ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತಃಸ್ಪಂದನ ೧೨

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ನಾನಾರೆಂಬ.. ಪ್ರಶ್ನೆಗೆ ಉತ್ತರ ದೊರೆಯುವುದು ಯಾವಾಗ…?

ಭೂಪೂರ – ಸೂರ್ಯಲೋಕ, ಆಕಾಶಕಾಯ, ಭೂಲೋಕ ಗಳು

ವೃತ್ತ ಪರಿಧಿ – ಮೂರು ರೀತಿಯ ಶರೀರಗಳು.
ಪುಷ್ಪ ದಳಗಳು ಹದಿನಾರು, ನಾಗದಳಗಳು ಎಂಟು

ಹದಿನಾಲ್ಕು ತ್ರಿಭುಜಗಳು ಹದಿನಾಲ್ಕು ಮನ್ವಂತರದ ಪ್ರತೀಕ, ಇದರ ನಂತರದ…
ಹತ್ತು ತ್ರಿಭುಜಗಳು ದಶಾವತಾರದ ಪ್ರತೀಕ,
ದಶ ದಿಕ್ಕುಗಳ ಪ್ರತಿನಿಧಿ, ಇನ್ನು ಹತ್ತು ತ್ರಿಭುಜಗಳು,
ಉಳಿದ ಒಂಬತ್ತು ತ್ರಿಭುಜಗಳು ನವಗ್ರಹ ದ ಸಂಕೇತ. ಬಿಂದುವಿನಲ್ಲಿ ದೇವಿ ನೆಲೆಸಿರುವಳು ಎನ್ನುವ ತನಕ ನೋಡಿದ್ದೇವೆ (ಇದು ಸಂಹಾರಕ್ರಿಯೆ)

ಈ ರೀತಿಯಾಗಿ ಇರುವ ಶ್ರೀ ಯಂತ್ರ ಬಹಳ ಶಕ್ತಿಯುತವಾದದು.. ತಿರುಪತಿ ದೇವಾಲಯ ಮತ್ತು ಶಂಕರಾಚಾರ್ಯರು ಸ್ಥಾಪಿಸಿರುವ ಅಷ್ಟು ಶಕ್ತಿ ಪೀಠಗಳಲ್ಲಿ ವಿಗ್ರಹಗಳು ಸ್ಥಾಪನೆಯಾಗಿರುವುದು, ಶ್ರೀ ಚಕ್ರದ ಮೇಲೆ ಹಾಗೂ ಇಂದಿಗೂ ಕೂಡ ಯಾವುದಾದರೂ ಶಕ್ತಿ ಆಲಯ ನಿರ್ಮಾಣ ಮಾಡಿದರೆ, ಅದು ಇದೇ ಶ್ರೀ ಯಂತ್ರದ ಮೇಲೆ ಮಾಡಿರುತ್ತಾರೆ.

ಇಲ್ಲಿ ಇನ್ನೊಂದು ವಿಶೇಷವಿದೆ, ಅದು ಭೂಪೂರದಿಂದ ಬಿಂದುವರೆಗೆ… ನಮ್ಮ ಪ್ರಭಾವಳಿ ಮತ್ತು ಏಳು ಚಕ್ರಗಳ ಸಂಕೇತವಾಗಿಯೂ ಇದು ಇದೆ.

ಸೃಷ್ಟಿ, ಸ್ಥಿತಿ, ಲಯ… ಈ ಮೂರು ಅಂಶಗಳಲ್ಲಿ ನಿಮ್ಮಲ್ಲಿ ಯಾವುದೇ ಅಂಶ ಜಾಗೃತಿ ಆಗಬೇಕಾದರೆ, ದೇವಿ ಇರಲೇ ಬೇಕು ಇಲ್ಲದಿದ್ದರೆ ಸಾಧ್ಯವಿಲ್ಲ, ನೀವು ನಿಮ್ಮಲ್ಲಿ ಬ್ರಹ್ಮನ ಅಂಶ ಜಾಗರುಕತೆ ಹೊಂದಬೇಕು ಎಂದರೆ ಅವಳು ಸ್ವರಸ್ವತಿ ಆಗಿ, ವಿಷ್ಣುವಿನ ವಿಷಯಕ್ಕೆ ಬಂದಾಗ ಲಕ್ಷ್ಮಿ ದೇವಿಯಾಗಿ, ಶಿವನ ತತ್ವ ಜಾಗೃತೆಗೆ ಶಕ್ತಿಯಾಗಿ ಬರುವಳು. ಸೃಷ್ಟಿ, ಸ್ಥಿತಿ, ಲಯ ಮೂರು ಸ್ಥಿತಿಗಳು ಒಟ್ಟಿಗೆ ಜಾಗೃತಿ ಆಗಬೇಕು ಎಂದರೆ ಅವಳು ಮಹಾತ್ರಿಪುರ ಸುಂದರಿಯಾಗಿ ಬಂದು ಅನುಗ್ರಹಿಸುವಳು.

ಪ್ರತಿಯೊಬ್ಬ ಆಧ್ಯಾತ್ಮಿಕ ಸಾಧಕರಲ್ಲಿ ಮೂಡುವ ಮೊದಲ ಪ್ರಶ್ನೆ ‘ನಾನು ಯಾರು’ ? ಈ ಪ್ರಶ್ನೆಗೆ ಅವರು ಸಾಧನೆ ಮಾಡುತ್ತಲೇ… ಇದ್ದರೆ ಉತ್ತರ ದೊರೆಯುವುದಿಲ್ಲ, ಸಾಧನೆ ಜೊತೆಗೆ ದೇವಿಗೆ ಸಂಪೂರ್ಣ ಶರಣು ಹೋಗಬೇಕು ಆಗ… ಅವರಿಗೆ ಮೊದಲು ಅವರ ಸೂಕ್ಷ್ಮ ಶರೀರ ಹಾಗೂ ಇನ್ನೂ ಮುಂದುವರಿದಾಗ ಅವರ ಕಾರಣೀಭೂತ ಶರೀರ ಗೋಚರಿಸುತ್ತದೆ ಈ ಸಂದರ್ಭದಲ್ಲಿ ಅವರಿಗೆ ಅವರು ಯಾರು ಎಂಬುದು ಸಹ ತಿಳಿಯುತ್ತದೆ.

ಧ್ಯಾನ ಮಾಡಲು ಪ್ರಾರಂಭಿಸಿದ ನಂತರ, ಒಬ್ಬರು ಮಹಾತಾಯಿಯ ಸಂಪರ್ಕಕ್ಕೆ ಬಂದೆ. ಆಗ ಅವರಿಗೆ ಕಂಡಿದ್ದೆಲ್ಲವನ್ನು ಶಿವ ಎನ್ನುವ ನ್ಯೂನ್ಯತೆ ಇರುವುದು ತಿಳಿದು, ತಮ್ಮ ಯೋಗಿಕ್ ಶಕ್ತಿಯಿಂದ ಧ್ಯಾನ ಮಾಡುವಾಗ ಆಜ್ಞಾ ಚಕ್ರದಲ್ಲಿ ಶ್ರೀ ಚಕ್ರ ಗೋಚಾರ ಆಗುವಂತೆ ಮಾಡಿದರು (ಚಿತ್ರ ನೋಡಿ). ನಂತರ ಅದನ್ನು ಬರೆಯಬೇಕು ಎಂದು ತೀವ್ರ ಹಂಬಲ ಉಂಟಾಗಿ, ಅದನ್ನು ಬರೆಯಲು ಗಂಟೆಗಟ್ಟಲೇ ಕುಳಿತಾಗಲು ಸಹ ದೇವಿ ಎಲ್ಲಿಯಾದರೂ ಒಂದು ಕಡೆ ತಪ್ಪಿಸಿ ಕೊಳ್ಳುತ್ತಿದ್ದಳು, ಆದರೂ ಬರೆಯುವುದು ನಿಲ್ಲಿಸಲ್ಲಿಲ್ಲ, ನಂತರ ಒಬ್ಬರಿಂದ ಬರೆಯುವ ವಿಧಾನ ತಿಳಿಯಿತು.

ಇದಾದ ನಂತರ ನಿದ್ರೆಯಲ್ಲಿ, ರಸ್ತೆಯಲ್ಲಿ ಇರಲಿ ಕಛೇರಿಯಲ್ಲಿ ಇರಲಿ, ಪುಸ್ತಕ, ಮೊಬೈಲು ಟೀವಿ ಯಾವುದೇ ನೋಡಲಿ ಕಣ್ಣು ಮುಚ್ಚಿದರೆ, ಕಣ್ಣು ಬಿಟ್ಟರೆ, ಊಟ ಮಾಡುತ್ತಿರಲಿ, ಆಕಾಶ ನೋಡಲಿ… ನೀರನ್ನೇ ನೋಡಲಿ, ಶ್ರೀ ಯಂತ್ರ ಕಾಣುತಿತ್ತು, ಮತ್ತು ಹೀಗೆ ಬರೆಯಲು ತೊಡಗಿದೆ ರಾತ್ರಿ ಎರಡು ಗಂಟೆ ಆಗಿದ್ದರು ಸಮಯದ ಪರಿವೆಯೇ… ಇರುತ್ತಿರಲಿಲ್ಲ, ನಂತರ ಬೆಳಿಗ್ಗೆ ಐದು ಅಥವಾ ಆರು ಗಂಟೆಯಿಂದ ಪುನಃ ಶುರುವಾಗುತಿತ್ತು ಅದರ ರಚನೆ ಹೀಗೆ ೯೦ ದಿನಗಳಲ್ಲಿ, ೧೨೦ ಯಂತ್ರಗಳನ್ನು ಬರೆದೆ.

ದೇವಿ ಇಂದಿಗೂ… ಒಲಿದಿದ್ದಾಳೆ, ಅಥವಾ ಇಲ್ಲ ಗೋತ್ತಿಲ್ಲ, ಆದರೆ ಇದನ್ನು ಬರೆದ ನಂತರ ತಿಳಿದಿದ್ದು, ದೇಹ… ಮನಸ್ಸಿನ ಜೊತೆಗೆ ಉಸಿರು ಒಂದು ಐಕ್ಯತೆಗೆ ಬಂದಿರುವುದು.

ಇದು ತಿಳಿಯುವುದು… ನಿಮಗೆ ಹೇಗೆ ಅಂದರೆ ನಿಮ್ಮ ನಿದ್ರೆಯ ಅವಧಿ ಕಡಿಮೆ, ಆಗಿ ಲವಲವಿಕೆ ಯಿಂದ ಕೆಲಸ ಮಾಡಿದಾಗ, ಆಗ ನಿಮ್ಮ ಉಸಿರಾಟ ನಿಮಿಷಕ್ಕೆ ಒಂಭತು ಬಾರಿ ಸಹಜವಾಗಿ ಆಗುತಿರುತ್ತದೆ.