಸಂಗೀತ ನಿರ್ದೇಶಕ ಮತ್ತು ಆಶಾ ಬೋನ್ಸ್ಲೆ ಜೋಡಿಯನ್ನು ಬಹಳ ಜನಪ್ರಿಯಗೊಳಿಸಿತ್ತು. ೧೯೫೯ ರ ನಂತರ, ಅವರು ಭಾವನಾತ್ಮಕವಾಗಿ ಮತ್ತು ವೃತ್ತಿಪರವಾಗಿ ನಯ್ಯರ್‌ಜೊತೆ ತಮ್ಮನ್ನು ತೊಡಗಿಸಿಕೊಂಡರು.
ಪ್ರಗತಿಪರ ಸಂಗೀತ ನಿರ್ದೇಶಕ ಒ.ಪಿ. ನಯ್ಯರ್ ಮತ್ತು ‘ಗಜಬ್ ಕ ಹಾಡಿನ ಶೈಲಿಯನ್ನು ಹೊಂದಿದ್ದ, ಆಶಾ ಭೋಂಸ್ಲೆ’ಯವರ ಜೋಡಿಯ ಕಾರ್ಯವೈಖರಿ, ತಂಗಾಳಿಯ ಅಲೆಗಳಲ್ಲಿ ನಿಧಾನವಾಗಿ ತೇಲಿಬರುತ್ತಿದ್ದ ಮಧುರ ಸಂಗೀತದಂತೆ ಎಲ್ಲರ ಮನಸ್ಸಿನಲ್ಲೂ ಉಳಿಯುವಂತಾಯಿತು. ನಾಯಕಿ, ಮಧುಬಾಲಾ ಅಭಿನಯಿಸಿದ ‘ಆಯಿಯೇ ಮೆಹರಬಾನ್ (ಹೌರಾ ಬ್ರಿಡ್ಜ್ , ೧೯೫೮) ಹಾಗೂ ಮಮ್ತಾಝ್ ಅವರು ಅಭಿನಯಿಸಿರುವ ‘ಯೇ ಹೈ ರೇಷ್ಮಿ ಝುಲ್ಫೋಂ ಕಾ ಅಂಧೇರಾ’ (ಮೇರೆ ಸನಂ ,೧೯೬೫). ನಯಾ ದೌರ್ (೧೯೫೭), ತುಮ್ಸಾ ನಹೀ ದೇಖಾ (೧೯೫೭), ಹೌರಾ ಬ್ರಿಡ್ಜ್ (೧೯೫೮), ಏಕ್ ಮುಸಾಫಿರ್ ಏಕ್ ಹಸೀನಾ (೧೯೬೨), ಕಾಶ್ಮೀರ್ ಕಿ ಕಲಿ (೧೯೬೪), ಮುಂತಾದವುಗಳಂತಹ ಉತ್ತಮ ಚಿತ್ರಗಳಲ್ಲಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವುಗಳಲ್ಲಿ ಕೆಲವು ಜನಪ್ರಿಯ ಹಾಡುಗಳೆಂದರೆ ‘ಆವೋ ಹುಝೂರ್ ತುಮ್ಕೊ’ (ಕಿಸ್ಮತ್ ), ‘ಜಾಯಿಯೇ ಆಪ್ ಕಹಾ’ (ಮೇರೇ ಸನಮ್ ) ಮುಂತಾದವು. ಒ.ಪಿ. ನಯ್ಯರ್ ಹತ್ತಿರ ಗಾಯಕಿಯರಿಗೆ ಕೊರತೆಯಿರಲಿಲ್ಲ. ಲತಾಮಂಗೇಶ್ಕರ್ ವಿನಃ, ಗೀತಾದತ್ ಮೊದಲಾದವರು ಸದಾ ತಯಾರಾಗಿರುತ್ತಿದ್ದರು ತಮ್ಮ ಜನಪ್ರಿಯ ಜೋಡಿ ಆಶಾ ಭೋಂಸ್ಲೆ-ಮೊಹಮ್ಮದ್ ರಫಿಯವರಿಂದ ಹಾಡಿಸುತ್ತಿದ್ದರು. ಅದರಲ್ಲಿ ಕೆಲವು ಹೀಗಿವೆ :
- ಉಡೇ ಜಬ್ ಜಬ್ ಝುಲ್ಫೇ ತೇರಿ (ನಯಾ ದೌರ್ ).
- ಮೈ ಪ್ಯಾರ್ ಕಾ ರಾಹೀ ಹೂ. (ಎಕ್ ಮುಸಾಫಿರ್ ಎಕ್ ಹಸೀನಾ ),
- ದೀವಾನಾ ಹುವಾ ಬಾದಲ್ ,
- ಇಶಾರೋ ಹಿ ಇಶಾರೋ ಮೆ (ಕಶ್ಮೀರ್ ಕಿ ಕಲಿ ) ಇತ್ಯಾದಿ.
ಆಶಾ ಬೋನ್ಸ್ಲೆ, ” ಪ್ರಾಣ್ ಜಾಯೇ ಪರ್ ವಚನ್ ನಾ ಜಾಯೆ” (೧೯೭೪) ಚಿತ್ರದಲ್ಲಿ ಒ.ಪಿ.ನಯ್ಯರ್‌ರವರೊಂದಿಗಿನ ತಮ್ಮ ಕೊನೆಯ ಹಾಡಿನ ಮುದ್ರಣವನ್ನು ಮಾಡಿದ್ದರು.
ಸೋಲೋ ಆಗಿ ಹಾಡಿದ್ದ, ‘ಚೈನ್ ಸೆ ಜಿನೇ ನ ದಿಯಾ’ ಹಾಡು ಅನೇಕ ಪ್ರಶಸ್ತಿಗಳನ್ನು ಪಡೆಯಿತು, ಆದರೆ ಇದನ್ನು ಯಾವುದೇ ಚಿತ್ರದಲ್ಲಿ ಸೇರಿಸಿಲ್ಲ.
ಆಶಾಬೋನ್ಸ್ಲೆ ಹಾಗೂ ಓ. ಪಿ. ನಯ್ಯರ್ ಬೇರೆಯಾದರು :
ಅವರು ಆಗಸ್ಟ್ ೫, ೧೯೭೨ ರಂದು ಒಮ್ಮೆಲೇ ಬೇರೆಯಾದರು. ಬೇರೆಯಾದ ಅವರಿಬ್ಬರ ವರ್ತನೆ, ಯಾರಿಗೂ ಸ್ಪಷ್ಟವಾಗಿ ಅರ್ಥವಾಗಲಿಲ್ಲ. ಮೀಡಿಯಾದಲ್ಲಿ ಒಮ್ಮೆ ಕಾರಣವನ್ನು ಕೇಳಿದಾಗ, ಒ ಪಿ ನಯ್ಯರ್ ಒಮ್ಮೆ ಉತ್ತರಿಸಿದ್ದು ಹೀಗೆ : “ನನಗೆ ಜ್ಯೋತಿಷದಲ್ಲಿ ನಂಬಿಕೆಯಿದೆ. ಆಕೆಯಿಂದ ನಾನು ದೂರ ಸರಿಯ ಬಹುದೆಂದು ಎಂದೋ ಎಣಿಸಿದ್ದೆ. ಅದಕ್ಕೆ ಸರಿಯಾಗಿ ಯಾವುದೋ ಒಂದು ಅಹಿತಕರ ಘಟನೆ ಸಹ ನಡೆದು ನನ್ನ ಮನಸ್ಸಿಗೆ ನೋವನ್ನುಂಟು ಮಾಡಿತು. ಆದ್ದರಿಂದ ಒಂದು ನಿರ್ಧಾರ ತೆಗೆದುಕೊಳ್ಳಲೇ ಬೇಕಾಯಿತು. ಈಗ ನನಗೆ ಎಪ್ಪತ್ತಾರು ವರ್ಷ. ಒಟ್ಟಾರೆ ನನ್ನ ಜೀವನದಲ್ಲಿ ಪ್ರತ್ಯಕ್ಷವಾದ ಅತ್ಯಂತ ವಿಶೇಷ ವ್ಯಕ್ತಿ ಎಂದರೆ, ಅದು ಆಶಾ ಭೋಂಸ್ಲೆ ಎಂದು ಕನಸಿನಲ್ಲಿ ಕೇಳಿದರೂ ಸ್ಪಷ್ಟವಾಗಿ ಹೇಳಬಲ್ಲೆ. ನಾನು ಇದುವರೆವಿಗೂ ಬೇಟಿಯಾದ ಗಾಯಕಿಯರಲ್ಲಿ ಈಕೆಯೇ ಅತ್ಯುತ್ತಮ ವ್ಯಕ್ತಿ.” ಆಶಾ ಭೋಂಸ್ಲೆ ಮತ್ತು ಓ.ಪಿ.ನಯ್ಯರ್‌ರ ಯಾವುದೊ ಭಿನ್ನಾಭಿಪ್ರಾಯಕ್ಕಾಗಿ ಬೇರೆಯಾದರೂ, ಅವರು ಅದನ್ನು ನಿಜವಾಗಿ ಸ್ವಾಗತಿಸಿರಲಿಲ್ಲ. ದಿ ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಒಂದು ಸಂದರ್ಶನದಲ್ಲಿ ಆಶಾ ಬೋನ್ಸ್ಲೆ ಯವರನ್ನು ಕುರಿತು ಮಾತನಾಡುವಾಗ, ಅವರ ಹೇಳಿಕೆ ಹೀಗಿತ್ತು. “ಯಾವುದೇ ಸ್ವರ ಸಂಯೋಜಕರು, ನನ್ನ ವೃತ್ತಿಜೀವನದಲ್ಲಿ ನೆರವು ನೀಡಿದ್ದು ನನ್ನ ಧ್ವನಿ ಅವರ ಸಂಗೀತಕ್ಕೆ ಹೊಂದುತ್ತಿದ್ದ ಕಾರಣಗಳಿಂದಾಗಿ ; ನನಗೆ ಅವರ ಹಾಡುಗಳಿಗೆ ಹಾಡುವ ಅವಕಾಶವನ್ನು ನೀಡುವುದರ ಮೂಲಕ ಯಾವ ಒಬ್ಬ ಸಂಗೀತಗಾರನೂ ನನಗೆ ಯಾವುದೇ ವಿಶೇಷ ಉಪಕಾರ ಮಾಡಿರುವರೆಂದು ನನಗೆ ಅನ್ನಿಸುತ್ತಿಲ್ಲ”. ನಯಾ ದೌರ್ ಚಿತ್ರದ ನಿರ್ಮಾಪಕರಾದ ಬಿ. ಆರ್. ಚೋಪ್ರಾರವರು ಒಮ್ಮೆ ಆಶಾ ಬೋನ್ಸ್ಲೆಯವರನ್ನು ತನ್ನ ವೃತ್ತಿ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿದ್ದ ಸಂಗೀತ ನಿರ್ದೇಶಕರ ಹೆಗ್ಗಳಿಕೆಯನ್ನು ಪ್ರಶ್ನಿಸಿದಾಗ ಅವರ ಉತ್ತರ ಹೀಗಿತ್ತು.
ಖಯ್ಯಾಮ್, ಮೊಹಮ್ಮದ್ ಜಾಹೂರ್, ಖಯ್ಯಾಮ್ (೧೮, ಫೆಬ್ರವರಿ, ೧೯೨೭-೧೯, ಆಗಸ್ಟ್ ೨೦೧೯)
ಆಶಾ ಭೋಂಸ್ಲೆರ ಪ್ರತಿಭೆಯನ್ನು ಆರಂಭದ ಹಂತದಲ್ಲೇ ಗುರುತಿಸಿದ ಮತ್ತೊಬ್ಬ ಸಂಗೀತ ನಿರ್ದೇಶಕರೆಂದರೆ ಖಯ್ಯಾಮ್‌ರವರು. ಅವರು ಅವರ ಮೊದಲ ಚಿತ್ರ ಬಿವಿ (೧೯೪೮) ಯಿಂದಲೇ ಆಶಾ ಭೋಂಸ್ಲೆ ಜೊತೆ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ೧೯೫೦ ರ ದಶಕದಲ್ಲಿ ಖಯ್ಯಾಮ್ ಆಶಾ ತಾಯಿಗೆ ಕೆಲವು ಉತ್ತಮ ಚಿತ್ರಗಳಿಗೆ ಕೆಲಸಮಾಡುವ ಅವಕಾಶವನ್ನು ನೀಡಿದ್ದರು, ಅವುಗಳಲ್ಲಿ ದರ್ದ್, ಮತ್ತು ಫಿರ್ ಸುಬಹ ಹೋಗಿ, ಸೇರಿವೆ. ಈ ಜೋಡಿಯನ್ನು ಮುಖ್ಯವಾಗಿ ‘ಉಮ್ರಾವೊ ಜಾನ್ ಹಾಡು’ಗಳಿಂದಾಗಿ ನೆನೆಯಲಾಗುತ್ತಿತ್ತು.
ರವಿ ಶಂಕರ್ ಶರ್ಮ (೩, ಮಾರ್ಚ್, ೧೯೨೬-೭, ಮಾರ್ಚ್ ೨೦೧೨)
ಸ್ವರ ಸಂಯೋಜಕ ರವಿ ಶಂಕರ ಶರ್ಮ, (ರವಿ) ಆಶಾರನ್ನು ತನ್ನ ಅಚ್ಚುಮೆಚ್ಚಿನ ಗಾಯಕರಲ್ಲಿ ಒಬ್ಬರನ್ನಾಗಿ ಪರಿಗಣಿಸಿದ್ದರು. ಆಶಾ ಅವರ ಮೊದಲ ಚಿತ್ರ, ‘ವಚನ್’ (೧೯೫೫) ಗಾಗಿ ಹಾಡಿದ್ದರು. ‘ಚಂದಮಾಮ ದೂರ್ ಕೆ’ ಚಿತ್ರದ, ಮಧುರವಾದ ಜೋಗುಳದ ಹಾಡು, ಒಂದೇ ರಾತ್ರಿಯಲ್ಲಿ ಭಾರತದ ಯುವ-ತಾಯಂದಿರ ಅತಿ ಮೆಚ್ಚುಗೆಯ ಹಾಡಾಯಿತು. ಆಶಾದೀದಿಗೆ ಘರಾನ, ಗೃಹಸ್ತಿ , ಕಾಜಲ್ ಮತ್ತು ‘ಫೂಲ್ ಔರ್ ಪತ್ಥರ್’ ಚಿತ್ರಗಳಿಗಾಗಿ ಭಜನೆಗಳನ್ನು ಹಾಡುವ ಅವಕಾಶವನ್ನು ರವಿ ನೀಡಿದ್ದರು. ರವಿ ಮತ್ತು ಆಶಾ ಭೋಂಸ್ಲೆ ಅನೇಕ ವಿಭಿನ್ನ ಹಾಡುಗಳ ಧ್ವನಿ ಮುದ್ರಣವನ್ನು ಮಾಡಿದ್ದಾರೆ ; ಅವುಗಳಲ್ಲಿ ಕಿಶೋರ್ ಕುಮಾರ್ ಜೊತೆಗಿನ ಜನಪ್ರಿಯ ಹಾಸ್ಯದ ಛಾಯೆಯ ಯುಗಳ ಗೀತೆ, ಸಿ .. ಎ.. ಟಿ… ಕ್ಯಾಟ್ ; ಕ್ಯಾಟ್ ಮಾನೆ ಬಿಲ್ಲಿ (ದಿಲ್ಲಿ ಕಾ ಥಗ್ ) ಸೇರಿದೆ. ತೊರಾ ಮನ್ ದರ್ಪನ್ (ಕಾಜಲ್) ಭಜನೆಯನ್ನು ಆಶಾ ಭೋಂಸ್ಲೆರ ಅತ್ಯುತ್ತಮ ಗಾಯನಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇವರು ಆಶಾ ಅವರ ಜೊತೆಗೆ ಹಲವಾರು ಜನಪ್ರಿಯ ಚಲನಚಿತ್ರಗಳನ್ನು ಕೂಡಾ ಧ್ವನಿಮುದ್ರಣ ಮಾಡಿದ್ದಾರೆ. ಅವೆಂದರೆ :
ವಖ್ತ್ , ಚೌದವೀ ಕಾ ಚಾಂದ್ , ಗುಮ್ರಾಹ್ , ಬಹು ಬೇಟಿ , ಚೈನಾ ಟೌನ್ , ಆದ್ಮೀ ಔರ್ ಇನ್ಸಾನ್ , ಡೂಂಡ್ ,ಹಮ್ರಾಝ್ ,ಕಾಜಲ್ . ಚೌದವೀ ಕಾ ಚಾಂದ್ ಗಾಗಿ ರವಿಯವರು ಗೀತಾ ದತ್ ರವರನ್ನು ಹಾಡಲು ಕೇಳಿಕೊಂಡಿದ್ದರು. ಆಕೆಯು ಹಾಡದಿದ್ದಾಗ, ಗುರುದತ್ ಅವರು ಆಶಾ ಭೋಂಸ್ಲೆಯವರಿಂದ ಹಾಡಿಸಲು ಸೂಚಿಸಿದ್ದರು.
ಆರ್. ಡಿ. ಬರ್ಮನ್ (ಪಂಚಮ್ದಾ ) (೨೭, ಜೂನ್, ೧೯೩೯-೪, ಜನವರಿ, ೧೯೯೪)
ಆಶಾ ಬೋನ್ಸ್ಲೆ, ಮೊದಲು ರಾಹುಲ್ ದೇವ್ ಬರ್ಮನ್ (ಸಂಗೀತ ಪ್ರಿಯರು ಅವರನ್ನು “ಪಂಚಮ್” ಎಂದು ಕರೆಯುತ್ತಿದ್ದರು) ಅವರನ್ನು ಭೇಟಿಯಾದದ್ದು ಆಕೆ ಎರಡು ಮಕ್ಕಳ ತಾಯಿಯಾಗಿದ್ದಾಗ. ಆರ್. ಡಿ.ಯವರು ಆಗಿನ್ನೂ ಮೆಟ್ರಿಕ್ ಪರೀಕ್ಷೆಗೆ ಕಟ್ಟಿದ್ದರು ಆಶೆತಾಯಿ ಮತ್ತು ಆರ್.ಡಿ ಯವರ ಭಾಗೀದಾರಿಕೆ ಮೊದಲು ತೀಸ್ರಿ ಮಂಝಿಲ್ (೧೯೬೬) ಚಿತ್ರದಲ್ಲಿ ಗುರುತಿಸಲ್ಪಟ್ಟಿತು. ಅವರ ಜೋಡಿಯು ವೈವಿದ್ಯಮಯ ಹಾಡುಗಳನ್ನು ಧ್ವನಿಮುದ್ರಣ ಮಾಡಿತು – ಕ್ಯಾಬರೆಗಳು, ರಾಕ್, ಡಿಸ್ಕೊ, ಘಝಲ್‌ಗಳು, ಭಾರತೀಯ ಶಾಸ್ತ್ರೀಯ ಸಂಗೀತ ಇನ್ನೂ ಹಲವಾರು. ೧೯೭೦ರ, ಆಶಾ ಭೋಂಸ್ಲೆ ಹಾಗೂ ಪಂಚಮ್ ಅವರ ಯುವ, ಪಾಶ್ಚಿಮಾತ್ಯ ಹಾಡುಗಳು ಬಾಲಿವುಡ್‌ನಲ್ಲಿ ಹೊಸ ಅಲೆಗಳನ್ನು ಮೂಡಿಸಿದವು –
- ಭಾರವಾದ ಎತ್ತರದ ಧ್ವನಿಯಲ್ಲಿ ಕ್ಯಾಬರೆ, ‘ಪಿಯಾ ತೂ ಅಬ್ ತೊ ಆಜಾ’ (ಹೆಲೆನ್ ಅಭಿನಯದ ಕಾರವಾನ್ , ೧೯೭೧),
- ನಿಯಂತ್ರಣವಿಲ್ಲದ ‘ದಮ್ ಮಾರೊ ದಮ್’ ( ಹರೆ ರಾಮಾ ಹರೆ ಕೃಷ್ಣಾ) ,
- ಶೃಂಗಾರಮಯ, ‘ದುನಿಯಾ ಮೇ’ (ಅಪ್ನಾ ದೇಶ್ , ೧೯೭೨),
- ಪ್ರಣಯ ಪೂರಿತ, ‘ಚುರಾ ಲಿಯಾ ಹೈ ತುಮ್ನೇ’ (ಯಾದೋಂ ಕಿ ಬಾರಾತ್ , ೧೯೭೩).
ಪಂಚಮ್ ಅವರು ಆಶಾ ಭೋಂಸ್ಲೆ ಹಾಗೂ ಕಿಶೋರ್ ಕುಮಾರ್ ಜೋಡಿಯ ಹಲವಾರು ಗೀತೆಗಳನ್ನು ಧ್ವನಿ ಮುದ್ರಣ ಮಾಡಿದ್ದಾರೆ ಅವುಗಳಲ್ಲಿ ಕೆಲವು :
- – ಜಾನೆ ಜಾನ್, ಡೂಂಡ್ತಾ ಫಿರ್ ರಹಾ (ಜವಾನಿ ದಿವಾನಿ ),
- ಭಲಿ ಭಲಿ ಸಿ ಎಕ್ ಸೂರತ್ (ಬುಡ್ಡಾ ಮಿಲ್ ಗಯಾ ) ಮುಂತಾದವುಗಳು.
- ೧೯೮೦ರ ದಶಕದಲ್ಲಿ, ಪಂಚಮ್ ಹಾಗೂ ಆಶಾ ಭೋಂಸ್ಲೆಯವರು ಕೆಲ ಚಿತ್ರಗಳಿಗೆ ಸಂಗೀತ ನೀಡಿದರು ಅವೆಂದರೆ ಇಜಾಝತ್ (೧೯೮೭)-
- ಮೇರಾ ಕುಚ್ ಸಾಮಾನ್,
- ಖಾಲಿ ಹಾತ್ ಶಾಮ್ ಆಯಿ ಹೈ’ , “ಕತ್ರಾ ಕತ್ರಾ” .
- ಮತ್ತೊಂದು ಜನಪ್ರಿಯ ಜೋಡಿ ಗೀತೆ, ‘ಓ ಮರಿಯಾ’ (ಸಾಗರ್ ) ಕೂಡಾ ಧ್ವನಿಮುದ್ರಣ ಮಾಡಿದರು.
ಆರ್.ಡಿ.ಬರ್ಮನ್ ಸಂಗೀತ ನೀಡಿದ ಗುಲ್ಜಾರ್ ಅವರ ಇಜಾಝತ್ ಚಿತ್ರದ ಹಾಡು ಮೇರಾ ಕುಚ್ ಸಾಮಾನ್ ಗೆ ಅತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತು. ಆಶಾ ಅವರು ಆರ್.ಡಿ.ಬರ್ಮನ್ ಅವರನ್ನು “ಬಬ್ಸ್” ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ೧೯೮೦ರಲ್ಲಿ ತಮಗಿಂತ ೬ ವರ್ಷ ಚಿಕ್ಕವರಾದ ಆರ್. ಡಿ. ಯವರನ್ನು ಆಶಾ ಬೋನ್ಸ್ಲೆ ವಿವಾಹವಾದರು. ಬರ್ಮನ್ ರ ನಿಧನದವರೆಗೆ ಅವರ ಜೋಡಿ ಒಂದಾಗಿತ್ತು. ಆರ್.ಡಿ. ಬರ್ಮನ್ ಅವರು ಆಶಾ ಅವರನ್ನು ಕೆಲವು ಜನಪ್ರಿಯ ಬಂಗಾಳಿ ಹಾಡುಗಳನ್ನು ಹಾಡಲು ತಯಾರು ಮಾಡಿದರು. ಅವುಗಳು :
- ಮೊಹುಯೇ ಜೊಮೆಛೆ ಆಜ್ ಮೌ ಗೊ ,
- ಚೋಕೆ ಚೋಕೆ ಕೊತಾ ಬೋಲೊ ಚೊಕೆ ನಾಮೆ ಬ್ರಿಶ್ತಿ (ಜಾನೆ ಕ್ಯಾ ಬಾತ್ ಹೈ ನ, ಬಂಗಾಳಿ ಭಾಷಾಂತರ, ಹಿಂದಿಯಲ್ಲಿ),
- ಬಾಂಶಿ ಸುನೆ ಕಿ ಗೋರೆ ಥಕಾ ಜಾಯೆ ,
- ಸೊಂಧ್ಯಾ ಬೆಲೇ ತುಮಿ ಆಮಿ ,
- ಆಜ್ ಗುನ್‌ಗುನ್ ಗುನ್ ಗುಂಜೆ ಅಮರ್ (ಪ್ಯಾರ್ ದೀವಾನಾ ಹೋತಾ ಹೈ ನ ಬೆಂಗಾಳಿಯ ಹಿಂದಿ ಭಾಷಾಂತರ), ಮುಂತಾದವುಗಳು.
ದಕ್ಷಿಣ ಭಾರತದ ಇಳಯರಾಜ (೨, ಜೂನ್ ೧೯೪೩)
ದಕ್ಷಿಣ ಭಾರತೀಯ ಚಲನಚಿತ್ರರಂಗದ ಧೀಮಂತ ಸಂಗೀತಕಾರ ಇಳಯರಾಜ ಅವರೊಂದಿಗೆ ೧೯೮೦ರ ದಶಕದಲ್ಲಿ ಮೊದಲಿಗೆ ಮೂಂಡ್ರು ಪಿರೈ ಚಿತ್ರದ ಹಾಡುಗಳನ್ನು ಹಾಡಿದರು (೧೯೮೨) (ಅಥವಾ ಸದ್ಮಾ , ಇದರ ಹಿಂದಿ ರೀಮೇಕ್ ಚಿತ್ರ ೧೯೮೩). ಅವರ ಜೋಡಿಯು ೧೯೮೦ರ ದಶಕದ ಕೊನೆಯರ್ಧದಲ್ಲಿ ಹಾಗೂ ೧೯೯೦ರ ದಶಕದ ಮೊದಲ ಭಾಗದಲ್ಲಿ ಮುಂದುವರೆಯಿತು. ಈ ಸಮಯದ ಗಮನೀಯ ಹಾಡುಗಳೆಂದರೆ ಶೆನ್ಬಾಗಮೇ (ಎಂಗ ಊರು ಪಾಟುಕ್ಕಾರನ್ , ೧೯೮೭, ತಮಿಳು). ೨೦೦೦ ದಲ್ಲಿ, ಆಶಾ ಅವರು ಇಳಯರಾಜರ ಕಮಲ್ ಹಾಸನ್ ಅಭಿನಯದ ರಾಜಕೀಯ ಚಿತ್ರ ಹೇ ರಾಂ ನ ಶೀರ್ಷಿಕೆ ಹಾಡನ್ನು ಹಾಡಿದರು. ಜನ್ಮೋಂ ಕಿ ಜ್ವಾಲಾ (ಅಥವಾ ಅಪರ್ಣಾದ ವಿಷಯ)ದಲ್ಲಿ ಗಝಲ್ ಹಾಡುಗಾರ, ಹರಿಹರ ರೊಂದಿಗೆ ಹಾಡಿದರು.
ಎ. ಆರ್. ರೆಹಮಾನ್ (೬, ಜನವರಿ, ೧೯೬೬) ಅಲ್ಲಾ ರಖಾ ರೆಹ್ಮಾನ್
ಎ. ಆರ್. ರಹಮಾನ್ ಅವರು ಆಶಾ ಭೋಂಸ್ಲೆಯವರಿಗೆ ಪುನಃ ಹಾಡುವಂತೆ ರಂಗೀಲಾ (೧೯೯೪) ಚಿತ್ರದಲ್ಲಿ ಅವಕಾಶವನ್ನು ನೀಡಿದರು.
ಚಿತ್ರದ ಹಾಡುಗಳಾದ ತನ್ಹಾ ತನ್ಹಾ ಹಾಗೂ ರಂಗೀಲಾ ರೆ ಹಾಡುಗಳು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವು. ಆಕೆ ಹಾಗೂ ರೆಹಮಾನರ ಜೋಡಿಯು ಹಲವು ಉತ್ತಮ ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ.
ಅವೆಂದರೆ ಮುಝೆ ರಂಗ್ ದೇ (ತಕ್ಷಕ್ ), ರಾಧಾ ಕೈಸೆ ನ ಜಲೆ (ಲಗಾನ್ , ಉದಿತ್ ನಾರಾಯಣ್ ಜೊತೆ ಹಾಡಿರುವುದು), ಕಹೀ ಆಗ್ ಲಗೇ (ತಾಲ್ ), ಓ ಭವರೆ (ದೌಡ್, duet with ಕೆ. ಜೆ. ಯೇಸುದಾಸ್), ವೆನಿಲ್ಲಾ ವೆನಿಲ್ಲಾ (ಇರುವರ್ ,೧೯೯೯), ದುವಾನ್ ದುವಾನ್ (ಮೀನಾಕ್ಷಿ ,೨೦೦೪).
ಜಯದೇವ್ ಸಂಗೀತ ನಿರ್ದೇಶನದಲ್ಲಿ ಜಯದೇವ್ ೩, ಆಗಸ್ಟ್, ೧೯೧೮-೬, ಜನವರಿ, ೧೯೮೭) ಜೈದೇವ್ ವರ್ಮಾ :
ಆರ್. ಡಿ. ಬರ್ಮನ್‌ರ ಸಹಾಯಕ, ಜಯದೇವ್ ಸ್ವತಂತ್ರವಾಗಿ ಸ್ವರ ಸಂಯೋಜನೆಯನ್ನು ಮಾಡುವುದನ್ನು ಪ್ರಾರಂಭಿಸಿದಾಗ, ಅವರು ತಮ್ಮ ಕೆಲವು ಹಾಡುಗಳನ್ನು ಹಾಡಲು ಆಶಾರವರಿಗೆ ನೀಡಿದ್ದರು.
ಹಮ್ ದೋನೊ (೧೯೬೧),ಮುಜೆ ಜೀನೆ ದೊ (೧೯೬೩),ದೊ ಬೂಂದ್ ಪಾನಿ (೧೯೭೧) ಮತ್ತು ಇತರ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದರು. ೧೯೭೧ರಲ್ಲಿ, ಈ ಜೋಡಿಯು ಚಿತ್ರಗೀತೆಗಳಲ್ಲದ ಭಕ್ತಿಹಾಡುಗಳ ಎಲ್‌ಪಿ ಮತ್ತು ‘ಯನ್ ಅನ್‌ಫರ್ಗೆಟೇಬಲ್ ಟ್ರೀಟ್’ ಹೆಸರಿನ ಘಝಲ್‌ಗಳನ್ನು ಬಿದುಗಡೆಮಾಡಿದೆ . ಆಶಾ-ಜಯದೇವ್‌ರನ್ನು ತಾನು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ‘ಕಷ್ಟದಲ್ಲಿದ್ದಾಗ ತನಗೆ ನೆರವಾದ ಪ್ರಾಮಾಣಿಕ ಸ್ನೇಹಿತ’, ಎಂದು ಪರಿಗಣಿಸಿದ್ದಾಳೆ. ೧೯೮೭ರಲ್ಲಿ ಜಯದೇವ್ ಮರಣಹೊಂದಿದ ನಂತರ, ಜಯದೇವ್ ತನಗಾಗಿ ಸ್ವರ ಸಂಯೋಜನೆ ಮಾಡಿದ್ದ ಹೆಚ್ಚು ಜನಪ್ರಿಯಗೊಳ್ಳದ ಹಾಡುಗಳ ಸಂಕಲನ ಆಲ್ಬಂನ್ನು ಅವರು ‘ಸುರಾಂಜಲಿ’ ಹೆಸರಿನಲ್ಲಿ ಬಿಡುಗಡೆಮಾಡಿದ್ದರು.
ಶಂಕರ್ ಜೈಕಿಶನ್ (೧೯೪೯-೧೯೭೧)
ಶಂಕರ್ ಜೈಕಿಶನ್ ಕೇವಲ ಸ್ವಲ್ಪ ಸಮಯ ಮಾತ್ರ ಆಶಾ ಜೊತೆ ಕೆಲಸಮಾಡಿದ್ದರು. ಅದಾಗ್ಯೂ, ಈ ಜೋಡಿಯು ಪರ್ದೆ ಮೆ ರೆಹ್ನೆ ದೊ (ಶಿಕಾರ್ , ೧೯೬೮) ಸೇರಿ ಕೆಲವು ಜನಪ್ರಿಯ ಹಾಡುಗಳ ನಿರ್ಮಾಣವನ್ನು ಮಾಡಿತು. ಈ ಹಾಡಿಗಾಗಿ ಆಶಾ ಅವಳ ಎರಡನೆಯ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಳು. ಆಶಾ ಶಂಕರ್ ಜೈಕಿಶನ್‌ಗಾಗಿ ಝಿಂದಗಿ ಏಕ್ ಸಫರ್ ಹೈ ಸುಹಾನ (ಅಂದಾ ಝ್ ) ಎಂಬ ಹಾಡನ್ನು ಸಹ ಹಾಡಿದ್ದರು, ಇದರಲ್ಲಿ ಅವರು ತಮ್ಮ ವಿಶಿಷ್ಟ ಶೈಲಿಯ ಹಾಡುಗಳಿಂದ ಅತ್ಯಂತ ಜನಪ್ರಿಯಗೊಂಡ ಕಿಶೋರ್ ಕುಮಾರ್ ಧ್ವನಿಯ ಶೈಲಿಯಲ್ಲಿ ಹಾಡಲು ಪ್ರಯತ್ನಿಸಿದ್ದರು. ರಾಜ್ ಕಪೂರ್, ಲತಾ ಮಂಗೇಶ್ಕರ್‌ರ ಸಂಪರ್ಕದಲ್ಲಿ ಇಲ್ಲದಿದ್ದಾಗ, ಶಂಕರ್-ಜೈಕಿಶನ್‌ರವರಿಂದ ಸ್ವರ ಸಂಯೋಜನೆಯನ್ನು ಮಾಡಲಾದ ‘ಮೆರಾ ನಾಮ್ ಜೋಕರ್’ (೧೯೭೦) ಚಿತ್ರದ ಹಾಡುಗಳನ್ನು ಹಾಡುವ ಅವಕಾಶ ಆಶಾಗೆ ದೊರೆಯಿತು.
ಅನು ಮಲಿಕ್ (೨, ನವೆಂಬರ್ ೧೯೬೦) ಅನ್ವರ್ ಸರ್ದಾರ್, ಅನು ಮಾಲಿಕ್
ಸ್ವರ ಸಂಯೋಜಕ ಅನು ಮಲಿಕ್ ಆಶಾ ಜೊತೆಯಲ್ಲಿ ತನ್ನ ಮೊದಲನೆಯ ಚಿತ್ರ ಸೋನಿ ಮಹಿವಾಲ್ (೧೯೮೪)ನ ಹಾಡುಗಳನ್ನು ಸೇರಿ ಅನೇಕ ಜನಪ್ರಿಯ ಹಾಡುಗಳ ಧ್ವನಿಮುದ್ರಣವನ್ನು ಮಾಡಿದ್ದಾರೆ. ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಪಿಲ್‌ಹಾಲ್ (ಪಿಲ್‌ಹಾಲ್), ‘ಕಿತಾಬೆ ಬಹುತ್ ಸಿ’ (ಬಾಝಿಗರ್ ) ಇತ್ಯಾದಿ ಸೇರಿವೆ. ಆಶಾರಿಂದ ಹಾಡಲಾದ ಅನು ಮಲಿಕ್‌ರ ಜಬ್ ದಿಲ್ ಮಿಲೆ (ಯಾದ್‌ಇನ್ ) ನಾಲ್ಕು ಸಾಲುಗಳು ಸುಖ್‌ವಿಂದರ್ ಸಿಂಗ್, ಉದಿತ್ ನಾರಾಯಣ ಮತ್ತು ಸುನಿಧಿ ಚೌಹಾನ್‌ರ ದ್ವನಿಗಳಲ್ಲಿ ಅತ್ಯುತ್ತಮವಾಗಿ ಉಳಿಯಿತು. ಆಶಾ ೧೯೫೦ರ ಮತ್ತು ೧೯೬೦ರ ದಶಕಗಳಲ್ಲಿ ಮಲಿಕ್‌ರ ತಂದೆ ಸರ್ದಾರ್ ಮಲಿಕ್‌ರ ಹಾಡುಗಳಿಗೂ ಸಹ ಹಾಡಿದ್ದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಸರಂಗ (೧೯೬೦) ಚಿತ್ರಕ್ಕೆ ಹಾಡಿದ್ದು.
ಇತರೆ ಸಂಗೀತಕಾರರು :
ಮದನ್ ಮೋಹನ್ ಆಶಾ ಜೊತೆಯಲ್ಲಿ ಅನೇಕ ಹಾಡುಗಳ ದ್ವನಿಮುದ್ರಣವನ್ನು ಮಾಡಿದ್ದಾರೆ, ಅವುಗಳಲ್ಲಿ ಪ್ರಸಿದ್ಧ ಜಾನಪದಗೀತೆಯಾದ
ಮೆರ ಸಾಯ (೧೯೬೬)ದ ‘ಝುಂಕಾ ಗಿರಾ ರೆ’ ಸಹ ಸೇರಿದೆ.
ಛೋಟಿ ಸಿ ಬಾತ್ (೧೯೭೫) ಚಿತ್ರದಲ್ಲಿ,
ಜಾನೆಮನ್ ಜಾನೆಮನ್, ಹಾಡನ್ನು ಆಶಾ ಎ. ಜೆ. ಯೇಸುದಾಸ್ ಜೊತೆಯಲ್ಲಿ ಸಲೀಲ್ ಚೌಧರಿಗಾಗಿ ಹಾಡಿದ್ದರು. ಸಲೀಲ್‌ರ ೧೯೫೬ರ ಚಿತ್ರ ಜಾಗ್ತೆ ರಹೊ, ಸಹ ಆಶಾರಿಂದ ಧ್ವನಿಮುದ್ರಣ ಮಾಡಲಾದ ಹಾಡನ್ನು ಹೊಂದಿದೆ, ಅದೇ ಥಂಡಿ ಥಂಡಿ ಸಾವನ್ ಕಿ ಫುಹಾರ್. ಆಶಾರ ಮತ್ತೊಬ್ಬ ಬೆಂಬಲಿಗರು ಯುವ ಸ್ವರ ಸಂಯೋಜಕ ಸಂದೀಪ್ ಚೌತ, ಇವರು ಅವಳಿಗೆ ಕಂಬಕ್ತ್ ಇಷ್ಕ್ (ಸೋನು ನಿಗಮ್‌ಜೊತೆಗಿನ ಜೋಡಿಹಾಡು) (ಪ್ಯಾರ್ ತುನೆ ಕ್ಯಾ ಕಿಯಾ, ೨೦೦೧) ಹಾಡುವ ಅವಕಾಶವನ್ನು ನೀಡಿದ್ದರು. ಈ ಹಾಡು ಭಾರತೀಯ ಯುವಪೀಳಿಗೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿತ್ತು. ಆಶಾರವರು ಲಕ್ಷ್ಮಿಕಾಂತ್-ಪ್ಯಾರೆಲಾಲ್, ನೌಷದ್, ರವೀಂದ್ರ ಜೈನ್, ಎನ್ ದತ್ತ, ಹೇಮಂತ್ ಕುಮಾರ್‌ಗಳಂತಹ ಅನೇಕ ಲತಾ-ಪ್ರೋತ್ಸಾಕರೊಂದಿಗೆ ಸಹ ಕೆಲಸಮಾಡಿದ್ದಾರೆ. ಒಂದು ಸಲ ಆಶಾ ಮತ್ತು ಲತಾರ ನಡುವಿನ ವ್ಯತ್ಯಾಸವನ್ನು ಸೂಚಿಸುವಂತೆ ನೌಷದ್‌ರನ್ನು ಕೇಳಿದಾಗ, “ಲತಾರಲ್ಲಿ ಇರುವ ಯಾವುದೋ ಒಂದು ಆಶಾರಲ್ಲಿ ಇಲ್ಲ ; ಅದು ಕೇವಲ ಲತಾರಲ್ಲಿ ಮಾತ್ರ ಇದೆ” ಎಂದು ಅವರು ಹೇಳಿದ್ದರು. “ಬಹುಶಃ ಆ ಸಮಯದಲ್ಲಿ ಆಶಾರ ಗಾಯನವನ್ನು ನಾನು ಸರಿಯಾಗಿ ಆಲಿಸಿರಲಿಲ್ಲ, ಆದ್ದರಿಂದಲೇ ಆ ರೀತಿ ಹೇಳಿದ್ದೆ” ಎಂದು ನಂತರ ಒಂದು ಸಂದರ್ಶನದಲ್ಲಿ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು. ನೌಷದ್, ನಂತರ ಅವರ ಜೀವನದಲ್ಲಿ, ಸಹ ‘ತಾನು ಆಶಾ ಭೋಂಸ್ಲೆಗೆ ಪಕ್ಷಪಾತ ತೋರಿಸಿದ್ದೆ’ ಎಂದು ಪಶ್ಚಾತ್ತಾಪಪಟ್ಟಿದ್ದರು. ಜತಿನ್ ಲಲಿತ್, ಬಪ್ಪಿ ಲಹಿರಿ, ಕಲ್ಯಾಣ್‌ಜಿ ಆನಂದ್‌ಜಿ, ಉಷಾ ಖನ್ನ, ಚಿತ್ರಗುಪ್ತ್, ಮತ್ತು ರೋಷನ್‌ರಂತಹ ಪ್ರಖ್ಯಾತ ಬಾಲಿವುಡ್ ಸ್ವರ ಸಂಯೋಜಕರೊಂದಿಗೂ ಆಶಾ ಕೆಲಸಮಾಡಿದ್ದರು.
ಖಾಸಗಿ ಆಲ್ಬಂಗಳು :
ಗೀತಕಾರ, ಗುಲ್ಝಾರ್, ಸಂಗೀತ ನಿರ್ದೇಶಕ, ಆರ್.ಡಿ. ಬರ್ಮನ್ ಮತ್ತು ಆಶಾ ಭೋಂಸ್ಲೆ, ಮೂರುಜನ ಸೇರಿ, ೧೯೮೭ರಲ್ಲಿ ‘ದಿಲ್ ಪಡೋಸಿ ಹೈ’ ಹೆಸರಿನ ಜೋಡಿ ಆಲ್ಬಂನ ರಚನೆಯನ್ನು ಆರಂಭಿಸಿದ್ದರು, ಇದು ಸೆಪ್ಟೆಂಬರ್ ೮, ೧೯೮೭, ಆಶಾ ಭೋಂಸ್ಲೆರ ಜನ್ಮದಿನದಂದು ಬಿಡುಗಡೆಯಾಗಿತ್ತು.
೧೯೯೫ರಲ್ಲಿ, ಆಶಾ ಮೈಹರ್ ಘರಾನ (ಭಾರತೀಯ ಶಾಸ್ತ್ರೀಯ ಸಂಗೀತದ ಶೈಲಿಯ ಶಾಲೆ) ಒಳಗೇ ಇದ್ದ ಶಾಸ್ತ್ರೀಯ ಸಂಗೀತ ಭಂಡಾರವನ್ನು ಕಲಿಯಲು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಹೆಸರಾಂತ ಗಾಯಕ ಅಲಿ ಅಕ್ಬರ್ ಖಾನ್‌ರವರೊಂದಿಗೆ ಗಥ ಬಂಧನ (ದಾರ-ಕಟ್ಟುವ) ಧರ್ಮಾಚರಣೆಗೆ ಒಳಗಾಗಿದ್ದರು, ಇದನ್ನು ಖಾನ್ ಅವರಿಗೆ ಅವರ ತಂದೆ ಅಲ್ಲಾವುದ್ದಿನ್ ಖಾನ್ (ರವಿ ಶಂಕರ್‌ರ ಗುರುಗಳು) ಇವರಿಂದ ಹಸ್ತಾಂತರಿಸಲಾಗಿತ್ತು. ನಂತರ, ಆಶಾ ಮತ್ತು ಉಸ್ತದ್ ಅಲಿ ಆಕ್ಬರ್ ಖಾನ್ ಇಬ್ಬರು ಸೇರಿ ಕಾಲಿಫೋರ್ನಿಯಾದಲ್ಲಿ ಲೆಗಸಿ ಹೆಸರಿನ ಖಾಸಗಿ ಆಲ್ಬಂಗಾಗಿ ಹನ್ನೊಂದು ಸ್ಥಿರ ಸಂಯೋಜನೆಗಳ (ಅಥವಾ ಬಂದಿಷ್ ಗಳ) ಧ್ವನಿ ಮುದ್ರಣವನ್ನು ಮಾಡಿದ್ದರು, ನಂತರ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ೧೯೯೦ರ ದಶಕದಲ್ಲಿ, ಆಶಾರವರು ಆರ್ ಡಿ ಬರ್ಮನ್‌ರ ಮರುಮಿಶ್ರಿತ ಹಾಡುಗಳೊಂದಿಗೆ ಪ್ರಯೋಗಗಳನ್ನು ಮಾಡಿದ್ದರು. ಹಳೇ ಮಧುರ ಗೀತೆಗಳನ್ನು ಬೇಕಾದ ರೀತಿಯಲ್ಲಿ ತಿದ್ದುಪಡಿಮಾಡಿ ಬದಲಾಯಿಸಿದ್ದಕ್ಕಾಗಿ ಆಶಾ ಅನೇಕರಿಂದ ನಿಂದನೆಗೊಳಗಾಗಿದ್ದರು, ಇವರಲ್ಲಿ ಖಯ್ಯಮ್ ಸಹ ಒಬ್ಬರಾಗಿದ್ದರು. ಅದಾಗ್ಯೂ, ರಾಹುಲ್ ಆಂಡ್ ಐ ಗಳಂತಹ ಆಲ್ಬಂಗಳು ತಕ್ಕ ಮಟ್ಟಿಗೆ ಜನಪ್ರಿಯಗೊಂಡಿದ್ದವು. ೧೯೯೭ರಲ್ಲಿ, ಆಶಾ ಜಾನಮ್ ಸಂಜಾ ಕರೋ ಎಂಬ ಖಾಸಗಿ ಹಿಂದಿ ಪಾಪ್ ಆಲ್ಬಂನ್ನು ಲೆಸ್ಲೀ ಲೆವೀಸ್ ಜೊತೆಯಲ್ಲಿ ಮಾಡಿದ್ದಾರೆ. ಈ ಆಲ್ಬಂ ಅತೀ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿತ್ತು, ಇವುಗಳಲ್ಲಿ ೧೯೯೭ರ ಎಮ್‌ಟಿವಿ ಪ್ರಶಸ್ತಿ ಸಹ ಒಳಗೊಂಡಿದೆ. ಒಂದು ಸಲ ನಿರ್ದೇಶಕರಾದ ಬಿ ಅರ್ ಇಶಾರರವರು ತಮ್ಮ ಒಂದು ಚಿತ್ರಕ್ಕೆ ಸ್ವರ ಸಂಯೋಜನೆಯನ್ನು ನೀಡುವಂತೆ ಆಶಾ ಭೋಂಸ್ಲೆರನ್ನು ಕೇಳಿದ್ದರು, ಆದರೆ ಅವರು ಅದನ್ನು ಸವಿನಯವಾಗಿ ನಿರಾಕರಿಸಿದರು.
೨೦೦೨ರಲ್ಲಿ, ಅವರು ಆಪ್ ಕಿ ಆಶಾ ಆಲ್ಬಂದೊಂದಿಗೆ ಸ್ವರ ಸಂಯೋಜಕರಾಗಿ ಬದಲಾದರು, ಇದು ಒಂದು ಎಂಟು-ಹಾಡುಗಳ ಸ್ವರಮಿಲನ ಮತ್ತು ಚಲನಚಿತ್ರ ಆಲ್ಬಂ ಆಗಿತ್ತು. ಇದಕ್ಕೆ ಸಾಹಿತ್ಯವನ್ನು ಬರೆದವರು ಮಜ್ರೂಹ್ ಸುಲ್ತಾನ್‌ಪುರಿ (ಇದು ಅವರ ಕೊನೆಯ ಸಾಹಿತ್ಯ) ಮತ್ತು ಸ್ವರ ಸಂಯೋಜನೆಯನ್ನು ಸ್ವತಃ ಆಶಾರವರೇ ಮಾಡಿದ್ದರು. ಈ ಆಲ್ಬಂನ್ನು ಮೇ ೨೧, ೨೦೦೧ರಂದು ಮುಂಬಯಿನಲ್ಲಿ ಲಾವಿಶ್ ಔತಣದ ಸಮಯದಲ್ಲಿ ಸಚಿನ್ ಟೆಂಡುಲ್ಕರ್‌ರವರಿಂದ ಬಿಡುಗಡೆಮಾಡಲಾಗಿತ್ತು. ಆಲ್ಬಂ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.
ಆಶಾ ಪಾಕಿಸ್ತಾನದ ಗಾಯಕ, ಅದ್ನಾಂ ಸಾಮಿ ೧೦ ವರ್ಷದ ವಯಸ್ಸಿನವರಿರುವಾಗಲೇ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಅದು ಲಂಡನ್‌ನಲ್ಲಿ, ಆರ್ ಡಿ ಬರ್ಮನ್‌ರವರೊಂದಿಗೆ ಕಾರ್ಯಕ್ರಮವನ್ನು ನೀಡುತ್ತಿರುವ ಸಮಯವಾಗಿತ್ತು. ಆಗ ಸಂಗೀತದಲ್ಲಿ ಅವನ ಆಶಕ್ತಿಯನ್ನು ಗಂಭೀರವಾಗಿ ತೊಡಗಿಸಿಕೊಳ್ಳುವಂತೆ ಹೇಳಿದ್ದವರೇ ಆಶಾ. ಅದ್ನನ್ ಬೆಳೆದು ದೊಡ್ಡವನಾಗಿ ವೃತ್ತಿಪರ ಸಂಗೀತಗಾರನಾದಾಗ, ಅವನ ಅತ್ಯುತ್ತಮ-ಮಾರಾಟ ಕಂಡ ಆಲ್ಬಂ ಕಭೀ ತೊ ನಝರ್ ಮಿಲಾವೊ ಗಾಗಿ ಆಶಾ ಅವನೊಂದಿಗೆ ಶೀರ್ಷಿಕೆ ಜೋಡಿ ಹಾಡನ್ನು ಹಾಡಿದ್ದರು. ಮತ್ತೆ ಅವರಿಬ್ಬರು ಬರ್ಸೆ ಬದಲ್ ಆಲ್ಬಂನಲ್ಲಿ ಸಹ ಹಾಡಿದ್ದರು. ಈ ಆಲ್ಬಂ, ಭಾರತೀಯ ಶಾಸ್ತ್ರೀಯ ಸಂಗೀತ ಆಧಾರದ ಎಂಟು ಹಾಡುಗಳನ್ನು ಒಳಗೊಂಡಿದೆ. ವೊಮದ್ ಟಾಕಿಂಗ್ ಬುಕ್ ವಾಲ್ಯೂಮ್ ಫೋರ್ ಮುದ್ರಣಕ್ಕಾಗಿ ಅವರು ಯನ್ ನಾ ತಿ ಹಾಡಿನ ನೆರವನ್ನು ನೀಡಿದ್ದರು: ಇದು ವೊಮದ್ ಮುದ್ರಣದಲ್ಲಿ ಏಷಿಯಾ ೧ಗೆ ನೀಡಿದ್ದ ಒಂದು ಪರಿಚಯವಾಗಿತ್ತು . ಆಶಾ ಮೆರಜ್-ಇ-ಘಝಲ್ , ಆಬ್‌ಶರ್-ಇ-ಘಝಲ್ ಮತ್ತು ಕಾಶಿಷ್ ಗಳಂತಹ ಅನೇಕ ಅಲ್ಬಂಗಳಿಗೆ ಘಝಲ್‌ಗಳನ್ನು ಹಾಡಿದ್ದಾರೆ.
೨೦೦೫ರಲ್ಲಿ, ಆಶಾ ತನ್ನ ಸ್ವಂತ ಹೆಸರಿನ ಆಲ್ಬಂನ (ಆಶಾ ) ಬಿಡುಗಡೆಯನ್ನು ಮಾಡಿದ್ದರು, ಇದು ನಾಲ್ಕು ಹೆಸರಾಂತ ಘಝಲ್ ಗಾಯಕಿಯರಿಗೆ ನೀಡಿದ್ದ ಶ್ಲಾಘನೆಯಾಗಿತ್ತು – ಮೆಹದಿ ಹಸನ್, ಘುಲಮ್ ಅಲಿ, ಪರಿದಾ ಖನುಮ್ ಮತ್ತು ಜಗ್ಜಿತ್ ಸಿಂಗ್. ಈ ಆಲ್ಬಂ ಪರಿದಾ ಕುಮಾರ್‌ರ ಆಜ್ ಜಾನೆ ಕಿ ಝಿದ್ ನಾ ಕರೊ , ಘುಲಮ್ ಅಲಿರ ಚುಪ್ಕೆ ಚುಪ್ಕೆ , ಆವಾರ್ಗಿ ಮತ್ತು ದಿಲ್ ಮೆ ಏಕ್ ಲಹರ್ , ಜಗ್ಜಿತ್ ಸಿಂಗ್‌ರ ‘ಆಹಿಸ್ತ ಆಹಿಸ್ತ ‘ಮತ್ತು ಮೆಹದಿ ಹಸನ್‌ರ ‘ರಂಜಿಶ್ ಹಿ ಸಹಿ ರಫ್ತ ರಫ್ತ’ ಮತ್ತು ‘ಮುಝೆ ತುಮ್ ನಝರ್ ಸೆ’ ಗಳಂತಹ ಅವರ ಅಚ್ಚುಮೆಚ್ಚಿನ ಎಂಟು ಘಝಲ್‌ಗಳನ್ನು ಒಳಗೊಂಡಿದೆ. ಸಂಗೀತಗಾರ ಪಂಡಿತ್ ಸೋಮೇಶ್ ಮಾಥುರ್ ಈ ಶಾಸ್ತ್ರೀಯ ಘಝಲ್‌ಗಳನ್ನು ಆಧುನಿಕ ಧ್ವನಿಗಳ ಮೂಲಕ ಮರುರಚಿಸಿದ್ದಾರೆ. ಈ ಆಲ್ಬಂನ್ನು, ಆಶಾರ ಪ್ರಕಾರ, ಸಾಂಪ್ರದಾಯಿಕ ತಬಲ ಮತ್ತು ಸಾರಂಗಿ ಧ್ವನಿಗಳಿಂದ “ದೂರವಾಗಿದ್ದ” ಯುವ ಪೀಳಿಗೆಗಾಗಿ ಮಾಡಲಾಗಿತ್ತು. ಆಶಾರ ಹಾಡುಗಳ ಬಹುಸಂಖ್ಯಾತ ಸಂಕಲನಗಳು ಸಹ ಬಿಡುಗಡೆಯಾಗಿದ್ದವು. ಅವರ ೬೦ನೆಯ ಹುಟ್ಟುಹಬ್ಬದ ಸ್ಮಾರಕೋತ್ಸವಕ್ಕಾಗಿ,
೧೯೯೩ರಲ್ಲಿ ಇಎಮ್‌ಐ ಇಂಡಿಯಾ ಮೂರು ಕ್ಯಾಸೆಟ್‌ಗಳನ್ನು ಬಿಡುಗಡೆಮಾಡಿತ್ತು: ‘ಬಲಾ ಮೈ ಬೈರಾಗನ್ ಹೂಂಗಿ’ (ಭಕ್ತಿಗೀತೆಗಳು), ‘ದಿ ಗೋಲ್ಡನ್ ಕಲೆಕ್ಷನ್’: ‘ಮೆಮೋರೇಬಲ್ ಘಝಲ್ಸ್’ (ಘುಲಾಮ್ ಅಲಿ, ಆರ್ ಡಿ ಬರ್ಮನ್ ಮತ್ತು ನಾಝರ್ ಹುಸ್ಸೇನ್‌ಗಳಂತಹ ಸ್ವರ ಸಂಯೋಜಕರಿಂದ ಸಂಯೋಜಿಸಲಾದ ಚಿತ್ರೇತರ ಘಝಲ್‌ಗಳು), ಮತ್ತು ‘ದಿ ಗೋಲ್ಡನ್ ಕಲೆಕ್ಷನ್’: ‘ದಿ ಎವೆರ್ ವರ್ಸಾಟೈಲ್ ಆಶಾ ಭೋಂಸ್ಲೆ ‘(೪೪ ಜನಪ್ರಿಯ ಚಲನಚಿತ್ರಗೀತೆಗಳು). ೨೦೦೬ರಲ್ಲಿ, ಅವರು ‘ಆಶಾ ಆಂಡ್ ಫ್ರೆಂಡ್ಸ್’ ಹೆಸರಿನ ಆಲ್ಬಂನ ಧ್ವನಿ ಮುದ್ರಣವನ್ನು ಮಾಡಿದ್ದರು, ಇದರಲ್ಲಿ ಅವರು, ಪ್ರಸಿದ್ಧ ಚಲನಚಿತ್ರ ನಟರೊಂದಿಗೆ ಜೋಡಿ ಹಾಡುಗಳನ್ನು ಹಾಡಿದ್ದರು, ಅವರೆಂದರೆ ಸಂಜಯ್ ದತ್ ಮತ್ತು ಊರ್ಮಿಳಾ ಮಾತೋಂಡ್ಕರ್ ಮತ್ತು ಪ್ರಸಿದ್ಧ ಕ್ರಿಕೆಟಿಗ ಬ್ರೆತ್ ಲೀ ಯೊಂದಿಗೆ ಅವರು ‘ಯು ಆರ್ ದಿ ಒನ್ ಫರ್ ಮಿ’ (ಹಾನ್ ಮೆ ತುಮ್ಹಾರಾ ಹೂ )ಹಾಡಿದ್ದರು. ಈ ಎಲ್ಲಾ ಹಾಡುಗಳ ಸ್ವರ ಸಂಯೋಜನೆಯನ್ನು ಮಾಡಿದ್ದವರು ಶಮೀರ್ ತಂಡನ್ ಮತ್ತು ಇದರ ಚಲನಚಿತ್ರ ಚಿತ್ರೀಕರಣವನ್ನು ನಿರ್ದೇಶಕರಾಗಿ ಬದಲಾದ ಪತ್ರಿಕೋದ್ಯಮಿ ಎಸ್ ರಾಮಚಂದ್ರನ್‌ನಿಂದ ಮಾಡಲಾಯಿತು.
ಗಾನಗೋಷ್ಠಿಗಳು ಮತ್ತು ವಿದೇಶಿ ಕಲಾವಿದರೊಂದಿಗಿನ ಸಹಭಾಗಿತ್ವಗಳು :
೧೯೮೦ರ ಮತ್ತು ೧೯೯೦ರ ದಶಕಗಳಲ್ಲಿ, ಆಶಾ ವಿಶ್ವ-ಪ್ರವಾಸವನ್ನು ಕೈಗೊಂಡು, ಕೆನಡ, ದುಬೈ, ಯುಕೆ, ಯು.ಎಸ್. ಮತ್ತು ಅನೇಕ ಇತರ ದೇಶಗಳಲ್ಲಿ ಗಾನಗೋಷ್ಠಿಗಳನ್ನು ಮಾಡಿದ್ದರು. ೧೯೮೯ರಲ್ಲಿ, ಪ್ರಪಂಚ ಪ್ರವಾಸದ ಸಮಯದಲ್ಲಿ, ಅವರು ೨೦ ದಿನಗಳಲ್ಲಿ ಯುಎಸ್‌ನ ೧೩ ನಗರಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದರು. ಇದಾದ ತಕ್ಷಣ, ಅವರು ಈಗಾಗಲೇ ಮಾರಾಟಗೊಂಡ ಅನುಸೂಚಿತ ಗಾನಗೋಷ್ಠಿಯನ್ನು ಸ್ವೆಡನ್‌ನ, ಸ್ಟೋಖೋಲ್ಮ್‌ನಲ್ಲಿ ಹೊಂದಿದ್ದರು. ಒತ್ತಡದ ಕಾರ್ಯಕ್ರಮಗಳಿಂದ, ಆಶಾ ಜ್ವರ, ಕೆಮ್ಮು ಮತ್ತು ಸುಸ್ತಿನ ಜೊತೆಗೆ ಅತಿಯಾದ ದೊಡ್ಡ ಕರುಳಿನ ತೊಂದರೆಗೆ ಒಳಗಾಗಿದ್ದರು. ಸ್ಟೋಖೋಲ್ಮ್‌ನಲ್ಲಿ, ಗಾನಗೋಷ್ಠಿ-ಪೂರ್ವ ಬಿಕ್ಕಟ್ಟುಗಳ ಸಮಾವೇಶವನ್ನು ಕರೆಯಲಾಗಿತ್ತು, ಇದಕ್ಕೆ ಆಶಾರ ಮಗ (ಮತ್ತು ಕಾರ್ಯ ನಿರ್ವಾಹಕ) ಆನಂದ್ ಮತ್ತು ಗಾನಗೋಷ್ಠಿಯನ್ನು ನಡೆಸುವ ಪ್ರವರ್ತಕರು ಹಾಜರಾಗಿದ್ದರು. ವಾದ್ಯವೃಂದ ಅನೇಕ ಇನ್‌ಸ್ಟ್ರುಮೆಂಟಲ್ ಟ್ರ್ಯಾಕ್‌ಗಳನ್ನು ನುಡಿಸುವುದು, ಸುರೇಶ್ ವಾದ್ಕರ್‌ರಂತಹ ಸಂಗಡಿಗ ಗಾಯಕ ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಳ್ಳುವರು, ಮತ್ತು ಆಶಾ ಸ್ವಲ್ಪ ಸಮಯಕ್ಕೆ ಮಾತ್ರ ಕಾಣಿಸುಕೊಳ್ಳುವರು ಎಂಬುದಾಗಿ ನಿರ್ಧರಿಸಲಾಗಿತ್ತು. ಆದರೆ ಆಶಾ ಈ ಎಲ್ಲಾ ಸೂಚನೆಗಳನ್ನು ತಿರಸ್ಕರಿಸಿದ್ದರು, ಮತ್ತು ಗಾನಗೋಷ್ಠಿಯಲ್ಲಿ ತನ್ನ ಸರಿ ಇಲ್ಲದ ಧ್ವನಿಯಿಂದಲೇ ಕಷ್ಟಪಟ್ಟು ಹಾಡಿದ್ದರು. ಅವರ ಆರು ಬಾಲಿವುಡ್ ಹಾಡುಗಳ ಮೊದಲ ಸೆಟ್ ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆದುಕೊಂಡಿಲ್ಲ, ಇದು ಬಹುಶಃ ಭಾರತೀಯ ಮತ್ತು ಪಾಕಿಸ್ತಾನಿ ಒಲಸಿಗರನ್ನು ಕುರಿತದ್ದಾಗಿತ್ತು. ಎರಡನೆಯ ಸೆಟ್ ಹಾಡುಗಳನ್ನು ಹಾಡಲು ಪ್ರಾರಂಭಿಸುವ ಮೊದಲು, ಪ್ರೇಕ್ಷಕ ಗುಂಪಿನಲ್ಲಿನ ಒಬ್ಬ ಅಭಿಮಾನಿ ಅವರನ್ನು ಒಂದು ಮರಾಠಿ ಹಾಡನ್ನು ಹಾಡುವಂತೆ ಕೋರಿದ್ದರು. ಆಶಾ ಇದಕ್ಕೆ ಸಮ್ಮತಿಸಿ, ‘ನಾಚ್-ನಾಚುನಿ ಆತಿ ಮಿ ದಮಾಲೆ’ (“ಈ ಕೊನೆಯಿಲ್ಲದ ನೃತ್ಯದಿಂದ ನಾನು ತುಂಬಾ ಬಳಲಿದ್ದೇನೆ”) ಎಂಬ ಹಾಡನ್ನು ಹಾಡಿದ್ದರು. ಹಾಡು ಮುಗಿದಾಗ, ಸಭಾಂಗಣ ಚಪ್ಪಾಳೆಗಳ ಗಡಗಡಾಹಟ್ ಮತ್ತು ಒನ್ಸ್ ಮೊರ್ ಎಂದು ಕೋರುವ ಉದ್ಗಾರಗಳಿಂದ ತುಂಬಿ ತುಳುಕುತ್ತಿತ್ತು. ಗಾನಗೋಷ್ಠಿಯ ನಂತರ, ಈ ಅತಿಯಾದ ದಣಿವಿನಿಂದ ಚೇತರಿಸಿಕೊಳ್ಳಲು ಆಶಾ ರವರಿಗೆ ಸ್ವಲ್ಪ ಕಾಲ ಬೇಕಾಯಿತು.
ಅಕ್ಟೋಬರ್ ೨೦೦೨ರಲ್ಲಿ, “ಹೆಲ್ಪ್ ದಿ ಏಜ್ಡ್ (ವೃದ್ದರಿಗೆ ಸಹಾಯಮಾಡಿ)” ಕಾರ್ಯಕ್ರಮದಿಂದ ಭಾರತದಲ್ಲಿನ ವೃದ್ದರಿಗಾಗಿ ದೇಣಿಗೆಯನ್ನು ಸಂಗ್ರಹಿಸಲು ಅವರು ಲಂಡನ್‌ನಲ್ಲಿ ಸುದೇಶ್ ಭೋಂಸ್ಲೆ ಮತ್ತು ಸಹೋದರರೊಂದಿಗೆ ಗಾನಗೋಷ್ಠಿಯನ್ನು ಮಾಡಿದ್ದರು. ೨೦೦೭ರಲ್ಲಿ ಅವರು “ದಿ ಇನ್‌ಕ್ರೆಡಿಬಲ್” ಹೆಸರಿನ ಪ್ರವಾಸದಲ್ಲಿ, ಯುಎಸ್‌ಎ, ಕೆನಡ, ಮತ್ತು ವೆಸ್ಟ್ ಇಂಡೀಸ್‌ಗಳ ಪ್ರವಾಸವನ್ನು ಮಾಡಿದ್ದರು. ಈ ಪ್ರವಾಸದಲ್ಲಿ, ಗಾಯಕರಾದ ಸೋನು ನಿಗಮ್, ಕುನಲ್ ಗಂಜಾವಾಲ ಮತ್ತು ಕೈಲಾಶ್ ಖೆರ್, ಸಹ ಅವರಜೊತೆಯಲ್ಲಿದ್ದರು. ಮೂಲತಃ ೧೨ ಗಾನಗೋಷ್ಠಿಗಳಿಗೆ ಮಾತ್ರ ನಿಶ್ಚಿತಗೊಳಿಸಲಾಗಿತ್ತು, ಆದರೆ ಈ ಪ್ರವಾಸ ೨೦ಕ್ಕೂ ಅಧಿಕ ಗಾನಗೋಷ್ಠಿಗಳನ್ನು ಮಾಡಿತ್ತು. ೧೯೮೦ರ ದಶಕದ ಮಧ್ಯದಲ್ಲಿ, ಆಶಾ ಬೋಯ್ ಜಾರ್ಜ್ (ಬೊವ್ ಡೌನ್ ಮಿಸ್ಟೆರ್ ) ಮತ್ತು ಸ್ಟೆಫೆನ್ ಲಾಸ್‌ಕೊಂಬೆ ಜೊತೆಗೆ ಹಾಡಿದ್ದರು.
೧೯೯೭ರಲ್ಲಿ, ಅವರ ೬೪ನೆಯ ವಯಸ್ಸಿನಲ್ಲಿ ಅವರು ಲವ್ ಸಾಂಗ್ ಒಂದನ್ನು ಬೋಯ್ ಬ್ಯಾಂಡ್ ಕೋಡ್ ರೆಡ್ ಜೊತೆಯಲ್ಲಿ ಹಾಡಿದ್ದರು. ಮಿಶೆಲ್ ಸ್ಟಿಪ್ ಜೊತೆಗೆ ಅವರು ದಿ ವೇ ಯು ಡ್ರೀಮ್ (ಒನ್ ಜಯಂಟ್ ಲೀಪ್,) ಹಾಡಿನ ಧ್ವನಿಮುದ್ರಣವನ್ನು ಸಹ ಮಾಡಿದ್ದರು, ಇದನ್ನು ಬುಲ್ಲೆಟ್‌ಫ್ರೂಪ್ ಮಾಂಕ್ ಎಂಬ ಆಂಗ್ಲ ಚಲನಚಿತ್ರದಲ್ಲಿ ಉಪಯೋಗಿಸಲಾಗಿತ್ತು. ಈ ಹಾಡು ಬಿಡುಗಡೆಯಾಗಿದ್ದು ಸಹ ಸ್ವಹೆಸರಿನ ಆಲ್ಬಂ ೨೦೦೨ನ ೧ ಜಯಂಟ್ ಲೀಪ್‌ನಲ್ಲಿಯೇ. ೧೯೯೭ರಲ್ಲಿ, ಬ್ರಿಟೀಷ್ ಬ್ಯಾಂಡ್ ಕಾರ್ನರ್ ಶಾಪ್ ತಮ್ಮ ಬ್ರಿಂಫುಲ್ ಆಫ್ ಆಶಾ ಎನ್ನುವ ಹಾಡಿನೊಂದಿಗೆ ಆಶಾರವರನ್ನು ಪ್ರಶಂಸಿಸಿತ್ತು, ಇದು ಒಂದು ಅಂತರ್‌ರಾಷ್ಟ್ರೀಯ ಮಟ್ಟಡ ಜನಪ್ರಿಯ ಗೀತೆಯಾಗಿದ್ದು, ನಂತರ ಇದನ್ನು ಫ್ಯಾಟ್‌ಬಾಯ್ ಸ್ಲಿಮ್‌ನಿಂದ ರೀಮಿಕ್ಸ್ ಮಾಡಲಾಗಿತ್ತು. ೨೦೦೧ರಲ್ಲಿ, ನೆಲ್ಲಿ ಪರ್ಟಾಡೊರ “ಐ ಯಾಮ್ ಲೈಕ್ ಎ ಬರ್ಡ್” ಸಿಡಿಯು ಡಿಜಿಟಲ್ ಕಟ್‌ಅಪ್ ಲಾಂಜ್ ನಿಂದ ರಚಿಸಲಾದ “ನೆಲ್ಲಿ ವಿಎಸ್. ಆಶಾ ರೀಮಿಕ್ಸ್”ನ್ನು ಒಳಗೊಂಡಿದೆ. ೨೦೦೩ರಲ್ಲಿ, ಬ್ರಿಟೀಷ್ ಒಪೆರಾ ಪಾಪ್ ಗಾಯಕಿ ಸಾರಾ ಬ್ರೈಟ್‌ಮ್ಯಾನ್ ಅವರ ಆಲ್ಬಂ ಹಾರೆಮ್ ನಲ್ಲಿ ಅವರ “ದಿಲ್ ಚೀಝ್ ಕ್ಯಾ ಹೈ” ಗಾಯನವನ್ನು ಮಾದರಿಯಾಗಿ ನೀಡಿದ್ದರು. ಇದನ್ನು ಅವರ “ಯು ಟೇಕ್ ಮೈ ಬ್ರೀತ್ ಅವೇ” ಹಾಡಿಗೆ ಮುನ್ನುಡಿಯಾಗಿ ಉಪಯೋಗಿಸಲಾಗಿತ್ತು.
೨೦೦೫ರಲ್ಲಿ, ಅಮೆರಿಕಾದ ಸ್ಟ್ರಿಂಗ್ ಕ್ವಾರ್ಟೆಟ್ ಕ್ರೋನೋಸ್ ಕ್ವಾರ್ಟೆಟ್, ಆರ್ ಡಿ ಬರ್ಮನ್ ಸಂಕಲನಗಳ ಮರು ಧ್ವನಿ ಮುದ್ರಣವನ್ನು ಮಾಡಿತ್ತು, ಅವುಗಳೆಂದರೆ ಚುರಾ ಲಿಯಾ , ಪಿಯಾ ತು, ಮೇರಾ ಕುಚ್ ಸಾಮಾನ್ ಇತ್ಯಾದಿ ಮತ್ತು ಇವುಗಳನ್ನು ಹಾಡುವ ಅವಕಾಶವನ್ನು ಆಶಾರವರಿಗೆ ನೀಡಲಾಗಿತ್ತು. ಅವರ ವಯಸ್ಸನ್ನೂ ಲೆಕ್ಕಿಸದೆ (ಅವರು ೭೦ನ್ನು ದಾಟಿದ್ದರು), ಅವರು ದಿನಕ್ಕೆ ಮೂರರಿಂದ ನಾಲ್ಕು ಹಾಡುಗಳ ಧ್ವನಿ ಮುದ್ರಣ ಮಾಡುವುದರ ಮೂಲಕ, ಕ್ವಾರ್ಟೆಟ್ ಸದಸ್ಯರನ್ನು ಆಶ್ಚರ್ಯಗೊಳಿಸಿದ್ದರು.
ಆಗಸ್ಟ್ ೨೩, ೨೦೦೫ ರಂದು, ‘ಯು ಹ್ಯಾವ್ ಸ್ಟೋಲೆನ್ ಮೈ ಹಾರ್ಟ್ – ಸಾಂಗ್ಸ್ ಫ್ರಮ್ ಆರ್ ಡಿ ಬರ್ಮನ್’ಸ್ ಬಾಲಿವುಡ್ ಯುಎಸ್‌ನಲ್ಲಿ ಬಿಡುಗಡೆಯಾಗಿತ್ತು, ಈ ಆಲ್ಬಂ “ಉತ್ತಮ ಸಮಕಾಲೀನ ಪ್ರಪಂಚ ಸಂಗೀತ ಆಲ್ಬಂ”ಗಳ ಶ್ರೇಣಿಯಲ್ಲಿ ೨೦೦೬ರ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.
೧೯೯೦ರ ದಶಕದಲ್ಲಿ, ಕ್ರೋನೋಸ್ ಕ್ವಾರ್ಟೆಟ್‌ನ ಡೇವಿಡ್ ಹರಿಂಗ್‌ಟನ್‌ರನ್ನು ಒಬ್ಬ ಸ್ನೇಹಿತ, ಆಜ್ ಕಿ ರಾತ್ ಗೀತೆಯೊಂದಿಗೆ ಪರಿಚಯಿಸಿದ್ದರು. ಹರಿಂಗ್‌ಟನ್ ತನ್ನ ಗಾಯನದಿಂದ ಎಲ್ಲಾ ಕೇಳುಗರನ್ನೂ ವಶೀಕರಿಸಿದ್ದರು ; ಮತ್ತು ಹಾಡನ್ನು ‘ಕ್ರೋನೋಸ್ ಕರಾವನ್ ಆಲ್ಬಂ’ನಲ್ಲಿ ಸೇರಿಸಲಾಗಿತ್ತು.
೨೦೦೫ರಲ್ಲಿ, ದಿ ಬ್ಲ್ಯಾಕ್ ಐಡ್ ಫೀಸ್ ತಮ್ಮ ಜನಪ್ರಿಯ “ಡೋಂಟ್ ಪಂಕ್ ವಿತ್ ಮೈ ಹಾರ್ಟ್”ನಲ್ಲಿ ಅವರ “ಏ ನೌಜವಾನ್ ಸಬ್ ಕುಚ್ ಯಹಾ” (ಅಪರಾದ್, ೧೯೭೨) ಮತ್ತು “ಹೇ ಮೇರಾ ದಿಲ್ ಪ್ಯಾರ್ ಕಾ ದಿವಾನ” (ಡಾನ್, ೧೯೭೮) ಹಾಡುಗಳ ನಮೂನೆಯನ್ನು ಹೊಂದಿದ್ದರು.
೨೦೦೬ರ ಕೊನೆಯಲ್ಲಿ, ಆಶಾ ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್ ಸ್ಟಾರ್, ಬ್ರೆತ್ಲೀ ರ ಜೊತೆ ಕಾರ್ಯನಿರ್ವಹಿಸಿದ್ದರು. ಏಕ ವ್ಯಕ್ತಿ ಪ್ರದರ್ಶನ, ಯು ಆರ್ ದಿ ಫರ್ ಮಿ ಚಾರ್ಟ್ಸ್‌ನಲ್ಲಿ ೪ನೇ ಸ್ಥಾನದ ಪ್ರಥಮ ಪ್ರವೇಶವನ್ನು ಮಾಡಿ ನಂತರ ಎತ್ತರದ ೨ನೆಯ ಸ್ಥಾನವನ್ನು ತಲುಪಿತ್ತು.
೨೦೦೬ರಲ್ಲಿ ಆಶಾ ಪಾಕಿಸ್ತಾನಿ ಚಿತ್ರ, ‘ಮೈ ಏಕ್ ದಿನ್ ಲೌಟ್ ಕೇ ಆವೂಂಗಾ’ ಧ್ವನಿಸುರುಳಿಗಾಗಿ, ಪಾಕಿಸ್ತಾನದ ಪಾಪ್ ಗಾಯಕ ಜಾವೆದ್ ಅಹಮದ್ ಜೊತೆಯಲ್ಲಿ ‘ದಿಲ್ ಕೆ ತಾರ್ ಬಜೆ ‘ಹಾಡಿನ ಧ್ವನಿ ಮುದ್ರಣವನ್ನು ಮಾಡಿದ್ದರು. ಈ ಹಾಡನ್ನು ಚಲನಚಿತ್ರ ಪ್ರಚಾರ ಅಭಿಯಾನದ ಭಾಗವಾಗಿ ಪ್ರಸಾರಮಾಡಲಾಗಿತ್ತು ಮತ್ತು ಇದು ‘ಟಾಪ್ ಮ್ಯೂಸಿಕ್ ಚಾರ್ಟ್ಸ್’ನ ವೈಶಿಷ್ಟ್ಯತೆಯೊಂದಿಗೆ ಅತ್ಯಂತ ಜನಪ್ರಿಯಗೊಂಡಿತ್ತು.
ಕನ್ನಡ ಭಾಷೆಯಲ್ಲಿ ಹಾಡಿದ ಗೀತೆಗಳು :
ಆಶಾದೀದಿ ಕನ್ನಡದಲ್ಲಿ ಮೊದಲು ಹಾಡಿದ ಹಾಡು “ಯಾಕೋ ಏನೋ ಸೆರಗು..” ಎಂಬ, 1967ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ್ದು. ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರ್ಲೇಕರ್, ಲತಾ, ಉಷಾ ಮಂಗೇಶ್ಕರ್ ಅವರಿಂದಲೂ ಹಾಡಿಸಿದ್ದರು.
ಮುಂಬಯಿನಲ್ಲಿ ಕನ್ನಡಿಗರೊಬ್ಬರ (ಮೆಸರ್ಸ್. ಮೈಸೂರ್ ಕನ್ಸರ್ನ್ಸ್ ನ ಮಾಲೀಕರು : ಶ್ರೀ. ವೆಂಕಟ್ರಾಮ್ ರವರು ಹಿಂದಿ ಚಿತ್ರನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದರು. ಕೆಲವು ಕಾರಣಗಳಿಂದ ಅದು ನೆರವೇರಲಿಲ್ಲ) ನಿರ್ವಹಣೆಯಲ್ಲಿ ತಯಾರಾಗುತ್ತಿದ್ದ”ಆಶಾ ನಿರಾಶಾ” ಚಿತ್ರದಲ್ಲೂ ಆಶಾ ಹಾಡಿದ್ದರು ಇದು ಚಿತ್ರನಟಿ, ವೈಜಯಂತಿಮಾಲಾ ಅವರ ಮೊದಲ ಕನ್ನಡ ಚಿತ್ರವಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಲಿಲ್ಲ. ಇದಾದ ಬಳಿಕ ದೂರದ ಬೆಟ್ಟ ಚಿತ್ರದಲ್ಲಿ ಜಿ.ಕೆ.ವೆಂಕಟೇಶ್ ಅವರ ಸ್ವರಸಂಯೋಜನೆಯಲ್ಲಿ “ಸವಾಲು ಹಾಕಿ ಸೋಲಿಸಿ ಎಲ್ಲರ..” ಎಂಬ ಹಾಡನ್ನು ಹಾಡಿದ್ದಾರೆ. ಅದಾದ ಮೇಲೆ ಆಶಾ ಮತ್ತೆ ಹಾಡಿದ್ದು 2010 ರ ಮತ್ತೆ ಮುಂಗಾರು ಮಳೆ ಚಿತ್ರದ “ಹೇಳದೆ ಕಾರಣ ಹೋದೆಯಾ” ಎಂಬ, ದುಃಖ ತುಂಬಿದ ಹಾಡಾಗಿತ್ತು.
ಆಶಾ ದೀದಿಯವರ ವೈಯಕ್ತಿಕ ಜೀವನ :
ಆಶಾರ ಮನೆಯು ದಕ್ಷಿಣ ಮುಂಬಯಿ ಪ್ರದೇಶದಲ್ಲಿನ ಪೆದ್ದರ್ ರಸ್ತೆಯಲ್ಲಿನ ‘ಪ್ರಭುಕುಂಜ್ ಅಪಾರ್ಟ್‌ಮೆಂಟ್ಸ್ ‘ನಲ್ಲಿದೆ. ಅವರು ಮೂವರು ಮಕ್ಕಳನ್ನು ಮತ್ತು ಐದು ಜನ ಮಮ್ಮೊಕ್ಕಳನ್ನು ಹೊಂದಿದ್ದಾರೆ. ಹೇಮಂತ್ ಭೋಂಸ್ಲೆ ಅವರ ಹಿರಿಯ ಮಗ. (ಹೇಮಂತ್ ಕುಮಾರ್ ಎಂದು ಹೆಸರಿಡಲಾಗಿದೆ), ಅವರು ತಮ್ಮ ಆರಂಭದ ಬಹುತೇಕ ವರ್ಷಗಳನ್ನು ವಿಮಾನ ಚಾಲಕರಾಗಿ ಕಳೆದಿದ್ದರು, ಮತ್ತು ಸಂಗೀತ ನಿರ್ದೇಶಕನಾಗಿ ಸ್ವಲ್ಪ ಮಟ್ಟಿನ ವೃತ್ತಿ ಜೀವನವನ್ನು ಪಡೆಯಲು ಆ ಹುದ್ದೆಯನ್ನು ತೊರೆದಿದ್ದರು. ಹೇಮಂತ್‌ಗಿಂತಲೂ ಚಿಕ್ಕವಳಾದ ಆಶಾರ ಮಗಳು ವರ್ಷ, ‘ದಿ ಸಂಡೇ ಅಬ್‌ಸೆರ್ವೆರ್’ ಮತ್ತು ‘ರೆಡಿಫ್.ಕಾಂ’ ಗೆ ಲೇಖಕಿಯಾಗಿ ಕಾರ್ಯನಿರ್ವಹಿಸಿದ್ದರು.
ಕಿರಿಯ ಮಗ ಆನಂದ್ ಭೋಂಸ್ಲೆ, ಅವರು ವ್ಯವಹಾರ ಮತ್ತು ಚಲನಚಿತ್ರ ನಿರ್ದೇಶನವನ್ನು ಅಭ್ಯಾಸಿಸಿದ್ದರು. ಅವರು ಆಶಾರ ವೃತ್ತಿ ಜೀವನದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶೆತಾಯಿಯವರ ಮೊಮ್ಮಗ, ಚೈತನ್ಯ (ಚಿಂಟು) ಭೋಂಸ್ಲೆ (ಹೇಮಂತ್ ಅವರ ಮಗ) ತನ್ನನ್ನು ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾನೆ. “ಯಶಸ್ವೀ ಬಾಯ್ ಬ್ಯಾಂಡ್”, “ಬ್ಯಾಂಡ್ ಆಫ್ ಬಾಯ್ಸ್” ನ ಸದಸ್ಯನಾಗಿದ್ದಾನೆ. ಅವರ ಸಹೋದರಿ, ಉಶಾ ಮಂಗೇಶ್ಕರ್ ಹಿನ್ನೆಲೆ ಸಂಗೀತಕಾರರಾಗಿದ್ದಾರೆ. ಇನ್ನೊಬ್ಬ ಸಹೋದರಿ ಮೀನಾ ಮಂಗೇಶ್ಕರ್ ಹಾಗೂ ಸಹೋದರ ಹೃದಯನಾಥ ಮಂಗೇಶ್ಕರ್ ಅವರು ಸಂಗೀತ ನಿರ್ದೇಶಕರಾಗಿದ್ದಾರೆ. ಆಶಾ ಅವರು ಒಳ್ಳೆಯ ಪಾಕಶಾಸ್ತ್ರಜ್ಞೆಯಾಗಿದ್ದರು, ಹಾಗೂ ತಮ್ಮ ಪರಿವಾರಕ್ಕೆ ತಾವೇ ಅಡುಗೆ ಮಾಡುತ್ತಿದ್ದರು. ಬಾಲಿವುಡ್‌ನ ಪ್ರಮುಖರು ಸದಾ ಆಕೆಯ ಬಳಿ ‘ಕಡಾಯಿ ಘೋಸ್ಟ್’ ಹಾಗೂ ‘ಬಿರಿಯಾನಿ’ಗಾಗಿ ಬೇಡಿಕೆ ಸಲ್ಲಿಸುತ್ತಿದ್ದರು. ಕೇಳಿದವರಿಗೆ ಹೆಚ್ಚಾಗಿ ನಿರಾಶೆ ಮಾಡದೆ ಅವರು ತಯಾರಿಸುವ ‘ಪಾಯಾ ಕರಿ’ , ‘ಗೋವಾದ ಫಿಶ್ ಕರಿ’ ಹಾಗೂ ‘ದಾಲ್’ ಗಳು ಬಾಲಿವುಡ್‌ನ ಕಪೂರ್ಹಾಗೂ ಕೆಲವು ಕುಟುಂಬದಲ್ಲಿ ಬಹಳ ಕಾಲ ಜನಪ್ರಿಯವಾಗಿದ್ದವು.
ಟೈಮ್ಸ್ ಆಫ್ ಇಂಡಿಯಾ ದ ಒಂದು ಸಂದರ್ಶನದಲ್ಲಿ, ಒಂದು ವೇಳೆ ಗಾಯಕಿಯಾಗದಿದ್ದರೆ ಬೇರೆಯಾವ ವೃತ್ತಿಯನ್ನು ಆಯ್ಕೆ ಮಾಡುತ್ತಿದ್ದರೆಂದು ಕೇಳಲಾಗಿತ್ತು, ಅದಕ್ಕೆ ಆಕೆಯ ಉತ್ತರ ” ನಾನು ಅಡುಗೆಯವಳಾಗುತ್ತಿದ್ದೆ. ಆಶಾ ಅವರು ಯಶಸ್ವೀ ಹೋಟೆಲ್ ಉದ್ಯಮಿಯಾಗಿದ್ದಾರೆ ; ಹಾಗೂ ‘ಆಶಾಸ್’ ಎಂಬ ಹೆಸರಿನ ಹೋಟೆಲುಗಳನ್ನು ದುಬೈ ಹಾಗೂ ಕುವೈತ್‌ಗಳಲ್ಲಿ ನಡೆಸುತ್ತಿದ್ದಾರೆ. ಆಶಾಸ್‌ನಲ್ಲಿ ಸಾಂಪ್ರದಾಯಿಕ ವಾಯುವ್ಯ ಭಾರತೀಯ ಅಡುಗೆಗಳು ದೊರೆಯುತ್ತವೆ. ‘ಆಶಾಸ್ ಹೋಟೆಲ್ ದುಬೈ’ನ ‘ವಫಿ ಸಿಟಿ ಡೆವಲಪ್ಮೆಂಟ್’ನಲ್ಲಿ ಇದೆ, ಹಾಗೂ ಕುವೈತ್‌ನ ಮೂರು ಹೋಟೆಲ್‌ಗಳು, ‘ದಿ ಅವೆನ್ಯೂಸ್ ಮಾಲ್’, ‘ಮರೀನಾ ಮಾಲ್’ ಹಾಗೂ ‘ಸ್ಪೂನ್ಸ್ ಕಾಂಪ್ಲೆಕ್ಸ್’ನಲ್ಲಿ ಮೂರನೆಯ ಹೋಟೆಲ್ ಪ್ರಾರಂಭವಾಗಿದೆ. ಅವರ ಇತರೆ ಹೋಟೆಲ್ಲುಗಳು ಅಬು ಧಾಬಿಯ ಖಾಲ್ದಿಯಾ ಮಾಲ್‌ನಲ್ಲಿ, ದೋಹಾದ ವಿಲೇಜಿಯೊ ಹಾಗೂ ಬೆಹ್ರೇನ್‌ನ ಸಿಟಿ ಸೆಂಟರ್ ಮಾಲ್‌ನಲ್ಲಿ ಇವೆ, ಮುಂಬರುವ ದಿನಗಳಲ್ಲಿ ದುಬೈನ ಮಾಲ್ ಎಮಿರೇಟ್ಸ್ ಹಾಗೂ ಈಜಿಪ್ಟ್‌ನ ಕೈರೊದಲ್ಲಿ ಪ್ರಾರಂಭಿಸುವ ಯೋಜನೆ ಇದೆ. ಆಶಾ ಭೋಸ್ಲೆಯವರು ಈ ವ್ಯವಹಾರದಲ್ಲಿ ೨೦% ಪಾಲನ್ನು ಹೊಂದಿದ್ದಾರೆ. ಹೋಟೆಲ್ಲುಗಳ ನಿರ್ವಹಣೆಯು ‘ವಫಿ ಗ್ರೂಪ್’ನಿಂದ ನಡೆಸಲ್ಪಡುತ್ತಿದೆ. ಅವರು ಅಡುಗೆ ಕೋಣೆಯ ಹಾಗೂ ಅಲಂಕಾರಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ವೈಯಕ್ತಿಕವಾಗಿ ಅವರೇ ಆರು ತಿಂಗಳ ಕಾಲ ‘ಛೆಫ್ ತರಬೇತಿ’ಯನ್ನು ಪಡೆದಿದ್ದಾರೆ.
ಡಿಸೆಂಬರ್ ೨೦೦೪ರ ‘ಮೇನು ಮ್ಯಾಗಝೀನ್’ ವರದಿಯ ಪ್ರಕಾರ, ಹ್ಯಾರಿ ರಾಮ್ಸ್‌ದೆನ್‌ನ (ಮೀನು ಹಾಗೂ ಚಿಪ್ಸ್‌ಗಳ ಶ್ರೇಣಿ)ಯ ಮಾಜಿ ಮುಖ್ಯಸ್ಥ ರಷೆಲ್ ಸ್ಕಾಟ್ ಅವರು ಮುಂಬರುವ ಐದು ವರ್ಷಗಳಲ್ಲಿ ಯುಕೆಯಲ್ಲಿ ಆಶಾಸ್ ಬ್ರ್ಯಾಂಡ್‌ನ ೪೦ ಹೋಟೆಲುಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ. ಆಶಾಸ್‌ನ ಶ್ರೇಣಿಯ, ಆಶಾತಾಯಿ ಯುಕೆಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಹೊಸ ಹೋಟೆಲ್ಲನ್ನು ಇತ್ತೀಚೆಗೆ ಪ್ರಾರಂಭಿಸಲಾಯಿತು. ಆಶಾ ಅವರು ಇಷ್ಟಪಡುವ ಫ್ಯಾಷನ್ ಎಂದರೆ ಹೊಳೆಯುವ ಕಸೂತಿ ಹೊಂದಿರುವ ಬಿಳಿ ಸೀರೆ, ಮುತ್ತು ಹಾಗೂ ವಜ್ರಗಳನ್ನು ಹೊಂದಿರುವ ಕುತ್ತಿಗೆ ಆಭರಣಗಳು. ಕ್ರೋನೊಸ್ ಕ್ವಾರ್ಟೆಟ್‌ನ ಹ್ಯಾರಿಂಗ್ಟನ್ ಅವರು “ಮೊದಲ ಬಾರಿಗೆ ನಾನು ಆಶಾಜಿ ಯವರನ್ನು ಭೇಟಿ ಮಾಡಿದಾಗ ಅವರು ಸುಂದರವಾದ ಸೀರೆಯನ್ನು ಉಟ್ಟು ವಜ್ರಾಭರಣ ದರಿಸಿದ್ದರು, ಹಾಗೂ ರಾಣಿಯ ಹಾಗೆ ಕಾಣಿಸುತ್ತಿದ್ದರು. ಹಾಗೇ ನಾನು ಕೆಳಗೆ ನೋಡಿದಾಗ ಕಾಲಿನಲ್ಲಿ ಟೆನ್ನಿಸ್ ಶೂಗಳನ್ನು ಧರಿಸಿದ್ದರು, ಎಂದು ಹೇಳಿದ್ದರು. ಏಪ್ರಿಲ್ ೨೨, ೨೦೦೪ರಲ್ಲಿ ದುಬೈನ ವಿಶ್ವ ವಾಣಿಜ್ಯ ಕಟ್ಟಡದಲ್ಲಿ ನಡೆದ ಒಂದು ಸಮಾರಂಭದಲ್ಲಿ, ಅವರು ‘ಕಭಿ ತೊ ನಝರ್ ಮಿಲಾವೊ’ ಹಾಡಿನಲ್ಲಿ ನೂರ್ ಜಹಾನ್, ಲತಾ ಮಂಗೇಶ್ಕರ್ ಹಾಗೂ ಗುಲಾಮ್ ಅಲಿಯವರ ಧ್ವನಿಗಳನ್ನು ಅಣಕ ಮಾಡಿ ಹಾಡಿದ್ದರು.
ಬಡಿ ದೀದಿಯವರ ಜತೆ ಸ್ಪರ್ಧೆ :
ಆಶಾರ ಒಡಹುಟ್ಟಿದ ಸಖಾ ತಂಗಿ, ಲತಾ ಮಂಗೇಶ್ಕರ್ ಅವರು, “ಈ ಸ್ಪರ್ಧೆಯ ಬಗ್ಗೆ ಜನರು ಮಾತಾಡಿಕೊಳ್ಳುವುದೆಲ್ಲಾ ಕೇವಲ ಕಟ್ಟು ಕಥೆಗಳು, ಮತ್ತು ಅವು ನಿಜವಲ್ಲ” ; ಎಂದು ಯಾವಾಗಲೂ ಒತ್ತಿ ಹೇಳುತ್ತಿದ್ದರು. ಲತಾ ಅವರು ಆಶಾ ಅವರನ್ನು ಮಗುವಿನ ತರಹ ಎತ್ತಿಕೊಳ್ಳುತ್ತಿದ್ದರು. ಲತಾ ಶಾಲೆಗೆ ಹೋಗುವಾಗ ಆಶಾರನ್ನು ಜೊತೆಗೇ ಕರೆದುಕೊಂಡು ಹೋಗುತ್ತಿದ್ದರು, ಶಿಕ್ಷಕಿಯು ಒಂದೇ ಶುಲ್ಕದಲ್ಲಿ ಇಬ್ಬರು ಶಾಲೆಗೆ ಬರಲು ಸಾಧ್ಯವಿಲ್ಲ, ಎಂದು ವಿರೋಧ ವ್ಯಕ್ತಪಡಿಸಿದಾಗ, ಲತಾ ಅವರು ಆಶಾರನ್ನು ಶಾಲೆಗೆ ಬಿಟ್ಟು ಬರಲು ಮನಸ್ಸಿಲ್ಲದೆ ಓದನ್ನೇ ಬಿಟ್ಟುಬಿಟ್ಟರು.
ಆಶಾ ಅವರು ಒಂದು ಸಂದರ್ಶನದಲ್ಲಿ ತಮ್ಮ ವರ್ತನೆಯ ಬಗ್ಗೆ ಬೇಸರವನ್ನು ವ್ಯಕ್ತಪಡಿಸುತ್ತಾ, “ತಮ್ಮ ಪ್ರೇಮಿಯ ಜೊತೆ ಪಲಾಯನ ಮಾಡಿ, ತಮ್ಮ ಅಕ್ಕನ ಮೇಲೆ ಸಂಸಾರದ ಹೊರೆಯನ್ನೆಲ್ಲಾ ಹೊರಿಸಿ, ಅವರೊಬ್ಬರೇ ಸಂಸಾರ ನಿರ್ವಹಣೆಗೆ ದುಡಿಯುವಂತೆ ಮಾಡಿದುದನ್ನು ಬೇಜವಾಬ್ದಾರಿಯುತ ವರ್ತನೆ” ಎಂದು ತಪ್ಪೊಪ್ಪಿಗೆ ನೀಡಿದ್ದಾರೆ. “ನನ್ನದು ಪ್ರೇಮ ವಿವಾಹ ಹಾಗೂ ಲತಾ ದೀದಿ (ಅಕ್ಕ) ಬಹಳಷ್ಟು ದಿನ ನನ್ನ ಜೊತೆ ಮಾತನಾಡಲಿಲ್ಲ. ನಮ್ಮ ಮದುವೆಯ ಒಪ್ಪಂದವನ್ನು ಆಕೆ ಒಪ್ಪಿಕೊಳ್ಳಲಿಲ್ಲ.” ಆ ಸಮಯದಲ್ಲಿ ಅವರ ಸಂಬಂಧವು ಬಹಳಷ್ಟು ವ್ಯತಿರಿಕ್ತವಾಗಿದ್ದು, ಬಹಳ ಸಮಯದವರೆಗೆ ಅವರಿಬ್ಬರ ನಡುವೆ ಮಾತುಕತೆ ಇರಲಿಲ್ಲ. ಈ ಇಬ್ಬರು ಸಹೋದರಿಯರ ಭಿನ್ನಾಭಿಪ್ರಾಯಗಳ ಮಧ್ಯೆ ಒ ಪಿ ನಯ್ಯರ್ ಅವರು ಎಂದಿಗೂ ಲತಾ ಅವರೊಂದಿಗೆ ಕೆಲಸ ಮಾಡದಂತೆ ನಿರ್ಧರಿಸಿದರು. ಒ.ಪಿ. ನಯ್ಯರ್ ಅವರು ಒಮ್ಮೆ ಹೀಗೆ ಹೇಳಿದ್ದಾರೆ – ಆಕೆಯ ಸ್ವತಃ ಧ್ವನಿ, ಹಾಗೂ ವಿಶೇಷತೆಯನ್ನು ಎತ್ತಿಹಿಡಿದು ಪ್ರೋತ್ಸಾಹಿಸುವಲ್ಲಿ ನನಗೆ ತಿಂಗಳುಗಳೇ ಬೇಕಾದವು.” ಆಶಾ ಅವರೇ ಹೇಳುವಂತೆ, ಲತಾಗಿಂತ ಭಿನ್ನವಾಗಿ ಹಾಡುವುದನ್ನು ಕಲಿಯಲು, ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಲು, ವರ್ಷಗಟ್ಟಲೆ ಕೆಲಸ ಮಾಡಿದ್ದಾರೆ ;ತನ್ನದೇ ನೆಲೆಯನ್ನು ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.
ಆಶಾ ಹಾಗೂ ಲತಾ ಅವರು ಹಲವಾರು ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ. ಅವರು ಒಟ್ಟಿಗೆ ಮೊದಲಬಾರಿಗೆ ಹಾಡಿದ್ದು ದಾಮನ್ (೧೯೫೧) ಚಿತ್ರದಲ್ಲಿ.
ಇಬ್ಬರೂ ಹಾಡಿರುವ ಇನ್ನೂ ಕೆಲವು ಹಾಡುಗಳೆಂದರೆ :
‘ಮಾನ್ ಭಾವನ್ ಕೆ ಘರ್ ಆಯೆ’ (ಚೋರಿ ಚೋರಿ , ೧೯೫೬), ‘ಸಖಿ ರಿ ಸನ್ ಬೋಲೆ ಪಪಿಹಾ ಉಸ್ ಪಾರ್’ (ಮಿಸ್ ಮೇರಿ , ೧೯೫೭), ‘ಓ ಚಾಂದ್ ಜಹಾನ್ ವೋ ಜಾಯೆ’ (ಶಾರದಾ , ೧೯೫೭), ‘ಮೇರೆ ಮೆಹಬೂಬ್ ಮೈ ಕ್ಯಾ ನಹಿ’ (ಮೇರೆ ಮೆಹಬೂಬ್ , ೧೯೬೩), ‘ಐ ಕಾಶ್ ಕಿಸಿ ದೀವಾನೆ ಕೊ’ (ಆಯೆ ದಿನ್ ಬಾಹರ್ ಕೆ , ೧೯೬೬), ‘ಮೈ ಚಲೀ ಮೈ ಚಲೀ’ (ಪಡೋಸನ್ , ೧೯೬೮),’ಛಾಪ್ ತಿಲಕ್ ಸಬ್’ (ಮೈ ತುಲ್ಸೀ ತೆರೆ ಆಂಗನ್ ಮೆ , ೧೯೭೮) ‘ಮಾ ಕ್ಯೂಂ ಬೆಹಕಾ’ (ಉತ್ಸವ್ , ೧೯೮೪).
‘ಸಾಝ್’ ಚಲನಚಿತ್ರದಲ್ಲಿ ಲತಾ ಮತ್ತು ಆಶಾರ ಹಾಡಿನ ಸ್ಪರ್ಧೆಯನ್ನು ತೋರಿಸಲಾಗಿದೆ.
ರಾಷ್ತ್ರೀಯ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿಯ ಪ್ರಶಸ್ತಿ :
- 1981 ರಲ್ಲಿ ಉಮ್ರಾವ್ ಜಾನ್ ಚಿತ್ರಕ್ಕೆ ಹಾಡಿದ, ‘ದಿಲ್ ಚೀಜ್ ಕ್ಯಾ ಹೈ’ ಗೀತೆಗೆ,
- 1986 ರಲ್ಲಿ ಇಜಾಜತ್ ಚಿತ್ರದ ‘ಮೇರಾ ಕುಛ್ ಸಾಮಾನ್’ ಗೀತೆಗೆ.
ಮಹಾರಾಷ್ಟ್ರ ರಾಜ್ಯ ಪ್ರಶಸ್ತಿಗಳು ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿಗಳು :
ಆಶಾ ಭೋಂಸ್ಲೆಯವರು ೧೮ ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದು ಅದರಲ್ಲಿ ಏಳು ಬಾರಿ ಪ್ರಶಸ್ತಿ ಗಳಿಸಿದ್ದಾರೆ. ಅವರು ತಮ್ಮ ಮೊದಲ ಎರಡು ಪ್ರಶಸ್ತಿಗಳನ್ನು ೧೯೬೭ ಹಾಗೂ ೧೯೬೮ರಲ್ಲಿ ಪಡೆದುಕೊಂಡರು, ಆಗಿನ್ನೂ ಲತಾ ಮಂಗೇಶ್ಕರ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸುತ್ತಿದ್ದರು (೧೯೬೯ರ ನಂತರ ಮಂಗೇಶ್ಕರ್ ಅವರು ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಅವರ ಹೆಸರನ್ನು ನಾಮನಿರ್ದೇಶಿತಗೊಳ್ಳದಂತೆ ಮನವಿ ಮಾಡಿಕೊಂಡರು). ೧೯೭೯ರಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ, ಭೋಂಸ್ಲೆಯವರು ತಮ್ಮ ಅಕ್ಕನೊಂದಿಗೆ ಸ್ಪರ್ಧಿಸಿದರು ; ಹಾಗೂ ಆಕೆಯ ಹೆಸರನ್ನು ನಾಮನಿರ್ದೇಶನಕ್ಕೆ ಸೂಚಿಸಬಾರದೆಂದು ವಿನಂತಿಸಿಕೊಂಡರು. ಆದಾಗ್ಯೂ, ಭೋಂಸ್ಲೆಯವರು ಇಲ್ಲಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ, ಅಲ್ಕಾ ಯಾಗ್ನಿಕ್ ಅವರ ಸ್ಪರ್ಧಿಯಾಗಿದ್ದಾರೆ. ನಂತರದಲ್ಲಿ ಅವರಿಗೆ,
೧೯೯೬ರಲ್ಲಿ ರಂಗೀಲಾ ಚಿತ್ರಕ್ಕಾಗಿ ವಿಶೇಷ ಪ್ರಶಸ್ತಿ ಲಭಿಸಿತು,
೨೦೦೧ರಲ್ಲಿ ಜೀವಮಾನದ ಸಾಧನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿತು. ಅವರು ಗಳಿಸಿದ ಫಿಲ್ಮ್‌ಫೇರ್ ಪ್ರಶಸ್ತಿಗಳು ಕೆಳಕಂಡಂತಿವೆ: ಫಿಲ್ಮ್‌ಫೇರ್‌ನ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ:
೧೯೬೮: “ಗರೀಬೋಂ ಕಿ ಸುನೋ” (ದಸ್ ಲಾಕ್ , ೧೯೬೬)
೧೯೬೯: “ಪರ್ದೇ ಮೇ ರೆಹನೆ ದೋ” (ಶಿಕಾರ್ , ೧೯೬೮)
೧೯೭೨: “ಪಿಯಾ ತೂ ಅಬ್ ತೊ ಆಜಾ” (ಕಾರವಾನ್ , ೧೯೭೧)
೧೯೭೩: “ದಮ್ ಮಾರೊ ದಮ್” (ಹರೇ ರಾಮ ಹರೇ ಕೃಷ್ಣಾ , ೧೯೭೨)
೧೯೭೪: “ಹೋನೆ ಲಗೀ ಹೈ ರಾತ್” (ನೈನಾ , ೧೯೭೩)
೧೯೭೫: “ಚೈನ್ ಸೆ ಹಮ್ಕೋ ಕಭೀ” (ಪ್ರಾಣ್ ಜಾಯೇ ಪರ್ ವಚನ್ ನಾ ಜಾಯೆ , ೧೯೭೪)
೧೯೭೯: “ಯೇ ಮೇರಾ ದಿಲ್” (ಡಾನ್ , ೧೯೭೮)
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ಆಶಾ ಅವರು ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ:
೧೯೮೧: ದಿಲ್ ಚೀಝ್ ಕ್ಯಾ ಹೈ (ಉಮ್ರಾವೊ ಜಾನ್ )
೧೯೮೬: ಮೇರಾ ಕುಚ್ ಸಮಾನ್ (ಇಜಾಝತ್ )
ಆಶಾ ಅವರು ಇನ್ನೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ ; ಅವುಗಳಲ್ಲಿ ಕೆಲವು ಹೀಗಿವೆ:
೧೯೯೬ – ವಿಶೇಷ ಪ್ರಶಸ್ತಿ (ರಂಗೀಲಾ , ೧೯೯೫)
೨೦೦೮ – ಫಿಲಂಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್
೧೯೮೭: ನೈಟಿಂಗೇಲ್ ಆಫ್ ಏಷಿಯಾ ಪ್ರಶಸ್ತಿ (ಇಂಡೋ–ಪಾಕ್ ಅಸೋಸಿಯೇಶನ್, ಯುಕೆ) ಅವರಿಂದ.
೧೯೮೯: ಲತಾ ಮಂಗೇಶ್ಕರ್ ಪ್ರಶಸ್ತಿ (ಮಧ್ಯ ಪ್ರದೇಶ ಸರ್ಕಾರ).
೧೯೯೭: ಸ್ಕ್ರೀನ್ ವೀಡಿಯೋಕಾನ್ ಪ್ರಶಸ್ತಿ (ಜಾನಂ ಸಮ್ಜಾ ಕರೋ ಆಲ್ಬಂಗಾಗಿ).
೧೯೯೭: ಎಂಟಿವಿ ಪ್ರಶಸ್ತಿ (ಜಾನಂ ಸಮ್ಜಾ ಕರೊ ಆಲ್ಬಂಗಾಗಿ).
೧೯೯೭: ಚಾನಲ್ ವಿ ಪ್ರಶಸ್ತಿ (ಜಾನಂ ಸಮ್ಜಾ ಕರೋ ಆಲ್ಬಂಗಾಗಿ).
೧೯೯೮: ದಯಾವತಿ ಮೋದಿ ಪ್ರಶಸ್ತಿ.
೧೯೯೯: ಲತಾ ಮಂಗೇಶ್ಕರ್ ಪ್ರಶಸ್ತಿ (ಮಹಾರಾಷ್ಟ್ರ ಸರ್ಕಾರ)
೨೦೦೦: ಸಿಂಗರ್ ಆಫ್ ದಿ ಮಿಲೆನಿಯಂ (ದುಬೈ).
೨೦೦೦: ಝೀ ಗೋಲ್ಡ್ ಬಾಲಿವುಡ್ ಅವಾರ್ಡ್ (ತಕ್ಷಕ್ ಚಿತ್ರದ ‘ಮುಝೆ ರಂಗ್ ದೆ’ ಹಾಡಿಗಾಗಿ).
೨೦೦೧: ಎಂಟಿವಿ ಪ್ರಶಸ್ತಿ ( ಕಂಬಕ್ತ್ ಇಷ್ಕ್ ಚಿತ್ರಕ್ಕಾಗಿ).
೨೦೦೨: ಬಿಬಿಸಿ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ (ಯುಕೆಯ ಪ್ರಧಾನ ಮಂತ್ರಿ ಟೋನಿ ಬ್ಲೇರ್ ಅವರಿಂದ ಸ್ವೀಕರಿಸಿದ್ದು).
೨೦೦೨: ಝೀ ಸಿನೆ ಅವಾರ್ಡ್ ಫಾರ್ ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ – ಗಾಯಕಿ (ಲಗಾನ್ ಚಿತ್ರದ ರಾಧಾ ಕೈಸೆ ನ ಜಲೆ ಹಾಡಿಗಾಗಿ).
೨೦೦೨: ಝೀ ಸಿನಿ ಸ್ಪೆಷಲ್ ಅವಾರ್ಡ್ ಫಾರ್ ಹಾಲ್ ಆಫ್ ಫೇಮ್.
೨೦೦೨: ಸ್ಕ್ರೀನ್ ವೀಡಿಯೋಕಾನ್ ಪ್ರಶಸ್ತಿ (ಲಗಾನ್ ಚಿತ್ರದ ರಾಧಾ ಕೈಸೇ ನ ಜಲೆ ಹಾಡಿಗಾಗಿ).
೨೦೦೨: ಸ್ಯಾನ್ಸೂಯಿ ಮೂವೀ ಪ್ರಶಸ್ತಿ (ಲಗಾನ್ ಚಿತ್ರದ ‘ರಾಧಾ ಕೈಸೆ ನ ಜಲೆ’ ಹಾಡಿಗಾಗಿ).
೨೦೦೩: ಭಾರತೀಯ ಚಲನಚಿತ್ರಕ್ಕೆ ನೀಡಿರುವ ಅದ್ಭುತ ಕೊಡುಗೆಗಾಗಿ ‘ಸ್ವರಾಲಯ ಯೇಸುದಾಸ್ ಪ್ರಶಸ್ತಿ.’
೨೦೦೪: ಫೆಡರೇಶನ್ ಆಫ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ ‘ಲಿವಿಂಗ್ ಲಿಜೆಂಡ್ ಪ್ರಶಸ್ತಿ’ .
೨೦೦೫: ಎಂಟಿವಿ ಇಮ್ಮೀಸ್, ‘ಆಜ್ ಜಾನೆ ಕಿ ಜಿದ್ ನಾ ಕರೋ’ ಗಾಗಿ ಅತ್ಯುತ್ತಮ ಪಾಪ್ ಗಾಯಕಿ.
ಗೌರವಗಳು ಹಾಗೂ ಮನ್ನಣೆಗಳು :
೧೯೯೭ರಲ್ಲಿ, ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಜೊತೆ ಲಿಗೆಸಿ ಆಲ್ಬಂನಲ್ಲಿ ಹಾಡಿದ್ದಕ್ಕಾಗಿ ಆಶಾ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಈ ಪುರಸ್ಕಾರಕ್ಕೆ ಪಾತ್ರರಾದ ಭಾರತ ದೇಶದ ಮೊದಲ ಗಾಯಕಿಯಾದರು.
ಅವರು ಹದಿನೇಳು ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ ಗಳಿಸಿದರು.
ಭಾರತೀಯ ಚಲನಚಿತ್ರ ರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಳಿಗಾಗಿ, ೨೦೦೦ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗಳಿಸಿದರು.
ಅಮರಾವತಿ ಹಾಗೂ ಜಲಗಾಂವ್ ವಿಶ್ವವಿದ್ಯಾನಿಲಯಗಳಿಂದ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್‌ಗಳನ್ನು ಪಡೆದುಕೊಂಡರು.
ಕಲೆಯಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ ಅವರು ದಿ ಫ್ರಿಡೀ ಮರ್ಕ್ಯುರಿ ಪ್ರಶಸ್ತಿ ಪಡೆದುಕೊಂಡರು.
ಬರ್ಮಿಂಗ್‌ಹ್ಯಾಂ ಫಿಲ್ಮ್ ಫೆಸ್ಟಿವಲ್ ನವೆಂಬರ್ ೨೦೦೨ರಲ್ಲಿ ಅವರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಅವರು ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಗೌರವವನ್ನು ಸ್ವೀಕರಿಸಿದರು.
ಕಳೆದ ೫೦ ವರ್ಷಗಳಲ್ಲಿ ಸಿ.ಎನ್.ಎನ್.ನ ೨೦ ಉತ್ತಮ ಗಾಯಕರಲ್ಲಿ ಒಬ್ಬರಾಗಿದ್ದಾರೆ.
ರಾಷ್ತ್ರೀಯ ಅತ್ಯುತ್ತಮ ಹಿನ್ನೆಲೆ ಗಾಯಿಕಿಯ ಪ್ರಶಸ್ತಿ
- 1981 ರಲ್ಲಿ ಉಮ್ರಾವ್ ಜಾನ್ ಚಿತ್ರಕ್ಕೆ ಹಾಡಿದ ದಿಲ್ ಚೀಜ್ ಕ್ಯಾ ಹೈ ಗೀತೆಗೆ
- 1986 ರಲ್ಲಿ ಇಜಾಜತ್ ಚಿತ್ರದ ಮೇರಾ ಕುಛ್ ಸಾಮಾನ್ ಗೀತೆಗೆ.
ಮಹಾರಾಷ್ಟ್ರ ರಾಜ್ಯ ಪ್ರಶಸ್ತಿಗಳು :
ಆಶಾ ತಾಯಿ ಮರಾಠಿ ಭಾಷೆಯಲ್ಲಿ ಬಹಳಷ್ಟು (ಅತಿ ಹೆಚ್ಚು) ಗೀತೆಗಳನ್ನು ಹಾಡಿದ್ದಾರೆ. ೧೮ ಬಾರಿ ಮಹಾರಾಷ್ಟ್ರ ರಾಜ್ಯ ಫಿಲಂನ ಅತ್ಯತ್ತಮ ಹಿನ್ನೆಲೆ ಗಾಯಕಿಗೆ ಸಿಗುವ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. “
ಇತರ ಪ್ರಶಸ್ತಿಗಳು : ಗೌರವಗಳು ಮತ್ತು ಮನ್ನಣೆಗಳು :
- ‘ನೈಟಿಂಗೇಲ್ ಆಫ್ ಏಷಿಯಾ ಸಮ್ಮಾನ್’,
- ‘ಐಫಾ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಐಫಾ ಪ್ರಶಸ್ತಿ’,
- 2002 : ‘ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ’
- 2002 : ‘BBC ಜೀವಮಾನ ಸಾಧನೆ ಪ್ರಶಸ್ತಿ (UK ಪ್ರಧಾನ ಮಂತ್ರಿ ಟೋನಿ ಬ್ಲೇರ್ ಅವರಿಂದ ಪ್ರಸ್ತುತಪಡಿಸಲಾಗಿದೆ) ಬಿ. ಬಿ. ಸಿ’.
- 2003 : ‘ಸ್ವರಾಲಯ ಯೇಸುದಾಸ್ ಪ್ರಶಸ್ತಿ ಭಾರತೀಯ ಸಂಗೀತಕ್ಕೆ ಅತ್ಯುತ್ತಮ ಕೊಡುಗೆಗಳಿಗಾಗಿ ಪ್ರಶಸ್ತಿ,
- 2004 : ‘ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ ಲಿವಿಂಗ್ ಲೆಜೆಂಡ್ ಪ್ರಶಸ್ತಿ’
- 2005 : ‘MTV ಇಮ್ಮೀಸ್, ‘ಆಜ್ ಜಾನೆ ಕಿ ಜಿದ್ ನಾ ಕರೋ, ಗಾಗಿ ಅತ್ಯುತ್ತಮ ಮಹಿಳಾ ಪಾಪ್ ಆಕ್ಟ್ ಪ್ರಶಸ್ತಿ’,
- 2005 : ‘ಸಂಗೀತದಲ್ಲಿ ಅತ್ಯಂತ ಸ್ಟೈಲಿಶ್ ಜನರು ನೀಡಿದ ಪ್ರಶಸ್ತಿ’,
- 2008 : ‘ಪದ್ಮ ವಿಭೂಷಣ’
- 2011 : ಐಫಾ ಜೀವಮಾನ ಸಾಧನೆಯ ಪ್ರಶಸ್ತಿ
- 2012 : 18 ನೆಯ ವಾರ್ಷಿಕ ಕಲರ್ ಪರದೆಯ ಜೀವನಸಾಧನೆಯ ಪ್ರಶಸ್ತಿ
- 2012 : ಮಿರ್ಚಿ ಮ್ಯೂಸಿಕ್ ಅವಾರ್ಡ್ ಜೀವನ ಪರ್ಯಂತ ಸಾಧನೆ
- 2013 : ‘ಪಂ. ಹೃದಯನಾಥ್ ಮಂಗೇಶ್ಕರ್ ಜೀವನ ಪರ್ಯಾಂತ ಸಾಧನೆಯ ಪ್ರಶಸ್ತಿ’
- 2014 : ‘ಗ್ಲೋಬಲ್ ಇಂಡಿಯನ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿಗಳಿಂದ (GiMA) ಸಂಗೀತ ಲಿವಿಂಗ್ ಲೆಜೆಂಡ್ ಪ್ರಶಸ್ತಿ’
*2014 : ‘ದುಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (DIFF) ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ’
*2018 : ‘ಯಶ್ ಚೋಪ್ರ ಸ್ಮರಣ ಪ್ರಶಸ್ತಿ’
*2018 : ‘ದೀನನಾಥ್ ಮಂಗೇಶ್ಕರ್ ಸ್ಮರಣ ಪ್ರಶಸ್ತಿ’
*2018: ‘ಬಂಗ ಭೂಷಣ್ ಅವಾರ್ಡ್, ಪ. ಬಂಗಾಳದ ಸಿವಿಲಿಯನ್ ಶ್ರೇಷ್ಠ ಅವಾರ್ಡ್’
*’ಅಮರಾವತಿ ವಿಶ್ವವಿದ್ಯಾಲಯ ಜಲಗಾವ್ ನ ಡಾಕ್ಟರೇಟ್ ಸಾಹಿತ್ಯ ಪ್ರಶಸ್ತಿ’
*’ಜೋಧ್ ಪುರ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಥಮ ಡಿ. ಲಿಟ್ ಪ್ರಶಸ್ತಿ’
*’ಸುರ್ಸಿಂಗಾರ್ ಪ್ರಶಸ್ತಿ’
*’ನವೆಂಬರ್, 2002 ರಲ್ಲಿ ವಿಶೇಷ ಗೌರವ, ಬರ್ಮಿಂಗ್ ಹ್ಯಾಮ್ ಫಿಲಂ ಫೆಸ್ಟಿವಲ್’ ನಲ್ಲಿ
ಆಕರ -ಇಂಟರ್ನೆಟ್ ಹಾಗೂ ವಿವಿಧ ಮೂಲಗಳಿಂದ.
ನಮ್ಮೆಲ್ಲರ ಬಹುಪ್ರಿತಿಯ ಆಶಾದೀದಿಯವರ ಮುದ್ದಿನ ಮಗ, ಚಿ. ಆನಂದ್ ಭೋಸ್ಲೆ, ದುಬೈನಲ್ಲಿ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ, ಎಂದು ಮೀಡಿಯಾದಿಂದ ನಮಗೆಲ್ಲರಿಗೂ ತಿಳಿಯಿತು. ನಾವೆಲ್ಲ ಒಕ್ಕೊರಲಿನಿಂದ ‘ಸಂಕಷ್ಟಹರ ಗಣಪತಿ’ಯನ್ನು ‘ಆನಂದ್’ ಅವರಿಗೆ ಒಳ್ಳೆಯ ಆರೋಗ್ಯ, ಆಯುಸ್ಸನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ.
ಮುಂಬಯಿಕರ್ಗಳು, ಮತ್ತು ವಿಶ್ವವ್ಯಾಪಿ ಆಶಾ ತಾಯಿ Fans ಗಳ ಪರವಾಗಿ,
-ಎಚ್ಚಾರೆಲ್, ಲೇಖಕರು
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ