ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಬೀವುಲ್ಲಾ ಎಂ. ಅಸದ್
ಇತ್ತೀಚಿನ ಬರಹಗಳು: ಜಬೀವುಲ್ಲಾ ಎಂ. ಅಸದ್ (ಎಲ್ಲವನ್ನು ಓದಿ)

ಸುಮಾರು ಹದಿನೈದು ವರುಷಗಳ ತರುವಾಯ ಆ ಮನೆಯ ಹಿರಿ ಸೊಸೆ ಗರ್ಭಧರಿಸಿದಳು! ಮನೆಮಂದಿಗೆಲ್ಲ ಹೀಗ್ಗೊ ಹಿಗ್ಗು, ದೇವರ ಅನುಗ್ರಹವೆಂದು ನಂಬಿದರು, ದೇವರ ಕೋಣೆಯಲ್ಲಿ ತುಪ್ಪದ ದೀಪ ಬೆಳಗಿದರು.

ತಿಂಗಳುಗಳುರುಳಿದವು, ಆ ಶುಭದಿನ, ಆ ಅಮೃತ ಘಳಿಗೆ ಬಂದೇ ಬಿಟ್ಟಿತು. ಎಲ್ಲರ ಮುಖದಲ್ಲೂ ಕಾತರ, ಆತುರ… ಮಗುವಿನ ಅಳುವಿನ ಧ್ವನಿ ಕೇಳಿಸುತ್ತಲೇ ಎಲ್ಲರ ಮುಖದಲ್ಲಿ ನಗು. ಸ್ವಲ್ಪ ಸಮಯದ ನಂತರ ದಾದಿ ಬಂದು ಸಾಕ್ಷಾತ್ ಲಕ್ಷ್ಮಿ ಹುಟ್ಟಿದ್ದಾಳೆ ಎಂದಾಗ, ಛೇ…! ಹೆಣ್ಣುಮಗುವೆ; ಗಂಡಾಗಬಾರದಿತ್ತೆ? ಅಲ್ಲೊಂದು ನಿರಾಶೆಯ ಉದ್ಗಾರವೊಂದು ಹೊರಡಿತು. ಎಲ್ಲರ ಮುಖದಲ್ಲಿ ನಗುವಿನ ಹೂಗಳು ಬಾಡಿ ತಾತ್ಸಾರದ ಮುಳ್ಳುಗಳು ಅರಳಿದವು. ಮನುಷ್ಯರೆಲ್ಲ ರಾಕ್ಷಸರಾದರು!

ಆ ಶಿಶು ಹುಟ್ಟಿದ ದಿನವೇ ಕೊನೆಯುಸಿರೆಳೆಯಿತು; ಜಗತ್ತಿಗೆ ವಿದಾಯ ಹೇಳಿತು. ದೇವರ ಕೋಣೆಯಲ್ಲಿ ಹಚ್ಚಿಟ್ಟ ದೀಪವೂ ಸಕಾರಣ ಆರಿಹೋಯಿತು; ದೇವರಿಗೂ ಕೋಪ ಬಂದಿರಬೇಕು! ಬಹುಶಃ ತನ್ನ ಹುಟ್ಟಿದ ಸಮಯ ಲೋಕವಾಡಿದ ಮಾತುಗಳನ್ನು ಮಗು ಸಹ ಕೇಳಿಸಿಕೊಂಡಿರಬೇಕು!