ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೇಮಾ ಎಸ್ ರಾವ್

ಶ್ರೀಮತಿ ಪ್ರೇಮಾ ಎಸ್ ರಾವ್ ಅವರು ಮೂಲತಃ ಉಡುಪಿನ ತಾಲೂಕಿನ ಎಲ್ಲೂರಿನ ವರಾಗಿದ್ದು, ಸಾಹಿತ್ಯದಲ್ಲಿ ಅಪಾರ ಅಭಿಮಾನ ವಿರಿಸಿಕೊಂಡವರಾಗಿದ್ದಾರೆ. ಜೀವನದ ಅನೇಕ ಸೋಲು-ಗೆಲುವುಗಳಿಗೆ ಮುಖ ಮಾಡುತ್ತಾ, ಬಾಲ್ಯದಲ್ಲಿಯೇ ತಮ್ಮಲ್ಲಿ ಅಡಕವಾಗಿದ್ದ ಪ್ರತಿಭೆಗಳಾದ ಮತ್ತು ಆಸಕ್ತಿಯ ಕ್ಷೇತ್ರವಾಗಿರುವ ಸಂಗೀತ, ನೃತ್ಯ ,ಭಜನೆ, ನಾಟಕ, ಯಕ್ಷಗಾನ ಮೊದಲಾದ ಲಲಿತಕಲೆಗಳಿಗೆ ನಿವೃತ್ತ ಜೀವನದಲ್ಲಿ ಒಂದು ಸೂಕ್ತ ರೂಪವನ್ನು ಕೊಟ್ಟವರು. ಲೇಖನ, ಕವನ ಬರೆಯುವುದು, ಕಾರ್ಯಕ್ರಮ ನಿರೂಪಣೆ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮುಂತಾದುವುಗಳನ್ನು ತಮ್ಮ ಅಭಿರುಚಿಯ ಕ್ಷೇತ್ರವನ್ನಾಗಿಸಿಕೊಂಡು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲವಾಣಿ, ಗೋಕುಲ ಕಲಾವೃಂದದಂತಹ ಅನೇಕ ಸಂಘ ಸಂಸ್ಥೆಗಳಲ್ಲಿ ಸ್ವಯಂಸೇವಕಿಯಾಗಿ ಮತ್ತು ಸದಸ್ಯರಾಗಿ ಪಾಲ್ಗೊಂಡು ಸೇವೆ ಸಲ್ಲಿಸಿದಂತಹ ತೃಪ್ತಿಯು ಇವರಲ್ಲಿದೆ. ಶ್ರೀ ಎಚ್ ಬಿ ಎಲ್ ರಾವ್ ರವರ ಸಂಪಾದಕತ್ವದಲ್ಲಿ ವೇದಮೂರ್ತಿ ಗುರುರಾಜ ಉಡುಪರ ಜೀವನಗಾಥೆಯನ್ನು ಬಿಂಬಿಸುವ 'ಮಂತ್ರಾರ್ಥ ತಿಳಿದ ಪುರೋಹಿತ' ಎನ್ನುವ ಪುಸ್ತಕವನ್ನು ಬರೆದ ಹೆಗ್ಗಳಿಕೆ ಕೂಡ ಇವರದ್ದು. ಕನ್ನಡಿಗರೆಲ್ಲರನ್ನೂ ಸಂಘಟಿಸಿ 'ಹಿರಾನಂದನಿ ಎಸ್ಟೇಟ್ ಕನ್ನಡ ಬಳಗ'ವನ್ನು ಸ್ಥಾಪಿಸಿ, ಅನೇಕ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಗೋಕುಲ ಕಲಾಶ್ರೀ' ಎನ್ನುವ ಪ್ರಶಸ್ತಿ ಅವರ ಮುಡಿಗೇರಿದೆ.

ಮುಂಬಯಿ ಜನತೆಗೆ ಗೋಕುಲದ ಕೊಡುಗೆ – ನವೀಕೃತ ಸಾಂಸ್ಕೃತಿಕ ಭವನ ಹಾಗೂ ಶ್ರೀ ಕೃಷ್ಣ ದೇವಾಲಯ ಪುಣ್ಯಭೂಮಿ ಭಾರತದ ಪ್ರಸಿದ್ಧ…