ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಕ್ ಸ್ಯಾಕ್-ಕಾವ್ಯ ಪ್ರದರ್ಶನ


ಕನ್ನಡ ಮತ್ತು ಇತರ ಭಾರತೀಯ ಭಾಷೆಗಳ ಕವಿತೆಗಳು ಇಟಲಿಯ ಪಿಯಾಸೆಂಜಾದಲ್ಲಿರುವ ಪಿಕ್ಕೊಲೊ ಮ್ಯೂಸಿಯೊ ಡೆಲ್ಲಾ ಪೊಯೆಸಿಯಾ ಚಿಸಾ ಡಿ ಸ್ಯಾನ್ ಕ್ರಿಸ್ಟೋಫೊರೊ, (ಲಿಟಲ್ ಮ್ಯೂಸಿಯಂ ಆಫ್ ಪೊಯೆಟ್ರಿ – ಕಾವ್ಯ ಪ್ರದರ್ಶನಕ್ಕಾಗಿರುವ ಪುಟ್ಟ ಮ್ಯೂಸಿಯಂ) ನಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ಈ ಮ್ಯೂಸಿಯಂ ಇದೆ ತಿಂಗಳ ೫ ನೇ ತಾರೀಖಿನಂದು ಇಟಲಿಯಲ್ಲಿ ಉದ್ಘಾಟನೆಗೊಂಡಿದೆ.

ಕನ್ನಡದ ಕವಿ ಮಮತಾ ಸಾಗರ ಅವರು ಇಟಲಿಯ ದೃಶ್ಯ ಕಲಾವಿದರು ಹಾಗೂ ಕವಿಗಳಾದ ಆಂತ್ಯೆ ಸ್ಟೆಹ್ನ್ ಅವರ ಸಹಯೋಗದೊಂದಿಗೆ ಭಾರತದಿಂದ ಸಹಸಂಯೋಜಕರಾಗಿ ವಿನೂತನ ‘ಕವನ ಪ್ರದರ್ಶನ’ವನ್ನು ಏರ್ಪಡಿಸುತ್ತಿದ್ದಾರೆ. ಪ್ರದರ್ಶನವು ೨೬ ಸೆಪ್ಟೆಂಬರ್ ೨೦೨೦ರ ಶನಿವಾರ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

೨೫೦ ಕ್ಕೂ ಹೆಚ್ಚು ಕವಿಗಳಿಂದ ರಚಿಸಲ್ಪಟ್ಟ ಪುಟ್ಟ ಕವಿತೆಗಳು ಮತ್ತು ಒಣಗಿದ ಚಹಾ ಚೀಲಗಳಿಂದ ಮಾಡಿದ ದೊಡ್ಡದಾದ ಚೀಲ – ರಕ್ ಸ್ಯಾಕಿನ ಪ್ರದರ್ಶನವನ್ನು ಒಳಗೊಂಡಿರುತ್ತದೆ

ಗ್ಲೋಬಲ್ ಪೊಯೆಟ್ರಿ ಪ್ಯಾಚ್ ವರ್ಕ್ ನಲ್ಲಿರುವ ರಕ್ ಸ್ಯಾಕ್ (RUCKSACK) ಒಂದು ಕಲಾ-ಕವನ ಅನುಸ್ಥಾಪನಾ ಯೋಜನೆಯಾಗಿದ್ದು, ಈ ಪ್ರಮುಖ ಪ್ರದರ್ಶನದಲ್ಲಿ ೨೫೦ ಕ್ಕೂ ಹೆಚ್ಚು ಕವಿಗಳಿಂದ ರಚಿಸಲ್ಪಟ್ಟ ಪುಟ್ಟ ಕವಿತೆಗಳು ಮತ್ತು ಒಣಗಿದ ಚಹಾ ಚೀಲಗಳಿಂದ ಮಾಡಿದ ದೊಡ್ಡದಾದ ಚೀಲ – ರಕ್ ಸ್ಯಾಕಿನ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಕವಿಗಳು ತಮ್ಮ ಭಾಷೆಗಳಲ್ಲಿ ಪ್ರಸ್ತುತಪಡಿಸಿದ ಕವನಗಳನ್ನು ಪ್ರದರ್ಶನಕ್ಕೆ ನಿಗದಿ ಮಾಡಿದ ಸ್ಥಳದಾದ್ಯಂತ ಆಡಿಯೊ ಲೂಪ್ ನಲ್ಲಿ ಪ್ರಸಾರ ಮಾಡಲಾಗುತ್ತದೆ.

ಆಂತ್ಯೆ ಸ್ಟೆಹ್ನ್ -ಇಟಲಿಯ ದೃಶ್ಯ ಕಲಾವಿದರು ಹಾಗೂ ಕವಿ

ಈ ಸೃಜನಾತ್ಮಕ ಯೋಜನೆಯಲ್ಲಿ ಸಹ-ಸಂಯೋಜಕರು ಹಾಗೂ ನಿರ್ವಾಹಕರಾಗಿರುವ, ಮಮತಾ ಸಾಗರ ಅವರ ಸಂಯೋಜನೆಯು ಈ ಪ್ರದರ್ಶನದ ಪ್ರಮುಖ ಭಾಗವಾಗಿ ನಿಲ್ಲುತ್ತದೆ. ಇದು ೧೫ ಭಾಷೆಗಳ ೨೮ ಕವಿಗಳನ್ನು ಒಳಗೊಂಡಿರುತ್ತದೆ. ಈ ಪ್ರದರ್ಶನದಲ್ಲಿ ಕೈಬರಹದಲ್ಲಿ ಪ್ರಸ್ತುತಪಡಿಸಿದ ಕವಿತೆ, ಅದರ ವೀಡಿಯೊ ಪ್ರಸ್ತುತಿ, ಕವಿಯ ಭಾವಚಿತ್ರ, ಸೃಜನಶೀಲ ಪರಿಚಯ ಪತ್ರ ಮತ್ತು ಕವಿಯು ಕ್ಲಿಕ್ಕಿಸಿದ ಟೀಬ್ಯಾಗ್ ನ ಸೃಜನಾತ್ಮಕ ಛಾಯಾಚಿತ್ರಗಳನ್ನು ಸೃಜನಾತ್ಮಕವಾಗಿ ಪ್ರದರ್ಶಿಸಲಾಗುತ್ತದೆ.

ಮಮತಾ ಸಾಗರಸಹ-ರಕ್ ಸ್ಯಾಕ್ ಕಾವ್ಯ ಪ್ರದರ್ಶನದ ಸಂಯೋಜಕರು ಹಾಗೂ ನಿರ್ವಾಹಕರು

ಭಾರತ ದೇಶದ ವೈವಿಧ್ಯತೆಯನ್ನು ಸಂಭ್ರಮಿಸುವ ಬಹುಭಾಷಿಕ ಹಾಗೂ ಪ್ರಾಂತಿಕ ವಿಚಾರಗಳನ್ನು ಧ್ವನಿಸುವ ೨೮ ಕವಿಗಳ ಕವಿತೆಗಳನ್ನು ಆಧರಿಸಿ, ಕವಿ ಮಮತಾ ಸಾಗರ ಅವರು ಈ ಬೃಹತ್ ಪ್ರದರ್ಶನಕ್ಕೆ ತಮ್ಮ ಸಂಯೋಜನೆಯ ಕೊಡುಗೆಯನ್ನು ನೀಡಿರುತ್ತಾರೆ. ಭಾಗವಹಿಸುವ ಕವಿಗಳ ಪಟ್ಟಿಯನ್ನು ಈ ಕೆಳಗೆ ಲಗತ್ತಿಸಲಾಗಿದೆ.

ಈ ಬೃಹತ್ ಪ್ರದರ್ಶನವು ಹೆಚ್ಚಿನ ಸಂಖ್ಯೆಯ ಜನರು, ಸ್ಥಳಗಳು, ದೃಷ್ಟಿಕೋನಗಳು, ಭಾಷೆಗಳು, ನಿಕಟತೆಯ ಮೌಲ್ಯವನ್ನು ಒತ್ತಿಹೇಳುತ್ತವಷ್ಟೇ ಅಲ್ಲದೆ ಪರಸ್ಪರರನ್ನು ದೂರವಿಟ್ಟಿರುವ, ಗೃಹಬಂಧನದ ಪಂಜರದೊಳಗಿಟ್ಟಿರುವ, ಮಾನವರ ನಿಕಟ ಅನುಬಂಧದ ತೀವ್ರ ಅನಿಶ್ಚಿತತೆಯನ್ನು ಅನುಭವಿಸುತ್ತಿರುವ ಪ್ರಸ್ತುತ ಸಂದಿಗ್ಧ ಐತಿಹಾಸಿಕ ಕ್ಷಣದಲ್ಲಿ ಈ ಪ್ರಯತ್ನಗಳು ಅತ್ಯಂತ ಮುಖ್ಯವೆನಿಸುತ್ತದೆ.

ಗ್ಲೋಬಲ್ ಪೊಯೆಟ್ರಿ ಪ್ಯಾಚ್ ವರ್ಕ್ ನಲ್ಲಿರುವ ರಕ್ ಸ್ಯಾಕ್ (RUCKSACK)

ಈ ಯೋಜನೆಯು ಇಟಲಿಯ ಪಿಯಾಸೆಂಜಾದಲ್ಲಿರುವ ಪಿಕ್ಕೊಲೊ ಮ್ಯೂಸಿಯೊ ಡೆಲ್ಲಾ ಪೊಯೆಸಿಯಾ (ಲಿಟಲ್ ಮ್ಯೂಸಿಯಂ ಆಫ್ ಪೊಯೆಟ್ರಿ – ಕಾವ್ಯ ಪ್ರದರ್ಶನಕ್ಕಾಗಿ ಇರುವ ಪುಟ್ಟ ಮ್ಯೂಸಿಯಂ) ಚಿಸಾ ಡಿ ಸ್ಯಾನ್ ಕ್ರಿಸ್ಟೋಫೊರೊದಲ್ಲಿದೆ. ಸಂಯೋಜಿತ ಕವನ ಪ್ರದರ್ಶನವು ೨೬ ಸೆಪ್ಟೆಂಬರ್ ೨೦೨೦ ರಂದು ಪ್ರಾರಂಭವಾಗುತ್ತದೆ.

ಈ ಬೃಹತ್ ಕಲಾ-ಕಾವ್ಯ ಪ್ರದರ್ಶನದಲ್ಲಿ ಮಮತಾ ಸಾಗರ ಅವರು ಕ್ಯುರೇಟ್ ಮಾಡಿರುವ ಭಾಗದಲ್ಲಿ ಪಾಲ್ಗೊಂಡಿರುವ ಕವಿಗಳ ಪಟ್ಟಿಯು ಈ ಕೆಳಗಿನಂತಿದೆ:
೧. ಜಿಬಾನ್ ನರಹ್ (ಅಸ್ಸಾಮೀಸ್ / ನಾಗಾನ್ / ಅಸ್ಸಾಂ)
೨. ಸುಬ್ರೋ ಬಂಡೊಪಾಧ್ಯಾಯ (ಬಂಗಾಳಿ / ಕೋಲ್ಕತಾ)
೩. ಮಂದಾಕ್ರಾಂತ ಸೇನ್ (ಬಂಗಾಳಿ / ಕೋಲ್ಕತಾ)
೪. ಸಂಪರ‍್ಣ ಚರ‍್ಜಿ (ಇಂಗ್ಲಿಷ್ / ಮುಂಬೈ)
೫. ಶಶಾಂಕ್ ಜೊಹ್ರಿ (ಇಂಗ್ಲಿಷ್ / ಬೆಂಗಳೂರು)
೬. ರೇಷ್ಮಾ ರಮೇಶ್ (ಇಂಗ್ಲಿಷ್ / ಬೆಂಗಳೂರು)
೭. ಸಂಸ್ಕೃತಿರಾಣಿ ದೇಸಾಯಿ (ಗುಜರಾತಿ / ಮುಂಬೈ)
೮. ಹೇಮಾಂಗ್ ದೇಸಾಯಿ (ಗುಜರಾತಿ / ಗಾಂಧಿನಗರ / ಗುಜರಾತ್)
೯. ಅನಾಮಿಕಾ (ಹಿಂದಿ / ನವದೆಹಲಿ)
೧೦. ಮಮತಾ ಸಾಗರ (ಕನ್ನಡ / ಬೆಂಗಳೂರು)
೧೧. ಚಾಂದ್ ಪಾಷಾ ಎನ್.ಎಸ್ (ಕನ್ನಡ / ಬೆಂಗಳೂರು)
೧೨. ಸಿದ್ಧಾರ್ಥ ಎಂ.ಎಸ್ (ಕನ್ನಡ / ಬೆಂಗಳೂರು)
೧೩. ದಾದಾಪೀರ್ ಜೈಮನ್ (ಕನ್ನಡ / ಬೆಂಗಳೂರು)
೧೪. ಮೂಡ್ನಾಕುಡು ಚಿನ್ನಸ್ವಾಮಿ (ಕನ್ನಡ / ಬೆಂಗಳೂರು)
೧೫. ರೇಣುಕಾ ರಮಾನಂದ್ (ಕನ್ನಡ / ಅಂಕೋಲಾ)
೧೬. ಚಾಂದಿನಿ ಗಗನ್ (ಕನ್ನಡ / ಬೆಂಗಳೂರು)
೧೭. ಅಬ್ನರ್ ಪರಿಯಾ (ಖಾಸಿ / ಶಿಲ್ಲಾಂಗ್ / ಮೇಘಾಲಯ)
೧೮. ಅನಿತಾ ಥoಪಿ (ಮಲಯಾಳಂ / ತಿರುವನಂತಪುರ)
೧೯. ಗಿರಿಜಾ ವಿ ಎಂ (ಮಲಯಾಳಂ / ಕೋಚಿನ)
೨೦. ಪ್ರದ್ನ್ಯಾ ದಯಾ ಪವಾರ್ (ಮರಾಠಿ / ಮುಂಬೈ)
೨೧. ಶಾಲಿಂ ಎಂ ಹುಸೇನ್ (ಮಿಯಾ / ನವದೆಹಲಿ)
೨೨. ಪ್ರವಾಸಿನಿ ಮಹಾಕುಡ್ (ಒಡಿಯಾ / ಭುವನೇಶ್ವರ)
೨೩. ಸಲ್ಮಾ (ತಮಿಳು / ಚೆನ್ನೈ)
೨೪. ಸುಕರ‍್ತರಾಣಿ (ತಮಿಳು / ರಾಣಿಪೆಟ್ಟೈ / ತಮಿಳುನಾಡು)
೨೫. ಯಾಕೂಬ್ (ತೆಲುಗು / ಹೈದರಾಬಾದ್)
೨೬. ಜಮೀಲಾ ನಿಶಾತ್ (ಉರ್ದು / ಹೈದರಾಬಾದ್)
೨೭. ಅಬ್ದುಲ್ ಮನಾನ್ ಭಟ್ (ಉರ್ದು / ಕಾಶ್ಮೀರ)
೨೮. ಟೆನ್ಜಿನ್ ಸುಂಡು (ಇಂಗ್ಲಿಷ್ / ರ‍್ಮಶಾಲಾ / ಟಿಬೆಟ್)

ಕವಿಗಳ ಕೊಡುಗೆಗಳು:
೧. ಕೈಬರಹದಲ್ಲಿ ಪ್ರಸ್ತುತಪಡಿಸಿದ ಕವಿತೆ.
೨. ಮೂಲ ಕವಿತೆಯ ಇಂಗ್ಲಿಷ್ ಅನುವಾದ [ಪಿಡಿಎಫ್ ನಲ್ಲಿ]
೩. ಕವಿ ವಾಚಿಸಿದ ಆ ಕವಿತೆಯ ವಿಡಿಯೋ.
೪. ಕವಿ ತೆಗೆದ ಟೀ ಬ್ಯಾಗ್ ನ ಸೃಜನಶೀಲ ಛಾಯಾಚಿತ್ರ
೫. ಸೃಜನಾತ್ಮಕ ಪರಿಚಯ ಪತ್ರ
೬. ಕವಿಯ ಭಾವಚಿತ್ರ