ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆ

ಭಾವ ಸಮುದ್ರದ ಸುನಾಮಿ ಉಕ್ಕಿದರೆ ಉಂಟಾಗುವ ಎಲ್ಲ ತಲ್ಲಣ ಗಳನ್ನೂ ಪ್ರಸ್ತುತ ಪಡಿಸುವ ಕವಿತೆಯಲ್ಲಿ ಅಕ್ಷರಗಳೂ ಭಾವದಲಿ ಭಾರದವು… ಶಿವಲೀಲಾ ಹುಣಸಗಿ ಅವರ ಈ ಭಾವ ಪೂರ್ಣ ಕವಿತೆ..!

“ಹೊತ್ತು ಕಂತಿದ ಮೇಲೆ ದಿಕ್ಕುಗಳ ಗುರುತಿಸಲಾಗುವುದಿಲ್ಲ… “ಎಂದು ಆರಂಭಿಸುವ ಕವಿ ಮಧುಸೂದನ ರಂಗೇನಹಳ್ಳಿ ಅವರ ಈ ಕವಿತೆಯಲ್ಲಿ “ನಡುವಿನವ” ಸಂಕಟವನ್ನು ಇಷ್ಟು ಶಕ್ತವಾಗಿ ಚಿತ್ರಿಸಿದ್ದು ಓದಿಯೆ ಸವಿಯಬೇಕು.. ಈ ಕ್ಲಾಸ್ಸಿಕ್ ಕವಿತೆ ನಿಮಗಾಗಿ..

ಎಂಥ ಮಿಂಚಿನ ತಿಳಿವು!
ಡಾ. ಕೆ.ಪಿ.ನಟರಾಜ ಅವರ ಈ ಕವಿತೆ ನಿಮ್ಮನ್ನು ಬೇರೆಯದೇ ಗಹನವಾದ ಲೋಕಕ್ಕೆ ಕೊಂಡೊಯ್ದು ಚಿಂತನೆಯ ಕೊಡಿ ಹಚ್ಚುವಲ್ಲಿ ಶಕ್ತವಾಗುತ್ತದೆ.. ಡೀಪ್ ಇನ್ ಸೈಟ್ ಇರುವ ಒಂದು ಕಾವ್ಯ…ಓದುಗರ ಅವಗಾಹನೆಗೆ…

ಸಮಯದ ಪರಿವೆಯನ್ನೇ ಪ್ರಶ್ನಿಸುತ್ತಾ ಹಳೆಯ ಪೆಟ್ಟಿಗೆಯಲಿ
ಮರೆತಿರುವುದೇನೊ ಉಳಿದಿದೆ ಎಂದು ಬರೆದದ್ದು ಸಂವೇದನೆಗಳ ಕವಿ ರಾಮ್ ಕುಮಾರ್. ಸಂದರ್ಭ: A day with an Alzheimer patient. ಈ ವಿಶಿಷ್ಟ ಕವಿತೆ ನಿಮಗಾಗಿ..

ಅರೆಬೆಂದ ಕನಸುಗಳು ಮುಲುಗುತ್ತಿವೆ…! ಎಂಬ ಶಬ್ದಗಳ ಪ್ರಯೋಗದೊಂದಿಗೆ ಕನ್ನಡದ ಸಾಲುಗಳನ್ನು ಜೋಡಿಸಿ ಕವಿತೆಯನ್ನು ಅನುವಾದಿಸಿ ಬರೆದಿದ್ದು ಲೇಖಕಿ ಮಂಜುವಾಣಿ ಅವರು..

“ಬದುಕೇ ಇಡಿಯಾಗಿ ದಿನಾ ಕೊಲ್ಲುತ್ತಿರುವಾಗ ನೀವ್ಯಾರು ಹೊಸದಾಗಿ ಕೊಡಲಿ ತಂದವರು…?” ಎನ್ನುತ್ತಾ ದೈನ್ಯ ಬದುಕಿನ ವಿಷಾದವನ್ನು ಈ ಕವಿತೆಯಲ್ಲಿ ಹೆಪ್ಪುಗಟ್ಟುವಂತೆ ಚಿತ್ರಿಸಿದ್ದಾರೆ ಕವಿ ಜ಼ಬಿವುಲ್ಲಾ ..

“ಈ ನೆಲವನ್ನು ಯಾವತ್ತೂ ಹುಚ್ಚು ಬಳ್ಳಿಯಂತೆ ಹಬ್ಬಿರುವ ಪ್ರೇಮ ಕಾಪಾಡಿ ಕೊಂದು ಕಡೆದು ನಿಲ್ಲಿಸಿದ ಪ್ರತಿಮೆಗಳು
ನಿಶ್ಯಬ್ದ ಆವರಿಸಿದಾಗೆಲ್ಲಾ ಉಸಿರಾಡುತ್ತವೆ..’ ಎಂದು ನೆನಪುಗಳ ಡಬ್ಬಿಯ ತೆರೆದು ಕವಿತೆಯನ್ನು ಬರೆದವರು ಮಲ್ಲಿಕಾರ್ಜುನಗೌಡ ತೂಲಹಳ್ಳಿ.

“ನಿನ್ನ ರೂಪವ ಮರೆತು ಹೊಸ ಚಿತ್ರ ಬರೆಯುತ್ತೇನೆ” ಎಂದು ಡೈರೆಕ್ಟ್ ಆಗಿ ದೇವರಿಗೆ ಪತ್ರ ಬರೆವ ಮೂಲಕ, ಲೇಖಕಿ ಅಂಜನಾ ಹೆಗಡೆ ಯವರು ಬಂಧಗಳ ತೊರೆವ ಕ್ಷಿಪ್ರ ಕ್ರಾಂತಿಗೆ ನಾಂದಿ ಹಾಡುತ್ತಾರೆ ಈ ಕವಿತೆಯ ಮೂಲಕ….

ಕೋರೊನಾದ ಆರ್ಭಟ ಜೋರಾಗಿಯೇ ಇದೆ..ಐವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರ ನಡುವಲ್ಲಿ, ಇವತ್ತಿಗೂ ಅನಾವಶ್ಯಕ ಮನೆಯಿಂದ ಹೊರಬರುವುದನ್ನು ಕಮ್ಮಿ ಮಾಡಬೇಕಾದ ಅವಶ್ಯಕತೆ ಇದೆ ಎಂಬ ಸಂದೇಶ ಸಂಗೀತದ ಮೂಲಕ…ಮನೆಯಿಂದಲೇ ಹಾಡಿ ಕಳಿಸಿದವರು ಮಮತಾ ಮನ್ವಾಚಾರ್.
ಕೊರೋನಾ ಸಂದೇಶದ ಕ್ರಿಯೇಟಿವ್ ಹಾಡು ಹಾಗೂ ಸಾಹಿತ್ಯ ಮಮತಾ ಅವರದ್ದು.
ರಾಗ : ದರ್ಬಾರಿ ಕಾನ್ಹಾಡ ತಾಳ :ಭಜನ್ ಟೇಕ್

ಸದ್ಯದ ಪರಿಸ್ಥಿತಿಯಲ್ಲಿ ಪದ್ಯ ಹುಡುಕಿದ ಮಂಜುನಾಥ್ ಲತಾ ಅವರು ಗುಡಿ, ಬಯಲು, ಪರದೆ, ಕುಡಿಕೆ, ರಸ್ತೆಗಳನ್ನು ದಾಟಿ ಆಟಕೆ ಕರೆಯದ ಬೀದಿಯ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದು ಹೀಗೆ…

ನಿನ್ನ ಪ್ರೀತಿಗೆ, ಅದರ ರೀತಿಗೆಕಣ್ಣ ಹನಿಗಳೆ ಕಾಣಿಕೆ ?ಹೊನ್ನ ಚಂದಿರ, ನೀಲಿ ತಾರೆಗೆಹೊಂದಲಾರದ ಹೋಲಿಕೆ. ನಿನ್ನ ಪ್ರೀತಿಗೆ, ಅದರ ರೀತಿಗೆಚೆಲುವು…