ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯುವ ಲೇಖಕಿ ತಿಲೋತ್ತಮೆ ಅವರ ಒಂದು ಪೋಸ್ಟ್ ಕಾರ್ಡ್ ಕಥೆ.
ಎಂ.ಜಿ.ತಿಲೋತ್ತಮೆ
ಇತ್ತೀಚಿನ ಬರಹಗಳು: ಎಂ.ಜಿ.ತಿಲೋತ್ತಮೆ (ಎಲ್ಲವನ್ನು ಓದಿ)

“ನಾನು ಮದುವೆಯಾಗಿ ಬಂದಾಗ ಹೀಗಿರಲಿಲ್ಲ.  ಊಟ ಮಾಡಬೇಕಂದರೆ ನನ್ನ ಅತ್ತೆ ಇಷ್ಟು ಕೆಲಸ ವಹಿಸಿಕೊಡತ್ತಿತ್ತು.  ಬೆಳಿಗ್ಗೆ ಮನೆ ಮಂದಿಗೆಲ್ಲ ತಿಂಡಿ ಮಾಡಿ ,ಅಂಗಳ ಗುಡಿಸಿ, ರಂಗೋಲಿಯಿಟ್ಟು, ಧನಕ್ಕೆ ಹುಲ್ಲು ತರಬೇಕಿತ್ತು ,ಬಾವಿಯಿಂದ ನೀರು ಸೇದಿ, ಹಂಡೆಗೆ ತುಬ್ಬಿಸಿ ಇಡಬೇಕಿತ್ತು.ಈಗಿನವರಿಗೆ ಅಂತ ಕಷ್ಟ ವಿಲ್ಲ” ವೆಂದು ಬೆಳಗ್ಗಿನಿಂದ ಕೊಂಕು ನುಡಿಗಳನ್ನು ಆಡುತ್ತಾ ಕವಳ ಜಗಿಯುತ್ತಿದ್ದ ಅತ್ತೆಯ ಬಾಯಿಗೆ ಬಾಯಿ ಕೊಡಲು ಸಾಧ್ಯವಿಲ್ಲವೆಂದು ರಾಧ ಸ್ಕೂಲಿಗೆ ಹೋಗಲು ರೆಡಿಯಗುತ್ತಿದ್ದಾಳೆ. ಆದರೂ ಮನಸ್ಸು ಕೇಳಬೇಕಲ್ಲ

“ಕಂಡಿದ್ದಿನಿ ಬಿಡಿ, ಆ ಕಾಲದಲ್ಲಿ ಈ ತರಹ ಸೌಲಭ್ಯವಿದ್ದಿದರೆ ನೀವೇನು ಬೇಡ ಆಂತ ಹಿಟ್ಟನ್ನ ಕಲ್ಲಲಿ ರುಬ್ಬಿ ನೀರು ಬಾವಿಯಿಂದ ಸೇದತ್ತಿದ್ದರಾ?. ನಿಮ್ಮ ಕಾಲದಲ್ಲಿ ಮನೆ ಕೆಲಸ ಮಾಡಿದರೆ ಆಯಿತು. ನಾವು ಹಾಗೇನಾ ? ಹೋರಗೆ ದುಡಿದು  ಮನೆ ಒಳಗೂ ದುಡಿಯಬೇಕು. ಇಲ್ಲಂದರೆ ಗಂಡ ದುಡಿಮೆ ಒಂದೇ ನಂಬಿಕೊಂಡು ಇದ್ದರೆ ಹೊಟ್ಟೆ ಒಂದೇ ತುಂಬಿಸಕ್ಕೊಳ್ಳಬಹುದು. ಉಳಿದಿದ್ದಕ್ಕೆ ಬಿಕ್ಷೆ ಬೇಡುವ ಪರಿಸ್ಥಿತಿ ಬರಬಹುದು..”

“ಏ ಗಯ್ಯಾಳಿ ನಾಲಿಗೆ ಉದ್ದ ಬಿಡಬೇಡ ನಮ್ಮ ಕಾಲದಲ್ಲಿ ಅತ್ತೆಗೆ ಉತ್ತರ ಕೊಟ್ಟರೆ ತವರ ಮನೆಗೆ ಓಡಿಸುತ್ತಿದ್ದರು ನೀವು ಹಾಗಲ್ಲ ಮದುವೆಯಾಗಿ ಹೊಸ್ತಿಲು ದಾಟತ್ತಿದ್ದಂತೆ ಗಂಡನ ತಲೆ ತಿಂದು ಬುಟ್ಟಿಗೆ ಹಾಕಿಕೊಂಡು ಬಿಡತ್ತಿರಾ. ಅವರಿಗೆ ತಾಯಿ ಅಂದರೆ ಅಸಡ್ಡೆ ಯಾಗಿ ಬಿಡುತ್ತೆ. “

“ಹೌದಪ್ಪ ಬುಟ್ಟಿಗೆ ಹಾಕ್ಕೋಳಕೆ ಭೂತಾಯಿ ಮೀನಾ . ತವರು ಮನೆಗೆ ಓಡಿಸೋಕೆ ಬರುವಾಗ ಲಕ್ಷಗಟ್ಟಲೆ ಮೈಮೇಲೆ ಚಿನ್ನ ಸುರಕೊಂಡೆ ಬಂದಿದ್ದೀನಿ.  ನನಗೂ ಹಕ್ಕಿದೆ ಮಾತಾಡೋಕೆ‌. ನೀವು ಹೇಳಿದ್ದೆಲ್ಲ ಕೇಳಸಕ್ಕೊಂಡು ಬಿದ್ದಿರೋಕ್ಕೆ ಬಂದಿಲ್ಲ. ಮೊದಲು ನೀವು ಮಾತಾಡೋಕೆ ಕಲಿಯಿರಿ. ”  ರಾಧ ಮತ್ತಷ್ಟು ಸಿಟ್ಟಾದಳು.

” ಸರಿ ಹೋಯಿತು ನಿನ್ನಿಂದ ಕಲಿಯಬೇಕಾದುದು ಏನಿಲ್ಲ. ಮೊದಲು ದೊಡ್ಡವರು, ಅತ್ತೆ ಗೆ ಮರ್ಯಾದೆ ಕೊಟ್ಟು ಮಾತ್ತಾಡೋಕೆ ನೀನು ಕಲಿ. “

” ನಾನು ಕಲಿತಕ್ಕೊಂಡೆ ಬಂದಿದ್ದೀನಿ ಬಾಯಿ ಬಂದಹಾಗೆ ಮಾತಾಡಿದ್ದು ನೀವು ಮಗಾ ಹೊರಗಡೆ ಹೋದರೆ ಸಾಕು ಸುರು ಮಾಡತ್ತೀರಾ ಜಗಳ ಮಾಡೋಕೆ. ಮಗ ಇರುವಾಗ ಮಾತೇ ಹೊರಡಲ್ಲ. ಉಳಿದ ಮಕ್ಕಳೆಲ್ಲ ಹೊರಗಡೆ ಹಾಕಿದರೂ ನಾವು ನೋಡಕೊಳ್ಳತ್ತೀರೋದು ನಿಮಗೆ ಹೆಚ್ಚಾಯಿತು…” ಎಂದು ರಾಧ ಅಳತೊಡಗಿದಳು.

ಅಷ್ಟಹೋತ್ತಿಗೆ ರಾಧಾಳ ಗೆಳತಿ ಯಮನಾ ಟೀಚರ ಮನೆ ಹತ್ತಿರ ಬಂದರು. ಹೊರಗಡೆ ಕುಳಿತ್ತಿದ್ದ ರಾಧಳ ಅತ್ತೆಯನ್ನು ಮಾತಾಡಿಸಿದರು. ಇವಗಳನ್ನೆಲ್ಲಾ ಕೇಳಿಸಿಕೊಂಡು ಬಂದ ಯಮುನಾ ಅಜ್ಜಿ “ನೀವು ತಿಳಿದವರು ಬೆಳ ಬೆಳಗ್ಗೆ ಎದ್ದು ಈ ತರಹ  ಜಗಳ ಮಾಡುವುದು ಸರಿಯಲ್ಲ. ಹೌದು ನೀನು ಅವಳ ಪರವೇ ಮಾತಾಡು”  ಎಂದು ಅಜ್ಜಿ ಮುಖ ತಿರುಗಿಸಿಕೊಂಡರು.

“ನಾನು ಯಾರ ಪರವಲ್ಲ. ನಿಮಗೆ ಹೇಳುವಷ್ಟು ದೊಡ್ಡವಳಲ್ಲ. ನಿಮ್ಮ ಕಾಲಕ್ಕೆ ಹೋಲಿಸಿದರೆ ನಾವೆಷ್ಟೋ ಸೋಮಾರಿಯಾಗಿದ್ದೇವೆ. ಹಾಗಂತ ಲೋಕವೇ ಬದಲಾಗುತ್ತಿರುವಾಗ ನಾವು ಬದಲಾಗಬೇಕು.  ಅದಕ್ಕೆ ಬಂದ ಸೊಸೆಯವರ ಹೀಯಾಳಿಸೋದು ಅಥವಾ ನನ್ನ  ಹಾಗೆ ಕಷ್ಟ ಪಡು ಎಂದು ಹೇಳೋದು ಎಷ್ಟು ಸರಿ. ನಿಮ್ಮ ಮಗ ಚೆನ್ನಾಗಿರಬೇಕೆಂದು ಮದುವೆ ಮಾಡಿಸಿದ್ದು ಅಲ್ವಾ! ಆದರೆ ನೀವೇ ಅವರ ಮಧ್ಯೆ ಜಗಳ ತಂದಿಡೋದು ಎಷ್ಟು ಸರಿ. ತಪ್ಪು ಮಾಡಿದಾಗ ತಿಳಿಸಿ ಹೇಳಿ ಅದು ಬಿಟ್ಟು ಊರಿಗೆ ಕೇಳುವ ಹಾಗೆ ಜಗಳವಾಡೋದು ಪರಿಹಾರವಲ್ಲ.

ಯಮುನಾ ಮಾತು ಕೇಳಿ ಅಜ್ಜಿ ಮುಖ ಬಾಡಿತು. ಒಳಗಿರುವ ರಾಧಳನ್ನು ಕರೆದು ನಿನಗೂ ಇದೆ ಮಾತು ಅನುವಯಿಸುತ್ತದೆ. ‘ ” ಅಲ್ಲಾ ಅದು”  ಬಾಯಿ ತೆರೆದಳು ರಾಧ.ಅಷ್ಟರಲ್ಲಿ ಯಮುನಾ “ವಯಸ್ಸಾದವರನ್ನು ನಾವು ಪ್ರೀತಿಯಿಂದ ನೋಡಿಕೊಳ್ಳಬೇಕು.  ನಮ್ಮ ಕಾಲಕ್ಕೆ ತಕ್ಕಂತೆ ಅವರು ಹೊಂದಿಕೊಳ್ಳುವುದೆಂದರೆ ಅವರಿಗೂ ಕಿರಿಕಿರಿ. ಆದರೆ ಪ್ರೀತಿಯಿಂದ ಹೇಳಿದ್ದರೆ ಒಪ್ಪುತ್ತಾರೆ. ಆದ ಬಿಟ್ಟು ನಾನೆ ಸರಿ ಎಂದು ಸಮರ್ಥಸಿಕೊಂಡರೆ ಇನ್ನೊಬ್ಬರು ಸೋಲಬೇಕಾಗತ್ತದೆ ..”ಎಂದಳು.

ರಾಧ “ಅತ್ತೆ ನನ್ನ ಕ್ಷಮಿಸಿ “.

ಅತ್ತೆಯು “ಇರಲಮ್ಮ” ನನ್ನದು ತಪ್ಪಿದೆ.  ನಿನಗೆ ಶಾಲೆಗೆ ಹೋಗಲು ತಡವಾಗುತ್ತೆ ಹೋಗು ಎಂದಳು. ರಾಧ ಯಮುನಾ ಶಾಲೆಗೆ ಹೊರಟರು. ಅಜ್ಜಿ ಎದ್ದು ಒಳಕ್ಕೆ ಹೋದಳು..

ಇವನ್ನೆಲ್ಲಾ ದೂರದಲ್ಲಿ ದಿಟ್ಟಿಸಿ ನೋಡುತ್ತಿದ್ದ ಮನೆಯ ಬೆಕ್ಕು ಎಂದಿನಂತೆ ಮತ್ತೆ ತನ್ನ ಮುಖವನ್ನು ಮುಂಗಾಲಿನಲ್ಲಿ ಉಜ್ಜತೊಡಗಿತು.