ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಂದು ವ್ಯಕ್ತಿ, ನಿಲುಮೆಗಳು, ಸಿದ್ಧಾಂತಗಳು, ಪರಿಸ್ಥಿತಿಗಳು ಮತ್ತು ಪ್ರತಿಕ್ರಿಯೆಗಳು ತರ್ಕಕ್ಕೆ ಸವಾಲಾಗಿ, ಕಾಲ ಪ್ರವಾಹದಲ್ಲಿ ಮಿಳಿತಗೊಂಡು ಸೇರಿ ಹೋಗುತ್ತವೆ..
…..ಹೀಗೊಬ್ಬ, ತನ್ನ ಸುತ್ತಲಿನವರ ಮೇಲೆ ಪ್ರಭಾವ ಬೀರಬಲ್ಲ , ಇಂದಿಲ್ಲದ ಜೀವ ಮಹೇಂದ್ರ ಕುಮಾರ್ ರ ಬಗ್ಗೆ ಲೇಖಕ ವಿಶ್ವಾಸ್ ಭಾರದ್ವಾಜ್ ಕಣ್ಣಿಗೆ ಕಟ್ಟುವಂತೆ, ಮನವ ಮುಟ್ಟುವಂತೆ ಚಿತ್ರಿಸಿದ್ದು ಹೀಗೆ..

ಕುಮಾರಸ್ವಾಮಿ ಅವರ ಮಗನ ಮದುವೆಗೂ, ತಬ್ಲಿಘಿಗಳಿಗೂ ಎತ್ತಣೆತ್ತಣ ಸಂಬಂಧ..? ಇವೆಲ್ಲದರ ಬಗ್ಗೆ ಬೇಕಾ ಬಿಟ್ಟಿಯಾಗಿ ಜನ ಆಡ್ತಿದ್ದರೆ, ಡಾ. ಅಭಿನವ ಅವರು ಮಾತ್ರ ವಸ್ತುನಿಷ್ಠವಾಗಿ ಬರೆಯುತ್ತಾರೆ. ಹಾಗಾದ್ರೆ ಅವರ ಒಟ್ಟಾರೆ ನಿಲುವು ನಿಮ್ಮ ನಿಲುವಿಗಿಂತ ಬೇರೆ ಏನು? … ಓದಿ ನೋಡಿ…

ಆಮಿನಾದಳಿಗೆ ಮಿಸ್ರಿ ಮಾಲೆಯ ಕನಸು… ಅದಕ್ಕಾಗೇ ಸಾವಿರಾರು ರೂಪಾಯಿ ಕಲೆ ಹಾಕುತ್ತಿದ್ದಾಳೆ… ಇನ್ನೇನು ಕೂಡಿ ಬಂತು ಅನ್ನುವಷ್ಟರಲ್ಲೇ ಏನಾಯ್ತು.. ಲೇಖಕ ಅನ್ಸಾರಿಯವರ ಹೃದಯ ಸ್ಪರ್ಶಿ ಕಥನ ವಿಥ್ ಪಾಸಿಟಿವ್ ವೈಬ್ಸ್…

“..ಮನುಷ್ಯನ ಸಾವಿಗೆ ಒಂದು ಕಾರಣ ಭಾವಗಳ ಹಸಿವೂ ಇದ್ದೀತು….”. ಎಂದು ಬರೆಯುವ ಸಂಧ್ಯಾ ಹೆಗಡೆ, ಪ್ರಸ್ತುತ ಸನ್ನಿವೇಶದ ಭಾವ ಲಹರಿಯನ್ನು ಹರಿಯಗೊಟ್ಟಿದ್ದು ಹೀಗೆ…

ಡಾ. ಗುರುಪ್ರಸಾದ್ ಕಾಗಿನೆಲೆ ಅವರ ಬಹು ನಿರೀಕ್ಷಿತ ಪುಸ್ತಕ ‘ಹಿಜಾಬ್’ ಕುರಿತು ವಿಮರ್ಶಕ, ಬರಹಗಾರ ಶ್ರೀಧರ್.ಕೆ.ಬಿ ಅವರು ಬರೆದಿದ್ದು ಹೀಗೆ…

“ಯಸುನಾರಿ ಕವಬಾಟ- ಜಪಾನೀ ಸಾಹಿತ್ಯದಲ್ಲಿ ಅತಿ ವಿಶಿಷ್ಟವಾದ ಧ್ವನಿ. ಮೊಟ್ಟ ಮೊದಲ ಬಾರಿಗೆ ಜಪಾನಿನ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ಈತನದು. ತನ್ನ ಸರಳವಾದ ಗದ್ಯದಿಂದಲೇ ಮಹತ್ತರವಾದ, ಜೀವನದ ಅನೇಕ ಸಂಕೀರ್ಣಗಳ ಅರ್ಥವನ್ನು ಹುಡುಕಹೊರಟು ಅದರಲ್ಲಿ ಯಶಸ್ಸನ್ನು ಪಡೆದಾತ.” ..ಖ್ಯಾತ ಬರಹಗಾರ ಡಾ. ಗುರುಪ್ರಸಾದ್ ಕಾಗಿನೆಲೆ ಬರೆದ ಲೇಖನ…

“……ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? …..”
ಭರಮ್ಯಾ ಎಂಬ ಪಾತ್ರ, ಅದಕ್ಕೆ ತಕ್ಕಂತೆ ಗ್ರಾಮ್ಯತೆಯ ಸೊಗಸು, ಕಲಾತ್ಮಕ ನಿರೂಪಣಾ ಶೈಲಿಯ ಜತೆಗೆ ಎಲ್ಲಿಯೂ ಹಿಡಿತ ತಪ್ಪದೆ, ಭೇಷ್ ಅನ್ನುವಂತೆ ಬರೆಯುತ್ತಾರೆ ಕಥೆಗಾರ ತಿರುಪತಿ ಭಂಗಿಯವರು. ಪೂರ್ತಿಯಾಗಿ ಓದಿಸಿಕೊಂಡು ಹೋಗುವ ಈ ಕಥೆ ನಮ್ಮ ನಸುಕು ಓದುಗರಿಗಾಗಿ….

ಊರಿನಿಂದ ಹೊರಟು ಮುಂಬೈಗೆ ರೈಲು ಹಿಡಿಯುವಾಗ ನನ್ನ ತಲೆ ತುಂಬಾ ನವ್ಯ ಧಾಟಿಯ ಚಿತ್ರವೊಂದು ಮೈತಳೆದು ನನ್ನನ್ನೇ ಆವರಿಸತೊಡಗಿ, ಮಾದಿಯ ಮನಸ್ಸಿನಲ್ಲಿರುವುದಾದರೂ ಏನು? ಈ ರೀತಿ ಹುಚ್ಚು ಕೆರಳುವ ಕಾರಣವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಶೈಲಾಳ ಮದುವೆಗೆಂದು ಊರಿಗೆ ಹೋಗುವ ತನಕ ಉತ್ತರಿಸಲಾಗದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಆಘಾತವನ್ನುಂಟು ಮಾಡುವ ಸತ್ಯ ಸಂಗತಿ ನನ್ನೆದುರಿಗಿತ್ತು.
ಮಾದಿಯದು ಕಥೆಯನ್ನಲೇ…. ಜಯಲಕ್ಷ್ಮಿ ಪಾಟೀಲ್ ರ ಕಥೆಯಿಂದ

ಲೇಖಕ ಡಾ. ಪ್ರಸನ್ನ ಸಂತೇಕಡೂರು ಬರೆದ ಮಾಯಾಬಜಾರ್ ಕಥಾಸಂಕಲನದ ಬಗ್ಗೆ ಸಿ.ಎಸ್.ಭೀಮರಾಯ ಅವರು ಒಂದು ಉತ್ತಮ ಮತ್ತು ಮೌಲ್ಯಯುತವಾದ ವಿಮರ್ಶೆ ಬರೆದು ಕಳುಹಿಸಿದ್ದಾರೆ.

ಮನುಷ್ಯನ ಬದುಕು ಹೊರಳು ಹಾದಿಯಲ್ಲಿದೆ. ಹಿಂದೆಂದೂ ಕಾಣದಂತಹ ಪರಿವರ್ತನೆಗಳು ಇವತ್ತು ಮನುಷ್ಯನನ್ನು ಅಪ್ಪಳಿಸುತ್ತಿವೆ. ಇಂಥ ಅಗಾಧ ಪರಿವರ್ತನೆಗಳು ಬಹುತೇಕ ವಿಜ್ಞಾನ, ತಂತ್ರಜ್ಞಾನದಿಂದ ಪ್ರೇರಿತವಾದವು ಎನ್ನವುದನ್ನು ಗಮನಿಸಬೇಕು. ವೈಜ್ಞಾನಿಕ ಕ್ರಾಂತಿ ಆರಂಭವಾದಾಗಿನಿಂಧ ಇಂದಿನವರೆಗೆ ವಿಶ್ವದಲ್ಲಿ ಹಲವು ರೀತಿಯ ಪರಿವರ್ತನೆಗಳು ಜರುಗಿವೆ. ಆದರೆ ಮುಂದಿನ ದಿನಗಳಲ್ಲಿ ಬರುವ ಹೊಸ ಆವಿಷ್ಕಾರಗಳು ಮತ್ತು ಅದರಿಂದ ಉದಯಿಸುವ ತಂತ್ರಜ್ಞಾನ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂತಹ ಬದಲಾವಣೆಗಳನ್ನು ತರಲಿವೆ.

ಭೈರಪ್ಪನವರ ಯಾನ ಕಾದಂಬರಿಯ ಬಗ್ಗೆ ಸ್ವತಃ ವಿಜ್ ಶಿಕ್ಷಕರೂ, ಸಾಹಿತ್ಯಾಸಕ್ತರೂ ಆಗಿರುವ ನಟರಾಜು ಮೈದನಹಳ್ಳಿ ಈ ವಿಚಾರವನ್ನು ಹಂಚಿಕೊಂಡಿದ್ದು ಹೀಗೆ…

ಪ್ರಾಚೀನ ಕುರುದೇಶದಲ್ಲಿ ಉಷಿಸ್ತಿ ಚಾಕ್ರಾಯಣ ಎನ್ನುವವನೊಬ್ಬನಿದ್ದ. ಆತನ ಮಡದಿ ಆಟಿಕಿ ಎನ್ನುವವಳು. ಈತ ದರಿದ್ರನಾಗಿದ್ದ. ಒಂದು ಹೊತ್ತಿನ ಊಟಕ್ಕೂ ಪರದಾಡುವಷ್ಟು…

ನೀವು ಕಿಂಡಲ್ ಅಭಿಮಾನಿಗಳೇ…?ನಿಮ್ಮಲ್ಲಿ ಅಮೆಜಾನ್ ಕಿಂಡಲ್ (kindle) ಡಿವೈಸ್ ಇದೆಯೇ? ಹಾಗಾದರೆ, ನಮ್ಮನ್ನು ಸಂಪರ್ಕಿಸಿ,ನಿಮ್ಮ ಕಿಂಡಲ್ ಐ.ಡಿ. ಗೆನಮ್ಮ ನಸುಕಿನ…

ರಾಮಾಯಣ ಇವತ್ತಿನ ಪರಿಸ್ಥಿತಿಯಲ್ಲಿ ನಡೆದಿದ್ರೆ ಸಿಚುವೇಶನ್ ಹೀಗಿರ್ತಿತ್ತಾ?
ವಿಶ್ವಾಸ್ ಭಾರದ್ವಾಜ್ ಅವರ ಕಲ್ಪನೆಯಲ್ಲಿ ಮೂಡಿದ ಹಿಲೆರಿಯಸ್ ಹಾಸ್ಯ ಲೇಖನ…

ಕೊರೋನಾ ಬಗೆಗಿನ ಮಿಥ್ಯ ಅಥವಾ ತಪ್ಪು ಮಾಹಿತಿಗಳನ್ನು ಸರಿಪಡಿಸಿ ಪ್ರತಿಯೊಬ್ಬರಿಗೂ ತಲುಪಿಸುವುದರಿಂದ ಕೂಡ ಈ ಮಹಾ ಮಾರಿಯ ನಿಯಂತ್ರಣ ಸಾಧ್ಯ. ಹಾಗಾಗಿ ಸುಳ್ಳುಗಳನ್ನು ಸುಲಭವಾಗಿ ನಂಬಿ ಇತರರಿಗೂ ಹಂಚದೆ, ಸತ್ಯಕ್ಕಾಗಿ ಹುಡುಕಾಡಿ.
ನಿಮಗೆ ಸರಿಯೆನಿಸಿದ್ದನ್ನು ಮಾತ್ರ ಇತತರಿಗೂ ಹಂಚಿ.

ಇತರರಿಗೂ ತಿಳಿಸಿ.. ಸಹಕರಿಸಿ….

“ಅದೇನೋ ನಮ್ಮ ಕನ್ನಡ ಓದುಗರಿಗೆ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಲೇಖಕರ ಪುಸ್ತಕ ಅದೆಷ್ಟೇ ಮಹತ್ತರವಾಗಿದ್ದರೂ ಅನಿವಾಸಿ ಕನ್ನಡಿಗರು ಏನು ಬರೆದಾರು ಎಂಬ ತಾತ್ಸಾರ ಇನ್ನೂ ಹೋಗಿಲ್ಲ. …” ಪ್ರಸನ್ನ ಸಂತೇಕಡೂರು ಅವರು ಬರೆದ ಕುತೂಹಲಕಾರಿ ಪುಸ್ತಕಾಲೊಚನೆ.