ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಬ್ಳಿ ಹೆಗಡೆಯವರ ಹನಿಗವಿತೆಗಳು – ೨

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ನೈವೇದ್ಯ

ಹೊಟ್ಟೆಹಸಿವಿನ ಕಷ್ಟ
ಹಸಿದವಗೆ ವೇದ್ಯ.
ಏನೂ ತಿನ್ನದ ದೇವ
ಅವಗೆ ನೈವೇದ್ಯ.

*****

ನನ್ನೊಳಗೆ

ಹೊರಗೆ ಹೊಳೆವ ಬಿಸಿಲ ಬೆಳಕು
ಒಳಗೆ ಕತ್ತಲಡರಿದೆ.
ನೋಡಲಾರೆ ನನ್ನ ಒಳಗ
ದೀಪವೆಲ್ಲೋ ಕಳೆದಿದೆ

*****

ನನ್ನ ಕಥೆ

ನನ್ನ ಕಥೆಯನು ನಾನೇ
ಕೈಯ್ಯಾರೆ ಬರೆದೆ.
ಅದರೊಳಗೆ ಜಗದರಿವ
ಬಾಗಿಲನು ತೆರೆದೆ.

*****

ಬಡವನ ಕನಸು

ಹಸಿದ ಹೊಟ್ಟೆಯ ಬಡವ
ಕಾಣುವನು ಕನಸು.
ದಿನವಿಡೀ ತಿಂದಂತೆ
ರುಚಿ,ರುಚಿಯ ತಿನಿಸು

*****

ಚಿ(0)ತೆ.

ಚಿಂತೆ,ಚಿತೆ ಮಧ್ಯದಲಿ
ಮುದ್ದಾದ ಸೊನ್ನೆ.
ತೋರುವದು ಜೀವನದ
ನಶ್ವರತೆಯನ್ನೆ….?

*****