ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆರೋಗ್ಯವಂತ ರಕ್ತ-ಆರೋಗ್ಯಪೂರ್ಣ ಜೀವನ

ಶಾರದಾ ಆ.ಅಂಚನ್
ಇತ್ತೀಚಿನ ಬರಹಗಳು: ಶಾರದಾ ಆ.ಅಂಚನ್ (ಎಲ್ಲವನ್ನು ಓದಿ)

ರಕ್ತ ” ದೇಹವೆಂಬ ವಾಹನದಲ್ಲಿ ಜೀವಕಣಗಳನ್ನು ಹೊತ್ತೊಯ್ಯುವ  ಎಲ್ಲಾ  ಜೀವಿಗಳ ಪೋಷಕ ಶಕ್ತಿ .ರಕ್ತ ಒಂದು ಅಮೂಲ್ಯ ಜೀವದ್ರವ  .ಅದಕ್ಕೆ ರಕ್ತವನ್ನು ಒಂದು ವಿಶಿಷ್ಟ ವರ್ಗಕ್ಕೆ ಸೇರಿದ  ‘ಕನೆಕ್ಟಿವ್ ಟಿಶ್ಯೂ”  ಎನ್ನುತ್ತಾರೆ.ಇಂತಹ ರಕ್ತದ  ಬಹುಮುಖಿ ಮಹತ್ವವನ್ನು ಸರಿಯಾಗಿ ಅರಿತು,ಸಮತೋಲನದ ಆಹಾರವನ್ನು ಸೇವಿಸಿ,ಕಾಯಿಲೆಗಳಿಗೆ ದಾಸರಾಗುವುದನ್ನು ಕಡಿಮೆ ಮಾಡಬಹುದು, ರಕ್ತ- ಪ್ಲಾಸ್ಮಾ ಎಂಬ ಜೀವರಸದಿಂದ ಕೂಡಿದೆ . ಈ ಪ್ಲಾಸ್ಮಾ ದಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ

೧.ಕೆಂಪು ರಕ್ತಕಣಗಳು

೨. ಬಿಳಿರಕ್ತಕಣಗಳು

೩. ಪ್ಲೇಟ್ ಲೆಟ್ಸ್  ಎಂಬ ಜೀವಕೋಶಗಳು ತೇಲುತ್ತಿರುತ್ತವೆ.

ರಕ್ತದ ಕಾರ್ಯವಿಧಾನ: ಆಮ್ಲಜನಕವನ್ನು ಶ್ವಾಶಕೋಶದಿಂದ ದೇಹದ ಎಲ್ಲಾ ಅಂಗಾಂಶಗಳಿಗೂ,ಇಂಗಾಲದ  ಡೈ ಆಕ್ಸೈಡ್ ನ್ನು    ದೇಹದ ಎಲ್ಲಾ ಅಂಗಗಳಿಂದ ಶ್ವಾಶಕೋಶಕ್ಕೂ ತರುವ ದೊಡ್ಡ ಕೆಲಸ ಮಾಡುತ್ತದೆ.ತಿಂದ ಆಹಾರದಲ್ಲಿರುವ ವಿಟಾಮಿನ್ ಶಕ್ತಿ ,.ಕೊಬ್ಬಿನಂಶ ,  ಹಾಗೂ ದೇಹದಲ್ಲೇ ಉತ್ಪತ್ತಿಯಾಗುವ ಹಾರ್ಮೋ ನ್ ಗಳ ನ್ನು ಎಲ್ಲಿಗೆ   ಸೇರಿಸಬೇಕೋ ಅಲ್ಲಿಗೆ ಸೇರಲು ಸಹಾಯ ಮಾಡುತ್ತದೆ. ದೇಹಕ್ಕೆ ಬೇಡವಾದ ವಸ್ತುಗಳನ್ನು ಅಂಗಾಂಶಗಳಿಂದ ಪಡೆದು ಮೂತ್ರಪಿಂಡ ,ಶ್ವಾಶಕೋಶ ಹಾಗೂ ಕರುಳಿನ ಮುಖಾಂತರ ದೇಹದಿಂದ ಹೊರದೂಡುತ್ತದೆ. ದೇಹಕ್ಕೆ ಅತ್ಯವಶ್ಯಕವಾದ ನೀರಿನ,ಆಮ್ಲ -ಪ್ರತ್ಯಾಮ್ಲಗಳ ಸಮತೋಲನದೊಂದಿಗೆ ,ದೇಹದ ಉಷ್ಣತೆಯನ್ನು ೩೭೦ ಡಿಗ್ರಿ ಯಲ್ಲಿ ಇರುವಂತೆ  ಕಾಪಾಡುತ್ತದೆ. ದೇಹದ ಸಿಪಾಯಿಯಾಗಿ ರಕ್ಷಣೆ ಮಾಡುವುದಲ್ಲದೆ,ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ರಕ್ತದಲ್ಲಿ ಪ್ರೋಟೀನ್ ಗಳಿವೆ .ಫೈಬ್ರಿನೋಜನ್,  ಪ್ರೋ ಥ್ರೋಂಬಿನ್ ಗಳು ,ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ,  ಆಲ್ಬುಮಿನ್ ,ರಕ್ತ ಹಾಗು ಉಳಿದ ಅಂಗಾಂಗಗಳ ನಡುವಿನ ಉಚ್ಛಾಲನಿಕ ಒತ್ತಡವನ್ನು ಕಾಪಾಡುತ್ತದೆ. ಬಿಳಿ ರಕ್ತಕಣಗಳು ಟ್ರೋಪೋನಿನ್ಸ್ ಎಂಬ ವಸ್ತುವನ್ನು ರಕ್ತದಲ್ಲಿನ ಪ್ರೋಟೀನ್ ನ ಜೊತೆಗೂಡಿ ತಯಾರಿಸುತ್ತವೆ.ಇದು ಅಂಗಾಂಗಗಳ ಬೆಳವಣಿಗೆಗೂ, ಪೋಷಣೆಗೂ ಅತ್ಯಗತ್ಯ.ಗಾಮಾ ಗ್ಲೋಬ್ಯುಲಿನ್ ಪ್ರತಿರೋಧಕ ವಸ್ತುವನ್ನು ತಯಾರಿಸಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತದೆ.ರಕ್ತದಲ್ಲಿ ಸುಮಾರು ೧೩ ಹೆಪ್ಪುಗಟ್ಟುವ  ಅಂಶಗಳಿವೆ. ರಕ್ತಸ್ರಾವವಾದೊಡನೆಯೇ ಇವು ಕಾರ್ಯೋನ್ಮುಖವಾಗುತ್ತದೆ.ರಕ್ತವನ್ನು ಹೆಪ್ಪುಗಟ್ಟಿಸಿ ಅಪಾಯವನ್ನು ತಪ್ಪಿಸುತ್ತವೆ.ಫೈಬ್ರಿನೋಜನ್ ,ಪ್ರೋ ಥ್ರೋಂಬಿನ್ . ಥ್ರೊಂಬೊ ಪ್ಲಾಸ್ಟಿನ್ , ಹಿಮೋಫಿಲಿಕ್ ಫ್ಯಾಕ್ಟರ್   ಮುಂತಾದವುಗಳು ಮುಖ್ಯವಾದ ರಕ್ತ ಹೆಪ್ಪುಗಟ್ಟಿಸುವ ಅಂಶಗಳು.ಇವುಗಳ ಕೊರತೆಯಾದರೆ ಕುಸುಮರೋಗ(ಹಿಮೋಫಿಲಿಯಾ)ಕ್ಕೆ ಬಲಿಯಾಗಬೇಕಾಗುತ್ತದೆ.ಇದರಲ್ಲಿ ಸಣ್ಣ ಗಾಯವಾದರೂ ಚರ್ಮದ ಕೆಳಗೆ,ಕೀಲುಗಳಲ್ಲಿ ರಕ್ತ ತುಂಬಿಕೊಂಡು ಅಸಾಧ್ಯ ನೋವನ್ನುಂಟುಮಾಡುತ್ತದೆ.  ರಕ್ತನಾಳದಲ್ಲಿ-  ರಕ್ತ, ದ್ರವರೂಪದಲ್ಲೇ  ಇದ್ದು,ಹೆಪ್ಪುಗಟ್ಟುವುದಿಲ್ಲವೇಕೆ  ಎಂಬ ಸಂಶಯ ಬರುವುದು ಸಹಜ . ರಕ್ತನಾಳದ ಒಳಪದರದಲ್ಲಿ ಯಾವುದೇ ಏಟು ಬೀಳದಿದ್ದರೆ,ರಕ್ತ ಹೆಪ್ಪುಗಟ್ಟುವುದಿಲ್ಲ. ಥ್ರೋಂಬಿನ್  ಅಂಶ ಇಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುವುದರಿಂದ ಹೆಪ್ಪುಗಟ್ಟುವ ಮಧ್ಯವರ್ತಿಗಳನ್ನು  ರೆಟಿಕ್ಯುಲೊ ಎಂಡೊತೀ ಲಿಯಲ್ ಜೀವಕೋಶಗಳು ತಕ್ಷಣ  ತೆಗೆದುಬಿಡುತ್ತವೆ. ದೇಹಕ್ಕೆ ಅನಗತ್ಯವಾದ ಅಥವಾ  ಫಾರಿನ್  ಜೀವಕೋಶಗಳನ್ನು , ಹೊರಗೆ ಹಾಕುವ ಕೆಲಸವನ್ನು ಈ ರೆಟಿಕ್ಯುಲೊ ಎಂಡೊ ತೀ ಲಿಯಲ್ ಜೀವಕೋಶಗಳು ಮಾಡುತ್ತವೆ. ಅಲ್ಲದೆ ರಕ್ತದಲ್ಲಿರುವ ‘ಹೆಪಾರಿನ್” ಅಂಶ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳುತ್ತದೆ.  ರಕ್ತ ಯಾವ ಕಾರಣಕ್ಕೂ ಹೆಪ್ಪುಗಟ್ಟಲೇಬಾರದು.ತಕ್ಷಣ ಹೃದ ಯ ಸ್ಥoಬ ನ ವಾಗುತ್ತದೆ.  ಇದೇ  ಮೆದುಳಿನ ರಕ್ತನಾಳದಲ್ಲಾದರೆ  ಲಕ್ವಾ ಹೊಡೆಯುತ್ತದೆ.

ದೇಹದಲ್ಲಿನ ರಕ್ತದ ಪ್ರಮಾಣ: ಸುಮಾರು ೭೦ ಕಿಲೋ ಇರುವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು ೫ ಲೀಟರ್ ನಷ್ಟು ರಕ್ತವಿರುತ್ತದೆ.(ಒಟ್ಟು ತೂಕದ ಶೇಕಡಾ ೯ ರಷ್ಟು) ಎಲುಬಿನ ಮಜ್ಜೆ ರಕ್ತ ತಯಾರಿಸುವ ಕಾರ್ಖಾನೆ .ಇದು   ದೇಹದ  ಮೂಳೆ ಯೊಳಗಿನ ಟೊಳ್ಳು ಭಾಗದಲ್ಲಿ ಅಡಗಿ ಕುಳಿತಿರುತ್ತದೆ.ಹುಟ್ಟುವಾಗ ಸುಮಾರು ೭೦ ಮೀ .ಲೀಟರ್  ಇರುವ  ಮಜ್ಜೆ ವಯಸ್ಕರಲ್ಲಿ ಸುಮಾರು ೪  ಲೀಟರ್ ನಷ್ಟಾಗುತ್ತದೆ.

ಅನೀಮಿಯಾ (ರಕ್ತಹೀನತೆ) : ರಕ್ತ ಸುಮಾರು ೧.೨ ಲೀಟರ್ ನಷ್ಟು  ಆಮ್ಲಜನಕ ವನ್ನು ಸಾಗಿಸುತ್ತದೆ.ರಕ್ತದಲ್ಲಿ ಸುಮಾರು ೩ಗ್ರಾಮ್.ನಷ್ಟು ಕಬ್ಬಿಣ ಹಿಮೋಗ್ಲೋಬಿನ್  ರೂಪದಲ್ಲಿದೆ.ಪುರುಷರಲ್ಲಿ ೧೩ ರಿಂದ ೧೫ ಗ್ರಾಂ. ಸ್ತ್ರೀಯರು ಮತ್ತು ಮಕ್ಕಳಲ್ಲಿ ೧೧.೫  ರಿಂದ ೧೫ ಗ್ರಾಂ.ನಷ್ಟಿರುತ್ತದೆ. ಹಿಮೋಗ್ಲೋಬಿನ್ ನನ್ನು  ಕಾಪಾಡಲು ಒಳ್ಳೆಯ ಪ್ರೂಟೀನ್ ಯುಕ್ತ   ಹಾಗೂ ಕಬ್ಬಿಣ ದಂಶ   ಇರುವ ಆಹಾರವನ್ನು ಸೇವಿಸಬೇಕು. ಹಿಮೋಗ್ಲೋಬಿನ್ ಕೊರತೆಯಿಂದ ಬರುವ ಕಾಯಿಲೆಯನ್ನು  ರಕ್ತಹೀನತೆ ಅಥವಾ ಅನೀಮಿಯಾ ಎನ್ನುತೇವೆ, ಈ ಕೊರತೆಗೆ ರಕ್ತಕಣಗಳಲ್ಲಿನ ಉತ್ಪತ್ತಿಯ ಕೊರತೆ,ಉತ್ಪತ್ತಿಯಾದ ಜೀವಕೋಶದಲ್ಲಿನ ನ್ಯೂನ್ಯತೆ,ಮೂಲವ್ಯಾಧಿ,ಇಲ್ಲವೇ ಹೊಟ್ಟೆಯಲ್ಲಿರುವ ಹುಳುಗಳು ಮುಂತಾದ ಕಾರಣಗಳಿರಬಹುದು.

ರಕ್ತಹೀನತೆಯ ಸಾಮಾನ್ಯ ಲಕ್ಷಣಗಳು

೧.ಆಯಾಸ,ನಿರುತ್ಸಾಹ  ಸ್ವಲ್ಪ ಕೆಲಸ ಮಾಡಿದರೂ ಏದುಸಿರು ಬಿಡುವುದು

೨.ಎದೆಬಡಿತ ಹೆಚ್ಚಾಗುವುದು

೩.ಹಸಿವು ಮಾಯವಾಗಿ ತಲೆಸುತ್ತುವುದು

೪. ಕಣ್ಣು ಮಂಜಾಗುವುದು

೫.ನಿದ್ರೆ ಬಾರದೆ ಕಾಲುಗಳು ಪದೇ ಪದೇ ಜೋಮು ಹಿಡಿಯುವುದು

೬ ಕಾಲುಗಳು ಊದಿಕೊಂಡು ,ಹೃದಯ ದೊಡ್ಡದಾಗಿ ಸಾವಿನ ಅಪಾಯ

 ೭.ಬಾಯಿ ಹುಣ್ಣಾಗುವುದು

 ೮.ಕೈ ಕಾಲಿನ ಉಗುರುಗಳು ಬಿಳುಚಿಕೊಳ್ಳುವುದು

೯.ಇದ್ದಿಲು,ಮಣ್ಣು,ಗೋಡೆಯ ಸುಣ್ಣ ಇಲ್ಲವೇ ಒಂದು ಬಗೆಯ ತರಕಾರಿಗಳನ್ನು ಮಿತಿ ಮೀರಿ ತಿನ್ನುತ್ತಲೇ ಇರುವುದು

 ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ೧೬ ಗ್ರಾಂ.ಇದನ್ನು ಮೀರಿದರೂ ಅದು ದೇಹಕ್ಕೆ ಒಳ್ಳೆಯದಲ್ಲ.ಈ ಸ್ಥಿತಿಯನ್ನು ಪಾಲಿಸೈಥೇಮಿಯಾ ಎನ್ನುತ್ತಾರೆ. ಈ ಕಾಯಿಲೆ ಸಾಮಾನ್ಯವಾಗಿ ೪೦ ವರ್ಷದ ಮೇಲಿನ ಜನರಲ್ಲಿ ಕಾಣಿಸಿಕೊಳ್ಳುವುದು ಸ್ವಾಭಾವಿಕ.ಇದರ ಲಕ್ಷಣಗಳೆಂದರೆ,

೧.ನಿರುತ್ಸಾಹ

೨.ಏಕಾಗ್ರತೆಯ ಕೊರತೆ

೩.ತಲೆನೋವು,ತಲೆಸುತ್ತು.

೪.ಜ್ಞಾನ ತಪ್ಪುವುದು

೫.ಮೈ  ಕಡಿತ,ಅಜೀರ್ಣ

೬.ರಕ್ತನಾಳಗಳ ತೊಂದರೆಯಿಂದಾಗಿ ,ಕಾಲುಗಳು ಜೋಮು ಹಿಡಿಯುವುದು

 ಹೀಗೆ ರಕ್ತ ಮನು ಜೀವನದ ಜೀವವಾಹಿನಿ,,ಆರೋಗ್ಯವಂತ ರಕ್ತ,ಆರೋಗ್ಯಪೂರ್ಣ ಜೀವನ.ರಕ್ತದ ಮಟ್ಟ ದೇಹದಲ್ಲಿ ಉತ್ತಮವಾಗಿದ್ದರೆ ,ರಕ್ತದಲ್ಲಿರುವ ವಿಭಿನ್ನ ಜೀವಕೋಶಗಳು ಮಾಡಬೇಕಾದ ಕಾರ್ಯಗಳನ್ನು ನಿಯಮಿತವಾಗಿ ಮಾಡುತ್ತಿದ್ದರೆ,ನಾವೂ ಆರೋಗ್ಯವಂತ ಜೀವನ ಮಾಡಬಹುದಾಗಿದೆ.ಅದಕ್ಕಾಗಿ ಉತ್ತಮ ಆಹಾರಸೇವನೆ,ಉತ್ತಮ ಜೀವನಶೈಲಿಯನ್ನು ಅನುಸರಿಸಿ ಇರ ಬೇಕಾಗಿದ್ದುದು ನಮ್ಮೆಲ್ಲರ ಆದ್ಯ ಕರ್ತವ್ಯ.