ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿ.ಜಿ.ಭಟ್ಟ

ಮುಂಬೈ ಕನ್ನಡ ಸಾಹಿತ್ಯದ ಮಹತ್ವದ ಕವಿಗಳಲ್ಲಿ ವಿ.ಜಿ ಭಟ್ಟ ಎಂದು ಪ್ರಸಿದ್ಧರಾದ ವಿಷ್ಣು ಗೋವಿಂದ ಭಟ್ಟರು ಒಬ್ಬರು.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾದವರು.1941 ರಿಂದ 1991ರ ವರೆಗೆ ಸುಮಾರು ಅರ್ಧ ಶತಮಾನದಷ್ಟು ಕಾಲ ಅವರು ಕಾವ್ಯ ಪ್ರಪಂಚವನ್ನು ಆಳಿದವರು.ತಮ್ಮ ಪ್ರಖರ ಪ್ರತಿಭೆಯಿಂದ ಕನ್ನಡ ಸಂವೇದನೆಯನ್ನು ಹಿಗ್ಗಿಸಿದವರು. ನವೋದಯ, ನವ್ಯ, ನವ್ಯೋತ್ತರ ಈ ಮೂರು ಕಾಲಘಟ್ಟಗಳಲ್ಲಿ ನಿಂತು ತನ್ನ ಅನನ್ಯತೆಯನ್ನು ಸಾಧಿಸಿದವರು. ಒಟ್ಟು 23 ಸಂಕಲನಗಳ ಮೂಲಕ 2000 ಕ್ಕೂ ಮೀರಿದ ವೈವಿಧ್ಯಮಯವಾದ ಕವನಗಳನ್ನು, ಶಿಶು ಗೀತೆಗಳನ್ನು,ಕಥೆಗಳನ್ನು ಸಾರಸ್ವತ ಲೋಕಕ್ಕೆ ಕೊಟ್ಟು ಶ್ರೀಮಂತ ಗೊಳಿಸಿರುವುದು ವಿ.ಜಿ ಭಟ್ಟರ ಹಿರಿಮೆ.ತಮ್ಮ ಕವಿತೆಗಳಲ್ಲಿ ಜೀವನದ ಎಲ್ಲ ವಸ್ತು ವಿಷಯಗಳನ್ನು ಸಶಕ್ತವಾಗಿ ಅಳವಡಿಸಿಕೊಂಡ ಅವರು ಎಲ್ಲ ಪ್ರಭಾವಗಳಿಂದ ಮುಕ್ತವಾಗಿ, ಅತಿ ಶುಷ್ಕ ವೈಚಾರಿಕತೆ ಹಾಗೂ ಅತಿಭಾವುಕ ಸಾಂಪ್ರದಾಯಿಕತೆ ಇವೆರಡರಲ್ಲೂ ವಿವೇಕವನ್ನು ಇಟ್ಟುಕೊಂಡು ವ್ಯಂಗ್ಯ ವಿಡಂಬನೆಗಳ ಮೂಲಕ ಬಂಡಾಯವೆದ್ದವರು. ಸಾಹಿತಿ ಜಯಂತ್‌ ಕಾಯ್ಕಿಣಿಯವರು ವಿ.ಜಿ.ಭಟ್‌ ಅವರನ್ನು ʻಕನ್ನಡ ಕಾವ್ಯದ ಚಾರ್ಲಿ ಚಾಪ್ಲಿನ್ʻ ಎಂದು ಕರೆದಿದ್ದಾರೆ. ಪ್ರಶಸ್ತಿ-ಪುರಸ್ಕಾರ, ಮಾನ-ಸನ್ಮಾನಗಳನ್ನು ಬಯಸದ ಕವಿಯನ್ನು ೧೯೮೩ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ವಿಶೇಷ.

ಗುಬ್ಬಿಯೊಂದು ಹಾರಿ ಬಂದುಹುಲ್ಲುಕಡ್ಡಿ ಕಚ್ಚಿತಂದುಗೂಡು ಕಟ್ಟಿತುಗೋಡೆ ಮೇಲೆ ಪಟದ ಹಿಂದೆಗೂಡು ಕಟ್ಟಿತು ನುಚ್ಚುಕಾಳು ಹೆಕ್ಕಿತಂದುಮದುವೆ ಗಿದುವೆ ಮಾಡಿಕೊಂಡುಗುಬ್ಬಿ ಬಾಳಿತುಕೆಲವು ಕಾಲ…