ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ. ರಘುರಾಮ ವಾಜಪೇಯಿರವರಿಗೆ `ಗಾಂಧಿಸ್ಮೃತಿ’ ಪ್ರಶಸ್ತಿ ಪ್ರದಾನ.

ಮಹಾತ್ಮ ಗಾಂಧೀಜಿ 150ನೇ ಜಯಂತಿ ಸಮಾರೋಪದ ಅಂಗವಾಗಿ ಮೈಸೂರಿನ ಹಿರಿಯ ಸಮಾಜಸೇವಾ ಧುರೀಣ – ಗಾಂಧಿವಾದಿ ಡಾ. ಕೆ. ರಘುರಾಮ ವಾಜಪೇಯಿರವರಿಗೆ ಬೆಂಗಳೂರಿನ ಅಮರ ಬಾಪು ಚಿಂತನ ಪತ್ರಿಕೆಯ ವತಿಯಿಂದ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ‘ಗಾಂಧಿ ಸ್ಮೃತಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.
ಗಾಂಧಿ ತತ್ವ ಚಿಂತನೆಗಳ ಪ್ರಸರಣಕ್ಕಾಗಿ ಕಳೆದ 8 ವರ್ಷಗಳಿಂದ ದ್ವಿಭಾಷಾ – ದ್ವೈಮಾಸಿಕವಾಗಿ ಜೀರಿಗೆ ಲೋಕೇಶ್‍ರವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಅಮರ ಬಾಪು ಚಿಂತನ ಪತ್ರಿಕೆಯು ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದೊಡನೆ ಈ ಸಮಾರಂಭವನ್ನು ಏರ್ಪಡಿಸಿತ್ತು.

ಗಾಂಧಿ ಟೋಪಿ, ಚರಕದ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನೊಳಗೊಂಡ ಗಾಂಧಿ ಸ್ಮøತಿ ಪ್ರಶಸ್ತಿಯನ್ನು ಮೈಸೂರಿನ ಹಿರಿಯ ಸಮಾಜಸೇವಾ ಧುರೀಣ – ಗಾಂಧಿವಾದಿ ಡಾ. ಕೆ. ರಘುರಾಮ ವಾಜಪೇಯಿರವರಿಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇರ್ಶಕರಾದ ಹೆಚ್. ಚೆನ್ನಪ್ಪರವರು ನೀಡಿ ಪುರಸ್ಕರಿಸಿದರು.
ಅಂದು ಶಾಂತಿದೂತನಾಗಿ ಬಂದು ಮನುಕುಲವನ್ನು ತೀವ್ರವಾಗಿ ಪ್ರಭಾವಿಸಿ, ಯುಗಯುಗಗಳು ಕಳೆದರೂ ಜಗತ್ತನ್ನು ಕಾಯುತ್ತಲೇ ಇರುವ ದಿವ್ಯ ಅನುಭೂತಿಯದು. “ರಕ್ತ ಮಾಂಸಖಂಡಗಳಿಂದ ಕೂಡಿದ್ದ ಇಂತಹ ವ್ಯಕ್ತಿಯೊಬ್ಬ ಭೂಮಿಯ ಮೇಲೆ ನಡೆದಾಡಿಕೊಂಡಿದ್ದ ಎಂದರೆ ನಮ್ಮ ಮುಂದಿನ ತಲೆಮಾರುಗಳು ನಂಬುವುದಿಲ್ಲ” ಎಂಬುದು ಶತಮಾನದ ವಿಜ್ಞಾನಿ ಐನ್‍ಸ್ಟೀನ್‍ನ ಅಭಿಪ್ರಾಯ ಮಾತ್ರವಲ್ಲ, ಗಾಂಧೀಮಾರ್ಗ ಅರಸುವ ಇಡೀ ಜಗತ್ತಿನ ಒಡಲಾಳದ ಧನ್ಯತೆ ಕೂಡ ಎಂದು ಪ್ರಶಸ್ತಿ ಸ್ವೀಕರಿಸಿದ ಡಾ.ರಘುರಾಮ್ ವಾಜಪೇಯಿರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸತ್ಯಪಥದ ನಿತ್ಯಸಂತ ಗಾಂಧಿ ಕುರಿತು ಅಸಂಖ್ಯಾತ ಕೃತಿಗಳಿವೆ. ದೇಶವಿದೇಶಗಳ ಲೇಖಕರು- ಚಿಂತಕರು ಗಾಂಧಿ ವಿಚಾರಧಾರೆಯನ್ನಷ್ಟೆ ಅಲ್ಲ, ಬಾಪು ನಡೆನುಡಿಯನ್ನು ವಿಶ್ಲೇಷಿಸಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದಲ್ಲಿನ ಯುವ ಸಮುದಾಯಕ್ಕೆ ಪ್ರಸ್ತುತದಲ್ಲಿ ಪ್ರಾಯೋಗಿಕವಾದ ಗಾಂಧಿವಾಣಿಯನ್ನು ತಲುಪಿಸುವ ಉದ್ದೇಶದಿಂದ ಈ ಪ್ರಕಟಣಾ ಕಾರ್ಯ ಪ್ರಾರಂಭಿಸಲಾಯಿತು ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದ ಅಮರ ಬಾಪು ಚಿಂತನದ ಉಪಸಂಪಾದಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ತಿಳಿಸಿದರು.

ಮೈಸೂರು ಜಿಲ್ಲಾ ಸರ್ವೋದಯ ಮಂಡಲಿ ಅಧ್ಯಕ್ಷೆ ಲೀಲಾ ಶಿವಕುಮಾರ್ ಮಾತನಾಡುತ್ತಾ ಮಹಾತ್ಮರ ಚಿಂತನೆಗಳು ಭಾಷಣಕ್ಕಷ್ಟೇ ಸೀಮಿತವಾಗಿದೆ. 150ನೇ ಬಾ-ಬಾಪು ಜಯಂತಿಯ ವರ್ಷದ ಸಮಾರೋಪದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ ಗಾಂಧಿ ಚಿಂತನೆ ಹಾಗೂ ರಚನಾತ್ಮಕ ಕೆಲಸ ಮಾಡುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಘೋಷಣೆ ಮಾಡದಿರುವ ಕುರಿತು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಿ.ಟಿ.ಎಸ್ ಫೌಂಡೇಶನ್ ಸಂಸ್ಥಾಪಕ ಡಿ.ಟಿ. ಪ್ರಕಾಶ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೇರೆ ಗೋಪಾಲ್, ಯುವ ಮುಖಂಡ ಎಮ್.ಎನ್.ನವೀನ್ ಕುಮಾರ್ ಹಾಗೂ ಭಾಗವಹಿಸಿದ್ದರು.

ವ್ಯಂಗ್ಯ ಚಿತ್ರಕಾರ ಎಂ.ವಿ ನಾಗೇಂದ್ರಬಾಬು ರವರ ಗಾಂಧಿ ಕುರಿತು ವ್ಯಂಗ್ಯಚಿತ್ರ ಪ್ರದರ್ಶನ
ನಾಡಿನÀ ಖ್ಯಾತ ವ್ಯಂಗ್ಯಚಿತ್ರಕಾರ ಮತ್ತು ಫುಲ್‍ಬ್ರೈಟರ್ ಎಂ.ವಿ ನಾಗೇಂದ್ರಬಾಬು ರಚಿಸಿರುವ ಗಾಂಧಿ- 150+ ನಡಿಗೆ ಕುರಿತು ವ್ಯಂಗ್ಯಚಿತ್ರ ಪ್ರದರ್ಶನವನ್ನು ಮೈಸೂರಿನ ನಾರಾಯಣ ಶಾಸ್ತ್ರೀ ರಸ್ತೆ, ಹಳೆ ಶಾಂತಲ ಥಿಯೇಟರ್ ಎದುರು, ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಬೆಂಗಳೂರಿನ ಅಮರ ಬಾಪು ಚಿಂತನ ಪತ್ರಿಕೆಯ ವತಿಯಿಂದ ಏರ್ಪಡಿಸಲಾಗಿತ್ತು.

ಗಾಂಧಿ ತತ್ವ ಚಿಂತನೆಗಳ ಪ್ರಸರಣಕ್ಕಾಗಿ ಕಳೆದ 8 ವರ್ಷಗಳಿಂದ ದ್ವಿಭಾಷಾ – ದ್ವೈಮಾಸಿಕವಾಗಿ ಜೀರಿಗೆ ಲೋಕೇಶ್‍ರವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಅಮರ ಬಾಪು ಚಿಂತನ ಪತ್ರಿಕೆಯು ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಸಹಯೋಗದೊಡನೆ ಈ ಪ್ರದರ್ಶನವನ್ನು ಏರ್ಪಡಿಸಿತ್ತು. ಹಿರಿಯ ಗಾಂಧಿವಾದಿ – ಸಮಾಜಸೇವಾ ಧುರೀಣ ಡಾ. ಕೆ. ರಘುರಾಮ ವಾಜಪೇಯಿರವರು ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಗರ ಪಾಲಿಕೆ ಸದಸ್ಯೆ ಶ್ರೀಮತಿ ಪ್ರಮೀಳಾ ಭರತೇಶ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡಿಕೇರೆ ಗೋಪಾಲ್, ಹಿರಿಯ ಉದ್ಯಮಿ ದೊರೆಸ್ವಾಮಿ, ಯುವ ಮುಖಂಡ ಎಮ್.ಎನ್.ನವೀನ್ ಕುಮಾರ್ ಹಾಗೂ ಅಮರಬಾಪು ಚಿಂತನದ ಉಪಸಂಪಾದಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಭಾಗವಹಿಸಿದ್ದರು.