ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎರ್ಗೊನೊಮಿಕ್ಸ್ ಬಗ್ಗೆ ಧೀರೇಂದ್ರ ನಾಗರಹಳ್ಳಿ ಅವರ ಪರಿಚಯ ಲೇಖನ
ಧೀರೇಂದ್ರ ನಾಗರಹಳ್ಳಿ
ಪ್ರೊಫೈಲ್
ಇತ್ತೀಚಿನ ಬರಹಗಳು: ಧೀರೇಂದ್ರ ನಾಗರಹಳ್ಳಿ (ಎಲ್ಲವನ್ನು ಓದಿ)

ಕೆಳಗಿನ ಎರಡು ನಿದರ್ಶನಗಳನ್ನು ಗಮನಿಸಿ:-

1.ಹೊಸದಾಗಿ ತರಲಾಗಿರುವ ಜ್ಯೂಸ್/ಸಾಸ್/ಐಸ್ ಕ್ರೀಮ್ /ಇನ್ಯಾವುದಾದರು ಡಬ್ಬಗಳ ಮುಚ್ಚಳವನ್ನು ತೆಗೆಯಲು ಅಲ್ಪಮಟ್ಟಿಗಾದರೂ ಕಿರಿ ಕಿರಿ ಅನ್ನಿಸುತ್ತಿದೆಯೇ?
2.ಮನೆಯಲ್ಲಿರುವ ಟೇಬಲ್ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಕುರ್ಚಿ ಅಳತೆಗಳು ಸರಿಯಾಗಿರದೆ,ನಮ್ಮ ಮೊಣಕಾಲು ಟೇಬಲ್ಲಿಗೆ ತಗಲುತ್ತಿದೆಯೇ?


ಇದು ವಿಜ್ಞಾನದ ಅಥವಾ ಅನ್ವಯಿಕಾ ವಿಜ್ಞಾನದ ತೀರಾ ಇತ್ತೀಚಿನ ವಿಭಾಗ.ಅದರಲ್ಲೂ ವಿಜ್ಞಾನದ ಈ ಪರಿಕಲ್ಪನೆಯನ್ನು ಬಹುತೇಕವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಕೈಗಾರಿಕ ಕ್ಷೇತ್ರಗಳಲ್ಲಿ ವಿಫುಲವಾಗಿ ಅನುಷ್ಠಾನ ಗಳಿಸಿದ್ದಾರೆ ಅಲ್ಲದೆ ಗೃಹಪಯೋಗಿ ವಸ್ತುಗಳಿಗೂ ವಿಸ್ತರಿಸಿರುತ್ತಾರೆ.ಪ್ರಚಲಿತ ಭಾರತದ ಮಟ್ಟಿಗೆ ಹೇಳುವುದಾದರೆ ಈ ವಿಭಾಗದ ಪರಿಕಲ್ಪನೆ ಅಪರಿಚಿತ ಮತ್ತು ಇದನ್ನು ಜಾರಿಗೊಳಸಲು ಇರುವ ಪರಿಜ್ಞಾನದ ಮಿತಿ ಅಲ್ಲದೆ ತಂತ್ರಜ್ಞಾನದ ಕೊರತೆ ಈ ಪರಿಕಲ್ಪನೆಯನ್ನು ಅನುಷ್ಠಾನಗಳಿಸಲು ಅಡ್ಡಿಯಾಗಿದೆ.ಈ ಪರಿಕಲ್ಪನೆಯನ್ನು ಶಾಸ್ತ್ರಬಧ್ಧವಾಗಿ ಆಧ್ಯಯನ ಮಾಡಲಾಗುತ್ತಿದೆ .ವಿಜ್ಞಾನದ ಅಥವಾ ಅನ್ವಯಿಕಾ ವಿಜ್ಞಾನದ ವಿಭಾಗವನ್ನು ಇಂಗ್ಲೀಷ್ ನಲ್ಲಿ ‘ಎರ್ಗಾನಾಮಿಕ್ಸ್’ ಎಂದು ಕರೆಯುತ್ತಾರೆ.ಇದು ಗ್ರೀಕ್ ನ ಎರಡು ಶಬ್ದಗಳಿಂದ ಕೂಡಿದೆ ‘ಎರ್ಗೊ’ ಮತ್ತು ‘ನೊಮಿಯೋ’.
ಎರ್ಗೊ ಎಂದರೆ ಕೆಲಸ ಮತ್ತು ನೊಮಿಯೋ ಎಂದರೆ ‘ನೈಸರ್ಗಿಕ ನಿಯಮ’ಗಳು.ಕನ್ನಡದ ಮಟ್ಟಿಗೆ ತರ್ಜಿಮೆ ಮಾಡಿದರೆ ‘ದಕ್ಷತಾ ಶಾಸ್ತ್ರ’ .
“ಮನುಷ್ಯ ಮತ್ತು ಮನುಷ್ಯನಿಗೆ ಸಂಬಂಧಪಟ್ಟ ಕೆಲಸದ ಸಲಕರಣೆ ಹಾಗು ಉಪರಕಣಗಳ ವ್ಯವಸ್ಥಿತವಾಗಿ ಅಣಿಗೊಳಿಸಿ ಅದರಿಂದ ಹೆಚ್ಚಿನ ಉಪಯೋಗ ಪಡೆಯುವ ಪ್ರಕ್ರಿಯೆಯಲ್ಲಿ ಆಗಬಹುದಾದ ಶ್ರಮ ಮತ್ತು ತದನಂತರದ ಬಳಲಿಕೆ ಪ್ರಮಾಣವನ್ನು ಕಡಿಮೆ ಮಾಡುವ ಅಧ್ಯಯನ ಶಾಸ್ತ್ರವೇ-‘ದಕ್ಷತಾ ಶಾಸ್ತ್ರ’ .
ಉತ್ಪಾದನ ಕ್ಷೇತ್ರಗಳಲ್ಲಿ ಕೆಲಸದ ಶ್ರಮದಿಂದ ಆಯಾಸ ಉಂಟಾಗುತಿತ್ತು. ಅದರ ನೇರ ಪರಿಣಾಮವೆನ್ನುವಂತೆ ಕಾರ್ಮಿಕರ ಕಾರ್ಯ ದಕ್ಷತೆಯಲ್ಲಿ ಆಗುತ್ತಿದ್ದ ಕೊರತೆ ಮತ್ತು ನಂತರದಲ್ಲಿ ಉತ್ಪಾದಕತೆ ಕೆಳಬೀಳುತ್ತಿತ್ತು.


ಉತ್ಪಾದನೆ ಕ್ಷೇತ್ರಗಳ ಕೆಲಸ

ಕಾರ್ಮಿಕರ ಕಾರ್ಯ ದಕ್ಷತೆ

ಉತ್ಪಾದಕತೆ


ಮೇಲಿನ ಮೂರು ಅಂಶಗಳನ್ನು ತುಂಬಾ ಕೂಲಂಕುಷವಾಗಿ ವಿಷ್ಲೇಶನೆಗೆ ಒಳ ಪಡಿಸಿದಾಗ ಹೊರ ಬಿದ್ದ ಸತ್ಯ’ಆಯಾಸ’ ದ ಪ್ರಮಾಣ ಅದರ ಪರಿಣಾಮ.ಹೀಗ ವ್ಯವಸ್ಥಿತವಾಗಿ ಅಧ್ಯಯನಕ್ಕೊಳಗಾದ ನಂತರದಲ್ಲಿ ಮುಂದೆ ವಿಜ್ಞಾನದ ಒಂದು ವಿಭಾಗವಾಗಿ ಹೊರಹೊಮ್ಮಿತು.ಮನುಷ್ಯ ಮತ್ತು ಕೆಲಸಕ್ಕೆ ಸಂಬಂಧ ಪಟ್ಟಿರುವ ಸಲಕರಣೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು ನಂತರದಲ್ಲಿ ಕೆಲಸಕ್ಕೆ ಶುರುವಾದರೆ ಸಲಕರಣೆಗಳನ್ನು ಹುಡುಕುವಲ್ಲಿ ವ್ಯಯಿಸುವ ಶ್ರಮ ಮತ್ತು ಸಮಯವನ್ನು ಕಡಿತಗೊಳಿಸಬಹುದು.
ಈಗ ‘ದಕ್ಷತಾ ಶಾಸ್ತ್ರ’ ವನ್ನು ದೈನಂದಿನ ಕೆಲಸ ಕಾರ್ಯಗಳಲ್ಲಿ ಯಾವ ರೀತಿಯಾಗಿ ಬಳಸಬಹುದು ಎನ್ನುವ ಕೆಲವು ಉದಾಹರಣೆ ನೋಡುವ:-

ಅಡಿಗೆ ಮನೆಯಲ್ಲಿ:-
1.ಲಟ್ಟಣಿಗೆ,ಮೊಗಚು ಕೈ,ಇಕ್ಕಳ,ಗ್ಯಾಸ್ ಲೈಟರ್,ಕುಕ್ಕರ್ ವೇಟ್,ಚುಚ್ಚುಗ ಹೀಗೆ ಇನ್ನೆತರೆ ಪಾತ್ರೆ ಮತ್ತು ಅಡಿಗೆಗೆ ಅಗತ್ಯವರುವ ವಸ್ತುಗಳನ್ನು ವ್ಯವಸ್ಥಿತವಾಗಿ ಅವುಗಳ ಉಪಯೋಗದ ಶ್ರೇಢಿ ಗಣುಗುಣವಾಗಿ ಜೋಡಿಸಿಡಿ.
2.ಸಾಧ್ಯವಾದಷ್ಟು ಮಟ್ಟಿಗೆ ಪಾತ್ರಗಳನ್ನು ತೆಗೆದುಕೊಳ್ಳುವಾಗ ಕೈಯಿಂದ ಸುಲಭವಾಗಿ ಹಿಡಿಯಲು ಬರುವಂತೆ ನೋಡಿ
3.ಈಳಿಗೆ,ಚಾಕು,ಪೀಲರ್ ಗಳನ್ನು ಪದೇ ಪದೇ ಉಪಯೋಗಿಸದೆ ಹೋದಲ್ಲಿ ಕಣ್ಣಿಗೆ ಕಾಣುಸುವಂತೆ ಆದರೆ ಅಪಾಯಕ್ಕೆ ಆಸ್ಪದ ಇಲ್ಲದಂತೆ ಜೋಡಿಸಿಡಿ.

ಓದುವ ಕೊಣೆ:-
1.ಓದುವ ಮೇಜು ಮತ್ತು ಕುರ್ಚಿ ನಮ್ಮ ಎತ್ತರಕ್ಕೆ ಸರಿಯಾಗಿದೆಯೆ ಎಂದು ನೋಡಿಕೊಳ್ಳಿ,
2.ಕಂಪ್ಯೂಟರ್ / ಓದುವ ಮೇಜಿನ ಮೇಲೆ ಸರಿಯಾದ ನೈಸರ್ಗಿಕ ಬೆಳಕು ಬರುವಂತೆ ನೋಡಿಕೊಳ್ಳಿ
3.ಓದುವ /ಬರೆಯುವ ಪುಸ್ತಕಗಳನ್ನು/ಪೆನ್ ಗಳನ್ನು ಅವುಗಳ ಅಗತ್ಯಕ್ಕುಣುಗುಣವಾಗಿ ಜೋಡಿಸಿಡಿ.