ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

early 20th century --- Viking trading ship of the 8th century leaving on an expedition from Dawn Ladir Cliffs, Norway. --- Image by © Bettmann/CORBIS

ಸ್ವೀಡಿಶ್ ನಾಣ್ಣುಡಿಗಳು…! ಭಾಗ – ೧

ಹನ್ನೊಂದು ಸ್ವೀಡಿಶ್ ನಾಣ್ಣುಡಿಗಳು...! ಭಾಗ - ೧
ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

೧. ಯಾರು ಮಲಗಿರುತ್ತಾನೋ ಅವನು ತಪ್ಪೆಸಗಲಾರ..

೨. ಹೊಸ ಪೊರಕೆಗಳು ಚೆನ್ನಾಗಿ ಗುಡಿಸುತ್ತವೆ..

೩. ಚಿಟ್ಟೆಗಳು ಒಂದು ಕಾಲದಲ್ಲಿ ತಾವು ಹುಳುಗಳಾಗಿದ್ದವು ಅನ್ನುವದನ್ನು ಮರೆತುಬಿಡುತ್ತವೆ.

೪. ಯಾರು ಪಿಸುಗುಡುತ್ತಾನೋ, ಅವನು ಸುಳ್ಳಾಡುತ್ತಿದ್ದಾನೆ.

೫. ಪಾಪಗಳು ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತವೆ.

೬. ಕಮ್ಮಾರನ ಕುದುರೆ ಮತ್ತು ಶೂ ತಯಾರಕನ ಮಕ್ಕಳ ಬೂಟುಗಳು, ಎರಡೂ ಅಷ್ಟಕಷ್ಟೇ..

೭. ತನ್ನದೇ ಊರಲ್ಲಿ, ಯಾವೊಬ್ಬನೂ ಪ್ರವಾದಿಯಲ್ಲ..!

೮. ಸತತ ಸೂರ್ಯನ ಪ್ರಕಾಶ, ಮರುಭೂಮಿಯನ್ನು ಸೃಷ್ಟಿಸಬಲ್ಲುದು..!

೯. ಒಂದು ಸೂಜಿಯಿಂದ ಶುರುವಾದದ್ದು ಬೆಳ್ಳಿತಟ್ಟೆಯಲ್ಲಿ ಕೊನೆಯಾಗುತ್ತದೆ.

೧೦. ಹಳೆಯ ಪ್ರೀತಿಗೆ ಎಂದೂ ತುಕ್ಕು ಹಿಡಿಯುವುದಿಲ್ಲ.

೧೧. ಹಸಿವೆಗಿಂತ ರುಚಿಯಾದದ್ದು ಇನ್ನೊಂದಿಲ್ಲ.