ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಒಂದು ವೃತ್ತದಿಂದ
ಇನ್ನೊಂದಕ್ಕೆ ರವಿ
ದಾಟಿ
ವರ್ಷಕ್ಕೊಮ್ಮೆ-
ಸಂಕ್ರಾಂತಿ

ಏನು ಮಹಾ ?
ನಿನ್ನ ತೋಳಿನ ವಲಯದಲ್ಲಿ
ನನಗೆ,
ಇನಿಯಾ-
ದಿನವೂ ಸಂಕ್ರಾಂತಿ !

———“———

ರಮಣ !

ನಿನ್ನ ಸಾಂಗತ್ಯದಲ್ಲಿ
ನನ್ನನ್ನೇ ಮರೆತಿದ್ದೇನೆ !
ಇನ್ನು ಈ ಸಂಕ್ರಮಣ !

ಹೇಗೆ ನೆನಪಿಡಲಿ ?!

———“———

ಎಳ್ಳು ಬೆಲ್ಲ ತಿನ್ನುವುದು
ಏನು ಸಂ- ಕ್ರಮಣ ?
ತುಟಿಗೆ ತುಟಿ ಸೇರಿದಾಗ
ಹರುಷ
ಸಂಕ-ರಮಣ !

———“———

ಎಳ್ಳು ಬೆಲ್ಲ
ತಿನ್ನಬಹುದು ಮಣ
ಆಯಿತೇ ಸಂಕ್ರಮಣ ?
ನಿನ್ನ ತುಟಿಜೇನ ಸವಿ
-ದಾಗಲೇ ಹಬ್ಬ ,
ರಮಣ !

———“———