ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಧೀರೇಂದ್ರ ನಾಗರಹಳ್ಳಿ
ಪ್ರೊಫೈಲ್
ಇತ್ತೀಚಿನ ಬರಹಗಳು: ಧೀರೇಂದ್ರ ನಾಗರಹಳ್ಳಿ (ಎಲ್ಲವನ್ನು ಓದಿ)

ನಮ್ಮ ಸ್ವಭಾವಗಳು:-
‘ಗುರುತಿನ ಸಂಘರ್ಷ’ ಮತ್ತು ‘ಮಾನ್ಯತೆ’

(Identity crisis & Recognition)
“ನನ್ನನ್ನು ಯಾರೂ ಗುರುತಿಸ್ತಾ ಇಲ್ಲ”!
”ನನಗೆ ಯಾರೂ ಪ್ರಾಮುಖ್ಯತೆ ಕೊಡ್ತಾ ಇಲ್ಲ..”!
”ನನ್ನ ಮಾತು ಮತ್ತು ನನ್ನ ಇರುವಿಕೆ ಅಪ್ರಸ್ತುತ ಅನ್ನಿಸ್ತಾ ಇದೆ …” !
“ನಾನು ಎಲ್ಲೋ ಕಳೆದುಹೋದೆ …”ಎಂದು ಹಲುಬ್ತಾ ಇದ್ದರೆ ಅದೇ ‘ಗುರುತಿನ ಸಂಘರ್ಷ’ .
ಇದೀಷ್ಟನ್ನು ಇನ್ನೊಬ್ಬರ ಮುಂದೆ ವ್ಯಕ್ತಪಡಿಸಲೇಬೇಕಾಗಿಲ್ಲ ಅಥವಾ ಗೊಣಗಲು ಬೇಕಾಗಿಲ್ಲ.ಸಣ್ಣಗೆ ಒಳಗೊಳಗೆ
ಅನ್ನಿಸಿದರು ಅಯಿತು, ಅದು ‘ಗುರುತಿನ ಸಂಘರ್ಷ’,.ಅಷ್ಟೆ ಅಲ್ಲ ಪರಿಸ್ಥಿತಿಯ ಆ ದಡದಲ್ಲಿಯೂ ಇಲ್ಲ ಈ ದಡದಲ್ಲಿಯೂ ಇಲ್ಲ
ಎನ್ನುವ ಗೊಂದಲ ಪದೇ ಪದೇ ಕಾಡಿದರೂ ಸಾಕು ,yes! it is an Identity crisis.


ದಿಡುಗಿನ ಈ ಬದುಕಿನಲ್ಲಿ ಎಲ್ರು ಓಡ್ತಾನೆ ಇರ್ತೀವಿ ಮತ್ತು ಓಡಲೇಬೇಕು!ಈಗಿನ ಕಾಲಮಾನ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ಗುರಿಯೂ ಒಂದೇ ಅದು ‘ಗೆಲವು’.ಶತಾಯಗತಾಯ ಗೆಲ್ಲಲೇ ಬೇಕು. ಈ ಹೋರಾಟದಲ್ಲಿ ಗೆಲ್ಲುವುದು ಕೇವಲ ಒಬ್ಬರೇ, ಇದು ಎಲ್ಲರಿಗೂ ಗೊತ್ತಿರುವ ಒಂದು ಸತ್ಯ .ಆದರೂ ಹೋರಾಡ್ತೇವೆ. ಗೆದ್ದೇ ಗೆಲ್ತೀವಿ ಎನ್ನುವ ಹಠದಿಂದ ಮತ್ತು ಈ ಹಠ ಬೇಕೇಬೇಕು.ಒಬ್ಬೊಬ್ಬರದು ಒಂದೊಂದು ಓಟ! ಬ್ಯಾಂಕ್ ಬ್ಯಾಲೆನ್ಸ ಏರಿಸಲು,ಪರೀಕ್ಷೆಯಲ್ಲಿ ಪಾಸ್ ಆಗಲು,ಇಂಟರವ್ಯು ನಲ್ಲಿ ಗೆಲ್ಲಲು,ಹುಡುಗಿ ಪಟಾಯಿಸಲು,ಎಲೆಕ್ಷನ್ ಗೆಲ್ಲಲು,ಮನೆ ಕಟ್ಟಲು,ಮಗಳ ಮದುವೆ ಮಾಡಲು, ಅಲ್ಲದೆ ಇನ್ಯಾರನ್ನೋ ಸೋಲಿಸಲು-ಹೀಗೇ ತರಾವರಿ ಓಟಗಳು.ಈ ಎಲ್ಲಾ ಓಟಗಳ ಹಿಂದೆ ಇರುವ ಮರ್ಮ ಇಷ್ಟೆ, ಗೆದ್ದು ಬಿಡಬೇಕು! ’ಗೆಲುವು’ ಬೇಕು ಅನ್ನುವುದು ಎಲ್ಲರಲ್ಲೂ ಅದು ಇದ್ದೇ ಇರುತ್ತದೆ ಮತ್ತು ಅದು ಸಹಜ ಪ್ರಕ್ರಿಯೆ.ಇದೀಷ್ಟು ಸಂಸಾರ ಸಂಬಂಧದ
ರಗಳೆಗಳು. ಒಂದಿಷ್ಟು ಕಾರ್ಪೂರೆಟ್ ಗೆ ಸಂಬಂಧಿಸಿದ ಉದಾಹರಣೆ ನೋಡೋಣ.ಇಲ್ಲಿ ಎಲ್ಲರದೂ ಒಂದೇ ಗುರಿ.ನನ್ನನ್ನು ನನ್ನ ಮ್ಯಾನೇಜರ್ ಗುರುತಿಸಬೇಕು(Recognition ). ಮ್ಯಾನೇಜರ್ ಕೊಡುವ ‘ಮಾನ್ಯತೆ’ (Recognition ) ಯ ಮೇರೆಗೆ ವರ್ಷಾಂತ್ಯದ ರೇಟಿಂಗ್ ನಿರ್ಧಾರ ಆಗುತ್ತದೆ ಮತ್ತು ರೇಟಿಂಗ್ ಅಧಾರದ ಮೇಲೆಯೇ ಬಡ್ತಿ,ವಿದೇಶಿ ಪ್ರವಾಸ,ಬೋನಸ್,ಸಂಬಳದ ಹೆಚ್ಚಳ.ಹೀಗೆ ಇವೆಲ್ಲವೂ ತಳಕು ಹಾಕಿವೆ.ಆದರೆ ಗಮನಿಸಿ ‘ನನ್ನನ್ನು ಗುರುತಿಬೇಕು’ ಅಥವಾ ‘ಮಾನ್ಯತೆ’ ಬೇಕು ಅನ್ನುವುದು ಎಲ್ಲರಲ್ಲೂ ಇರುತ್ತದೆ ಮತ್ತು ಅದು ಕೂಡ ಒಂದು ಸಹಜ ಪ್ರಕ್ರಿಯೆ.

Identity crisis & Recognition ಈ ಎರಡನ್ನು ವಿಭಿನ್ನ ಸ್ಥರಗಳಲ್ಲೇ ನೋಡಬೇಕಾಗುತ್ತದೆ. ‘ಮಾನ್ಯತೆ’ ಎನ್ನುವುದನ್ನು‘ಗೆಲ್ಲಲೇಬೇಕು’ ಎನ್ನುವುದಕ್ಕೆ ಸಮೀಕರಿಸಿದರೆ ‘ಗುರುತಿನ ಸಂಘರ್ಷ’ ವನ್ನು ‘ಗೆಲ್ತಾ ಇಲ್ಲ’ ಎನ್ನುವುದಕ್ಕೆ ಸಮೀಕರಿಸಬಹದು.
‘ಗೆಲ್ಲಲೇಬೇಕು’ ಎನ್ನುವುದು ಪಾಸಿಟಿವ್ ಎನರ್ಜಿ ಯ ಸಂಕೇತವಾದರೆ, ‘ಗೆಲ್ತಾ ಇಲ್ಲ’ ಎನ್ನುವುದು ನೆಗೆಟಿವ್ ಎನರ್ಜಿಯ ಸಂಕೇತ. ‘ಗುರುತಿನ ಸಂಘರ್ಷ’ ಕ್ಕೆ ಕಾರಣಗಳು ಹಲವು .ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ‘ನಡುವಳಿಕೆ ವಿಜ್ಞಾನ’ ದಲ್ಲಿ ನಡೆದಿರುವ ಸಂಶೋಧನೆಗಳು ನಮ್ಮಲ್ಲಿ ಆಗಿಲ್ಲ.ಅಲ್ಲಿನ ಬೇರೆ ಬೇರೆ ವಿಜ್ಞಾನಿಗಳು ತಮ್ಮದೇ ಆದ ಸಿಧ್ಧಾಂತಗಳನ್ನು ಮಂಡಿಸಿದ್ದಾರೆ.ಆದರೆ ಕೇವಲ ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಸೀಮಿತ ಗೊಳಿಸಿ ನೋಡುವದಾದರೆ ಕೆಳಗೆ ಕೊಟ್ಟಿರುವ ಕಾರಣಗಳು ಆಗಿರಬಹುದು.

1.ಆತ್ಮ ವಿಶ್ವಾಸದ ಕೊರತೆ,
2.ಸರಣಿ ಸೋಲುಗಳು ಮತ್ತು
3.ಕೀಳರಮೆ.


ನೆನಪಿಡಿ ‘ಮಾನ್ಯತೆ’ ಎನ್ನುವುದು ಎಲ್ಲರಿಗೂ ಬೇಕು ,ಅದು ಬೆಳವಣಿಗೆಗೆ ಪೂರಕವೂ ಹೌದು! ಆದರೆ ‘ಗುರುತಿನ ಸಂಘರ್ಷ’ ತುಂಬಾ ಅಪಾಯ.ಇದು ನಮ್ಮ ಚೈತನ್ಯವನ್ನು ಉಡುಗಿಸಿಬಿಡುತ್ತೆ.ಯಾವ ಕ್ಷಣದಲ್ಲಿ ‘ಗುರುತಿನ ಸಂಘರ್ಷ’ ಕ್ಕೆ ಒಳಗಾಗಿದಿವಿ ಅಂತ ಅನ್ನಿಸಲಿಕ್ಕೆ ಶುರುವಾಯಿತೊ ಆ ಕ್ಷಣದಿಂದಲೇ, ‘ಗುರುತಿನ ಸಂಘರ್ಷ’’ಕ್ಕೆ ಕಾರಣವಾಗಿರುವ ಎಲ್ಲಾ ಅಂಶಗಳನ್ನುಬರೆದಿಟ್ಟುಕೊಳ್ಳಿ .ಸಮಸ್ಯೆಗಳ ಮೂಲವನ್ನು ಹುಡುಕಿ ಮತ್ತು ಅವುಗಳ ಮೇಲೆ ಕಾರ್ಯಪ್ರವೃತ್ತರಾಗಿ. ಜೀವನದ ಒಂದಲ್ಲಒಂದು ಘಟ್ಟದಲ್ಲಿ ನಾವೆಲ್ಲರು ‘ಗುರುತಿನ ಸಂಘರ್ಷ’ ಕ್ಕೆ ಒಳಗಾಗಿರ್ತಿವಿ.ಆದರೆ ‘ಗುರುತಿನ ಸಂಘರ್ಷ’ ವನ್ನು ಯಾವ ತರಹನಿರ್ವಹಣೆ ಮಾಡಿದಿವಿ ಅನ್ನುವುದು ಬಹು ಮುಖ್ಯ! ‘ಗುರುತಿನ ಸಂಘರ್ಷ’ ಎನ್ನುವುದು ಸಣ್ಣಗೆ ಒಳಗೆ ಪ್ರವಹಿಸಿ ನಮ್ಮತನವನ್ನೆ
ಕಿತ್ತು ತಿಂದುಬಿಡುತ್ತೆ.ಹುಷಾರಿಗಿರಿ! ಆರಂಭದ ಹಂತದಲ್ಲೆ ಗುರುತಿಸಿ ಬೇರು ಸಮೇತ ಕಿತ್ತೆಸೆದು ಬಿಡಿ.