ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಣ್ಣಜ್ಜಿಯೂ ಸಾಕ್ರೆಟಿಸ್ಸೂ ಹಾಗೂ ಅದ್ವೈತವು

ಶ್ರೇಯಸ್ ಪರಿಚರಣ್
ಇತ್ತೀಚಿನ ಬರಹಗಳು: ಶ್ರೇಯಸ್ ಪರಿಚರಣ್ (ಎಲ್ಲವನ್ನು ಓದಿ)

ಮೊದ್ಲೆ ತಪ್ಪೊಪ್ಪಿಗೆ!–ಇವ್ನು ರಬಕವಿ-ಮುದಕವಿಯೋನಲ್ಲ-ಒಬ್ಬ-ಮುದಿಕವಿ
ಶಾಯಿ ತುಂಬಿದ ಪೇನಾ ಕವಿಯ ಕೈಲಿ-ಬಿಳೀಹಾಳೆ ತುಂಬಿಲ್ಲ ಬರಿದು ಖಾಲಿ
ಶಾಯರೀ-ಭಾವ-ಮನ ಶೂನ್ಯ/ ಹಾಳೆ ಮೇಲೆ ಕವಿತೆ ಹೇಗೆ ಹರಿದೀತು ಹೇಳಿ
ನೊಂದವರ ನೂರೆಂಟು ನೋವು-ಕತೆ/ಅಕ್ಷರದಕ್ಕರೆಯಿಲ್ಲದೆ ಅನಭಿವ್ಯಕ್ತ
ಅಕ್ಷರ-ಮಾಂತ್ರಿಕನಲ್ಲ-ಆದರೆ ಕಾಡಿ-ಬೀಳಿಸಲೆತ್ನಿಸಿದ ಅರಿಷಡ್ಗಣ-ವಿಮುಕ್ತ
ಕವಿತಾ-ಸರಿತ್ಸಾಗರ ಹರಿಯುತ್ತಿಲ್ಲ/ಇರಬೇಕೊಂದು ನಾಗ-ಲೋಪದ ಲೇಪ
ಒಂದಿಷ್ಟು ಜಾಗ-ಹರವು ಕೊಡಲಿಲ್ಲ ಯಾರೂ ನೇಪಥ್ಯ-ಪದ-ಗಾರುಡಿಗರು–
ಬೇನಾಮಿ-mean-ಯಜಮಾನ್ರು-ಜ-mean-ದಾರ್ರು-ಸ್ವಹಿತಾಸಕ್ತಭದ್ರರು
ಆಪ್ತತೆಯೇ ಜೀವ ಭಾವಕ್ಕೆ-ಪದಕ್ಕೆ/ಪದ-ಸಂವಿಧಾನಕ್ಕೆ-ಮನದ ಆಮೋದಕ್ಕೆ
ಮನದ ನಮನ ದೇವನಿಗಲ್ಲ-ಭಾವಕ್ಕೆ-ತದ್ಭಾವದ ಅನುಭಾವ ಸಂಭಾವ್ಯಕ್ಕೆ

ಒಂದು ಕವಿತೆ ಯಾ ಪದ್ಯ ಬರೆಯಲೇಬೇಕಿತ್ತು-ಶ್ರೀ-ಸಂಪಾದಕರ ಆಗ್ರಹ
ಕವಿ ನಿಶ್ಚೇತನ-ಪದಚಾತುರ್ಯ ದುಸ್ತರ-ಆದ್ರೂ ಬಿಡದೀ ಬರೆಯೊ-ಮೋಹ
ಕಡೆಗೂ ಪೇನಾ ಹುಡುಕಿ ಶಾಯಿ ತುಂಬಿದ-ಹಾಳೆಯ ಹರವು ಸವಿಸ್ತಾರವೇ!
ಏನ-ಬರೆಯಲೀಗ-? ಮೊಟ್ಟ ಮೊದಲ ಸಾಲ-? ಒಮ್ಮೆಲೇ ಹುಟ್ಟಿದ ಪ್ರಶ್ನೆ!
ಈ ಬಾರಿ ಹಿಂದೆಂದೂ ಬರೆಯದ್ದು ಬರೆಯಬೇಕು-ಎಲ್ಲರೂ ಓದಬೇಕು–
ಈ ಹಿಂದೆ ಓದದವರೂ-ಕನಸದವರೂ-ಕಠಿಣ-ಮನಸ್ವಿ-ಅಕ್ಷರದ್ವೇಷಿಗಳೂ-
ಓದಿ ಕಣ್ತುಂಬಿ-“ಹೊಸನಾಡ-ರಸದ ಬೀಡ”-ಕಟ್ಟೋಕೆ ಹೊರಡಬೇಕು!!!

ಉದ್ದೇಶವೊ ಬೃಹತ್ತು-ಬರಹ=ಜೀವನ-ಅಸಾಧ್ಯ!! ಬರೆದ ಹಾಗೆ ಬಾಳಿಲ್ಲಾ!-
ಬಾಳಿದ ಹಾಗೆ ಬರಹವಿಲ್ಲಾ! ಬರೆಯದೇ ಬದುಕಿದೋರೆ ಇಲ್ಲಿ ಅಧಿಕರಲ್ವಾ?
ಚಮ್ಮಾರ-ಮಾತಾಮಹಿ-ಅಜ್ಜಿ ಒಂದು ಮನೆ ಆರೇಳು ಮದುವೆ ಮಾಡಿದಾಳೇ!-
ಕನಿಷ್ಠ ಹದಿನೆಂಟು ಬಾಣಂತನ-ನಾಮಕರಣ-ಪರಿಶುದ್ಧ ಹಸಿರ ಹೊಂಬಾಳೆ!
ಇದೀಗ ಭರಭರನೆ ಮಿರಮಿರನೆ ತನ್ನೆಡೆಗೆ-ಬಿಸಿಲು ಹೊಸೆದ ಹೊಂಬಿಸಿಲೇ!-
-ಮೊಮ್ಮಗಳ ಬಾಣಂತೀ-ಸ್ನಾನಕ್ಕೆ-ನಡೆಯುತಿದ್ದಾಳೆ-ಕೂಡಲೇ ಮನೆಕಡೆಗೆ-
-ಈ ಅಜ್ಜಿಗೆ-ಸಾಕ್ರೆಟಿಸ್ಸು/Nietzsche/ಸಾರ್ತ್ರೆ-ಯಾರಂತ ಅರಿವೇ ಇಲ್ಲವೇ!?!

ತುಂಬಾ ತಿಳಿದೋರಿಗೇ ಈ ಇವರೆಲ್ಲ!!-ಇವರೆಲ್ಲಾರೂ ತುಂಬಾ ತಿಳಿದೋರೇ!

ಹುಟ್ಟಿದ್ದಕ್ಕೇ ಬದುಕೋರಿಗೆ ಅಕ್ಷರವೇ ಅನಾವಶ್ಯಕ-ಇದೂ ಸಹ ಗೊತ್ತಿರೋದೆ
ಸಣ್ಣಜ್ಜಿ ಓದಿಲ್ಲ-ಬರಹವೆಲ್ಲಿ?-ಎಂಟೂ ದಶಕ+ಭರ್ಜರಿ ಬದುಕ ಬಾಳಿದೋಳೆ!
ಭುವಿಯಿಂದ ಮೋಡ-ಮೋಡದಿಂದ್ಮಳೆ ಭುವಿಗೆ-ಮಳೆಯಿಂದ ಬೆಳೆ-ಗೊತ್ತು
ನೀರು-ಚಳಿ-ಬಿಸ್ಲು-ಗಾಳಿ-ಮಳೆ-ರವಿ-ಚಂದ್ರ-ನಭ-ತಾರೆ-ಪ್ರಪಂಚ-ತಿಳಿದಿದ್ದಳು
ಕೆಟ್ಟವರು+ಒಳ್ಳೇವ್ರು=ಭೂಮಿ/ಒಳ್ಳೇದು ತೊಗೋ-ಕೆಟ್ಟದ್ದುಬಿಡು ಅರಿವಿತ್ತು
ಕತೆ-ಪದ್ಯ-ಹರಿಕತೆ-ದೇವರು ಎಲ್ಲಾ ರಾಮಾಯಣ-ಮಹಾಭಾರತದ ಹಾಗೆ
“ದೇವ್ರು ಕಾಂಬಾಕಿಲ್ಲಾ-ಒಳ್ಳೇ ಮನ್ಸಾನೆ ದೇವ್ರು-ದೇವ್ರೂಂದ್ರೆ ಒಳ್ಳೇತನ-ಆಟೇ-
ಬದ್ಕೆಂದ್ರೆ ಹುಟ್ದಾಗ ಹೊಸಾ ಚೆಪ್ಲಿ ಇದ್ದಾಂಗೆ-ನಡೀತಾ ನಡೀತಾ ಹರೀತಿರತದೆ-
-ಇನ್ರಿಪೇರಿ ಆಗಾಕಿಲ್ವಾ! ನಿನ್-ಟೇಮ್-ಬಂತುಂತಾನೇ ಲೆಕ್ಕ-ತಿಳ್ಕ-ಬಡ್ಡೆತ್ತದೆ-

“ನೋಡ್ಮಗ-ಊರೆಲ್ಲಾ ತಿರುಗಿದ್ರು-ಕಡೀಕ್ ಮನಿಕಳಕ್ಕೆ ಮನೆಗೆ ಬರಲೇಬೇಕು-
ಹಂಗೇನೇ ಹುಟ್ಟಾಕ್-ಮುಂಚೆ ಎಲ್ಲಿದ್ವೋ ಅಲ್ಲಿಗೇ ಹೋಗಬೇಕು-ಅಲ್ಲವೇನು-
ಈ ಜೀವಕ್ಕೆ ಭೂಮೀದು-ನೀರಿಂದು-ಗಾಳೀದು-ಬೆಂಕೀದು-ಆಕಾಸದ್ದು-ಋಣ-
-ಒಂದು ಚೂಜೀ ಯತ್ವಾಸ ಆಯ್ತೋ-ಈ ಚೆಪ್ಲಿ ಬದುಕಿನ ರಿಪೇರಿ ಶುರು ಅನ್ಕ-
ಬೇರೇಕಡೆ ಏನೂ ಕೇಳಂಗೇ ಇಲ್ಲ-ಯಾಕಂದ್ಯ-ಹುಟ್ಟಿರೋರ್ದೆಲ್ಲ ಒಂದೇ ಕತೆ
ಈ ಜನ್ಮ ನಂ ಲೆಕ್ಕದ್ದಲ್ಲ-ಆ ದೊಡ್ಡ ಲೆಕ್ಕ ಗೊತ್ತಾಗಕಿಲ್ಲ-ಎಲ್ಲಾರ್ದು ಅದೇ ವ್ಯಥೆ
ಮೋಸಾಮಾಡ್ದೆ ದುಡಿದು ಬದ್ಕು-ನಂಬಿದೋರ್ನ ಸಾಕು-ಉತ್ತರ ಇಲ್ಲ-ಬೇರೇ!!

ಈ ಅಜ್ಜಿಯೇ ಒಂದು ಮೌಲ್ಯ; ಮೊಹಲ್ಲಾದಲ್ಲೇ ಹೆಚ್ಚು ಹೆರಿಗೆ ನೋಡಿದೋಳು
ಹೆಸರು ಮಾತ್ರ ಸಣ್ಣಜ್ಜಿ-ನಮ್ಮೇರಿಯಾದ ಬೃಹದಾರಣ್ಯಕ ಉಪ-ಉಪನಿಷತ್ತು
ಎಲ್ಲರೂ ಕರೆದದ್ದರಿಂದ-ಸಣ್ಣಿ/ಸಣ್ಣಕ್ಕ/ಸಣ್ಣಮ್ಮ-ಈಗ ಸಣ್ಣಜ್ಜಿ-ಹೆಸ್ರು ನಿಂತಿತು
ಮುಖ ನೋಡಿದ್ರೆ ಸಾಕು-ಜನುಮದ ಜಾತಕ ಬಿಚ್ಚಿಬಿಡೋಳು-ಸಾರಾಸಗಟು
few truths-fewer queries/profound-absolutes-ತಕರಾರೆ ಇಲ್ಲಾ!
“ಚೆನ್ನಾಗಿ ಬದ್ಕಕ್ಕೆ ಶಾನೇ ಬುದ್ಧಿ ಬೇಕಾಗಿಲ್ಲಾ-ತಲೆಯೊಳಗೈತಲ್ಲಾ ಸಾಕುಮಗ-
ದೇವರನ್ನೇ ಕಂಡುಬಿಟ್ಟೋನೂ ಸಾವಿನೊಳಗೇ ಮುಗ್ದು ಕರ್ಗಿ ಹೋಗ್ತಾನಲ್ಲವ!

ಚೆನ್ನಾಗಿ ನಡೀತಿದೆ ಅಂದ್ರೆ ಚೆಪ್ಲಿ ಚೆನ್ನು/ಇಲ್ವಾ-ಎಲ್ಲಾ ಕರಗೋಹಾಗೆ ಸವೆಸ್ಬೇಕು”
formation-DE-formation-RE-formation-ಜೀವಾಜೀವದ ರೇಷನ್ನು
ಸಣ್ಣಜ್ಜಿ-ತತ್ವದ ಸೆಲೆ ಅವಳ 88+ವರ್ಷದ ಗ್ರಹಿಕೆ-unwritten-ಬಾಯಿಮಾತು
& ಅವಳಂತಹವರೇ ಅಧಿಕಸಂಖ್ಯಾತರು-ಊರೂರು-ಗಲ್ಲಿಗಲ್ಲಿ-ಮನೆಮನೆಗೂ

“ಹಿತ್ತಲ ಗಿಡ ಮದ್ದಲ್ಲ”-ಎಲ್ಲೆಲ್ಲೋ ತಿರುಗಿ ತಲೆಗೆ ಪಟ್ಟಿ ಸುತ್ತಿದರೇ ನೆಮ್ಮದಿಯು
ಅಜ್ಜಿ ಅಂದಳು-“ಏನೋ ಒಂದೈತೆ-ಅದೆನೆಂದೆಯಾ-ಆ ಅದು ನೀನೇಕಣಯ್ಯಾ-
ನಿನ್ನಲ್ಲಿರೋದೆ-ಅಡ್ರೆಸ್ ನಿಂತಾವೆ ಮಡಿಕ್ಕಂಡು ನನ್ನನ್ನೇ ಜೋಕಾಗಿ ಕೇಳ್ತಿಯಾ”

ಸಣ್ಣಜ್ಜಿ! ಏನೋ ಒಂದು ಸಾಕ್ಷಿಯೋಪಾದಿ ಇದ್ಯಂತೆ?ಕವಿ-query ಗೆ √ ಉತ್ತರ!
ಎಂದೂ ಕಾಣದ್ದು-ಆದರೆ ನಿರಂತರ ಜೀವಂತ-ಈವರೆಗಿನ ಪ್ರಶ್ನೋತ್ತರ-ಮೊತ್ತ!!
ದೃಢ-ನಿಶ್ಚಿತ-ಮೌನಿ-ಸರ್ವಜ್ಞ-ಸರ್ವಶಕ್ತ-ಸರ್ವವ್ಯಾಪಿ-ಜೀವ-ಹಿತ-ಸರ್ವೋಚ್ಚ!
ವಾಙ್ಮಯಕ್ಕೆ ಸಿಕ್ಕಿಬಿಟ್ಟೀತೆ ಕಾಲೇಶರಾಯನ ಕಥನಕ್ರಿಯೆ-ಇಲ್ಲದ ಆದಿ-ಅಂತ್ಯ ಈ-ಇದೆಲ್ಲವೂ ವಾಙ್ಮಯಾವಾಙ್ಮಯ ನುಂಗಿಹಾಗ್ತಿರೋ ಅತಿ ದೊಡ್ಡ ವಿಸ್ಮಯ
unexamined life is not worth living-ಜ್ಞಾನಿ-ಸಾಕ್ರೆಟಿಸ್-ಉಧ್ಘೋಷಣೆ
Nietzsche-ನೀಷೆ ಪ್ರಕಾರ-“God Is Dead”/ಏನು-ತರ್ಕ-ವಿವೇಚನೆಯೆ?
ವಂಡ್ರೆ Sartre-ಗೆ-“ಅಸ್ತಿತ್ವ ಮೊದಲಿಗೆ-ಅರ್ಥ/ಇರುವು/’ಘನ’-ತೆ ನಂತರವು”
Kafka ನೋವು-he had hesitations before birth-ಸೂಕ್ಷ್ಮ ಜೀವನವು
ಹಿಂಗಿಂಗೆ ಇನ್ನೋಂದಿಷ್ಟು-ಅಗೆದಷ್ಟು ಬಗೆದಷ್ಟು ಮೊಗೆದಷ್ಟು-ಟೇಬಲ್ ಮೇಲೆ

ಈ ಎಗ್ಜಾಮಿನೇಷನ್ನು-ಹುಟ್ಟು-ಸಾವು-ಬದುಕು-ಇರುವಿಕೆ/ಸಣ್ಣಜ್ಜಿಗಿಲ್ಲ ಅಕ್ಕರೆ!
“ಕತ್ತಲೆಯಲ್ಲಿ-ಎಡಕ್ಕೆ ಬಲಕ್ಕೆ ಕಾಣಿಸೋ ಉದ್ದುದ್ದ ನೆರಳಿನ ಪೆಡಂಭೂತಗಳೇ-
ಅವ್ರು ಹಾಗೆ-ಇವ್ರು ಹೀಗೆ-ನಮಗ್ಯಾಕೆ ಶಿವಾ! ನಿನ್ತೂಕದ ಮುಂದೆ ನಂ-ಬೆಲೆಯೆ
ನೀನೇ ತೂಕ-ತೂಕದ ಬಟ್ಟು-ಅದೇನು ತೂಗುತೀಯೋ ಅದು ನಿನಗೇ ಗೊತ್ತು”
ಅಜ್ಜಿ ದಿನಚರಿ ಪ್ರಾತಃ ಐದಕ್ಕೆ ಶುರು-ಛತ್ರದೆದುರು-ದೇವಸ್ಥಾನದ ಬಲಪಕ್ಕವು
ಎಡಗೈ ಎಡಹುಬ್ಬಿನ ಮೇಲೆ ಸೂರ್ಯಂಗೆ ಕಣ್ಣಲ್ಲಿ ಕಣ್ಣು-ಪ್ರಶ್ನಾರ್ಥಕ ಚಿನ್ಹೆಯೇ
ಕರ್ಮಕ್ಕೆ ಕೂತರೆ ಆಶ್ಚರ್ಯ-ಸೂಚಕವು/ಅಡ್ಡಾದರೆ ಸರ್ವ-ಸಮಾನಾಂತರತೆ!

ಇದು ವೈಭವಿಕರಣವ-ಅಥ್ವಾ ಸಣ್ಣಜ್ಜಿ v/s ಇತರರು-?-ಇಲ್ಲ-ಸರಳೀಕರಣವಷ್ಟೆ
ಯಾವುದೇ ಎರಡು ಜೀವ ಭಿನ್ನ-ಭಿನ್ನವಲ್ಲಾ-ಸರ್/ಸಾಕ್ರೆಟಿಸ್ ಕಂಡ ಇರುವೆಗೆ-
ಸಣ್ಣಜ್ಜಿ ಮತ್ತು ಕವಿಯ ಮಧ್ಯೆ ಚೆಲ್ಲಿದ್ದ ಹಾಲಕೆನೆ ನೆಕ್ಕುತಲಿದ್ದ ಘಾಟಿ ಇರುವೆಗೆ
ಸಾಕ್ರೆಟಿಸ್-ನೀಶೆ-ಕಾಫ್ಕ-ಸಾರ್ತ್ರೆ-ಸಣ್ಣಜ್ಜಿ-ಈ ಕವಿ-ಎಲ್ಲಾ ಜೀವಿಗಳ-‘ಇರುವಿ’ಗೆ-
-ಯಾಕಪ್ಪ-ಹಿಂದಿನಿಂದ-ಇಲ್ಲಿತನಕ ಎಲ್ಲಾ ಜೀವರಾಶಿಗೆ-ಬದುಕು ಅನಿವಾರ್ಯ
-ಉಳಿಯೋದು ಉಳಿದು ಅರಳಿ ಬೆಳೆಯೋದು-ಕಡೆಗೆ ಪ್ರಾಣ ನೀಗಿ ನೈವೇದ್ಯ
ಸಾಕ್ರೆಟಿಸ್ಸು-ವಿಷಕ್ಕೆ/ನೀಷೆ+ಸಾರ್ತ್ರೆ-ಮೋಸದಪುಪ್ಪುಸ/ಕಾಫ್ಕ-ಕ್ಷಯಕ್ಕೆ ಅಂತ್ಯ

ಎಲ್ಲಾ ಪ್ರಮುಖ ಪ್ರಶ್ನೆ ಕೇಳಿದೋರು-ಉತ್ತರ ಸಿಗದೆ ತಮ್ಮ ಬದಲು ಹೇಳ್ದೋರು
ಸಾಕ್ರೆಟಿಸ್ ಮಹಾನ್ ಗುರು-ದೊಡ್ಡ-ದೊಡ್ಡೋರೆ ಕಷ್ಟ-ಸುಖ ಹೇಳ್ಕೊಳ್ಳೋರು
Nietzsche-ನೀಷೆಯೋ ಹುಚ್ಚಾಸ್ಪತ್ರೇಲೂ ಎಷ್ಟೋ ಕಾಲ ಇದ್ದುಬಂದೋನು!
ಹೆಚ್ಚು ತಿಳಿದೋನು-ಮಹತ್ವದ್ದು ತಿಳಿಸಿದೋನು-ನೀಷೆಗೆ ತಲೆಯೇ ಕೆಟ್ಹೋಗಿತ್ತು!
ನೀಷೆ-ಸಾರ್ತ್ರೆ-‘ಸಾಕಷ್ಟು ಸುಖ ನೋಡಿದ್ರು’-ಕಡೆಯಲಿ ಪುಪ್ಪುಸ ಒಡೆದುಬಿಡ್ತು
ಸಾಕ್ರೆಟಿಸ್-ಗೆ ಗಡಿಪಾರಿನ ಶಿಕ್ಷೆ-ದೇಶ ಬಿಡೋಕಿಷ್ಟವಿಲ್ಲ-ವಿಷ ಕುಡಿಸಿಯೆಬಿಟ್ರು!
ಕಾಫ್ಕಾ-40-ವರ್ಷ ಬದುಕಿದ್ದ-ಅದಕ್ಕಿಂತ ಹೆಚ್ಚು ವರ್ಷ ನರಳಿದ್ದನೋ ಏನೋ!
-he was the most tormented soul-ಭಾರಿ ನೋವು-ಎಂಥಾ ಸಾವೂ!
ಸಣ್ಣಜ್ಜಿಯೂ ಮುಗಿದ್ಳು-ಗುರುವಾರ ರಾತ್ರಿ ಉಪ್ವಾಸ-ಅದೇ ರಾತ್ರಿಯೇ ಸಾವು!
ಸಾರ್ತ್ರೆಗೆ ಜನರ-ಸಂತೆಯಂತೆ-ಸಣ್ಣಜ್ಜಿಗೂ ಸೇರಿದ್ರು ಹೆಚ್ಚು-very next ಬೆಸ್ಟು!

ಎರಡು ಗೋಣಿಚೀಲ-ಒಂದು ಹಾಸಿ ಕೂರೋಕ್ಕೆ-ಇನ್ನೊಂದು ಪರಿಕರ ತುಂಬಕ್ಕೆ
ದೇವಸ್ಥಾನದ ಕಿಟಕೀಛಾವಣಿಯೇ ರಕ್ಷಣೆ-ಬಿಸಿಲು-ಮಳೆಯಿಂದ ಈ-ಸಣ್ಣಜ್ಜಿಗೆ
ಗಟ್ಟಿದಾರ-ಹದದ ಹೊಲೆತ-ಎರಡೂ ಕೈ-ಬಿಗಿತ-ಮೊಳೆಯ ತಲೇಮೇಲೆ ಬಡಿತ
ಜೊತೆಗೆ ಭಕ್ತಾದಿಗಳ ಪಾದರಕ್ಷೆ-ರಕ್ಷಣೆ+ಅದೂ ಇದೂ ಮೈ-ಮೇಲೇ ಬಿದ್ದ ಕೆಲ್ಸ-
ಹಾಸಿದ ಗೋಣೀಚೀಲದ ಮೂಲೆಯೇ ಗಲ್ಲಾ/ಭದ್ರ-ತನ್ನ ಕಾಯಕದ ಆದಾಯ
ಕಪ್ಪುಮುಖ-ಸದೃಢ ನೋಟ-ನಾಕೂವರೆ ಅಡಿ ಎತ್ತರ-ಕಂಡವರಿಗೆಲ್ಲಾ ಹತ್ತಿರ-
ಸಣ್ಣಜ್ಜಿಗೆ ಅಪ್ಪಅಮ್ಮ ಗೊತ್ತಿಲ್ಲ-ಹೇಗೋ ಉಳಿದಿದ್ಳು-ಈ ಎಲ್ಲ-88-ಸಂವತ್ಸರ!

ನೋಡಿ-ಕಡೆಗೂ ಬಿಳೀಹಾಳೆ ತುಂಬಿಬಿಡ್ತು-ಬರೆದದ್ದು ನೀವು ಓದಿಯೂಬಿಟ್ಟಿರಿ!
ಶಾಯಿ-ಪೇನಾ-ಹಾಳೆ-ಪದ್ಯ-ಸಾಕ್ರೆಟಿಸ್ಸು-ನೀಷೆ-ಕಾಫ್ಕ-ಸಾರ್ತ್ರೆ+ಸಣ್ಣಜ್ಜಿ-ಈ ಕವಿ
ಇತ್ತು-ಇದ್ವಿ-ನಿಂತಿದ್ವಿ-ಕರಗ್ತೀವಿ/ಎಲ್ಲ-ಸಮುದ್ರ ಸೇರ್ಬಿಡೋ ಸಣ್ಣ-ನದಿ-ಹನಿಗ್ಳು
ಜನನ-ಗಮ್ಯ ಮಧ್ಯೆ ಬದುಕು-ಅಷ್ಟೇರಿ-ಇರುವೆಗಿಷ್ಟು-ಬಾಳದರ್ಶನ-ಆನೆಗಷ್ಟು!
ಈ ಮುಂಚೆಯೂ-ಸಾಕ್ರೆಟಿಸ್-ನೀಷೆ-ಕಾಫ್ಕ-ಸಾರ್ತ್ರೆ-ಸಣ್ಣಜ್ಜಿ-ಮುದಿಕವಿ ತರಹ
ಅವತಾರಗಳಾಗಿವೆ-ಭುವಿಗೆ ಇವೆಲ್ಲಾ ಅವಾಂತರ-”ವಾತಾಪಿ ಜೀರ್ಣೋಭವ”
ಅದೇ ಆಟ-ನೋಟ-ಓಡಾಟ-ಹೋರಾಟ-ಕೊಸರಾಟ-ಫೈನಲಿ-‘ಚಿತ್ರೋತ್ಸವ’!!!

it contains all ಸಮುದ್ರವೇ ಗಮ್ಯ ಎಲ್ಲಕ್ಕು/ಪ್ರಜ್ಞಾವೃತವು-ಕೇಂದ್ರ-ನೀರೇ!
ನದಿಗೆ ಸಮುದ್ರ ಸೇರಿ-“ಎರ್ಡಲ್ಲದ ಸ್ಥಿತಿ”/ಆತ್ಮ-ಬ್ರಹ್ಮದಲ್ಲಿ ಸೇರಿ ಅ-ದ್ವೈತವೇ!

ಪ್ರಜ್ಞೆಯಿಂದ ವಾಪಸ್ ಪ್ರಜ್ಞೆಗೆ ಪುನರಾವರ್ತನೆ-ಕೇವ್ಲ recycling drill-ಅಷ್ಟೆ
(ಒಂದು bulb ಮತ್ತು ವಿದ್ಯುಚ್ಛಕ್ತಿ ತರ್ಹ-ಚಿಕ್ಕ ಜನ-ಸಾಮಾನ್ಯ ಉದಾಹರಣೆ)
ಆಚ್ಚರಿ ನೋಡಿ-ಭುವಿಯಲ್ಲಿ ಇಂಗಿಹೋಗಿದ್ದೂ ಕಡೆಯಲ್ಲಿ ಸಮುದ್ರ ಸೇರತ್ತೆ!!
ನಂ-ಸುತ್ತ ಕಾಣೋ ಬಾವಿ-ತೊರೆ-ಕೆರೆ-ಇತ್ಯಾದಿ ಸಮುದ್ರದ ಸೂಕ್ಷ್ಮರೂಪಗಳೇ!
ಜೀವದ ಮುಗ್ದ ಉಸಿರು general pool ಸೇರಬೇಕಲ್ವಾ-ಗಾಳಿಗುಸಿರು ವಾಪ್ಸು
ದೇಹ-ಹೂತರೂ-ಸುಟ್ಟರೂ ಪಂಚಭೂತಗಳಿಗೇ ಪುನಃ-ಪ್ರವೇಶ-ಸೇರ್ಪಡೆಯು
“ಪುನರಪಿ ಮರಣಂ-ಪುನರಪಿ ಜನನಂ-ಪುನರಪಿ ಜನನೀಜಠರೇ ಶಯನಮ್”
ಇಲ್ಲಿ ಮುಗಿದೋರೆಲ್ಲಾ ಐಕ್ಯವಿಲ್ಲೆ!/ಸಾಕ್ರೆಟಿಸ್-ಸಾರ್ತ್ರೆ-ಸಣ್ಣಜ್ಜಿ-etc.-ಸರ್ವಂ
ಈ ಪ್ರಜ್ಙಾ-ಕೇಂದ್ರದೊಂದು ಮುರ್ಕು-ತುಣುಕು ವಾಯು ನಮ್ಗೆ-ಪ್ರಾಣ-ಆಯು
ಮತ್ತೆ ವಾಪಸಾದ್ದಕ್ಕೆ-label-ಇರದು/ಪುನಃ-ಆನೆ-ಇರುವೆ ಅಥವಾ ಇನ್ನೊಂದು-
ಹಿಂದೆಂದೂ ಇಲ್ಲಿ ಇಲ್ಲದ್ದು-ಈಗ ತುಣುಕು ಜೀವ+ರೂಪ ಧರಿಸಿ ಬರ್ಬಹುದು!*
(*are we not seeing biological freaks here and there-ಹೌದು!)

ಒಂದು ಪ್ರಯೋಗ ನಡೀತಿರ್ಬಹುದೂ-ಸರ್!-ಯಾರು-ಎಲ್ಲಿ-ಏಕೆ-ತಿಳಿಯದು!!!
evolution ಅಪೂರ್ಣ & ನಿರಂತರ-ಇನ್ನೂ ಮಥನ ಪ್ರಕ್ರಿಯೆ ನಡೀತಿರಬೇಕು
everything is recycled-ಹೊಸತು ಅನ್ನೋದಿಲ್ಲಾ-ಎಲ್ಲಾ ಹಳಸು-ಹಳತು
ಎಲ್ಲಾ ಪ್ರದರ್ಶನಗಳೇ-ಇಲ್ಲಿರೋರ ಪ್ರಶಸ್ತಿ–‘match fixing’-ಗೊತ್ತಿರೋದೇ
ಮಹಾ ಅದ್ಭುತ!-ಅನ್ಯಗ್ರಹವೊ-ಅಶರೀರ ಆಕಾಶವಾಣಿಯೊ-ನಿರ್ಣಯಿಸಿದ್ರೆ!!
ಜೀವ ಏನು-ಏಕಿಲ್ಲಿ ಹೀಗೆ-ಯಾರಿಗೇಕೆ ಹೀಗೆ ಬೇಕಿತ್ತು-ಏನು ಸಾವ ಸೂಚನೆ?-
ಸರಿಯೇನು-ತಪ್ಪೇನು-ಸರಿತಪ್ಪು ಬಿಟ್ಟು ಇನ್ನೇನು-ನಿಜಕ್ಕೂ ದೇವರಿದ್ದಾನೆಯೇ-
-“ಭೂಮೀ ಚರಿತ್ರೆಯಲ್ಲಿ ಆ… ಅವನು-‘ಮಧ್ಯ-ಪ್ರವೇಶ’-ಮಾಡಿದ್ದಾನೆಯೆ?”-
(has HE ever interfered in the affairs of mankind-Till Date?)
ಇಲ್ಲಿ ಇದ್ದು ಇರುವಂತಿಗೆ ಈಯಿದು-(ಹಡೆದು)-ಇಲ್ಲೇ ಇಲ್ಲವಾಗುವ ಈ ಪರಿ-
ರಕ್ತ-ಬೀಜಾಸುರರ ವಂಶಸ್ಥರಿಗೆ ದಿನನಿತ್ಯದ ಕೈಪಿಡಿ-ಅತಂತ್ರ ಕುಶಲೋಪರಿ-
ಸಾಕ್ರೆಟಿಸ್-ನೀಷೆ-ಸಾರ್ತ್ರೆ-ಎಲ್ಲಾ ತತ್ವಜ್ಙಾನಿಗಳಿಗೆ–ಸತತ ಕಾಡ್ತಿದ್ದ ಪ್ರಶ್ನೆಯು-
ಇನ್ನಷ್ಟು ಮತ್ತಷ್ಟು ಪ್ರಶ್ನೆಗಳು ಹುಟ್ಟಿಸಿದರೂ–ಸೋಲದೆ ಸಾವನಪ್ಪಿಕೊಂಡರು!
ಸಾಕ್ರಟಿಸ್ಸಿಗೆ-Examined Life-ಬೇಕು/ಸಣ್ಣಜ್ಜಿ-Exhausted LIFE-ಹೌದು!
-ಬೆಂದ ಜೀವ-ಮಾಗಿದ ಬದುಕು-ಪ್ರಶ್ನೆಗಳಿಲ್ಲ-ಬಾಳು ಬಾಳಷ್ಟೆ-ಬೇರೇನಿಲ್ಲವು!

ಶ್ರೇಯಸ್ ಪರಿಚರಣ್