ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ.ಕರುಣಾಕರ ಎನ್ ಶೆಟ್ಟಿ
ಇತ್ತೀಚಿನ ಬರಹಗಳು: ಡಾ.ಕರುಣಾಕರ ಎನ್ ಶೆಟ್ಟಿ (ಎಲ್ಲವನ್ನು ಓದಿ)

ಮಳೆಗಾಲವೆಂದರೆ ಮಳೆ ಸುರಿಯುವುದು ಸಹಜವೇ ಆದರ ಈ ಸಲದ ಮಳೆಗಾಲ ಹಾಗಿರಲಿಲ್ಲ.
ಬಂದಾಗಲೆಲ್ಲ ಬಾನು ಬಿರಿಯುವಂತಹ ಮಳೆ ಸುರಿಯುತಿತ್ತು. ನಾಗರಾಜನ ತಾಯಿ ಸುನಂದಾ ಸೋರುತಿರುವಲ್ಲಿಗೆ   ಇದ್ದ   ಪಾತ್ರೆ ಪಗಡೆಗಳನೆಲ್ಲ ಇಡುತ್ತಿದ್ದರು.
 ಆದರೆ ಕೆಲವು ತೂತಾದ ಪಾತ್ರೆಗಳಿಂದ ಸೇರಿದ ನೀರು ನೆಲವನ್ನು ಹಸಿಗೊಳಿಸುತಿತ್ತು.
ಅಷ್ಟರಲ್ಲಿ ಯಾರದ್ದೋ ತೋಟದ ಕೆಲಸಕ್ಕೆ ಹೋಗಿದ್ದ ನಾಗರಾಜನ ಅಪ್ಪ ಶೀನಯ್ಯನವರು ಮನೆಗೆ ಬಂದಿದ್ದರು ಅವರನ್ನು ಕಂಡ ಕೂಡಲೇ ಅವನು ಓಡಿ ಅವರನ್ನು ಅಪ್ಪಿಕೊಂಡು ಅಳತೊಡಗಿದನು.
ಏನೋ ಇದು ಹೆಣ್ಮಕ್ಕಳ ಹಾಗೆ ಅಳುತ್ತಾ ನಿಂತಿರುವೆ.ಮಾನವನ ಬದುಕೆಂದರೆ ಹಾಗೆನೇ ನೋಡು ನಾವು ಕಷ್ಟದಲ್ಲೇ ಬೆಳೆದು ಬಂದವರು ಇದು ನಮ್ಮ ತಾತ ಮುತ್ತಾತ ಕಟ್ಟಿರುವ ಮನೆ  ನಂತರ ರಿಪೇರಿ ಮಾಡಿಕೊಂಡು ಇಷ್ಟರ ವರೆಗೆ ಮಳೆ ಬಿಸಿಲು ಚಳಿ ಎದುರಿಸಿ ನಿಂತಿದೆ ಆದರ ಈಗೀಗ ಮಳೆಗಾಲ ಬಂದರೆ ಸೋರುವುದು ಹೆಚ್ಚಾಗುತ್ತಿದೆ.
ನಮ್ಮ ಪಾಲಿನ ದಿನಗಳನೆಷ್ಟು ಕಷ್ಟದಿಂದ ಕಳೆದೆವು.
ಆದರೆ ನಾವಿನ್ನು ಮನೆ ಕಟ್ಟಿಸೋದು ಕನಸಿನ ಮಾತು ಇನ್ನು ಮುಂದೆ ಏನಿದ್ದರೂ ನಿನ್ನ ಕೈಯಿಂದ ಆಗಬೇಕು.ಬದುಕನ್ನು ಬಂದಂತೆ ಸ್ವೀಕರಿಸಬೇಕು.
ಅಳುತ್ತ ಕೆಂಗೆಡಬಾರದು ಎದುರಿಸಿ ನಿಲ್ಲಬೇಕು.
ಒಂದಲ್ಲ ಒಂದು ದಿನ ಸಫಲತೆಯನ್ನು ಪಡೆಯುತ್ತೀಯ.ಅಪ್ಪ ಏನು ಹೇಳುತ್ತಾರೆಂದು ತಿಳಿಯದ ಅವನು ಪಿಳಿ ಪಿಳಿ ಕಣ್ಣು ಬಿಟ್ಟು ಅವರನ್ನು ನೋಡತೊಡಗಿದ.
ಅಪ್ಪ ಸ್ನಾನ ಮಾಡಿ ಬಂದ ನಂತರ ಅವರು ಊಟಕ್ಕೆ ಕುಳಿತರು ಒಡೆದ ಹಂಚಿನಿಂದ ಕೆಳಗೆ ಬೀಳುವ  ಹನಿಗಳು ವಾತಾವರಣವನ್ನು ಮತ್ತಷ್ಟು ಆರ್ದ್ರ ಗೊಳಿಸಿದವು 
ಕಡಿಮೆ ನೀರು ಬೀಳುತಿದ್ದ ಸ್ಥಳವನ್ನು ಆರಿಸಿ  ಮೂವರೂ ಮಲಗಿದರು.
ನಾಗರಾಜ ಮಲಗಲೇ ಇಲ್ಲ ಆಗಾಗ ಬೊಬ್ಬೆ ಹಾಕಿ ಎದ್ದು ಕುಳಿತುಕೊಳ್ಳುತ್ತಿದ್ದ.ಅವನನ್ನು ತಾಯಿ ಸಮಾಧಾನಿಸುತಿದ್ದರು.ಆಗ ನಾಗರಾಜ ನಾಲ್ಕನೆಯ ತರಗತಿಯಲ್ಲಿ ಕಲಿಯುತಿದ್ದ.ಮನೆಯ ಈ ಅವಸ್ಥೆ ಯಿಂದಾಗಿ   ಅವನು ಶಾಲೆಯಲ್ಲಿ ಕೊಟ್ಟಿದ್ದ ಮನೆಗೆಲಸವನ್ನು ಮಾಡಿರಲಿಲ್ಲ.
 ಅದಕ್ಕಾಗಿ ಮಾಸ್ತರು ಬಡಿದಾಗ ಪಾಪ ಅವನು ಏನೆಂದು ಉತ್ತರಿಸಿಯಾನು.ಅಂತೂ ಅವನು ಬಹಳ ಕಷ್ಟದಲ್ಲಿ ಏಳನೆಯ ತರಗತಿ ಕಲಿತು ಮುಗಿಸಿದಾಗ ಅವರ ತಂದೆ ಹೇಳಿದರು ಮಗ ನಾವು ಇನ್ನು ಮುಂದೆ    ನಿನ್ನನ್ನು ಕಲಿಸಲಾಗದು
ಮುಂದೆ ನೀನು ಮುಂಬೈಗೆ ಹೋಗಬೇಕಾಗುತ್ತೆ. 
ನನ್ನ ಪರಿಚದವರೊಬ್ಬರು ಮುಂಬೈಯ ಚೆಮ್ಬೂರ್ ನಲ್ಲಿ   ಇದ್ದಾರೆ.ಅವರಲ್ಲಿಗೆ ಹೋಗಿ ನನ್ನ ಹೆಸರು ಹೇಳು.
ಬಸ್ಸಿನ ಟಿಕೆಟ್ ತೆಗೆದುಕೊಡುತ್ತೇನೆ. ಚೆಮ್ಬೂರ್ ನಾಕದಲ್ಲಿ   ಅವರ ಸರೋಜ್ ಹೆಸರಿನ ಒಂದು ಹೋಟೆಲ್ ಇದೆ ಊರಿಂದ ಹೋಗುವ ಬಸ್ಸು ಅವರ ಎದುರೇ ನಿಲ್ಲುತ್ತದೆ ಅವರು ಹಾಗೆ ಹೇಳುತ್ತಿರುವುದನ್ನು ಕೇಳಿದ ಅವನ ತಾಯಿ ಅವನಿನ್ನೂ ಚಿಕ್ಕ ಹುಡುಗ     ಅಷ್ಟು ದೊಡ್ಡ ರಾಜ್ಯಕ್ಕೆ ಒಬ್ಬನೇ ಹೇಗೆ ಹೋಗುವುದು.
ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಗೆ ಹೇಳಿದರೆ ಅವರು ಸರಿಯಾದ ಸ್ಥಳದಲ್ಲಿ ಇಳಿಸುತ್ತಾರೆ.ಇಲ್ಲೇ ನಮ್ಮ ಜೊತೆ ಇದ್ದುಕೊಂಡು ನಮ್ಮ ಹಾಗೆ ಆಗುವುದಕ್ಕಿಂತ ದೂರದ ಮುಂಬೈಗೆ ಹೋಗಿ ಒಂದು ಜನ ಆಗಲಿ ಏನಂತೀಯಾ?
ಏನೋ ಪಾಪ ಚಿಕ್ಕವನು ಹೇಗೆ ನಿಭಾಯಿಸುತ್ತಾನೋ. 
ನೀನು ಚಿಂತೆ ಬಿಡು ಬದುಕು ಪಾಠ ಕಲಿಸುತ್ತದೆ. 
ಮುಂಬೈಗೆ ಹೊರಡಲು ಒಂದೆರಡು ದಿನ ಇರುವಾಗ ಅವನ ತಾಯಿ ಜಾತಕ ತೋರಿಸಲು ಜೋಯೀಸರಲ್ಲಿಗೆ ಹೋದಾಗ ಅವರು ಜಾತಕವನ್ನು ತಿರುಗಿಸಿ ತಿರುಗಿಸಿ ನೋಡಿ ಏನೋ ಏನೋ ಗುಣಾಕಾರ ಮಾಡಿ ಮುಂಬೈಗೆ ಹೇಗೂ ಹೊರಟು ನಿಂತಿದ್ದಾನೆ ಅಲ್ಲಿಗೆ ಹೋದಾಗ ಎಲ್ಲರಂತೆ ದೊಡ್ಡ ಜನ ಆಗುತ್ತಾನೆ.ನಿಮ್ಮಾಸೆಯನ್ನು ಕೂಡ ಈಡೇರಿಸುತ್ತಾನೆ. 
ಅಂದರೆ ? 
ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. 
ಅವನ ಮದುವೆ ಮಡದಿ ಮಕ್ಕಳು ಎಲ್ಲವೂ ಆಗುತ್ತೆ ನೀವು ಚಿಂತೆ ಬಿಡಿ. 
ಹತ್ತು ಹನ್ನೆರಡು ವರುಷದ ಹುಡುಗ ನಾಗರಾಜ 
ಅಪ್ಪ ಅಮ್ಮನ ಚರಣಗಳಿಗೆ ನಮಸ್ಕರಿಸಿ ಹೊರಟು ನಿಂತಾಗ ಅವರು ಮನೆ ದೇವರಿಗೆ ಮನ ದೈವಗಳಿಗೆ ಕೈ ಮುಗಿದು ಅವನಮ್ಮ ತಮ್ಮ ಕೈಯಲ್ಲಿದ್ದ ಹಣವನ್ನು ಅಳುತ್ತಾ ಅವನ ಕೈಗಳಿಗೆ ತುರುಕಿಸಿದರು. 
ಕಣ್ಣೀರು ಸುರಿಸುತ್ತಾ ಅವನು ಬಸ್ಸನ್ನೇರಿ ಕುಳಿತಾಗಲೂ ಅವರು ಅಳುತ್ತಲೇ ಇದ್ದರು. ಬಸ್ಸಿನ ಡ್ರೈವರ್ ಮತ್ತು ಕ್ಲೀನರ್ ಅವನ ತಂದೆ ಹೇಳಿದಂತೆ   ಚೆಮ್ಬೂರ್ ನಾಕ ಸರೋಜ್ ಹೋಟೆಲ್ ಬೋರ್ಡ್ ತೋರಿಸಿ ಅಲ್ಲಿ ಕೆಳಗಿಳಿಸಿದಾಗ ಅವನು ಕಕ್ಕಾ ಬಿಕ್ಕಿ.
ಹೋಟೆಲಿನ ಒಳ ಪ್ರವೇಶಿಸಿದ ಆತ ಅಪ್ಪನಿತ್ತಿದ್ದ ಚೀಟಿಯನ್ನು ಹೋಟೆಲಿನ ಗಲ್ಲೆಯ ಮೇಲೆ ಕುಳಿತಿದ್ದ ವ್ಯಕ್ತಿಗೆ ನೀಡಿ ನಿಂತುಕೊಂಡ ಊರಿನಲ್ಲಿ ಅಪ್ಪ ಅಮ್ಮನ ಪ್ರೀತಿಯಲ್ಲಿ ಬೆಳಿದಿದ್ದ ನಾಗರಾಜ ದಷ್ಟ ಪುಷ್ಟವಾಗಿದ್ದ. 
ಹೌದ ನೀನು ಶೀನಯ್ಯ ಮತ್ತು ಸುನಂದಕ್ಕನ ಮಗನಾ ? 
ಅವನು ಉತ್ತರಿಸಿದ ಹೌದು ಸಾರ್. 
ಎಷ್ಟು ಕಲಿತಿದ್ದೀಯಾ ? 
ಏಳನೇ ತರಗತಿ ಪಾಸು ಮಾಡಿದ್ದೀನಿ. 
ಇಲ್ಲಿ ಏನು ಮಾಡಬೇಕೆಂದು ಬಂದಿದ್ದೀಯಾ ? 
ಕೆಲಸ ಮಾಡೋಕೆ ಸಾರ್. 
ಮತ್ತೆ ಮುಂದಿನ ಶಿಕ್ಷಣ ? 
ನೀವು ಅವಕಾಶ ಕೊಟ್ಟರೆ. 
ಇಲ್ಲದಿದ್ದರೆ 
ನೀವು ಹೇಗೆ ಹೇಳುತ್ತೀರೋ ಹಾಗೆ ಪರಿಚಯದವರ ಮಗನೂ ಅಲ್ಲದೆ    ಹುಡುಗ ಚೂಟಿಯಾಗಿರುವ
ಎಂದು ಅವನಿಗೆ ಕೊಲ್ಲಿಯ ಕೆಲಸ ನೀಡದೆ ನೀರು ಸಪ್ಲಯ್ ಕೆಲಸ ನೀಡಿದರು.
ಒಂದು ವಾರದಲ್ಲಿ ಅವನ ಕೆಲಸ ಕೆಲಸದ ಮೇಲೆ ಅವನಿಗಿರುವ ಶ್ರದ್ಧೆಯನ್ನು ಗಮನಿಸಿದ ಶೇಟ್ ಅವರ ಮ್ಯಾನೇಜರ್ ನನ್ನು ಕರೆದು ನಾಗರಾಜನನ್ನು ರಾತ್ರಿ ಶಾಲೆಗೆ ಸೇರಿಸಿ ಬರಲು ಹೇಳಿದರು.
ಹೋಟೆಲ್ ಶೇಟ್ ಅವರ ದಯೆಯಿಂದ ಕೆಲಸ ಹಾಗು ವಿದ್ಯಾಭ್ಯಾಸ ಜೊತೆ ಜೊತೆಯಲ್ಲಿ ಸಾಗತೊಡಗಿತು.   ಮೊದಲು ಮೊದಲು ಎರಡನ್ನೂ ನಿಭಾಯಿಸುವುದು ಕಷ್ಟವೆಂದು ಕಂಡು ಬಂದರೂ ಕಲಿಯುವ ಮನಸಿದ್ದ ಅವನು ಸಿಕ್ಕಿದ ಅವಕಾಶವನ್ನು ಉಪಯೋಗಿಸಲು ನಿರ್ಧರಿಸಿದ.
ಯಾರ ಪುಣ್ಯ ಫಲವೋ ಏನೋ ನಾಗರಾಜನ ಪಾಲಿಗೆ ಒಳ್ಳೆಯ ಗುಣ ದ ಶೇಟ್ ಸಿಕ್ಕಿದ್ದು.ಅವರ ದಯೆಯಿಂದ ಊರಿಗೂ ಹೋಗಿ ಬಂದಿದ್ದ.ಹೋಟೆಲಿನ ಕೆಲಸದಲ್ಲೂ ಕಲಿಯುವುದರಲ್ಲೂ ಜಾಣನಿದ್ದ.ಅವನನ್ನು ಕಂಡು ಗಂಡು ಮಕ್ಕಳು ಇಲ್ಲದ ಹೋಟೆಲ್ ಮಾಲಕರಿಗೆ ಅವನೆಂದರೆ ತುಂಬಾ ಪ್ರೀತಿ ಅವನ ಪ್ರಾಮಾಣಿಕತೆಯೆಂದರೆ ತುಂಬಾ ಅಚ್ಚು ಮೆಚ್ಚು.
ಹತ್ತನೆಯ ತರಗತಿ ಪಾಸು ಮಾಡಿದ ಅವನು ಮೊದಲು ಸಿದ್ಧಿವಿನಾಯಕ ಮಂದಿರದ ವಿನಾಯಕನಿಗೆ ನಮಸ್ಕರಿಸಿ ಸಿಹಿ ತಂದು ತನ್ನ ಮಾಲಕರ ಕೈಗಿತ್ತು ನಮಸ್ಕರಿಸಿ ತನ್ನ ರಿಸಲ್ಟ್ ತಿಳಿಸಿದ.ಅವನನ್ನು ಅಭಿನಂದಿಸಿದ ಅವರು ಅವನಿಗೆ ತಮ್ಮ ಹೋಟೆಲಿನ ಎ ಸಿ ಸೆಕ್ಷನ್ ನಲ್ಲಿ ವೈಟರ್ ಕೆಲಸ ಮುಂದುವರಿಸಲು ಹೇಳಿದರು.
ನಾಗರಾಜನಿಗೆ ಖುಷಿಯೇ ಖುಷಿ ಅದೇಕೆಂದರೆ ಎ ಸಿ ಸೆಕ್ಷನ್ ಗೆ ಹೆಚ್ಚಾಗಿ ಡಿಸೆಂಟ್ ಗ್ರಾಹಕರು ಬರುವುದಲ್ಲದೆ ಟಿಪ್ಸ್ ಕೂಡ ಹೆಚ್ಚಾಗಿ ಸಿಗುತಿತ್ತು.ಹನ್ನೆರಡನೆಯ ಕ್ಲಾಸನ್ನು ಫಸ್ಟ್ ಕ್ಲಾಸ್ ನಲ್ಲಿ  ಮುಗಿಸಿ ನಾಗರಾಜ ಸಿದ್ಧಿವಿನಾಯಕ ಮಂದಿರಕ್ಕೆ ಹೋಗಿ ವಿನಾಯಕನ ದರ್ಶನ ಮಾಡಿ ಸ್ವೀಟ್ ತೆಗೆದುಕೊಂಡು ನೇರ ವಾಗಿ ಶೇಟ್ ನ ಕೈಗಿತ್ತು ಅವರ ಕಾಲಿಗೆ ಅಡ್ಡಬಿದ್ದ.
ಅವರು ಅವನನ್ನ ಎಬ್ಬಿಸಿ ಆಶೀರ್ವದಿಸಿದರು.ತಮ್ಮ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿ ನಿಷ್ಠೆ ಯಿಂದ ಕೆಲಸ ಮಾಡುತ್ತಾ ಇಷ್ಟು ಮುಂದೆ ಬರುವ ಅವನ ಮೇಲೆ ಅವರಿಗೂ ಅಭಿಮಾನ.ಊರಿಗೆ ಬಂದ ಮಗನ ದ್ರಷ್ಟಿ ನಿವಾಳಿಸಿದರು ಅವನ ತಾಯಿ.ತಮ್ಮ ದ್ರಷ್ಟಿಯೇ ತನ್ನ ಮಗನಿಗೆ ತಗಲಬಹುದೆಂದು ತಿಳಿದು ಅವರು ದ್ರಷ್ಟಿ ಬದಲಾಯಿಸಿದರು.
ತಾನು ಒಟ್ಟು ಮಾಡಿ ತಂದ ಹಣದಿಂದ ಮನೆಯನ್ನು ರಿಪೇರಿ ಮಾಡಿದ ನಾಗರಾಜ ಹೇಳಿದ ಈ ಸಲ ಮನೆಯನ್ನು ರಿಪೇರಿ ಮಾಡಿದ್ದೇನೆ ಅಷ್ಟೇ ಮುಂದೆ ನಾನು ಪದವಿಶಿಕ್ಷಮುಗಿಸಿ ಬಂದು ಒಳ್ಳೆಯ ಉದ್ಯೋಗಕ್ಕೆ ಸೇರಿ ದ ನಂತರ ಹೊಸ ಮನೆಯನ್ನು ಕಟ್ಟಿಸುತ್ತೇನೆ.ಏಕೆಂದರೆ ಸೋರುತ್ತಿರುವ ಮನೆಯ ಕೆಳಗೆ ಒದ್ದೆಯಾಗಿ ಮಲಗಿ ಕಳೆದ ಆ ರಾತ್ರಿಗಳನ್ನು ನಾನಿನ್ನೂ ಮರೆತಿಲ್ಲ ಮರೆಯುವುದೂ ಕೂಡ ಇಲ್ಲ.
ನಮ್ಮ ಪೀಳಿಗೆ ಮುಂದೆ ಅಂತಹ ದಿನಗಳನ್ನು ನೋಡಬಾರದು.ಅವನ ಮಾತಿಗೆ ಅವನ ಅಪ್ಪ ಅಮ್ಮ ತಲೆಯಾಡಿಸಿ ಸಮ್ಮತಿ ಸೂಚಿಸಿದರು.ಮುಂಬೈಗೆ ಮರಳಿ ಬಂದ ಆತ ನೈಟ್ ಕಾಲೇಜಿಗೆ ಸೇರಿದ.
ನೈಟ್ ಸ್ಕೂಲ್ ಗಳು ನೈಟ್ ಕಾಲೇಜುಗಳು ಅವನಂತಹ ಕಲಿಯುವುದರಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದವು.ಹಗಲಿ ಗೆ ಹೋಟೆಲಿನ ಕೆಲಸ ರಾತ್ರಿ ಕಾಲೇಜೂ ಹೀಗೆ ಅವನು ಸೋತು ಹೋಗುತ್ತಿದ್ದರೂ ಅವನ ಮನದಲ್ಲಿ ಕಲಿಯಲೇ ಬೇಕೆನ್ನುವ ಲಕ್ಶ್ಯವಿದ್ದ ಕಾರಣ ಅವನು ಎರಡನ್ನೂ ಬಹಳ ಲಕ್ಷ್ಯದಿಂದ ನಿಭಾಯಿಸಲು ಯತ್ನಿಸುತ್ತಿದ್ದ.
ಅವನು ಪದವಿಯ ಮೊದಲನೆಯ ವರ್ಷ ಮುಗಿಸುತ್ತಿರುವಂತೆ ಹೋಟೆಲ್ ಮಾಲಕರು ಅವನಿಗೆ ಮ್ಯಾನೇಜರ್ ಪದವಿ ನೀಡಿದಾಗ ಅವನು ಅಮ್ಮ ಅಪ್ಪ ನಿಗೆ ಹಾಗೂ ಕಾಣದ ದೇವರಿಗೆ ಮನದಲ್ಲೇ ಕೈ ಮುಗಿದ.
ನಂತರ ತನ್ನ ಬಾಳಿಗೆ ಹೆಜ್ಜೆ ಹೆಜ್ಜೆಗೂ ಸಹಾಯ ಪ್ರೀತಿ ನೀಡಿದ ಹೋಟೆಲ್ ಮಾಲಕರಿಗೆ ಧನ್ಯವಾದ ಅರ್ಪಿಸಿದ.ನಾಗರಾಜ ಎರಡನೆಯ ವರ್ಷ ಮುಗಿಸುತ್ತಿರುವ ವಂತೆ ಅವನನ್ನು ಕರೆದು ಹೋಟೆಲ್ ಮಾಲಕರು ಅವನನ್ನು ಕರೆದು ವಿಚಾರಿಸಿದರು…ನೀನು ಪದವಿ ಶಿಕ್ಷಣ ಮುಗಿಸಿದ ನಂತರ ಏನು ಮಾಡ ಬೇಕು ಅಂತ ಇದ್ದೀಯ  ? 
ಉದ್ಯೋಗ ಅಥವಾ ಹೋಟೆಲ್ ವ್ಯವಹಾರದಲ್ಲಿ ತೊಡಗಿಸಿಕೊಳ್ತೀಯಾ ?
ಸರ್ ಬಾಲ್ಯದಿಂದಲೂ ನಾನು ನಿಮ್ಮ ಜೊತೆ ಹೋಟೆಲ್ ನಲ್ಲಿ ದುಡಿಯುತ್ತಾ ಬಂದರೂ ನನಗೆ ಈ ಕ್ಷೇತ್ರ ದಲ್ಲಿ ಮುಂದುವರಿಯುವುದು ಇಷ್ಟವಿಲ್ಲ
ನನಗೆ ಮೊದಲಿನಿಂದಲೂ ಉದ್ಯೋಗಕ್ಕೆ ಸೇರಬೇಕೆನ್ನುವ ಆಸೆ.
ನಾನು ಮೊದ ಮೊದಲಿಗೆ ನಿಮ್ಮ ಹೋಟೆಲಿಗೆ ಬಂದು ಸೇರಿದಾಗ ಇಲ್ಲಿಗೆ ಬರುತಿದ್ದ ಆಫೀಸರ್ ಗಳನ್ನು ಕಂಡು ಮುಂದೊಂದು ದಿನ ನಾನೂ ಕೂಡ ಅವರ ಹಾಗೆ ಇಸ್ತ್ರಿ ಹಾಕಿದ ಪ್ಯಾಂಟ್ ಶರ್ಟ್ ತೊಟ್ಟುಕೊಂಡು    ಆಫೀಸಿಗೆ ಹೋಗುವಂತಾದರೆ ಎಂದು    ಯೋಚಿಸುತ್ತಿದ್ದೆ.
ಅಂದರೆ ನಿನಗೆ ವ್ಯವಹಾರದಲ್ಲಿ ಆಸಕ್ತಿ ಇಲ್ಲದಂತಾಯಿತು. ನಾನು ಅಂದು ಕೊಂಡಿದ್ದೆ ನಾವು ನಡೆಸುವ ಇನ್ನೊಂದು ಹೋಟೆಲ್ ನಿನಗೆ ನಡೆಸಲು ಕೊಡ ಬೇಕೆಂದಿದ್ದೆ.
ಬೇಡ ಸರ್ ನನಗೇಕೋ ಉದ್ಯೋಗಿಯಾಗಬೇಕೆನ್ನುವ ಆಸೆ.ಇರಲಿ ನಿನ್ನ ಆಸೆಗೆ ನಾನೆಂದೂ ಅಡ್ಡ ಬರಲಾರೆ.ಸರ್ ನಿಮ್ಮಿಂದ ನನಗೆ ಇನ್ನೊಂದು ಸಹಾಯ ಆಗಬೇಕಿದೆ.
ಏನಾಗಬೇಕು ಬಾಯಿ ಬಿಟ್ಟು ಹೇಳು.ಸರ್ ಈಗಾಗಲೇ ನೀವು ನನ್ನ ಬಾಳಿನ ಹೆಜ್ಜೆ ಹೆಜ್ಜೆಗೂ ನಿಮ್ಮ ಉಪಕಾರ ಪ್ರೀತಿಯ ಆಸರೆ ನೀಡಿದ್ದೀರಾ ನಿಮ್ಮ ಋಣವನ್ನು ನಾನೆಂದೂ ತೀರಿಸಲಾರೆ.
ನಾನು ಪದವಿ ಪಡೆದ ನಂತರ ಉದ್ಯೋಗ ಪಡೆಯುವಲ್ಲಿ ನಿಮ್ಮ ಸಹಾಯ ಬೇಕಾಗಿದೆ.ಖಂಡಿತ ನಾನು ನಿನಗೆ ಸಹಾಯ ಮಾಡುತ್ತೇನೆ.ನೀನು ಒಳ್ಳೆಯ ಕಡೆ ಕೆಲಸಕ್ಕೆ ಸೇರಿದರೆ ಅದರ ಶ್ರೇಯಸ್ಸು  ನನಗೂ ಸಿಕ್ಕಂತಾಗುತ್ತದೆ    ಅಲ್ವಾ ?
ಪಾಲೇಕೆ ಸರ್ ನನ್ನ ಬದುಕಿನ ರೂವಾರಿಯೇ ನೀವು  ನಿಮ್ಮಂತಹ ಸಜ್ಜನರು ನನ್ನ ಬದುಕಿನಲ್ಲಿ ಬರುತ್ತಿದ್ದರೆ ನಾನೆಲ್ಲೋ ಕಳೆದು ಹೋಗುತಿದ್ದೆ.ನನ್ನ ಸಾಧನೆಯ ಹಿಂದೆ ನಿಮ್ಮ ಪ್ರೀತಿ ಯ ರಕ್ಷೆ ಇದೆ.
ಪದವಿಯ ಎರಡೆನೆಯ ವರ್ಷವನ್ನು ಆತ ಊರಿಗೆ ಹೊರಟು ನಿಂತ ಅಪ್ಪ ಅಮ್ಮನಿಗೆ ಹೇಳಿದ ಇನ್ನು ಒಂದು ವರ್ಷ ಕಲಿತು ಮುಗಿಸಿದರೆ ನಾನು ಪದವೀಧರನಾಗುತ್ತೇನೆ.
ಮತ್ತೆ ನನಗೊಂದು ಒಳ್ಳೆಯ ಉದ್ಯೋಗ ದೊರೆತರೆ ನೀವು ಮತ್ತೆ ನಿಶ್ಚಿಂತೆ ಯಿಂದ ಬದುಕಬಹುದು.ಅದರ ಜೊತೆ ಜೊತೆಗೆ ನಮ್ಮ ಈ ಮನೆ ಕೆಡವಿ ಹೊಸ ಮನೆ ಕಟ್ಟುವ ಆಸೆ ನನ್ನದು.
ಆಗ ಅವನ ಅಪ್ಪ ಹೇಳಿದರು.ಈ ಮನೆ ನಮ್ಮ ಹಿರಿಯರ ಮಧುರ ಸ್ಮ್ರತಿಯ ಕುರುಹಾಗಿ ಹಾಗೆ ಇರಲಿ ನಾವು ಹೊಸ ಮನೆಯನ್ನು ಬೇರೆಯಾಗಿಯೇ ಕಟ್ಟಿಸೋಣ ಏನಂತೀಯಾ ? 
ನಿಮ್ಮ ಇಷ್ಟದಂತೆಯೇ ಆಗಲಿ.ತನಗಿಂತ ಎತ್ತರಕ್ಕೆ ಬೆಳೆದು ನಿಂತ ಮಗನನ್ನು ಆತನ ಮಾತುಗಳನ್ನು ಆಲಿಸಿದ ಆ ತಾಯಿ ತಂದೆಗೆ ಗೆ ಅವನ ಮೇಲೆ ಪ್ರೀತಿ ಅಭಿಮಾನ ಮತ್ತಷ್ಟು ಉಕ್ಕಿತು.ಮುಂಬೈಗೆ ಬಂದ ನಾಗರಾಜ ಮತ್ತೆ ಕೆಲಸ ಸಕ್ಕೆ ಮತ್ತೆ ಕಲಿಯುದಕ್ಕೆ ಗಮನ ನೀಡಿದ.
ಒಂದು ವರ್ಷ ಕಷ್ಟ ಪಟ್ಟರೆ ತನ್ನಾದಾದ ಬದುಕು ಸಾಗಿಸಬಹುದು.
ಒಳ್ಳೆ ಯ ಮಾರ್ಕು ಪಡೆದು ಪದವಿಗಳಿಸಿದ ಅವನು ಕೆಲಸದ ಬೇಟೆಗೆ ತೊಡಗಿದ.
ಹೋಟೆಲ್ ಮಾಲಕರ ಪರಿಚಯದಿಂದ ಅವನಿಗೊಂದು ಒಳ್ಳೆಯ ಉದ್ಯೋಗ ದೊರಕಿದಾಗ ಅವನನ್ನು ಹಿಡಿಯುವುವರೇ ಇಲ್ಲದಾಯಿತು.
ಕೆಲಸಕ್ಕೆ ಹೋಗುವುದಕ್ಕಿಂತ ಮೊದಲು ಸಿದ್ಧಿವಿನಾಯಕ ಮಂದಿರ ಕ್ಕೆ ಹೋಗಿ ಬಂದು ಹೋಟೆಲ್ ಮಾಲಕರ ಆಶೀರ್ವಾದ ಪಡೆಯಲು ಮರೆಯಲಿಲ್ಲ.
ಸರ್ ನಿಮ್ಮಿಂದ ನನ್ನ ಬಾಳು ಒಂದು ದಡ ಸೇರಿತು.ನನ್ನನ್ನು ಎಷ್ಟು ಅಂತ ಹೋಗಳ್ತೀಯಾ.
ಇದರಲ್ಲಿ ನಿನ್ನದಾಗಿರುವ ಪರಿಶ್ರಮ ಹೆಚ್ಚಿನ ಕೆಲಸ ಮಾಡಿದೆ.
ಅದು ನಿಮ್ಮ ದೊಡ್ಡ ಗುಣ ಸರ್ ನೀವಲ್ಲದಿದ್ದರೆ ನಾನು ಹತ್ತರ ಜೊತೆಗೆ ಹನ್ನೊಂದಾಗುತಿದ್ದೆ.
ಇವತ್ತು ಆಫೀಸ್ ನಲ್ಲಿ ಮೊದಲ ದಿನ ನಿನ್ನದು ಹೋಗು ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ.ಒಂದು ವರ್ಷದಲ್ಲಿ ಅವನ ಕೆಲಸ ಖಾಯಂ ಆಗಿತ್ತು.ಅವನ ಒಳ್ಳೆಯ ಗುಣ ನಡತೆಯಿಂದ ಅವನು ಅಲ್ಲಿಯೂ ಎಲ್ಲರ ಅಭಿಮಾನಕ್ಕೆ ಪಾತ್ರನಾಗಿದ್ದ.ಮತ್ತೆ ಊರಿಗೆ ಹೊರಟು ನಿಂತ ಚಿಕ್ಕದಾದರೂ ಚೊಕ್ಕ ಮನೆ ಕಟ್ಟಿಸುವ ಬಗ್ಗೆ ಮಾತನಾಡಿ ಆಗಬಹುದಾದ ಖರ್ಚು ವೆಚ್ಚಗಳ ಬಗ್ಗೆ ಸಂಬಂಧಪಟ್ಟವರಲ್ಲಿ  ವಿಚಾರಿಸಿದ ಆದಷ್ಟು ಬೇಗ ಮನೆ ಕಟ್ಟಿ ಮುಗಿಸಬೇಕೆಂದು ಅವನ 
ಇಷ್ಟವಾಗಿತ್ತು.ಮತ್ತೆ ಒಂದೆರಡು ವರ್ಷ ಊರಿಗೆ ಹೋಗದೆ ಆಫೀಸ್ ನಲ್ಲಿ ಸಾಲ ಮಾಡಿ ಅಲ್ಲದೆ ಹೋಟೆಲ್ ಮಾಲಕರಲ್ಲಿ ಸಹಾಯ ಪಡೆದು ಊರಿಗೆ ಬಂದು ಮನೆ ಕಟ್ಟುವ ಕೆಲಸ ಮುಂದುವರಿಸಿದ.
ರಜೆ ಇದ್ದಷ್ಟು ಕೆಲಸ ಮಾಡಿಸಿದ ನಾಗರಾಜ ತನ್ನ ನಂಬಿಗಸ್ಥ ಗೆಳೆಯ ಹಾಗು ಅಪ್ಪನಿಗೆ ಮುಂದಿನ ಜವಾಬ್ದಾರಿ ಹೊರಿಸಿ ಮರಳಿ ಮುಂಬೈಗೆ ಬಂದ.ಅಂತೂ ನಾಗರಾಜನ ಮನೆಯ ಕೆಲಸ ಪೂರ್ತಿ ಮುಗಿದಾಗ ಅವನು ಸಂತಸದಿಂದ ಊರಿಗೆ ಬರಲು ತಯಾರಿ ನಡೆಸಿದ.ಅಪ್ಪ ಅಮ್ಮನಿಗೆ ಬಟ್ಟೆ ಬರೆ ಹೊಸ ಮನೆಗೆ ಒಂದಿಷ್ಟು ಸಾಮಾನುಗಳು ಎಲ್ಲವನ್ನು ಒಟ್ಟು ಮಾಡಿ ಗ್ರಹ ಪ್ರವೇಶದ ಕನಸು ಕಾಣುತ್ತಾ ಊರಿಗೆ ಹೊರಟ.ಅಂದು ರಾತ್ರಿ ಎಂದೂ ಕೇಳರಿಯದ
 ಧಾರಾಕಾರ ಮಳೆ ಗುಡುಗು ಸಿಡಿಲು ಎಲ್ಲಿಂದಲೋ ಬಂದ ಪ್ರಖರ ಮಿಂಚು ಇಂದಿನ ರಾತ್ರಿ ಈ ಹಳೆ ಮನೆಯಲ್ಲಿ ಕೊನೆಯ ರಾತ್ರಿಯೆಂದು ಮಾತನಾಡುತ್ತಾ ಮಲಗಿದ.ಆ ದಂಪತಿಗಳ ಪಾಲಿಗೆ ಅಂದಿನ ರಾತ್ರಿ  ನಿಜವಾಗಿಯೂ ಕೊನೆಯ ರಾತ್ರಿ ಯಾದುದು ಮಾತ್ರ ವಿಪರ್ಯಾಸವಾಗಿತ್ತು.