ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅರ್ಧನಾರೀಶ್ವರ ತತ್ವ

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಇಡ ಪಿಂಗಳ ನಾಡಿಗಳು ಎಂದು ಕೇಳುತ್ತಲೇ ಇರುತ್ತೇವೆ. ಅಂದರೆ ಚಂದ್ರನಾಡಿ ಹಾಗೂ ಸೂರ್ಯನಾಡಿ ಅಥವಾ ದೇಹದ ಎಡಭಾಗ ಮತ್ತು ಬಲಭಾಗ.

ಸೂರ್ಯ ನಾಡಿ ಅಂದರೆ ಅರ್ಥಾತ್ ಪಿಂಗಳ ನಾಡಿ ಇದರಿಂದ ದೇಹದ ಉಷ್ಣತೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದಾಗಿದೆ.

ಅದೇ ರೀತಿ ಇಡ ನಾಡ/ ಚಂದ್ರ ನಾಡಿ ದೇಹದ ಶೀತದದಂಶ ನಿರ್ಗಹಿಸ ಬಹುದು, ಹೆಚ್ಚು ಮಾಡಬಹುದು.

ಹೇಗೆ ಅಂದರೆ ಬಲಗಡೆ ಮುಗಿನ ಹೊಳ್ಳೆಯಿಂದ ಉಸಿರಾಡುವುದು (ಉಚ್ಛ್ವಾಸ/ ನಿಶ್ವಾಸ) ಇದರಿಂದ ಸೂರ್ಯನ ಅಂಶದ ತೊಂದರೆ ನಿವಾರಣೆ ಆಗುತ್ತದೆ.

ಅದೇ ರೀತಿ ಎಡಗಡೆಯಿಂದ ಮಾಡಿದಲ್ಲಿ ಚಂದ್ರನ ಅಂಶದ ತೊಂದರೆ ನಿವಾರಣೆ ಆಗುತ್ತದೆ.

ಆದರೆ ನೀವು ಯಾವ ಸಂದರ್ಭದಲ್ಲಿ ಮಾಡುತ್ತಿದ್ದೀರಿ ಎಂಬುದು ಮತ್ತು ನಿಗದಿತ ರೀತಿಯ ಆಸನದಲ್ಲಿ ಕುಳಿತು ಮಾಡುತ್ತಿದ್ದಿರಾ ಎಂಬುದು ಬಹಳ ಮುಖ್ಯ.

ಮತ್ತು ಇನ್ನೊಂದು ಅಂಶ ಇಲ್ಲಿ ನೀವು ಗಮನಿಸಿಬೇಕು ಸೂರ್ಯನ ಆವರ್ತನ ಕ್ಕೆ ಪುರುಷರು ಹೊಂದಿಕೆ ಆಗಿರುತ್ತಾರೆ.
ಚಂದ್ರನ ಇಪ್ಪೆತ್ತೆಂಟು ದಿನಗಳ ಆರ್ವತನಕ್ಕೆ ಹೆಂಗಸರು ಹೊಂದಿಕೆ ಆಗಿರುತ್ತಾರೆ (ಇದರಿಂದಲೇ ಸೃಷ್ಟಿ ಕ್ರಿಯೆ ನಡೆಯುತ್ತದೆ).

ಪುರಾತನ ಕಾಲದಲ್ಲಿ ಸಪ್ತ ಋಷಿಗಳಿಗೆ ಆದಿ ಗುರುವಾಗಿ ಕಂಡ ಶಿವನು ತನ್ನ ಎರಡು ನಾಡಿಗಳನ್ನು ಸಮ ಪ್ರಮಾಣದಲ್ಲಿ ಇರಿಸಿಕೊಂಡ ಹಾಗೂ ಶಂಭೋ ಎಂದವರಿಗೆ ಬೇಡಿದ್ದು ನೀಡಿದ್ದಲ್ಲದೆ ಕಾಲಾನಂತರದಲ್ಲಿ ಅವರಿಗೆ ಇರಬಹುದಾದ ಸುಖ ನೀಡಲು ಯೋಗ ಸಾಧನೆ ಯಿಂದ ಸಮಯದಲ್ಲಿ ಮುಂದೆ ಹೋಗಿ (Time travel) ಯೋಗಗಳನ್ನು ಪ್ರಸ್ತುತದಲ್ಲಿ ನೀಡುತ್ತಿದ್ದ ಅಂದರೆ ಸಪ್ತ ಋಷಿಗಳಿಗೆ ಮನುಷ್ಯನ ಹುಟ್ಟು ಯಾವ ‘ಲಿಂಗ’ದಲ್ಲಿ ಆದರೂ ನೀವು ನಿಮ್ಮಲ್ಲಿ ತಾಯಿಯ ಅಂಶವನ್ನು ಸದಾ ಜಾಗೃತರಾಗಿ ಇರಿಸಿಕೊಳ್ಳಿ ಆಗ ನೀವು ಪರಿಪೂರ್ಣ ಎಂಬ ಸಂದೇಶ ರವಾನಿಸಿದ ಮತ್ತು ಆ ಮೂಲಕ ಎಲ್ಲಾ ವಿಷಯಗಳಲ್ಲಿ ಒಂದು ಅನಂತ ಸಾಧ್ಯತೆ ಆಗಿ ಅವರಿಗೆ ಕಂಡ ಎಂದು ಅನಿಸುತ್ತದೆ.

ಆಳದಲ್ಲಿ ಅಂದರೆ ಮೂಲದ ಆಧಾರವಾದ ಚಕ್ರದಲ್ಲಿ ತ್ರಿಕೋನ ಮೇಲ್ಮುಖವಾಗಿ ಇದ್ದು ಹಾಗೆ ಅದೆ ಮುಖವಾಗಿ ಶಕ್ತಿ (ಇದು ಶಕ್ತಿ ದೇವತೆ ಜಾಗ) ಹರಿಯುತ್ತದೆ ಇನ್ನು ಇಲ್ಲಿಂದ ಐದನೇ ಜಾಗದ ಚಕ್ರದಲ್ಲಿ (ಇದು ಶಿವ ಇರುವ ಸ್ಥಾನ {ಇದರ ಬಗ್ಗೆ ಇನ್ನೊಮ್ಮೆ ನೋಡೋಣ} ) ತ್ರಿಕೋನ ಕೆಳಮುಖವಾಗಿ ಇರುತ್ತದೆ.

ಇನ್ನು ಇತ್ತೀಚೆಗೆ ವಿಜ್ಞಾನಿಗಳು ಒಂದು ಸಂಶೋಧನೆ ನಡೆಸಿ ಆಶ್ಚರ್ಯಗೊಂಡಿದ್ದಾರೆ ಅದೇನೆಂದರೆ ಹುಟ್ಟುವ ಮಕ್ಕಳ ಪ್ರತಿ ಅಣುವಿನಲ್ಲಿ ಶಕ್ತಿಯ ಅಂಶಗಳು ಬರುವುದು ಹೆಣ್ಣಿನಿಂದ ಅಂದರೆ ಅಮ್ಮಂದಿರದ್ದೆ ಹೊರತು ತಂದೆಯಿಂದ ಶಕ್ತಿ ಅಂಶಗಳು ವರ್ಗಾವಣೆ ಆಗುವುದಿಲ್ಲ.

ಸೃಷ್ಟಿ ರಹಸ್ಯ ತನ್ನಲ್ಲಿ ಇರಿಸಿಕೊಂಡಿರುವ ಶ್ರೀ ಚಕ್ರ ಕೂಡ ಇದನ್ನೇ ಹೇಳುತ್ತದೆ.

ಯಾಕೆ ಇಷ್ಟೆಲ್ಲಾ ಹೇಳಿದೆ ಎಂದರೆ ಅರ್ಧನಾರೀಶ್ವರ ತತ್ವ ಎಂದರೆ ಇದೆ ಇರಬಹುದು.

ಇದು ಶಶಿಧರನ ವೈಯಕ್ತಿಕ ತರ್ಕ ಮತ್ತು ಊಹೆಗಳು.

ಬಹುಶಃ ಚಿತ್ರ ಕಾರರು ಇದನ್ನು ಶಿವ ಮತ್ತು ಶಕ್ತಿ ರೂಪದಲ್ಲಿ ಚಿತ್ರಿಸಿ ಅದನ್ನು ಹೇಳಲು ಹೊರಟಿದ್ದು ಶಿವ ತನ್ನ ಮಡದಿಗೆ ತನ್ನ ಅರ್ಧ ದೇಹ ನೀಡಿದ ಎಂದು ಅರ್ಥ ಆಗಿರಬಹುದು ಜನಗಳ ದೃಷ್ಟಿಯಲ್ಲಿ.

ಈ ವಿಷಯಗಳ ಬಗ್ಗೆ ಇನ್ನೂ ಹೆಚ್ಚು ಚರ್ಚಿಸೋಣ ನನ್ನ ಮುಂದಿನ ಸಂಚಿಕೆಯಲ್ಲಿ… ಅಲ್ಲಿಯವರೆಗೂ ಶುಭ ಮಸ್ತು.