ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ರತ್ನಾ ನಾಗರಾಜ
ಇತ್ತೀಚಿನ ಬರಹಗಳು: ಡಾ. ರತ್ನಾ ನಾಗರಾಜ (ಎಲ್ಲವನ್ನು ಓದಿ)

ಒಮ್ಮೆ ಗಾಂಧೀಜಿಯವರು ಭಾರತದಲ್ಲಿ ಗಾಂಧಿ ಜಯಂತಿ ಆಚರಿಸುವುದನ್ನು ಹಾಗೆ ತಮ್ಮ ಕನಸುಗಳು ಸಾಕಾರವಾಗಿರವುದನ್ನು ಕಾಣುವ ಕುತೂಹಲ ಉಂಟಾಯಿತು. ಅದಕ್ಕಾಗಿ ಅವರು ದೇವೇಂದ್ರರನ್ನು ಕಂಡು ತಮ್ಮ ಇಚ್ಚೆಯನ್ನು ತಿಳಿಸಿದರು. ಚಕಿತರಾದ ಇಂದ್ರರು (ಎಲಾ ಇವರಾ! ಇವರನ್ನು ಯಾರು ಗುರುತಿಸುತ್ತಾರೆ ಅಂತ ಅಲ್ಲಿಗೆ ಕಳುಹಿಸುವುದು? ಇವರೇನೊ ತಮ್ಮದೆಲ್ಲವನ್ನು ತ್ಯಾಗ ಮಾಡಿ ಈಗಿನವರನ್ನು ದಾಸ್ಯದಿಂದ ಬಿಡಿಸಿದರು ಅದಕ್ಕೆ ಪ್ರತಿಯಾಗಿ ಇವರನ್ನು ತುಪಾಕಿಯಿಂದ ಬಿಗಡಾಯಿಸಿ ಬಿಟ್ಟರು. ಏನೊ ಆಗಿನ ಇವರ ಅನುಚರರು ಇವರನ್ನು ಸ್ಮರಿಸುವಂತಹ ಕಾರ್ಯಭಾರಗಳನ್ನು ಮಾಡಿದರು. ಈಗಿನವರು ಸ್ಮರಿಸುವುದಿರಲಿ ಎಲ್ಲಿ ನೈತಿಕತೆ ಕೆಣುಕುತೊ ಅಂತ ಇವರಂತವರ ಮೌಲ್ಯಗಳನ್ನು ವಿಮರ್ಶೆಯ ವಾಗ್ಬಾಣಗಳಿಗೆ ಗುರಿಮಾಡಿಕೊಂಡು ಕಾಲಹರಣ ಮಾಡುತ್ತ ಬಸವಣ್ಣನವರ ಮೂರ್ತಿ ಪೂಜೆ ವಿರೋಧವನ್ನು ಪರ್ಯಾಯವಾಗಿ ಇವರ ಮೂರ್ತಿಗಳನ್ನು ವಿರೂಪಗೊಳಿಸುವಲ್ಲಿ ಪೈಶಾಚಿಕ ಆನಂದ ಕಾಣುವವರನ್ನು ಇವರು ನೋಡಲು ಬಯಸುತ್ತಾರಲ್ಲ ?ಅಲ್ಲಿಗೆ ಹೋಗಿ ಬಂದ ಮೇಲೆ ಅಲ್ಲಿಯ ಭ್ರಷ್ಟಾಚಾರ ಕೋಮು ಗಲಭೆಗಳನ್ನು ನೋಡಿದ ನನಗೆ ಈ ಕಣ್ಣುಗಳೆ ಬೇಡ, ಪಾಪಿಷ್ಟರನ್ನು ಮಾತನಾಡಿಸಿದ ಈ ಬಾಯಿ ಬೇಡ. ಕೂಗಾಟ ಆಕ್ರಂದನಗಳನ್ನು ಕೇಳಿಸಿಕೊಂಡ ಈ ಕಿವಿಗಳೆ ಬೇಡ ಎಂದರೆ ಆಶ್ಚರ್ಯವೇನಿಲ್ಲ. ಸದ್ಯಕ್ಕೆ ರಸ್ತೆಗಳು, ಉದ್ಯಾನಗಳು, ಭವನಗಳು ಮಾತ್ರವೇ ಇವರನ್ನು ಸ್ಮರಿಸುತ್ತಿವೆ. ಇವರ ನಾಮ ಬಲದಲ್ಲಿ ಅವರುಗಳು ತಮ್ಮ ಬಲ ಭುಜಗಳನ್ನು ಬೆಳೆಸುವಂತಹ ಸುಸಂಸ್ಕೃತರು. ಇಂತಹ ಜನರನ್ನು ನೋಡಲು ಇವರು ಹೋಗುತ್ತೇನೆ ಅಂತಾರಲ್ಲ. ವಾಸ್ತವ ಹೇಳಿದರೆ ಕಳುಹಿಸಲಾರದೆ ಹೀಗೆ ಏನೋ ಹೇಳುತ್ತಾರೆ ಎಂದು ತಪ್ಪಾಗಿ ಭಾವಿಸಿಕೊಳ್ಳುವುದು ಬೇಡ. ಒಂದು ಸಲ ಹೋಗಿ ಬರಲಿ. ಇಲ್ಲ ಅಂತ ನಿಷ್ಠುರ ಕಟ್ಟಿ ಕೊಳ್ಳುವುದು ಯಾಕೆ? ಎಂದು ತಮ್ಮಲ್ಲಿಯೇ ವಿಮರ್ಶಿಸಿ ಕೊಂಡು “ಮಹಾತ್ಮರೇ! ನಮ್ಮ ಸ್ವರ್ಗ ಹಾಗು ಭೂಲೋಕದ ರಾಯಭಾರಿ ಕಛೇರಿಯಲ್ಲಿರುವ ಮೀಡಿಯೇಟರ್ ಯಮರಾಜರನ್ನು ಕಾಣಿ, ಅವರು ಎಲ್ಲಾ ವ್ಯವಸ್ಥೆ ಮಾಡುತ್ತಾರೆ” ಎಂದರು.

ಗಾಂಧೀಜಿಯವರು ಯಮರಾಜರನ್ನು ಸಂಪರ್ಕಿಸಿದರು.
ಯಮರಾಜರು: (ಗಾಂಧೀಜಿಯವರನ್ನು ದಿಟ್ಟಿಸಿ ನೋಡಿ) ಆಯಿತು , ಹೋಗಿ ಬರುತ್ತೀರೊ ಅಥವಾ ಅಲ್ಲೆ ಉಳಿದು ಕೊಳ್ಳುತ್ತೀರೊ ?


ಗಾಂಧಿ: ಹಾಗೇನು ಇಲ್ಲ. ಸುಮ್ಮನೆ ನೋಡಿ ಕೊಂಡು ಬರುತ್ತೇನೆ ಅಷ್ಟೆ. ಅನ್ನುವ ರೀತಿ ತಮ್ಮ ಗೋಣಾಡಿಸಿದರು
ಯಮರಾಜರು: ಚಿತ್ರ ಗುಪ್ತ ! ಏ ಗುಪ್ತ ! ಸಾಹೇಬರಿಗೆ ಬೆಂಗಳೊರಿಗೆ ಒಂದು ಫ್ರಂ ಅಂಡ್ ಟು ಟಿಕೇಟು ಬುಕ್ ಮಾಡಿ ಕಳುಹಿಸಿಕೊಡು.


ಗುಪ್ತ : ತಲೆಕೆರೆದು ಕೊಂಡು, ಏನು ಕಾಯಂ ವರ್ಗಾವಣೇನಾ ಸಾ.. ?
ಯಮರಾಜರು: ನಿಮ್ಮ ತಲೆ ! ಹೇಳಿದಷ್ಟು ಮಾಡ್ರಿ !
ಗುಪ್ತ : ಅಲ್ಲ ಸಾ .! ಅಲ್ಲಿಗೆ ರಿಕ್ವಯಿರ್ಮೆಂಟ್ ಇಲ್ಲ !.
ಯಮರಾಜರು: (ಗಾಂಧೀಜಿಯವರ ಕಡೆ ಕಣ್ಣು ಹಾಯಿಸುತ್ತಾ) ಹೇಳಿದಷ್ಟು ಮಾಡ್ರಿ ! ಪಾಪ ಸಾಹೇಬರು ಕಾಯುತ್ತಿದ್ದಾರೆ.


ಗುಪ್ತ : ಆಯಿತು ಸಾ. ! ಗಾಂಧೀಜಿಯವರ ಕಡೆಗೆ ತಿರುಗಿ ಎಲ್ಲಿ ಸಾ . ರಾಮಚಂದ್ರ ಸಾಹೇಬರ ಆರ್ಡರ್ ಕಾಪಿ ಕೊಡಿ. ಅದಕ್ಕೆ ಗಾಂಧೀಜಿಯವರು ಯಮರಾಜರ ಕಡೆ ನೋಡಿದರು. ಯಮರಾಜರು ಕ್ಷಣ ಗಲಿಬಿಲಿಗೊಂಡು. “ಅದು ಯಾಕೆ ಬೇಕು ಈಗ ?

-2-

ಗುಪ್ತ : ರಾಮಚಂದ್ರ ಸಾಹೇಬರಿಗೆ ಗಾಂಧಿ ಸಾಹೇಬರ ಮೇಲೆ ಆಪಾರವಾದ ವಿಶ್ವಾಸವಿದೆ .ಹೆಚ್ಚು ಕಡಿಮೆ ಪ್ರಾಣಾನೇ ಇಟ್ಟು ಕೊಂಡಿರಬಹುದು. ಅದು ಅಲ್ಲದೆ ….ಎಂದು (ಗಾಂಧಿ ಕಡೆ ಒರೆ ನೋಟ ಬೀರಿದರು)
ಯಮರಾಜರು: ಅದೇನದು ದೀರ್ಘ ಎಳೆಯುತ್ತಿದ್ದಿಯಾ ?
ಗುಪ್ತ : ಏನು ಇಲ್ಲ ಸಾ.. ಅದು . ಅದು. ರಾಮಚಂದ್ರ ಸಾಹೇಬರು ಗಾಂಧಿ ಸಾಹೇಬರನ್ನು “ರಿ……..ಬರ್ಥ ಲಿಸ್ಟ್ಗೆ” ಸೇರಿಸ ಬೇಡಿ ಎಂದು ಸ್ಟಾಡಿಂಗ್ ಇನ್ಸ್ಟ್ರಕ್ಷನ್ ಕೊಟ್ಟಿದ್ದಾರೆ. ಬೆಚ್ಚಿದ ಯಮ (ಎಲಾ ಇವರುಗಳಾನಾ ! ಈ ದೇವರುಗಳೆ ಹಾಗೆ . ಬೇಕೆಂದಾಗೆಲ್ಲ ನಿಯಮಗಳನ್ನು ಸಡಿಲಿಸಿ ಬಿಡುತ್ತಾರೆ. ಹೆಡ್ಡ್ ಅಫ್ ದಿ ಡಿರ್ಪಾಟ್ಮೆಂಟ್ ನಾನು ಇದ್ದುಕೊಂಡು, ನನ್ನ ಹತ್ತಿರ ಹೇಳದೆ ಸ್ಟಾಫ್ ಹತ್ತಿರ ನೇರವಾಗಿ ಡೀಲ್ ಮಾಡುತ್ತಾರೆ. ಇರಲಿ ಆಮೇಲೆ ವಿಚಾರಿಸಿಕೊಳ್ಳುತ್ತೇನೆ ಎಂದು ಮನದಲ್ಲಿ ಮಿಡುಕಿ, ಗಾಂಧೀಜಿ ಏನೆಂದು ಕೊಂಡಾರು ಎಂದು ಅವರ ಕಡೆ ಓರೆ ನೋಟ ಬೀರಿದರು.) ಗಾಂಧೀಜಿ ಮೌನವಾಗಿ ಇವರಿಬ್ಬರತ್ತಲೇ ನೋಡುತ್ತಿದ್ದರು. ಯಮರಾಜರು ಸಾವರಿಸಿಕೊಂಡು ಮತ್ತೆ ನೀನು ನನ್ನ ಹತ್ತೀರ ಹೇಳಲೇ ಇಲ್ಲ.”
ಗುಪ್ತ : ಸಮಯ ಬಂದಾಗ ಹೇಳೋಣಾಂತ ಇದ್ದೆ ಸಾ.
ಯಮರಾಜರು : ಅದು ಸರಿ, ಗಾಂಧೀಜಿ ಯಾಕೆ ರಿಬರ್ಥ್ ತೆಗೆದುಕೊಳ್ಳಬಾರದಂತೆ ? ಇಂದ್ರಜಿತ್ ಸಾಹೇಬರಿಗೆ ಇದು ಗೊತ್ತ ? ಅವರು ಏನಾದರು ಹೇಳಿದ್ರ ?
ಗುಪ್ತ : ಅದೇನೊ ನನಗೇನು ಸಾ ..ಗೋತ್ತು ? ಎಲೆ ಎತ್ತೊ ಗುಂಡ ಅಂದರೆ ಉಂಡುವರೆಷ್ಟು ಅಂತ ಲೆಕ್ಕ ಕೇಳಕ್ಕಾಗುತ್ತ ಸಾ…. , .?
ಯಮರಾಜರು: ಮತ್ತೆ ನನ್ನ ಓರಲ್ ಬೇಡ ಆರ್ಡರ್‍ಕಾಪಿ ಬೇಕು ಅಂತ ಕೇಳುತ್ತೀಯ ?
ಗುಪ್ತ ಇರಿಟೇಶನ್ನಿಂದ “ ಸಾ..ಕನೆಕ್ಟ್ ಮಾಡುತ್ತೀನಿ ಮಾತಾಡುತ್ತೀರಾ ? “ ಎಂದು ಫೋನ್ ತೆಗೆಯಲು ಹೊರಟ.
ಯಮರಾಜರು: ಹೇ ! ಸುಮ್ಮನ್ ಇರ್ರಿ ..ಇಷ್ಟೇನಾ ವಿಷಯ ಇನ್ನು ಇದೆಯ ಅಂತ ತಿಳಿದುಕೊಳ್ಳಕ್ಕೆ ಕೇಳಿದೆ. (ನನಗೊತ್ತಿಲ್ವಾ ನಮ್ಮ ದೇವರ ಸತ್ಯ ಏನೊಂತ. ಒಳ್ಳೆ ಕೋಳಿ ಕೆದಕಿದಂಗೆ ಕೆದಕೊದು ನೋಡು. ನಾನೀರುವುದೆ ಹೇಳುವುದನ್ನು ಕೇಳಕ್ಕೆ ಅಂತ ಕುಟುಕುವಾಗ ..? ಇವರಿಗಾದರೆ ಮೇಲಿನವರೊಬ್ಬರ ಮಾತು ಕೇಳುವಂತಹುದು. ನನಗೆ ಇವರಲ್ಲದೆ ಇವರ ಮೇಲಿನವ್ರು, ಅವರ ಮೇಲನ್ವರು ಹೇಳಿದ್ದು ಕೇಳ ಬೇಕು. ನಾನು ಹೇಳುವುದನು ಕೇಳುವವರು ಯಾರೂ ಇಲ್ಲ. ಹೆಂಡತಿ ನನ್ನ ಹುದ್ದೆ ನೋಡಿ ಡ್ಯೆವೋರ್ಸ್ ಕೊಟ್ಟು ಬ್ರಹ್ಮಕುಮಾರಿ ಆಶ್ರಮ ಸೇರಿದ್ದಾಳೆ. ಈ ಪೆನ್ನು ಮತ್ತು ಈ ಪುಸ್ತಕಾನೇ ನನ್ನ ಮಾತು ಕೇಳುವುದು. ಅದು ಸರಿಯಾದ ಫೀಡ್ ಬ್ಯಾಕ್ ಇದ್ದರೆ, ಇಲ್ಲದೆ ಹೋದರೆ ಅವೂ ಸಹ ಕಿವಿ ಕೊಡೋ ಬದಲು ಕೈ ಕೊಡ್ತಾವೆ. ಇರಲಿ ! ಎಂದು ಮನದಲ್ಲಿ ಮಥಿಸಿ ಯಮರಾಜರ ಪೆಚ್ಚು ಮುಖ ನೋಡಿ) “ ಸಾ…ಮತ್ತೇನಿಲ್ಲ ಸಾ.. ರಾಮಚಂದ್ರ ಸಾಹೇಬರಿಗೆ “ಹೇ ರಾಮ್ “ ನಾಮ ಕಿವಿಗೆ ಬಿದ್ದ ಕೂಡಲೆ ಅವರ ತಂದೆ ರಘುರಾಯರ ನೆನಪಾಗುತ್ತಂತೆ ಸಾ. ಅದಕ್ಕೆ ಗಾಂಧೀಜಿಯೆಂದರೆ ಅವರಿಗೆ ವಿಶೇಷ ಅದು, ಸಹಜವಲ್ಲವೆ ? ರಿಬರ್ಥಿಗೆ ಹೋದರೆ ಗಾಂಧಿ ಬದಲಾಗಬಹುದು, ಅವರು ತಮ್ಮಷ್ಟೆ ಆಮರರಾಗಿರಬೇಕು, ಅದಕ್ಕೆ ಗಾಂಧೀಜಿಯಾಗೇ ಉಳಿಯಲಿ ಎಂದರು ಸಾ…”
ಯಮರಾಜರು : ಇಂದ್ರಜಿತ್ರರವರಿಗೆ ವಿಷಯ ತಿಳಿದಿದೇಯೆ?

-3-

ಗುಪ್ತ : ಅದರ ಬಗೆ ನನೆಗೇನು ಗೊತ್ತಿಲ್ಲ ಸಾ. ಅದು ಅಲ್ಲದೆ ಹೊಳೆ ನೀರು ಕುಡಿಯುವುದಕ್ಕೆ ದೊಣ್ಣೆ ನಾಯಕನ ಅಪ್ಪಣೆ ಯಾಕೆ ಅಂತೀನಿ. ಲೋಕನಾಯಕರಿಗೆ ಲೋಕಲ್ ಕಾಂಟಾಕ್ಟ್ ಮಾಡುವುದು ಯಾಕೆ ಅಂತ ? ಯಮರಾಜರು ಇಷ್ಟೆಲ್ಲಾ ನಡಿಯುತ್ತಿದ್ದರೂ ಗಾಂಧೀಜಿ ಸುಮ್ಮನಿರುವುದು ಕಂಡು ಮನಸ್ಸಿಗೆ ಖೇದವಾಗಿ “ಸಾರ್ ! ತಾವು ಬೇಜಾರು ಮಾಡಿ ಕೊಳ್ಳಬೇಡಿ, ದಯವಿಟ್ಟು ಕುಳಿತುಕೊಳ್ಳಿ, ನಾನು ನಿಮ್ಮನ್ನು ಕಳಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ. ಅದಕ್ಕೆ ಗಾಂಧೀಜಿ ತಲೆ ಆಡಿಸಿ ಅಲ್ಲಿದ್ದ ಆಸನದ ಮೇಲೆ ಆಸೀನರಾದರು. ಯಮರಾಜರು ಯೋಚಿಸಿ ಒಂದು ತೀರ್ಮಾನಕ್ಕೆ ಬಂದರು. ಗುಪ್ತನನ್ನು ಕರೆದು “ನಾನು ಈಗಾಗಲೇ ಮಾತು ಕೊಟ್ಟೀದ್ದೀನಿ, ಏನಾದರು ವ್ಯವಸ್ಥೆ ಮಾಡು.
ಗುಪ್ತ : ಅಲ್ಲ ಸಾ.. ಆ ದಶರಥ ಮಹಾರಾಜರಾ ಹಾಗೆ ಹಿಂದೆ ಮುಂದೆ ನೋಡದೆ ನಿಮ್ಮನ್ನು ಯಾರು ಮಾತು ಕೊಡಕ್ಕೆ ಹೇಳಿದರು.
ಯಮರಾಜರು : ನಾನು ಗಾಂಧೀ ಅಭಿಮಾನಿ . ನಾನು ಆಮೇಲೆ ತರಿಸಿಕೊಡುತ್ತೇನೆ ಮೊದಲು ಅವರು ಹೊರಡುವ ವ್ಯವಸ್ಥೆ ಮಾಡು !
ಗುಪ್ತ : ಆಮೇಲೆ ಆಗೋಲ್ಲ , ಈಗಲೇ ಬೇಕು. ನಮ್ಮ ಹಾಗೆ , ಪಾಪಪುಣ್ಯ ಪುರಾಣ ಹೇಳಿ , ಬದನೇ ಕಾಯಿ ತಿನ್ನುವ ಹಾಗೆ ಕೂಸು ಕುನ್ನಿಗಳನ್ನು ಸಹ ಬಿಡದೆ , ಹೊತ್ತು ಗೊತ್ತಿಲ್ಲದೆ ಹೇಗೆಂದರೆ ಹಾಗೆ ದಾಳಿ ಮಾಡಿ ಎಳಕೊಂಡು ಬರುತ್ತಿವಲ್ಲ ಹಾಗೆ ಅಂದು ಕೊಂಡಿದ್ದೀರಾ !ಹೇಗೆ ?
ಯಮರಾಜರು : ಗುಪ್ತ ಡೆಪ್ಯೂಟೇಶನ್ ಕಣ್ರೀ ! ಡೆಪ್ಯೂಟೇಶನ್ !
ಗುಪ್ತ : ಸಾ………ಭೂಲೋಕವನ್ನು ಈಗ ಕಂಪ್ಯೂಟರ್ ಆಳುತ್ತಿದೆ. ಮೊದಲಿನ ಹಾಗೆ ಅಲ್ಲಿ ಎಮ್ಮೆಗಳು ನುಗ್ಗಿದ ಹಾಗೆ ನುಗ್ಗುವುದಕ್ಕೆ ಆಗೋಲ್ಲ. ಯಮರಾಜರ ಮುಖ ಕೆಂಪಾಗಾಗಿರುವದನ್ನು ಕಂಡು, ಕ್ಷಮಿಸಿ ಸಾ….ಗೂಳಿಯ ಹಾಗೆ ಎಂದು (ತನ್ನ ತಪ್ಪನ್ನು ತಿದ್ದಿ ಕೊಂಡು). ಈಗ ಅಲ್ಲಿ ಎಂಟರ್ ಆಗ ಬೇಕೆಂದರೆ ಕೀ ಬಟನ್ ಒತ್ತಬೇಕು . ಆಗ ಅಲ್ಲಿ ಒಬ್ಬ ರೋಬೋಟ್ ಬರುತ್ತಾನೆ. (ಏನು ರಾಬಿಟ್ಟೆ ? ಎಂದು ಯಮ ಮಧ್ಯೆ ಬಾಯಿ ಹಾಕಿದರು).
ಗುಪ್ತ: ರಾಬಿಟ್ ಅಲ್ಲ ಸಾ…ರೋಬೋಟ್
ಯಮರಾಜರು : ಏನು ರುಬ್ಬಿಟಿರುವ ಹಿಟ್ಟಾ? ಈ ಹಿಟ್ಟಿನ ಹೆಸರು ಇಟ್ಟುಕೊಂಡಿರುವ ಮಹಾನುಭಾವನನ್ನು ನಾವು ಬುಗುರಿ ತರ ತಿರುಗಿಸೋಣ ಬಿಡು.
ಗುಪ್ತ: ಸಾ… ರುಬ್ಬಿಟಿರುವ ಹಿಟ್ಟ್ ಅಲ್ಲ ಸಾ.. ರೋಬೋಟ್ ಸಾ…ಅವನ ಹತ್ತಿರ ನಾವು ಹೋದರೆ ನಮ್ಮ ತಲೆ ತಿರುಗಿಬಿಡುತ್ತೆ. ಏನಿದ್ದರು “ಯಸ್ ಆರ್ ನೋ” ಅಷ್ಟೆ. ಚರ್ಚೆಗೆ ಅವಕಾಶಾನೆ ಇಲ್ಲ.
ಯಮರಾಜರು : ಹಾಗಂತೀಯ? ಆಯಿತು ಆ ಒಬ್ಬಿಟ್ ಮೇಲೆ ನಮ್ಮ ಎಮ್ಮೆ ಕುವರನನ್ನು ಛೂ ಬಿಡೋಣ, ಒಂದೆ ನಿಮಿಷಕ್ಕೆ ತುಳಿದಾಕಿ ಬಿಡುತ್ತಾನೆ.
ಗುಪ್ತ : ಏನು ಸಾ. ನಿಮಗೆ ಸ್ವಲ್ಪಾನು ಗೊತ್ತಗುವುದಿಲ್ಲ ? ಒಬ್ಬಟ್ ಅಲ್ಲ ಸಾ. ರೋಬೋಟ್ ಸಾ.. ಅಷ್ಟು ಉಚ್ಚರಿಸಕ್ಕೆ ಬರಲ್ಲ ಅಂದರೆ ಹೇಗೆ ಸಾ. ? ಹೆಸರು ಚೌರ್ಯ ಅಂತ ಮಾನ ನಷ್ಟ ಮುಕದ್ದಮೆ ಹೂಡಬಹುದು. ಶಬ್ದ ತರಂಗಗಳ ಮೇಲೆ ಈಗಾಗಲೆ ಎಲ್ಲ ಇಷ್ಟೊತ್ತಿಗೆ ರವಾನೆಯಾಗಿರುತ್ತೆ. ಅಲ್ಲದೆ ನಿಮ್ಮ ಕುವರನ ಬಾಯಿ ವ್ಯಾಯಮದಿಂದ ವ್ಯೆಯರ್ಸ್ ಸೋರೊದು ನೋಡಿದರೆ, ಆ ರೋಬೋಟ್ ಅಸ್ಯಯಪಟ್ಟು ಕೊಂಡು ಆಪಾಯಿಂಟ್ ಕೂಡ ಕೊಡಲ್ಲ. ಡೋರ್ ಲಾಕ್ ಮಾಡಿ ಕೊಂಡರಂತು ಜಪ್ಪಯ್ಯ ಅಂದರು ಬಾಗಿಲು ತೆಗೆಯಲ್ಲ. ಷ್ಟೇ ಅಲ್ಲ, ನಿಮ್ಮ ಕುಮಾರನ ಬಾಯಿಯಿಂದ ಜೊಲ್ಲು ಸುರಿದರೆ ಕಂಪ್ಯೂಟರ್ಗೆ ವೈರಸ್ ಅಟ್ಟಾಕ್ ಆಗಿ ಲಾಕ್ ಆಗಿಬಿಡುತ್ತೆ. ನಾವಿಲ್ಲೆ ನಿಮ್ಮ ಕುಮಾರನು ಅಲ್ಲೆ. ಆಮೇಲೆ ನಾವಿಬ್ಬರು ಕಂಬ ಸುತ್ತ ಬೇಕಾಗುತ್ತೆ ಅದರ ಸೃಷ್ಟಿ ಕರ್ತನನ್ನು ಹಿಡಿಯಲು. ನನಗೇನು ಪರವಾಗಿಲ್ಲ, ನಿಮಗೇನು ಸಾ. ಗ್ರಾಚಾರ ಯಾರ್ ಯಾರದೊ ಕಾಲು ಹಿಡಿಯಕ್ಕೆ.
ಯಮರಾಜ: (ಕಸಿವಿಸಿಯಿಂದ )ನೀವು ಹೇಳೋದು ನೋಡಿದರೆ ಒಳ್ಳೆ ಯಮ ಕಿಂಕರ ಅಂತ ಕಾಣುತ್ತೆ.
ಗುಪ್ತ: ಸಾ. ಆ ಹುದ್ದೆ ನಿಮ್ಮಗಲ್ಲದೆ ಬೇರೆಯವರಿಗೆ ಲಭ್ಯವಿಲ್ಲ ಸಾ.

-4-

ಯಮರಾಜರು : ಹಾಗಾದರೆ ನಡಿ ಅದನ್ನು ನೇರ ನೋಡೇ ಬಿಡುತ್ತೇನೆ.
ಗುಪ್ತ; “ಸ್ವರ್ಗಕ್ಕೆ ನೇರ ದಾರಿ “ ಅಂತಾರಲ್ಲ ಹಾಗೆ ಅಂದು ಕೊಂಡಿದ್ದೀರಾ? ಸಾ. …ಅದು ಹಾಗೆಲ್ಲ ನೇರ ಬರಲ್ಲ ,ಪರದೆ ಮೇಲೆ ಕಾಣಿಸುತ್ತೆ. ಅದಕ್ಕೆ ಮೆಸೇಜ್ ಪಾಸ್ ಅನ್ ಮಾಡಬೇಕು.
ಯಮರಾಜರು: ನಾನು ಸೂಪರ್ ನ್ಯಾಚುರಲ್ ಪವರ್ ರೀ.
ಗುಪ್ತ : ಅದು ಮಾಸ್ಟ್‍ರ್ ಅಫ್ ದಿ ಯುನಿವರ್ಸ್ ಅಂತೆ ಸಾ…ಅದಕ್ಕೆ. ಮಾನ ಪ್ರಾಣ ನೋವು ನಲಿವು ಹಗಲು ರಾತ್ರಿ, ಬಡವ ಶ್ರೀಮಂತ ಅಂತ ತುಡಿತಾನೆ ಇಲ್ಲವಂತೆ. ಅಲ್ಲಿ ಎಲ್ಲರೂ ಒಂದೆ. ಮಕ್ಕಳು ಹುಟ್ಟುತ ಕಂಪ್ಯೂಟರ್ ಚೀಪಿ(ಚಿಪ್)ಕೊಂಡು ದೊಡ್ಡವರಾಗೆ ಹುಟ್ಟುತ್ತಾರಂತೆ ಸಾ. ಬಡತನ ನಿರ್ಮೂಲ ಆಗಿರುವುದರಿಂದ ಅಲ್ಲಿ ಅದಕ್ಕೆ ಅಭಿಮತ ಸಾ… ಮನುಷ್ಯರಿಗೆ ಪಾಪ ಭೀತೀನೇ ಕಾಡಲ್ವಂತೆ ಸಾ….. ಸ್ವಇಚ್ಚ ಮರಣದ ಮೇಲೆ ರೀಸರ್ಚ್ ನಡೆಯುತ್ತಿದೆಯಂತೆ ಸಾ… ಅಂತಹ ಜಾಗದಲ್ಲಿ ನಮ್ಮ ಗಾಂಧೀಜಿಯವರನ್ನು ಸ್ವಾಗತಿಸುವವರು ಯಾರು ಸಾ.? ಅಲ್ಲಿ ಹಿ ಈಸ್ ಅನ್ವಾಂಟೆಡ್ ಪರ್ಸನ್. ಅದೇನೊ ಅಂತರಲ್ಲ “ಕರೆಯದೆ ಬರುವವನ……..”ಮುಂದಕ್ಕೆ ನಾನು ಹೇಳಲ್ಲ. ಉಪವಾಸ ವನವಾಸ ಅನ್ನುವ ಗಾಂಧೀ ತತ್ವ ಅಲ್ಲಿ ಅಕ್ಸೆಫ್ಟ್ ಆಗಲ್ಲ ಸಾ.
(ಯಮರಾಜರು ಗುಮಾನಿಯಿಂದ) “ಇದೆಲ್ಲ ನೀನು ಯಾವಾಗ ತಿಳಿದುಕೊಂಡೆ “?
ಗುಪ್ತ : ನೀವು ಎಮ್ಮೆ ಗುನ್ಯಾಗೆ ಟ್ರೀಟ್ಮೆಂಟ್ ತೆಗೆದು ಕೊಳ್ಳಕ್ಕೆಹೋಗಿದ್ದಾಗ , ಇಂದ್ರಜಿತ್ ಸಾಹೇಬರಿಗೆ ನಾರದ ಸಾಹೇಬರು ಸೂಕ್ಷ್ಮ ತಿಳಿಸಿದರಂತೆ ಸಾ . ನಾರಾಯಣರಾಯರ ಅನುಮತಿ ಪಡೆದು ಅದೇನಂತ ತಿಳಿದುಕೊಂಡು ಬರಲು ನನ್ನ ಓ.ಓ.ಡಿ ಕಳಿಹಿಸಿದರು ಸಾ.
ಯಮರಾಜರು : ಮತ್ತೆ ನೀನು ನನಗೆ ಏನು ಹೇಳಲೆ ಇಲ್ಲ ?
ಗುಪ್ತ : ಟ್ರೀಟ್ಮೆಂಟಿಂದ ಬಂದ ಮೇಲೆ ಪೆಂಡಿಂಗ್ ಕೇಸುಗಳನ್ನು ನೋಡುತ್ತಿದ್ದರಲ್ಲ ಅದಕ್ಕೆ ಸುಮ್ಮನಾದೆ ಸಾ.. ಸಮಯ ಬರಲಿ ಅಂತ ಸುಮ್ಮನಿದ್ದೆ ಸಾ…
ಯಮರಾಜರು : ಸರಿ ಸರಿ, ಅದೆಲ್ಲ ಆಮೇಲೆ ನೋಡೋಣ. ಅವರಿಗೆ ಅದೆಲ್ಲ ಹೇಳುವುದು ಹೇಗೆ ? ನಾವು ಕಳುಹಿಸಲಾರದೆ ಸಬೂಬು ಹೇಳುತ್ತಾರೆ ಅಂತ ತಿಳಿದುಕೊಳ್ಳಲ್ವೆ.? ನನಗೆ ನಡೆದಿರುವುದು ಗೊತ್ತಿಲ್ಲ.
ಗುಪ್ತ : ಸಾ…. ಶಾರ್ಟ್ ವಿಸಿಟ್ ಅಂತ ಆನ್‍ಲ್ಯನ್ ಟಿಕೇಟು ಬುಕ್ ಮಾಡಿ ಕಳುಹಿಸುತ್ತೇನೆ. ಉಳಿದದ್ದು ನೀವು ಮ್ಯಾನೇಜ್ ಮಾಡುತ್ತೀರಾ? ಹಾಗೆ ಪೋರಬಂದರಿಗಾ, ದೆಹಲಿಗಾ, ಜಮ್ಮು ಕಾಶ್ಮೀರ್‍ಗಾ ಆಶ್ರಮಕ್ಕ ? ಕೇಳಿ ಸಾ .
ಯಮರಾಜರು : ಖುಷಿಯಿಂದ ಗುಪ್ತನನ್ನು ತಬ್ಬಿ ಈಗ ನೋಡು ನೀನೆ ನನ್ನ ಲ್ಯೆಫ್ ಟ್ಯೆಮ್ ಶಿಷ್ಯ
( ಗುಪ್ತ ಕೂಡಲೆ ಚಕ ಚಕ ಅಂತ ಕೀ ಬಟನ್ನುಗಳನ್ನು ಒತ್ತಿ ಸಾ..ಬೆಂಗಳೂರು ಬಿಟ್ಟು ಭಾರತದ ಎಲ್ಲಾ ಕಡೆ ಲೈನ್ ಬಿಸಿಯಿದೆ ). ಮಾಹತ್ಮರೆ ಆಗಬಹುದೆ ಎಂದು ಗಾಂಧೀಜಿಯವರನ್ನು ಯಮರಾಜರು ಕೇಳಿದರು. (ಕ್ಷಣ ಚಿಂತಿಸಿದ ಗಾಂಧೀಜಿ , ಬೇಡ ಅಂದರೆ ಅದು ಇಲ್ಲವಾಗಬಹುದು .ಅಲ್ಲಿಗೆ ಹೋಗಿ ಮುಂದಿನ ಪ್ರಯಾಣದ ಬಗ್ಗೆ ಯೋಚಿಸೋಣ ಅಂತ ಅಂದು ಕೊಂಡು ) ತಲೆ ಆಡಿಸಿ ಸಮ್ಮತಿ ಸೂಚಿಸಿದರು. ಗುಪ್ತ ಟಿಕೇಟು ಕನ್ಫರ್ರ್ಮ್ ಮಾಡಿ ಯಮರಾಜರಿಗೆ ಸೂಚನೆ ಕೊಟ್ಟರು. ಯಮರಾಜರು ಗಾಂಧೀಜಿಯವರನ್ನು ಕುರಿತು “ಸಾ…ತಾವು ಹೊರಡಿ” ಎಂದರು. ಗುರು ಶಿಷ್ಯರು ಗಾಂಧೀಜಿಯವರನ್ನು ಎಂ.ಜಿ.ರಸ್ತೆಯ ಬಳಿ ಇಳಿಸಿಲು ವಾಯುಪಡೆಯವರಿಗೆ ಸೂಚನೆ ಕೊಟ್ಟು ಕಳುಹಿಸಿದರು. ಗಾಂಧೀಜಿ ಮಂದಹಾಸ ಬೀರಿ ಪ್ರಯಾಣಕ್ಕೆ ತೆರಳಿದರು. ಯಮರಾಜರ ವಾಯುಪಡೆಯವರು ಗಾಂಧೀಜಿಯವರನ್ನು ಎಂ.ಜಿ. ರೋಡ್ ಬಳಿ ಇಳಿಸಿ ಅದೃಶರಾದರು . ಅಂದು ಗಾಂಧಿ ಜಯಂತಿಯಾದುದರಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಹಜವಾಗಿ ಜನ ಸಂಚಾರವಿತ್ತು. ಗಾಂಧೀಜಿ ಹೊಸ ಹವದಿಂದ ತಲ್ಲಣಗೊಂಡರು. ವಾತಾವರಣ ಉಸಿರು ಕಟ್ಟಿಸುವಂತಿತ್ತು. ಸಾವರಿಸಿಕೊಂಡು ರಸ್ತೆ ಉದ್ದಗಲಕ್ಕು ಓಡಿಯಾಡಿದರು. ಒಬ್ಬರು ಸಹ ಇವರನ್ನು ಮಾತನಾಡಿಸುವುದಿರಲಿ, ನೋಡುವಷ್ಟು ವ್ಯವಧಾನ ಸಹ ತೋರಲಿಲ್ಲ. ಪಕ್ಕದಲ್ಲೆ ಹೋಗುತ್ತಿದವನನ್ನು ನಿಲ್ಲಿಸಿ “ನಮಸ್ತೆ ಬಾಯಿ ,ಮೇ ಗಾಂಧಿ ಹೂಂ “ ಎಂದು ಕಡೆಗೆ ತಾವಾಗಿ ತಮ್ಮನ್ನು ತಾವೆ ಪರಿಚಯಿಸಿಕೊಂಡರೆ,

-5-

“ಇರಬಹುದು ಏನೀಗ ? ನಾವು ಗಾಂಧಿ ಜಯಂತಿ ಮಾತ್ರ ಆಚರಿಸುತ್ತೇವೆ, ಇದಕ್ಕೆ ಧಕ್ಕೆ ತರಬೇಡವೆಂದು”
ಅವರನ್ನು ಸರಿಸಿ ಕೊಂಡು ಮುನ್ನಡೆದ.
ಸ್ವಲ್ಪ ದೂರದಲ್ಲಿ ತಂದೆ ಮತ್ತು ಮಕ್ಕಳು ಸಾಗುತ್ತಿದ್ದರು.”ಡ್ಯಾಡಿ ಗಾಂಧಿ”ಎಂದು, ಮಕ್ಕಳು ಇವರತ್ತ ಕೈ ತೋರಿಸುತ್ತಿದ್ದರೆ. ಅದಕ್ಕೆ ಆತ“ ಇಟ್ಸ್ ಗಾಂಧೀಸ್ ರೀಮೇಕ್ “ಇವತ್ತು ಗಾಂಧೀ ಜಯಂತಿಯಲ್ಲವೇ ? ಸರ್ಕಾರನೊ, ಯಾವುದಾದರು ಕಂಪನಿನೊ ಸ್ಪಾನ್ಸರ್ ಮಾಡಿರುತ್ತೆ..” ಎಂದ. ಅವರ ಮಾತುಗಳನ್ನು ಆಲಿಸಿದ ಗಾಂಧೀಜಿ –ರಾಮ! ರಾಮ! ಶಿವ ಶಿವ ನನ್ನ ಅಸ್ತಿತ್ವವೇ ಕಳೆದೋಗಿದೆ. ಪಾತ್ರೆಯಲ್ಲಿರುವ ಅನ್ನ ಬೆಂದಿದೆಯ ಇಲ್ಲವ ಅನ್ನುವುದಕ್ಕೆ ಒಂದು ಅಗಳು ಹಿದುಕಿದರೆ ಸಾಕು, ಇಲ್ಲಿ ಏನಾಗಿದೆ ಎಂದು ಅರ್ಥವಾಗುತ್ತೆ. ಅದಕ್ಕೆ ಇರಬಹುದು ಯಮರಾಜರು ಮತ್ತು ಗುಪ್ತರವರು ನನ್ನನು ಕಳಿಸುವುದಕ್ಕೆ ತಿಣಕಾಡುತ್ತಿದಿದ್ದು. ಇನ್ನು ಮುಂದುವರೆಯುವುದು ಬೇಡವೆಂದು ಸ್ವರ್ಗಕ್ಕೆ ವಾಪಸ್ಸಾಗಿ ಮೌನವಾಗಿದ್ದು ಬಿಟ್ಟರು. ಗಾಂಧೀಜಿ ಇಷ್ಟು ಬೇಗ ಹಿಂದಿರುಗಿರುವುದು ಕಂಡು ಯಮರಾಜರಿಗೂ ಮತ್ತು ಗುಪ್ತರು ಸಧ್ಯ ಬಚಾವಾದೆವು ಎಂದು ಸಂತೋಷದಿಂದ ಅವರನ್ನು ಕಾಣಲು ಬಂದರು. ಗಾಂಧಿ ಇವರನ್ನು ಕಂಡು ತಮ್ಮ ಎರಡು ಕೈಗಳನ್ನೆತಿ ಧನ್ಯವಾದಗಳನ್ನು ಅರ್ಪಿಸಿದರು ಮೌನವಾಗಿ. ಅವರ ಘನ ಘೋರ ಮೌನವನ್ನು ಕಂಡು ನಡೆದಿರುವುದನ್ನು ಊಹಿಸಿ ಮಾತನಾಡದೆ ಹಿಂದಿರುಗಿದರು ಗುರು ಶಿಷ್ಯರು.